Just In
- 2 hrs ago
ಮೊಟೊ G62 5G ಫಸ್ಟ್ ಲುಕ್: ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್ಫೋನ್!
- 13 hrs ago
ನಾಯ್ಸ್ ಸಂಸ್ಥೆಯಿಂದ ಹೊಸ ಸ್ಮಾರ್ಟ್ವಾಚ್ ಲಾಂಚ್! 7 ದಿನಗಳ ಬ್ಯಾಟರಿ ಬ್ಯಾಕಪ್!
- 18 hrs ago
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಡಿಲೀಟ್ ಮೆಸೇಜ್ ರಿಕವರಿ ಆಯ್ಕೆ!
- 19 hrs ago
ಭಾರತದಲ್ಲಿ 5G ಪ್ರಾರಂಭಕ್ಕೂ ಮುನ್ನವೇ ಅಚ್ಚರಿ ಮೂಡಿಸಿದ ಓಕ್ಲಾ ವರದಿ!
Don't Miss
- Education
Karnataka Teacher Result 2022 : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಂಕಗಳು ಪ್ರಕಟ
- News
ರಾಜಕೀಯ ವಿದ್ಯಮಾನಗಳು: ತಿರುಪತಿಯಲ್ಲಿ ಬೊಮ್ಮಾಯಿ-ಬಿಎಸ್ವೈ ಸಂಜೆ ಮೀಟಿಂಗ್!
- Movies
'ಕೂಲ್ ಡ್ರಿಂಕ್ಸ್ ಬೇಡ.. ಎಳನೀರು ಇದ್ದರೆ ಚೆನ್ನಾಗಿರುತ್ತದೆ' ಎಂದಿದ್ದ ಅಪ್ಪು
- Sports
NZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗ
- Travel
ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ
- Lifestyle
ಆಗಸ್ಟ್ 21ರವರೆಗೆ ಬುಧ-ಆದಿತ್ಯ ಯೋಗ: ಈ 4 ರಾಶಿಯವರು ಈ ಅವಧಿಯಲ್ಲಿ ಮಾಡಿದ ಕಾರ್ಯಕ್ಕೆ ಯಶಸ್ಸು ಖಚಿತ
- Automobiles
ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಉನ್ನತೀಕರಣಗೊಂಡ ಸ್ಕೋಡಾ ಕುಶಾಕ್ ಆಕ್ಟಿವ್
- Finance
ಆಗಸ್ಟ್ 18: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
ಪೊಲೀಸ್‌ರಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ; ವಿಡಿಯೊ ವೈರಲ್!
ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತದಲ್ಲಿಯು ತನ್ನ ಕರಾಳ ಛಾಯೆಯನ್ನು ತೋರಿಸಿದೆ. ದೇಶದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಸರ್ಕಾರ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯುವುದು, ಸರಿಯಾಗಿ ಹ್ಯಾಂಡ್‌ವಾಶ್ ಮಾಡುವುದು ಹಾಗೂ ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿರುವುದು ನಿಮಗೆ ಗೊತ್ತೆ ಇದೆ.

ಜನರಿಗೆ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಬೇಡಿ ಅಂತಾ ಪೊಲೀಸ್‌ರು ಹೇಳುತ್ತಿದ್ದರೂ, ಕೆಲವರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿಲ್ಲ. ಅದಕ್ಕಾಗಿ ಪೊಲೀಸ್‌ರು ಕೈ ಮುಗಿದು ಹೇಳಿದ್ದು ಆಯ್ತು, ಲಾಠಿ ರುಚಿ ತೋರಿಸಿದ್ದು ಆಯ್ತು, ಆದ್ರೂ ಕೆಲವು ಮಂದಿ ಮನೆಯಲ್ಲಿರದೇ ಬೈಕ್‌ನಲ್ಲಿ ಹೊರಗಡೆ ಓಡಾಡುವುದು ಬಿಟ್ಟಿಲ್ಲ. ಈ ನಡುವೆ ಕೊರೊನಾ ವೈರಸ್ ಕುರಿತಾಗಿ ಬೆಂಗಳೂರಿನ ಪೊಲೀಸ್‌ರು ಮಾಡಿರುವ ವಿಭಿನ್ನ ಜಾಗೃತಿ ವಿಡಿಯೊ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹೌದು, ಟ್ರಾಫಿಕ್ ಪೊಲೀಸ್‌ರು ಕೊರೊನಾ ವೈರಸ್ ಹೋಲುವ ಟೋಪಿ ಧರಿಸಿ (ಕೊರೊನಾ ಹೆಲ್ಮೆಟ್) ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರತ್ತ ಹೋಗುವ ಮೂಲಕ ಕೊರೊನಾ ವೈರಸ್ ಸೋಂಕು ಹೇಗೆ ಒಕ್ಕರಿಸುತ್ತದೆ ಎಂಬುವುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಈ ವಿಡಿಯೊ ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸ್‌ರ ಈ ವಿಭಿನ್ನ ಜಾಗೃತಿಗೆ ಜನರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಇನ್ನು ಈ ಘಟನೆ ಟ್ರಿನಿಟಿ ಸರ್ಕಲ್ ಬಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಚೆನೈನ ಸ್ಥಳೀಯ ಕಲಾವಿದರೊಬ್ಬರು ಚೆನ್ನೈನ ಪೊಲೀಸ್ ಅಧಿಕಾರಿಯ ಸಹಯೋಗದೊಂದಿಗೆ ಸೇರಿ ಕೊರೊನಾ ಹೆಲ್ಮೆಟ್ ಧರಿಸಿ ಬೈಕ್ ಸವಾರರು ರಸ್ತೆಗಿಳಿಯದಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಯುವ ಹೋರಾಟದಲ್ಲಿ ವೈದ್ಯರು, ನರ್ಸ್ ಜೊತೆಗೆ ಪೊಲೀಸ್‌ರ ಪಾತ್ರವು ಮುಖ್ಯವಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086