ಗೂಗಲ್ ಸಿಇಒ ಭಾರತೀಯನ ಅಸಾಮಾನ್ಯ ಸಾಧನೆ

By Shwetha

ಗೂಗಲ್ ಸಹ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬಿನ್ ಸುಂದರ್ ಪಿಚ್ಚೈ ಅವರನ್ನು ಗೂಗಲ್‌ನ ಸಿಇಒ ಆಗಿ ನೇಮಕಗೊಳಿಸಲಾಗಿದ್ದು ಗೂಗಲ್ ತನ್ನ ಇನ್ನಷ್ಟು ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುವ ತಾಕತ್ತನ್ನು ಇದೀಗ ಪಡೆದುಕೊಂಡಿದ್ದು ಭಾರತೀಯರಾದ ಸುಂದರ್ ಅವರಿಗೆ ದೊರಕಿರುವ ಈ ಗೌರವ ಭಾರತದ ಕೀರ್ತಿ ಪತಾಕೆಯನ್ನು ಇನ್ನಷ್ಟು ಮೇಲಕ್ಕೆ ಏರಿಸುವಲ್ಲಿ ನೆರವಾಗಿದೆ.

ಓದಿರಿ: ಸುಂದರ್ ಪಿಚ್ಚೈ: ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಪುತ್ರ

ಸಾಮಾನ್ಯ ಅಂತೆಯೇ ಸರಳ ವ್ಯಕ್ತಿತ್ವದ ಸುಂದರ್ ಪಿಚ್ಚೈ ಒಮ್ಮೆಲೇ ಈ ಸಾಧನೆಯನ್ನು ಮಾಡಿಲ್ಲ. ಸೋಲಿನ ಕದ ತಟ್ಟುತ್ತಾ ವಿಜಯದ ಕಿರೀಟವನ್ನು ತೊಟ್ಟುಕೊಂಡಿದ್ದಾರೆ. ಇಂದಿನ ಲೇಖನದಲ್ಲಿ ಇವರ ಕುರಿತಾದ ಕೆಲವೊಂದು ಅಮೂಲಾಗ್ರ ಮಾಹಿತಿಯನ್ನು ಅರಿತುಕೊಳ್ಳೋಣ.

ಜನನ

ಜನನ

1972 ರಲ್ಲಿ ಚೆನ್ನೈನಲ್ಲಿ ಜನಿಸಿದ ಸುಂದರ್ ಪಿಚ್ಚೈ 42 ರ ಹರೆಯದವರು.

ಮನೆಮಾತಾಗಿದ್ದಾರೆ

ಮನೆಮಾತಾಗಿದ್ದಾರೆ

ಇವರ ಮೂಲ ಹೆಸರು ಪಿಚ್ಚೈ ಸುಂದರರಾಜನ್. ಆದರೂ ಸುಂದರ್ ಪಿಚ್ಚೈ ಎಂಬ ಹೆಸರಿನಿಂದಲೇ ಇವರು ಮನೆಮಾತಾಗಿದ್ದಾರೆ.

ಪ್ರಾಡಕ್ಟ್ ಮತ್ತು ಇನ್ನೋವೇಶನ್ ಅಧಿಕಾರಿ

ಪ್ರಾಡಕ್ಟ್ ಮತ್ತು ಇನ್ನೋವೇಶನ್ ಅಧಿಕಾರಿ

2004 ರಲ್ಲಿ ಪ್ರಾಡಕ್ಟ್ ಮತ್ತು ಇನ್ನೋವೇಶನ್ ಅಧಿಕಾರಿಯಾಗಿ ಗೂಗಲ್ ಅನ್ನು ಇವರು ಸೇರಿದರು.

ಸಿಬಲ್ ಸ್ಕೋಲರ್

ಸಿಬಲ್ ಸ್ಕೋಲರ್

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಿಬಲ್ ಸ್ಕೋಲರ್ ಎಂಬ ಪಟ್ಟವನ್ನು ಇವರು ಪಡೆದುಕೊಂಡಿದ್ದರು.

ಬೆಳ್ಳಿ ಪದವಿ
 

ಬೆಳ್ಳಿ ಪದವಿ

ತಮ್ಮ ಐಐಟಿ ಪದವಿಯನ್ನು ಖಾರಗ್‌ಪುರ್‌ನಿಂದ ಇವರು ಪಡೆದುಕೊಂಡಿದ್ದು ತಮ್ಮ ಬ್ಯಾಚ್‌ನಲ್ಲೇ ಬೆಳ್ಳಿ ಪದವಿಯನ್ನು ಇವರು ಪಡೆದುಕೊಂಡಿದ್ದರು.

ಅಧ್ಯಯನ

ಅಧ್ಯಯನ

ಯುಎಸ್‌ನಲ್ಲಿ ಸುಂದರ್ ಎಮ್‌ಎಸ್ ಮತ್ತು ಎಮ್‌ಬಿಯನ್ನು ಅಭ್ಯಸಿಸಿದರು.

ಗೂಗಲ್‌ನಲ್ಲಿ ಆಂಡ್ರಾಯ್ಡ್ ಮತ್ತು ಕ್ರೋಮ್

ಗೂಗಲ್‌ನಲ್ಲಿ ಆಂಡ್ರಾಯ್ಡ್ ಮತ್ತು ಕ್ರೋಮ್

ಪ್ರಸ್ತುತ ಪಿಚ್ಚೈ ಅವರು ಗೂಗಲ್‌ನಲ್ಲಿ ಆಂಡ್ರಾಯ್ಡ್ ಮತ್ತು ಕ್ರೋಮ್ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.

ಹರಿಕಾರ

ಹರಿಕಾರ

ಗೂಗಲ್ ಡ್ರೈವ್, ಜಿಮೇಲ್ ಅಪ್ಲಿಕೇಶನ್ ಮತ್ತು ಗೂಗಲ್ ವೀಡಿಯೋ ಕೊಡಾಕ್‌ ರಚನೆಯಲ್ಲಿ ಹೆಚ್ಚಿನ ಜವಬ್ದಾರಿಯನ್ನು ಪಡೆದುಕೊಂಡಿದ್ದಾರೆ.

ಗೂಗಲ್‌ನಲ್ಲಿ ಮೇಲ್ದರ್ಜೆ

ಗೂಗಲ್‌ನಲ್ಲಿ ಮೇಲ್ದರ್ಜೆ

ಕ್ರೋಮ್ ಓಎಸ್‌ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಇವರು ಮಾಡಿದ ಸಾಧನೆ ಗೂಗಲ್‌ನಲ್ಲಿ ಮೇಲ್ದರ್ಜೆಗೆ ಏರಿಸಿತು.

ಟ್ವಿಟ್ಟರ್

ಟ್ವಿಟ್ಟರ್

2011 ರಲ್ಲಿ ಟ್ವಿಟ್ಟರ್ ಪಿಚ್ಚೈ ಅವರನ್ನು ನಿಯೋಜಿಸಲು ಯೋಜನೆ ಹಾಕಿಕೊಂಡಿತ್ತು. ಆದರೆ 50 ಮಿಲಿಯನ್ ಸಂಬಳವನ್ನು ನೀಡುವುದರ ಮೂಲಕ ಗೂಗಲ್ ತನ್ನಲ್ಲೇ ಅವರನ್ನು ಇರಿಸಿಕೊಂಡಿತು.

Most Read Articles
 
English summary
Sundar Pichai has been appointed as the CEO of Google as co-founders Larry Page and Sergey Brin restructure the search giant to create a new holding company Alphabet. Google will now hold its core search business, maps, ads, apps, YouTube and Android.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more