ಬೆಂಗಳೂರು ಟೀಚರ್‌ನ ಯೂಟ್ಯೂಬ್ ಶಾಲೆಯಲ್ಲಿ 68000 ವಿದ್ಯಾರ್ಥಿಗಳು!!

By Shwetha
|

ಪ್ರತಿಭೆ ಎಂಬುದು ಸುಪ್ತವಾಗಿರುತ್ತದೆ ಅದಕ್ಕೆ ಸೂಕ್ತ ವೇದಿಕೆ ದೊರಕಿದಲ್ಲಿ ಮಾತ್ರವೇ ಅದು ಹೊರಬಿದ್ದು ಪ್ರಗತಿಯನ್ನು ಕಾಣುತ್ತದೆ. ಯಾವುದೇ ವಯಸ್ಸು, ಕಾಲದ ಮಿತಿಯಿಲ್ಲದೆ ನಿಮ್ಮೊಳಗಿರುವ ಪ್ರತಿಭೆ ಹೊರಬೀಳುತ್ತದೆ ಮತ್ತು ಅದು ಇನ್ನೊಬ್ಬರಿಗೆ ಸೂಕ್ತ ನೆರವನ್ನು ನೀಡುವಂತಿರುತ್ತದೆ.

ಇಂದಿನ ಲೇಖನದಲ್ಲಿ ಇಂತಹುದೇ ಒಂದು ಅನರ್ಘ್ಯ ರತ್ನ ಪ್ರತಿಭೆಯನ್ನು ಕಂಡುಕೊಳ್ಳುವ ಕೆಲಸವನ್ನು ನಾವು ಮಾಡಿದ್ದೇವೆ. ರೋಶ್ನಿ ಮುಖರ್ಜಿ ಮಾಡಿರುವ ಸಾಧನೆ ಯಾರು ಕೂಡ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಯೂಟ್ಯೂಬ್‌ನಲ್ಲಿ ಶಾಲೆ ತೆರೆದು 72,000 ವಿದ್ಯಾರ್ಥಿಗಳನ್ನು ಹೊಂದಿರುವ ಟೆಕ್ಕಿ ಟೀಚರ್ ಈಕೆ. ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಆಕೆಯ ಯಶೋಗಾಥೆಯನ್ನು ನಾವು ನಿಮಗೆ ತಿಳಿಸಲಿದ್ದೇವೆ.

ಹೊಸ ಮಾದರಿಯ ಶಿಕ್ಷಣ ಪದ್ಧತಿ

ಹೊಸ ಮಾದರಿಯ ಶಿಕ್ಷಣ ಪದ್ಧತಿ

ತನ್ನ ತಂದೆಯ ಮರಣದ ನಂತರ ಈಕೆ ಟೀಚಿಂಗ್ ವೃತ್ತಿಯನ್ನು ಹವ್ಯಾಸವಾಗಿಸಿಕೊಂಡವರು. ವೀಡಿಯೊ ರೆಕಾರ್ಡಿಂಗ್‌ಗಳನ್ನು ದಾಖಲಿಸುತ್ತಾ ಮಕ್ಕಳಿಗೆ ಹೊಸ ಮಾದರಿಯ ಶಿಕ್ಷಣ ಪದ್ಧತಿಯನ್ನು ಆರಂಭಿಸಿದವರು.

ಉಚಿತ

ಉಚಿತ

ಉಚಿತವಾಗಿ ಮಕ್ಕಳಿಗೆ ಪಾಠ ಮಾಡುವ ಈಕೆಯ ಶಿಕ್ಷಣ ಪದ್ಧತಿ ಅನೂಹ್ಯವಾದುದು ಮತ್ತು ವಿಶಿಷ್ಟವಾದುದು.

ನಿರ್ದಿಷ್ಟ ಟಾಪಿಕ್‌ಗಳ ಮೇಲೆ ವೀಡಿಯೊ ರೆಕಾರ್ಡಿಂಗ್

ನಿರ್ದಿಷ್ಟ ಟಾಪಿಕ್‌ಗಳ ಮೇಲೆ ವೀಡಿಯೊ ರೆಕಾರ್ಡಿಂಗ್

ವೀಡಿಯೊಗಳನ್ನು ನೋಡಿದ ನಂತರ, ಕಾಮೆಂಟ್ ಸೆಕ್ಶನ್‌ನಲ್ಲಿ ಮಕ್ಕಳು ಸಂದೇಹಗಳನ್ನು ಕೇಳುತ್ತಾರೆ ಮತ್ತು ನಿರ್ದಿಷ್ಟ ಟಾಪಿಕ್‌ಗಳ ಮೇಲೆ ವೀಡಿಯೊ ರೆಕಾರ್ಡಿಂಗ್ ಅನ್ನು ಕೇಳುತ್ತಾರೆ. ನಾನು ಅವರಿಗೆ ಸಹಾಯ ಮಾಡಲು ತುಂಬಾ ಸಂತೋಷ ಪಡುತ್ತೇನೆ ಎನ್ನುತ್ತಾರೆ ರೋಶ್ನಿ.

72,000 ಚಂದಾದಾರರು ಮತ್ತು 4,000 ವೀಡಿಯೊ

72,000 ಚಂದಾದಾರರು ಮತ್ತು 4,000 ವೀಡಿಯೊ

http://www.examfear.com/ ಎಂಬ ವೆಬ್‌ಸೈಟ್ ಅನ್ನು ತೆರೆದಿರುವ ಈಕೆ 72,000 ಚಂದಾದಾರರನ್ನು ಹೊಂದಿದ್ದಾರೆ ಮತ್ತು 4,000 ವೀಡಿಯೊಗಳನ್ನು ಈಗಾಗಲೇ ಅಪ್‌ಲೋಡ್ ಮಾಡಿದ್ದಾರೆ.

ಶಿಕ್ಷಣ ಗುರಿ

ಶಿಕ್ಷಣ ಗುರಿ

ತನ್ನ ಶಿಕ್ಷಣ ಗುರಿಯನ್ನು ಸಾಧಿಸುವುದಕ್ಕಾಗಿ ಎಚ್‌ಪಿಯ ಉದ್ಯೋಗವನ್ನು ತೊರೆದಿದ್ದು ಪೂರ್ಣ ಪ್ರಮಾಣದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಳಕೆದಾರ ಸ್ನೇಹಿ ವೀಡಿಯೊ ಪಾಠ

ಬಳಕೆದಾರ ಸ್ನೇಹಿ ವೀಡಿಯೊ ಪಾಠ

ವೆಬ್‌ಸೈಟ್ ಬಳಕೆದಾರ ಸ್ನೇಹಿ ವೀಡಿಯೊ ಪಾಠಗಳನ್ನು ಹೊಂದಿದ್ದು 9-12 ತರಗತಿಯ ವಿದ್ಯಾರ್ಥಿಗಳಿಗಾಗಿ ಪಾಠಗಳನ್ನು ಒಳಗೊಂಡಿದೆ.

ಸ್ಥಳೀಯ ಭಾಷೆ

ಸ್ಥಳೀಯ ಭಾಷೆ

ಸ್ಥಳೀಯ ಭಾಷೆಗಳಲ್ಲೂ ವೀಡಿಯೊಗಳನ್ನು ಮಾಡುವ ಗುರಿಯನ್ನು ರೋಶ್ನಿ ಹೊಂದಿದ್ದು ಸಣ್ಣ ತರಗತಿಗಳಿಗೂ ಪಾಠವನ್ನು ಮಾಡುವ ನಿಟ್ಟಿನಲ್ಲಿ ಈಕೆ ಇದ್ದಾರೆ.

examfear.com ವೆಬ್‌ಸೈಟ್

examfear.com ವೆಬ್‌ಸೈಟ್

examfear.com ವೆಬ್‌ಸೈಟ್ ಅನ್ನು ಲಾಂಚ್ ಮಾಡಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಪಾಠವನ್ನು ವೀಡಿಯೊ ಮೂಲಕ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ದಿನಕ್ಕೆರಡು ವೀಡಿಯೊ

ದಿನಕ್ಕೆರಡು ವೀಡಿಯೊ

ಈಗ ಅದೇ ಚಾನಲ್ 68,000 ಚಂದಾದಾರರನ್ನು ಹೊಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈಕೆ 3,700 ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅಂದರೆ ದಿನಕ್ಕೆರಡು ವೀಡಿಯೊಗಳನ್ನು ಇವರು ಅಪ್‌ಲೋಡ್ ಮಾಡುತ್ತಿದ್ದಾರೆ.

ಶಿಕ್ಷಣ ಪದ್ಧತಿ

ಶಿಕ್ಷಣ ಪದ್ಧತಿ

ತನ್ನ ಮನೆಕೆಲಸದವರ ಮಕ್ಕಳು ಪರೀಕ್ಷೆಗಳಲ್ಲಿ ಫೇಲ್ ಆಗುತ್ತಿರುವುದನ್ನು ಗಮನಿಸಿ ಈಕೆ ಇಂತಹ ಒಂದು ಶಿಕ್ಷಣ ಪದ್ಧತಿಯನ್ನು ಆರಂಭಿಸುವ ಪಣ ತೊಟ್ಟರು. ಶಾಲೆಗೆ ಸರಿಯಾಗಿ ಹೋಗದೇ ಇರುವ ವಿದ್ಯಾರ್ಥಿಗಳು ಮತ್ತು ಪಾಠ ಸರಿಯಾಗಿ ಅರ್ಥವಾಗದೇ ಇರುವ ವಿದ್ಯಾರ್ಥಿಗಳನ್ನು ಹೆಚ್ಚು ತಲುಪುವ ಗುರಿ ಇವರದ್ದಾಗಿದೆ.

ಪವರ್ ಪಾಯಿಂಟ್ ಸ್ಲೈಡ್ ಶೋ

ಪವರ್ ಪಾಯಿಂಟ್ ಸ್ಲೈಡ್ ಶೋ

ಪವರ್ ಪಾಯಿಂಟ್ ಸ್ಲೈಡ್ ಶೋವನ್ನು ಇವರು ಬಳಸಿಕೊಳ್ಳುತ್ತಿದ್ದು ಮೈಕ್ರೋಫೋನ್ ಮೂಲಕ ಪಾಠಗಳನ್ನು ವಿವರಿಸುತ್ತಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂಬುದಾಗಿ ರೋಶ್ನಿ ಹೇಳುತ್ತಾರೆ.

ವೀಡಿಯೊ ಮೂಲಕ ರೆಕಾರ್ಡ್

ವೀಡಿಯೊ ಮೂಲಕ ರೆಕಾರ್ಡ್

ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ಪಾಠಗಳನ್ನು ಇವರು ವೀಡಿಯೊ ಮೂಲಕ ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡುತ್ತಿದ್ದಾರೆ. ವಾರದ ದಿನಗಳಲ್ಲಿ ಕೆಲವು ಗಂಟೆಗಳನ್ನು ರೋಶ್ನಿ ಇದಕ್ಕಾಗಿ ವ್ಯಯಿಸುತ್ತಿದ್ದು ವಾರಾಂತ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಕ್ಕಳಿಗೆ ಅರ್ಥವಾಗುವ ರೀತಿ

ಮಕ್ಕಳಿಗೆ ಅರ್ಥವಾಗುವ ರೀತಿ

ಸಿಬಿಎಸ್‌ಇ ಸಿಲೇಬಸ್ ಅನ್ನು ರೆಫರ್ ಮಾಡುವ ಈಕೆ ಅತಿ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠಗಳನ್ನು ರೆಕಾರ್ಡ್ ಮಾಡುತ್ತಾರೆ.

ಉಚಿತವಾಗಿ ವೀಡಿಯೊ ಅಪ್‌ಲೋಡ್

ಉಚಿತವಾಗಿ ವೀಡಿಯೊ ಅಪ್‌ಲೋಡ್

ಉಚಿತವಾಗಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವ ಗುರಿ ರೋಶ್ನಿಯದ್ದಾಗಿದೆ. ದೇಶದ ಪ್ರತೀ ಮೂಲೆಗೂ ತಮ್ಮ ವೀಡಿಯೊ ತಲುಪಬೇಕು ಎಂಬುದು ಇವರ ಗುರಿಯಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?</a><br />ಓದಿರಿ: <a href=ಐಫೋನ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ?
ಓದಿರಿ: ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು
ಓದಿರಿ: ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!! " title="ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?
ಓದಿರಿ: ಐಫೋನ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ?
ಓದಿರಿ: ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು
ಓದಿರಿ: ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!! " loading="lazy" width="100" height="56" />ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?
ಓದಿರಿ: ಐಫೋನ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ?
ಓದಿರಿ: ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು
ಓದಿರಿ: ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!

Best Mobiles in India

English summary
Roshni Mukherjee found a way to teach tens of thousands of school students for free She launched Examfear.com to post video lessons for classes 9 to 12, and her YouTube channel has more than 68,000 subscribers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X