10ನೇ ವಯಸ್ಸಿಗೆ ವಿಶ್ವ ಬೆರಗಾಗುವ ಸಾಧನೆ..! ಗೂಗಲ್‌, ಮೈಕ್ರೋಸಾಫ್ಟ್‌ನಿಂದ ಆಫರ್‌..!

  |

  ಈಕೆಗೆ ಈಗ ಕೇವಲ 10 ವರ್ಷ ವಯಸ್ಸು. ಆದರೆ, ಈ ಬಾಲಕಿಯ ಸಾಧನೆ ಅಪಾರ . ಇಡೀ ಟೆಕ್‌ ಜಗತ್ತು ಈ ಹುಡುಗಿಯನ್ನು ಬೆರಗು ಕಣ್ಣಿನಿಂದ ನೋಡ್ತಾ ಇದೆ. ಹೌದು, ವಿಶ್ವದ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕೂಡ ಈಕೆಯನ್ನು ತನ್ನ ಮುಖ್ಯ ಕಚೇರಿಯಲ್ಲಿ ಸ್ಥಳೀಯ ಕಾರ್ಯಕ್ರಮಕ್ಕೆ ಪ್ರಮುಖ ಭಾಷಣಕಾರ್ತಿಯನ್ನಾಗಿ ಆಯ್ಕೆ ಮಾಡಿದೆ. ವಿಶ್ವದ ಪ್ರಮುಖ ಟೆಕ್‌ ಕಂಪನಿಗಳಾಗಿರುವ ಮೈಕ್ರೋಸಾಪ್ಟ್‌ ಮತ್ತು ಗೂಗಲ್‌ ಎರಡು ಕಂಪನಿಗಳು ಸಹ ಈಕೆಗಾಗಿ ಬಾಗಿಲನ್ನು ತೆರೆದಿಟ್ಟಿವೆ.

  10ನೇ ವಯಸ್ಸಿಗೆ ವಿಶ್ವ ಬೆರಗಾಗುವ ಸಾಧನೆ..! ಗೂಗಲ್‌, ಮೈಕ್ರೋಸಾಫ್ಟ್‌ನಿಂದ ಆಫರ್‌

  CoderBunnyz ಮತ್ತು CoderMindz ಎಂಬ ಬೋರ್ಡ್‌ ಗೇಮ್‌ಗಳನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಆ ಗೇಮ್‌ಗಳ ಮೂಲಕ ಕೋಡಿಂಗ್‌ ಹೇಳಿಕೊಡುತ್ತಿರುವ ಸಾಧನೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಚೆಲ್‌ ಒಬಾಮಾ ತಲೆಭಾಗಿ ಉತ್ತೇಜನ ಪತ್ರ ನೀಡಿದ್ದಾರೆ. ಅಕ್ಕನಂತೆ ತಮ್ಮ ಅದಿತ್‌ ಕೂಡ್‌ ಕೋಡಿಂಗ್‌ನಲ್ಲಿ ಉತ್ತಮ ಸಾಧನೆಯನ್ನೇ ಮಾಡುತ್ತಿದ್ದಾನೆ. ಆಗಿದ್ದರೆ, ಸಮಾರಿಯಾ ಮೆಹ್ತಾ ಕಥೆಯೇನು..? ಎಂಬುದನ್ನು ಮುಂದೆ ನೋಡಿ..

  ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  10ನೇ ವಯಸ್ಸಲ್ಲೇ ಕಂಪನಿಯ ಸಿಇಒ

  CoderBunnyz ಎನ್ನುವ ಕಂಪನಿಯ ಸ್ಥಾಪಕಿ ಮತ್ತು ಸಿಇಒ ಆಗಿರುವ ಸಮರಿಯಾ ಮೆಹ್ತಾ ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ಸುಮಾರು ಒಂದು ಡಜನ್ ಸಿಲಿಕಾನ್‌ ವ್ಯಾಲಿ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರ್ತಿಯಾಗಿ ಭಾಗವಹಿಸಿರುವುದು ಎಲ್ಲರಿಗೂ ಆಶ್ಚರ್ಯ ತರುತ್ತದೆ.

  8ನೇ ವಯಸ್ಸಿನಲ್ಲಿಯೇ ಉದ್ಯೋಗ ಆರಂಭ

  ಸಮರಿಯಾ ಮೆಹ್ತಾ ಕೇವಲ ಎಂಟು ವರ್ಷದವಳಿದ್ದಾಗಲೇ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದಾಳೆ. ಕೋಡಿಂಗ್‌ನ್ನು ಹೇಗೆ ಮಾಡುವುದು ಎಂಬುದನ್ನು ಇತರ ಮಕ್ಕಳಿಗೆ ಕಲಿಸಲು ಸಹಾಯ ಆಗುವಂತೆ CoderBunnyz ಎಂಬ ಗೇಮ್‌ ರಚಿಸಿ ವಿಶ್ವ ಟೆಕ್‌ ಲೋಕದಲ್ಲಿ ಗುರುತಿಸಿಕೊಂಡಿದ್ದಾಳೆ. ಸಮರಿಯಾ ಮೆಹ್ತಾ ಅತಿ ಚಿಕ್ಕ ವಯಸ್ಸು ಅಂದರೆ ಕೇವಲ ಆರು ವರ್ಷ ವಯಸ್ಸಿನವಳಿದ್ದಾಗಿನಿಂದ ಕೋಡಿಂಗ್ ಆರಂಭಿಸಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ.

  ಥಿಂಕ್‌ ಟ್ಯಾಂಕ್‌ ಪ್ರಶಸ್ತಿ

  ಬೋರ್ಡ್‌ ಗೇಮ್‌ ಸೃಷ್ಟಿಸಿದ ನಂತರ ಮೆಹ್ತಾ 2016ರ Think Tank Learning's Pitchfestನಲ್ಲಿ ಎರಡನೇ ಬಹುಮಾನ ಪಡೆದು 2,500 ಡಾಲರ್‌ ಮೌಲ್ಯದ ಬಹುಮಾನವನ್ನು ಪಡೆದಿದ್ದಳು. ಅದಲ್ಲದೇ ಕಾರ್ಟೂನ್ ನೆಟ್‌ವರ್ಕ್‌ ಪ್ರಸಾರ ಮಾಡುತ್ತಿದ್ದ Real Life Powerpuff Girls ಶೋನಲ್ಲಿ ಇವಳ ಸಾಧನೆಯ ಬಗ್ಗೆ ಕಾರ್ಯಕ್ರಮಗಳು ರೂಪಿತಗೊಂಡಿವೆ.

  ಅಮೆಜಾನ್‌ನಲ್ಲಿ ಗೇಮ್‌ ಮಾರಾಟ

  ಸಮರಿಯಾ ಮೆಹ್ತಾ ಸೃಷ್ಟಿಸಿರುವ ಗೇಮ್‌ನ್ನು ಅಮೆಜಾನ್‌ ಮೂಲಕ ಮಾರಾಟ ಮಾಡಲು ಆರಂಭಿಸುತ್ತಾಳೆ. ಅದಲ್ಲದೇ ಅನೇಕ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಂಡಿದ್ದಾಳೆ. ಮೆಹ್ತಾ ಹೇಳುವಂತೆ ಕೇವಲ ಒಂದು ವರ್ಷದಲ್ಲಿ 1,000 ಬಾಕ್ಸ್‌ಗಳನ್ನು ಮಾರಾಟ ಮಾಡಿದ್ದು, 35,000 ಡಾಲರ್‌ ಹಣ ಗಳಿಸಲಾಗಿದೆ ಎಂದು ಹೇಳಿದ್ದಾರೆ.

  ತಂದೆ ಇಂಟೆಲ್‌ ಉದ್ಯೋಗಿ

  ಸಮರಿಯಾ ಮೆಹ್ತಾ ತಂದೆ ರಾಕೇಶ್‌ ಮೆಹ್ತಾ ಇಂಟೆಲ್‌ನಲ್ಲಿ ಇಂಜಿನಿಯರ್‌ ಆಗಿದ್ದು, ಹಿಂದೆ ಸನ್‌ ಮೈಕ್ರೋಸಿಸ್ಟಮ್‌ ಮತ್ತು ಒರಾಕಲ್‌ನಲ್ಲಿ ಕೆಲಸ ಮಾಡಿದ್ದರು. ತಂದೆಯ ಸಹಾಯದೊಂದಿಗೆ ಸಮರಿಯಾ CoderBunnyz ಗೇಮ್‌ನ್ನು ಲಾಂಚ್‌ ಮಾಡಿದ್ದಳು.

  ಉತ್ತಮ ಮಾರುಕಟ್ಟೆ ತಂತ್ರಗಾರಿಕೆ

  ಶಾಲಾ ವಯಸ್ಸಿನ ಮಕ್ಕಳಿಗಾಗಿ ಕೋಡಿಂಗ್ ಕಾರ್ಯಾಗಾರಗಳನ್ನು ನಿರ್ವಹಿಸಲು ಮೆಹ್ತಾ ಈ ಗೇಮ್‌ ಬಳಸಲು ಶುರುಮಾಡುತ್ತಾಳೆ. ಅದಲ್ಲದೇ ದೊಡ್ಡ ಯೋಜನೆಯೊಂದನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಾಳೆ. ಆ ಯೋಜನೆಗೆ Yes, 1 Billion Kids Can Code ಎಂದು ಹೆಸರಿಟ್ಟು, ಆಸಕ್ತಿ ಇರುವ ಜನ ಶಾಲೆಗಳಿಗೆ ಗೇಮ್‌ ಬಾಕ್ಸ್‌ಗಳನ್ನು ದಾನ ಮಾಡುವ ಆಯ್ಕೆಯನ್ನು ಈ ಯೋಜನೆಯ ಮೂಲಕ ನೀಡುತ್ತಾಳೆ. ನಂತರ ಆ ಶಾಲೆಗಳಲ್ಲಿ ಮಕ್ಕಳಿಗೆ ಆಟವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಲು ಕಾರ್ಯಾಗಾರಗಳನ್ನು ಸ್ಥಾಪಿಸುತ್ತಾಳೆ.

  106 ಶಾಲೆಗಳಲ್ಲಿ ಕೋಡಿಂಗ್‌ ಗೇಮ್‌

  ಈ ವರ್ಷ 106 ಶಾಲೆಗಳಲ್ಲಿ ಸಮಾರಿಯಾ ಮೆಹ್ತಾ ಮಕ್ಕಳಿಗೆ ಕೋಡಿಂಗ್‌ ಕಲಿಸಲು ಗೇಮ್‌ನ್ನು ಬಳಸುತ್ತಿದ್ದಾಳೆ. ಪ್ರಪಂಚದಲ್ಲಿ ಸುಮಾರು 1 ಬಿಲಿಯನ್ ಮಕ್ಕಳು ಇದ್ದಾರೆ. ಹಾಗೂ ಶಾಲೆಗಳಿಗೆ ಮತ್ತು ಕೋಡಿಂಗ್‌ ಕಲಿಯಲು ಬಯಸುವವರಿಗೆ CoderBunnyz ಬಾಕ್ಸ್‌ಗಳನ್ನು ದಾನ ಮಾಡಲು ವಿಶ್ವದಾದ್ಯಂತ ಜನರಿದ್ದಾರೆ ಎಂದು ಮೆಹ್ತಾ ಹೇಳಿದ್ದಾಳೆ.

  CoderMindz

  CoderBunnyz ಗೇಮ್‌ ಮಾರಾಟವು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಮೆಹ್ತಾ ಅದರ ಮತ್ತೊಂದು ಆವೃತ್ತಿಯನ್ನು ಮಾರುಕಟ್ಟೆಗೆ ತಂದಿದ್ದಾಳೆ. ಇದು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಕೋಡಿಂಗ್‌ ಮಾಡುವುದನ್ನು ತಿಳಿಸುತ್ತದೆ. ಹೊಸ ಗೇಮ್‌ನ್ನು CoderMindz ಎಂದು ಕರೆದಿದ್ದು, ಇದು ವಿಶ್ವದ ಪ್ರಥಮ AI ಬೋರ್ಡ್‌ ಗೇಮ್‌ ಆಗಿದೆ ಎಂದು ಮೆಹ್ತಾ ಹೇಳಿಕೊಂಡಿದ್ದಾಳೆ.

  ತಮ್ಮನ ಜತೆ AI ಗೇಮ್‌ ಅಭಿವೃದ್ಧಿ

  ಸಮರಿಯಾ ಮೆಹ್ತಾ ತನ್ನ 6ನೇ ವಯಸ್ಸಿನ ತಮ್ಮ ಆದಿತ್‌ ಜತೆ ಸೇರಿ CoderMindz ಗೇಮ್‌ನ್ನು ಅಭಿವೃದ್ಧಿಪಡಿಸಿದ್ದಾಳೆ. ಈ ಗೇಮ್‌ ಮೂಲಕ ಸಾಮಾನ್ಯ AI ತತ್ವಗಳನ್ನು, AI ಮಾದರಿಗಳ ಮೇಲೆ ತರಬೇತಿಯ ಪರಿಕಲ್ಪನೆಗಳು, ಅನುಮಾನ, ಹೊಂದಾಣಿಕೆಯ ಕಲಿಕೆ. ಹಾಗೂ ಈ ಕೌಶಲ್ಯಗಳನ್ನು ಅಂತಿಮವಾಗಿ ಅವರು ರೋಬೋಟ್‌ಗಳನ್ನು ನಿರ್ಮಿಸಲು ಬಳಸಬಹುದಾಗಿದೆ.

  ಸಿಲಿಕಾನ್‌ ವ್ಯಾಲಿಯ ಯುವ ನಕ್ಷತ್ರ

  ಕೋಡಿಂಗ್‌ ಗೇಮ್‌ ಯಶಸ್ವಿಯಾಗುತ್ತಿದ್ದಂತೆ, ಮೆಹ್ತಾ ಅನೇಕ ಕಾರ್ಯಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಸಿಲಿಕಾನ್‌ ವ್ಯಾಲಿಯಲ್ಲಿ 60ಕ್ಕೂ ಹೆಚ್ಚು ಕಾರ್ಯಗಾರಗಳನ್ನು ನಿರ್ವಹಿಸಿರುವ ಮೆಹ್ತಾ 2000ಕ್ಕೂ ಅಧಿಕ ಮಕ್ಕಳಿಗೆ ಕೋಡಿಂಗ್‌ ಹೇಳಿಕೊಟ್ಟಿದ್ದಾಳಂತೆ. ಈ ಕಾರ್ಯಗಾರಗಳು ಗೂಗಲ್‌ ಮುಖ್ಯ ಕಚೇರಿ ಕ್ಯಾಲಿಪೋರ್ನಿಯಾದ ಮೌಂಟೆನ್‌ ವಿವ್‌ನಲ್ಲಿನ ಕಾರ್ಯಗಾರ ಸರಣಿಯನ್ನು ಹೊಂದಿದೆ. ಅದಲ್ಲದೇ ಗೂಗಲ್‌ನ ಮುಖ್ಯ ಸಂಸ್ಕೃತಿ ಅಧಿಕಾರಿ ಸ್ಟೇಸಿ ಸುಲ್ಲಿವಾನ್‌ರನ್ನು ಕೂಡ ಭೇಟಿಯಾಗಿದ್ದಳು.

  ಗೂಗಲ್‌ನಲ್ಲಿ ಉದ್ಯೋಗಿಯಾಗುವ ಆಸೆ

  ಗೂಗಲ್‌ನ ಮುಖ್ಯ ಕಚೇರಿಯಲ್ಲಿ ಕಾರ್ಯಗಾರಗಳ ನಂತರ, ಒಂದು ಗಂಟೆಯವರೆಗೆ ಮಾತನಾಡಿದ್ದು, ನಾನು ಅದ್ಭುತವಾದ ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ನಾನೂ ಕಾಲೇಜಿನ ನಂತರ ಗೂಗಲ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸಮರಿಯಾ ಮೆಹ್ತಾ ಹೇಳಿದ್ದಾಳೆ.

  ಪ್ರಮುಖ ಮಾತುಗಾರ್ತಿ

  ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಆಗಸ್ಟ್‌ನಲ್ಲಿನಡೆದ ಗೂಗಲ್‌ನ ಸ್ಟಾರ್ಟ್‌ಅಪ್‌ ಅಕ್ಸಿಲೇಟರ್‌ ಕಾರ್ಯಕ್ರಮ ಗೂಗಲ್‌ ಲಾಂಚ್‌ಪ್ಯಾಡ್‌ನಲ್ಲಿ ಆಯೋಜಿಸಿದ್ದ Diversity in Tech Conferenceನಲ್ಲಿ ಮುಖ್ಯ ಭಾಷಣಗಾರ್ತಿಯಾಗಿ ಮಾತನಾಡಿ ಗೂಗಲ್‌ನ ಸುಲ್ಲಿವೀನ್‌ ಮತ್ತು ಉದ್ಯೋಗಿಗಳನ್ನು ಆಕರ್ಷಿತಗೊಳಿಸಿತ್ತು. ಅದಲ್ಲದೇ ತಿಂಗಳಿನ ಆರಂಭದಲ್ಲಿ ಮೈಕ್ರೋಸಾಫ್ಟ್‌ನಲ್ಲಿ World Wide Women ಸಹಯೋಗದಲ್ಲಿ ಆಯೋಜಿಸಿದ್ದ Girl's Festivalನಲ್ಲಿ ಪ್ರಮುಖ ಭಾಷಣಗಾರ್ತಿಯಾಗಿ ಮಾತನಾಡಿದ್ದರು.

  ವಿಶ್ವದ ದಿಗ್ಗಜರ ಭೇಟಿ

  CoderBunnyz ಯಶಸ್ಸಿನಿಂದ ವಿಶ್ವದ ದಿಗ್ಗಜರನ್ನು ಸಮರಿಯಾ ಮೆಹ್ತಾ ಭೇಟಿ ಮಾಡಿದ್ದಾಳೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೆಂಡತಿ ಮಿಚೆಲ್‌ ಒಬಾಮಾರಿಂದ ಉತ್ತೇಜಕ ಪತ್ರವನ್ನು ಸಮರಿಯಾ ಮೆಹ್ತಾ ಪಡೆದಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅದಲ್ಲದೇ ಹ್ಯಾಲ್‌ಒವೆನ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್‌ನ್ನು ಕೂಡ ಭೇಟಿಯಾಗಿದ್ದು, ಇನ್ನು ಅನೇಕ ಟೆಕ್‌ ದಿಗ್ಗಜರನ್ನು ಭೇಟಿಯಾಗಲು ಯಶಸ್ವಿಯಾಗಿದ್ದಾಳೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This 10-year-old coder is already so successful she's already caught the attention of Google and Microsoft. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more