ಆಹಾರ ಪದಾರ್ಥಗಳ ಕೆಮಿಕಲ್ ತಿಳಿಸುವ ಕ್ಯಾಮೆರಾ

By Suneel
|

ಟೆಕ್‌ ಅಭಿವೃದ್ದಿಯಿಂದ ಇಂದು ಜನರು ಎಲ್ಲಾ ಮಾಹಿತಿ ಮತ್ತು ಸೌಕರ್ಯಗಳನ್ನು ಪಡೆಯುತ್ತಿದ್ದಾರೆ, ಜನರ ಚಿಂತನೆಗೆ ಇನ್ನು ಸಹ ಯಾವುದೇ ಹೊಸ ಅಲೋಚನೆಗಳು ಬರುವ ಮುಂಚೆಯೇ Tel Aviv ವಿಶ್ವವಿದ್ಯಾಲಯದವರು ಹೊಸ ತಂತ್ರಜ್ಞಾನದ ಕ್ಯಾಮೆರಾವೊಂದನ್ನು ಅಭಿವೃದ್ದಿ ಪಡಿಸಿದ್ದು, ಆ ಕ್ಯಾಮೆರಾದಲ್ಲಿ ಯಾವುದೇ ವಸ್ತುವನ್ನು ಫೋಟೋ ಅಥವಾ ವಿಡಿಯೋ ತೆಗೆದರೆ ಆ ವಸ್ತುವಿನಲ್ಲಿನ ಕೆಮಿಕಲ್ ಪ್ರಮಾಣವನ್ನು ಹೇಳುತ್ತದೆ. ಅಲ್ಲದೇ ನಾವು ಕುಡಿಯುವ ಪಾನೀಯ ಮತ್ತು ಆಹಾರ ಪದಾರ್ಥಗಳಲ್ಲಿನ ಕೆಮಿಕಲ್ ಪ್ರಮಾಣವನ್ನು ತಿಳಿಸುತ್ತದೆ.

ಓದಿರಿ: ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು

ಆಹಾರ ಪದಾರ್ಥಗಳ ಕೆಮಿಕಲ್ ತಿಳಿಸುವ ಕ್ಯಾಮೆರಾ

ಈ ಚಿಕ್ಕದಾದ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಯಾಮೆರಾವು, ಲೈಟ್‌ಸ್ಪೆಕ್ಟ್ರಾವನ್ನು ಸ್ಕ್ಯಾನಿಂಗ್ ಮಾಡಿ, ಇಲೆಕ್ಟ್ರೋ ಮ್ಯಾನ್ಗೆಟಿಕ್ 'ಫಿಂಗರ್‌ಪ್ರಿಂಟ್ಸ್‌' ಮೂಲಕ ವಿವಿಧ ವಸ್ತುಗಳಲ್ಲಿನ ವಿಶಿಷ್ಟತೆಗಳನ್ನು ಪ್ರಮಾಣಿಕರಿಸುತ್ತದೆ. ಆದರೆ ಇಮೇಜಿಂಗ್ ಕ್ಯಾಮೆರಾದ ಸ್ಕ್ಯಾನಿಂಗ್ ಲೈಟ್ ಮನುಷ್ಯರ ಕಣ್ಣಿಗೆ ಕಾಣುವುದಿಲ್ಲವಂತೆ. Tel Aviv ವಿಶ್ವವಿದ್ಯಾಲಯದ ಪ್ರೋಫೆಸರ್ ಡೇವಿಡ್ ಮೆಂಡ್ಲೊವಿಕ್ ಟೀಮ್‌ ಈ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳಿಗೂ ಅಳವಡಿಸಲು ಮುಂದಾಗುತ್ತಿದೆಯಂತೆ. ಈ ಟೀಮ್ ಸ್ಮಾರ್ಟ್‌ಫೋನ್‌ಗಳಿಗೆ ಕ್ಯಾಮೆರಾ ವಿನ್ಯಾಸ ಮಾಡುವಲ್ಲಿ ಹೆಚ್ಚಿನ ಪ್ರಾವಿಣ್ಯತೆ ಪಡೆದಿದೆ.

ಆಹಾರ ಪದಾರ್ಥಗಳ ಕೆಮಿಕಲ್ ತಿಳಿಸುವ ಕ್ಯಾಮೆರಾ

ಓದಿರಿ: 30 ಸೆಕೆಂಡ್‌ನಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್‌ ಚಾರ್ಜ್‌

ಹೈಪರ್‌ಸ್ಪೆಕ್ಟ್ರಲ್‌ ಇಮೇಜಿಂಗ್ ಕ್ಯಾಮೆರಾವನ್ನು ಯುನಿಸ್ಪೆಕ್ಟ್ರಲ್‌ ಎಂದು ಹೆಸರಿಸಿದ್ದು ಇದು ಗ್ರಾಹಕ ಎಲೆಕ್ಟ್ರಾನಿಕ್ಸ್, ಜೈವಿಕ ತಂತ್ರಜ್ಞಾನ, ಆಟೋಮೋಟಿವ್ ಮತ್ತು ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಉಪಯೋಗವಾಗಲಿದೆ.

Best Mobiles in India

English summary
A small hyperspectral imaging camera is being developed at Tel Aviv University. It will allow you to take a picture or video of something and determine its chemical composition.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X