ಗೂಗಲ್ ಪೇ ಪಾಪುಲಾರಿಟಿ ಹೆಚ್ಚಿಸುವುದಕ್ಕೆ ಹೊಸ ಐಡಿಯಾ

By Gizbot Bureau
|

ಭಾರತದಲ್ಲಿ 2017 ರಿಂದ ಪಾವತಿ ಸೇವೆಯ ಬಗ್ಗೆ ಚರ್ಚೆಗಳು ಆರಂಭವಾದ ಬೆನ್ನಲ್ಲೇ ಗೂಗಲ್ ಸಂಸ್ಥೆ ತನ್ನ ಗೂಗಲ್ ಪೇ ಸೇವೆಯನ್ನು ದೇಶದ ಬಹುತೇಕ ಜನರನ್ನು ತಲುಪುವುದಕ್ಕಾಗಿ ಹೊಸ ಸ್ಟ್ರ್ಯಾಟಜಿಯನ್ನು ನಿರ್ಮಿಸುತ್ತಿದೆ – ಆಂಡ್ರಾಯ್ಡ್ ಆಪ್ ಗಳಲ್ಲಿ ಆಳವಾಗಿ ಇಂಟಿಗ್ರೇಟ್ ಮಾಡುವ ಮೂಲಕ ಸಾಧಿಸುವ ಪ್ರಯತ್ನಕ್ಕಿಳಿದಿದೆ.

ಟೆಕ್ ಕ್ರಂಚ್ ಹೇಳಿರುವುದೇನು?

ಟೆಕ್ ಕ್ರಂಚ್ ಹೇಳಿರುವುದೇನು?

ಟೆಕ್ ಕ್ರಂಚ್ ವೆಬ್ ಸೈಟ್ ನ ವರದಿಯೊಂದು ಹೇಳುವ ಪ್ರಕಾರ ಹುಡುಕಾಟದ ದೈತ್ಯ ಗೂಗಲ್ ಬ್ಯುಸಿನೆಸ್ ಮತ್ತು ಡೆವಲಪರ್ ಗಳಿಗೆ ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ತಮ್ಮ ಆಪ್ ನಲ್ಲಿ ಇದನ್ನು ಇಂಪ್ಲಿಮೆಂಟ್ ಮಾಡುವುಕ್ಕೆ ಅವಕಾಶವಾಗುವಂತಹ ಒಂದು ಸಂಬಂಧವನ್ನು ಬೆಳೆಸುವ ಬಿಲ್ಟ್ ಟ್ಯಾನ್ ಆಪ್ ನ್ನು ಸಾಧಿಸಿಕೊಂಡಿದೆ.

ಬಳಕೆದಾರರ ಸಂಖ್ಯೆ ಏರಿಕೆ:

ಬಳಕೆದಾರರ ಸಂಖ್ಯೆ ಏರಿಕೆ:

ಎಸ್ ಡಿಕೆ ಮಾದರಿಯಲ್ಲಿ ಈ ಹೊಸ ಫ್ಲ್ಯಾಟ್ ಫಾರ್ಮ್ ಡೆವಲಪರ್ಸ್ ಗಳಿಗಾಗಿ ಈ ವರ್ಷ ಇದು ಬರುವ ಸಾಧ್ಯತೆ ಇದೆ. ಹಾಗಾದ್ರೆ ಗೂಗಲ್ ಪೇ ರೋಲ್ ಇಲ್ಲಿ ಏನು?ಆಪ್ ನಲ್ಲಿ ರಿವಾರ್ಡ್ ಗಳು ಇರುವುದರಿಂದಾಗಿ ಈ ಪ್ರೊಜೆಕ್ಟ್ ಗೂಗಲ್ ಪೇಯನ್ನು ಬಳಕೆ ಮಾಡುತ್ತದೆ ಎಂದು ವರದಿಯೊಂದು ತಿಳಿಸುತ್ತಿದೆ. ಬಳಕೆದಾರರ ಸೇವೆಯನ್ನು ಗಣನೀಯವಾಗಿ ಏರಿಕೆಗೊಳಿಸುವ ಸಾಧ್ಯತೆಯನ್ನು ಇಲ್ಲಿ ತಳ್ಳಿಹಾಕುವಂತಿಲ್ಲ.

ಪ್ರೊಜೆಕ್ಟ್ ಕ್ರ್ಯೂಸರ್:

ಪ್ರೊಜೆಕ್ಟ್ ಕ್ರ್ಯೂಸರ್:

ಪ್ರೊಜೆಕ್ಟ್ ನ್ನು ಆಂತರಿಕವಾಗಿ ಪ್ರೊಜೆಕ್ಟ್ ಕ್ರ್ಯೂಸರ್ ಎಂದು ಕರೆಯಲಾಗುತ್ತದೆ. ಮತ್ತು ಇದು ಗೂಗಲ್ ನ ಮುಂದಿನ ಬಿಲಿಯನ್ ಯ್ಯೂಸರ್ ಟೀಮ್ ನ ಅಡಿಯಲ್ಲಿರುತ್ತದೆ. ಕಳೆದ ಕೆಲವು ತಿಂಗಳಲ್ಲಿ ಈ ತಂಡವು ಹಲವು ಬ್ಯುಸಿನೆಸ್ ಗಳನ್ನು ತಲುಪಿದೆ ಮತ್ತು ಅವರೆಲ್ಲರನ್ನು ಆನ್ ಬೋರ್ಡ್ ಗೆ ತರುವ ಪ್ರಯತ್ನ ನಡೆಸುತ್ತಿದೆ.

ರಿವಾರ್ಡ್ಸ್:

ರಿವಾರ್ಡ್ಸ್:

ಹಾಗಾದ್ರೆ ಬಳಕೆದಾರರಿಗೆ ಏನಿದೆ ಮತ್ತು ರಿವಾರ್ಡ್ ಯಾರು ಕೊಡುತ್ತಾರೆ?

ಗೂಗಲ್ ತಿಳಿಸಿರುವಂತೆ ಒಮ್ಮೆ ಆಪ್ ನಲ್ಲಿ ಫ್ಲ್ಯಾಟ್ ಫಾರ್ಮ್ ಇಂಟಿಗ್ರೇಟ್ ಆದ ನಂತರ ಬಳಕೆದಾರರಿಗೆ ಅವರು ಗೂಗಲ್ ಪೇ ಬಳಸಿ ಕ್ರಿಯೆಯನ್ನು ಮಾಡಿದಾಗ ಅಂದರೆ ಆರ್ಡರ್ ಮಾಡುವುದು ಇತ್ಯಾದಿಗಳನ್ನು ಮಾಡಿದಾಗ ಗೂಗಲ್ ಅವರಿಗೆ ಇನ್ಸೆಂಟೀವ್ ನ್ನು ನೀಡುತ್ತದೆ. ಫ್ರೆಂಡ್ಸ್ ಗೆ ಆಮಂತ್ರಣ ಕಳಿಸುವುದು ಅಥವಾ ಪಾವತಿ ಮೆಥೆಡ್ ನ್ನು ಸೇರಿಸುವುದು ಇತ್ಯಾದಿ. ಇದು ಸಣ್ಣ ಮಟ್ಟದ ಹಣವನ್ನು ಗಳಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.

ಆದಾಯ ಮೂಲ:

ಆದಾಯ ಮೂಲ:

ಗೂಗಲ್ ಪೇಗೆ ಡೆವಲಪರ್ಸ್ ಗೆ ಈ ಪ್ಲ್ಯಾಟ್ ಫಾರ್ಮ್ ನಿಂದ ಲಭ್ಯವಾಗುವ ಆದಾಯವನ್ನು ಗೂಗಲ್ ರಿವಾರ್ಡ್ಸ್ಗೆ ಬಳಸಿಕೊಳ್ಳದೇ ಇರುವ ಸಾಧ್ಯತೆಯೂ ಕೂಡ ಇದೆ ಎಂದು ಗೂಗಲ್ ನಮೂದಿಸಿದೆ.

ಸ್ಪರ್ಧೆ:

ಅಂತಿಮವಾಗಿ ಬಳಕೆದಾರರಿಗೆ ಗೂಗಲ್ ಯಾವಾಗ ಈ ಫೀಚರ್ ನ್ನು ಬಿಡುಗಡೆಗೊಳಿಸುತ್ತದೆ ಎಂಬ ಬಗ್ಗೆ ಖಾತ್ರಿ ಇಲ್ಲ. ಪಾವತಿ ಸೇವೆಗಳಲ್ಲೂ ಕೂಡ ಸ್ಪರ್ಧೆಗಳು ಬಹಳವಾಗಿ ನಡೆಯುತ್ತಿದೆ. ಅಮೇಜಾನ್ ಕೂಡ ಇತ್ತೀಚೆಗೆ ಸ್ಕ್ಯಾನ್ ಎಂಡ್ ಪೇ ಆಯ್ಕೆಯನ್ನು ಪೇಟಿಎಂ ಮತ್ತು ಗೂಗಲ್ ಪೇ ರೀತಿಯಲ್ಲಿ ಸಾಧ್ಯಗೊಳಿಸಿಕೊಂಡಿದೆ.ಈ ಫೀಚರ್ ಕೂಡ ಅಮೇಜಾನ್ ಶಾಪಿಂಗ್ ಆಪ್ ನ ಒಂದು ಭಾಗವಾಗಿಯೂ ಕೂಡ ಬರುವ ಸಾಧ್ಯತೆ ಇದೆ.

Best Mobiles in India

Read more about:
English summary
This is Google’s new strategy to make Google Pay reach more Indians

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X