Subscribe to Gizbot

ಶ್ಯೋಮಿ ಎಮ್ಐ ಮಿಕ್ಸ್ 2 ಫೋಟೋ ಲೀಕ್

By: Shwetha PS

ಶ್ಯೋಮಿ ಎಮ್ಐ ಮಿಕ್ಸ್ 2 ಹೆಚ್ಚು ನಿರೀಕ್ಷಿತ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಈ ವರ್ಷದಲ್ಲಿ ಈ ಡಿವೈಸ್ ಬಹುಬೇಡಿಕೆಯ ಜನಮನ್ನಣೆಯನ್ನು ಗಳಿಸಲಿದೆ. ಕಳೆದ ವರ್ಷ ಘೋಷಿಸಲಾಗಿದ್ದ ಮೂಲ ಎಮ್ಐ ಮಿಕ್ಸ್‌ಗಿಂತ ಎಮ್ಐ ಮಿಕ್ಸ್ 2 ಹೆಚ್ಚಿನ ಸ್ಕ್ರೀನ್ ಬಾಡಿಯನ್ನು ಹೊಂದಲಿದೆ.

ಶ್ಯೋಮಿ ಎಮ್ಐ ಮಿಕ್ಸ್ 2 ಫೋಟೋ ಲೀಕ್

ಕಂಪೆನಿಯ ಸಿಇಒ ಲೀ ಜುನ್ ಈ ವರ್ಷದ ಆರಂಭದಲ್ಲಿಯೇ ಡಿವೈಸ್ ಕುರಿತು ಅಧಿಕೃತ ಘೋಷಣೆಯನ್ನು ಮಾಡಿದ್ದರು. ಮೂಲ ಎಮ್ಐ ಮಿಕ್ಸ್‌ನ ಫ್ರೆಂಚ್ ವಿನ್ಯಾಸಕಾರ ಫಿಲಿಪ್ ಸ್ಟ್ರಾಕ್ ಈ ಹೊಸ ಡಿವೈಸ್‌ನ ವಿನ್ಯಾಸದಲ್ಲೂ ತಮ್ಮ ಸಿದ್ಧಹಸ್ತವನ್ನು ಪ್ರದರ್ಶಿಸಲಿದ್ದಾರೆ ಎಂಬುದಾಗಿ ಜುನ್ ತಿಳಿಸಿದ್ದಾರೆ. ವಿಬೊ ಯೂಸರ್ ಫೋನ್‌ನ ಕೊನೆಯ ವಿನ್ಯಾಸವನ್ನು ಹೊರಪಡಿಸಿದ್ದು ಕೆಳಭಾಗದಲ್ಲಿ ಸ್ಕ್ರಾಲ್ ಮಾಡಿಕೊಂಡು ಡಿವೈಸ್‌ನ ಇನ್ನಷ್ಟು ಚಿತ್ರಗಳನ್ನು ನಿಮಗೆ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜಲ್ ಲೆಸ್ ಡಿಸ್‌ಪ್ಲೇ

ಬೆಜಲ್ ಲೆಸ್ ಡಿಸ್‌ಪ್ಲೇ

ಆಪಲ್‌ನ ಐಫೋನ್ 8 ಬೆಜಲ್ ಲೆಸ್ ವಿನ್ಯಾಸವನ್ನು ಪಡೆದುಕೊಂಡಿದ್ದು ಅದೇ ವಿನ್ಯಾಸ ಎಮ್ಐ ಮಿಕ್ಸ್ 2 ನಲ್ಲಿ ಕಂಡುಬರುವ ಸಾಧ್ಯತೆ ಇದೆ. ಮೇಲ್ಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಆರಂಭವಿದ್ದು, ಸೆನ್ಸಾರ್‌ಗಳು ಮತ್ತು ಇಯರ್ ಪೀಸ್ ಅನ್ನು ಇದು ಹೊಂದಿದೆ. ಡಿವೈಸ್‌ನ ಬಲಕ್ಕೆ ಪವರ್ ಬಟನ್ ಇದ್ದು ವಾಲ್ಯೂಮ್ ರಾಕರ್‌ ಬಟನ್‌ಗಳಿವೆ. ಸಿಮ್ ಕಾರ್ಡ್ ಟ್ರೇ ಡಿವೈಸ್‌ನ ಎಡಭಾಗದಲ್ಲಿದೆ.

ಉಚಿತ ಜಿಯೋ ಫೋನ್ ಕೊಳ್ಳುವುದು ಹೇಗೆ? ಜಿಯೋ ಹೇಳಿಕೊಟ್ಟ ಸರಳ ವಿಧಾನ ಇಲ್ಲಿದೆ..!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಲಂಬವಾಗಿರುವ ಡ್ಯುಯಲ್ ಕ್ಯಾಮೆರಾಗಳು

ಲಂಬವಾಗಿರುವ ಡ್ಯುಯಲ್ ಕ್ಯಾಮೆರಾಗಳು

ಎಮ್ಐ ಮಿಕ್ಸ್ 2 ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹಿಂಭಾಗದಲ್ಲಿ ಹೊಂದಿದ್ದು ಸೆನ್ಸಾರ್‌ಗಳನ್ನು ಲಂಬವಾಗಿ ಇರಿಸಲಾಗಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಬದಿಯಲ್ಲಿ ಇದು ಒಳಗೊಂಡಿದೆ. ರಿಯರ್ ಪ್ಯಾನೆಲ್ ಫಿಂಗರ್‌ ಪ್ರಿಂಟ್ ಸೆನ್ಸಾರ್‌ಗಳನ್ನು ಹೊಂದದೇ ಇರುವುದು ಆಶ್ಚರ್ಯಕರವಾಗಿದ್ದು ಒಂದಾ ಪವರ್ ಬಟನ್ ಇಲ್ಲವೇ ಶ್ಯೋಮಿಯ ಫಿಂಗರ್ ಪ್ರಿಂಟ್ ರೀಡರ್‌ ಫೋನ್‌ನ ಡಿಸ್‌ಪ್ಲೇ ಅಡಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಇರಿಸಲಿದೆ.

ಹೆಡ್‌ಫೋನ್ ಜಾಕ್ ಕೊರತೆ

ಹೆಡ್‌ಫೋನ್ ಜಾಕ್ ಕೊರತೆ

ಕೆಳಭಾಗದಲ್ಲಿ ಹೆಡ್‌ಫೋನ್ ಜಾಕ್ ಕೊರತೆ ಎದ್ದುಕಾಣುತ್ತಿದೆ. ಪ್ರಮಾಣಿತ 3.5ಎಮ್‌ಎಮ್ ಆಡಿಯೋ ಜಾಕ್ ಅನ್ನು ಶ್ಯೋಮಿ ತನ್ನ ಎಮ್ಐ ಮಿಕ್ಸ್ 2 ನಲ್ಲಿ ಇರಿಸುವ ಆಸಕ್ತಿ ತೋರಿಲ್ಲವೆಂದು ಕಂಡುಬರುತ್ತಿದೆ. ಡಿವೈಸ್‌ನ ಮೇಲ್ಭಾಗವು ಹೆಡ್‌ಫೋನ್ ಜಾಕ್ ಅನ್ನು ಹೋಲ್ಡ್ ಮಾಡಬಹುದು.

ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್‌ಗಳು ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಕಾಣಬಹುದಾಗಿದೆ. ಅಂತೂ ಇಲ್ಲಿ ಸೋರಿಕೆಯಾಗಿರುವ ಮಾಹಿತಿಗಿಂತ ಇನ್ನಷ್ಟು ಸುದ್ದಿಯನ್ನು ನಮಗೆ ನೀಡಲಾಗುವುದಿಲ್ಲ. ಇದಿಷ್ಟು ಮಾಹಿತಿಯನ್ನು ಅರಿತುಕೊಂಡು ಡಿವೈಸ್ ಬಿಡುಗಡೆಯಾಗುವವರೆಗೂ ಕಾಯಲೇಬೇಕು.

Source

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Xiaomi Mi Mix 2 is said to come with a higher screen-to-body ratio than the original Mi Mix that was announced in the last year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot