Subscribe to Gizbot

ಮನೆ ಕಟ್ಟಿಕೊಡುವ 3D ಪ್ರಿಂಟರ್

Posted By:

ಪ್ರಪಂಚದ ಅತಿ ಸುಧಾರಿತ ಯೋಜನೆಯೊಂದು ಈಗ ಮನೆಕಟ್ಟಲು ಸಿದ್ದವಿದೆ. ಆ ಯೋಜನೆ ಹೆಸರು (WASP-World'd Advanced Savings Project). ಈ ಯೋಜನೆ ಅಡಿಯಲ್ಲಿ ಸಿದ್ಧವಾಗಿರೋದು ವಿಶ್ವದ ಅತಿದೊಡ್ಡ ಡೆಲ್ಟಾ 3D ಪ್ರಿಂಟರ್ . WASP ಒಂದು ಇಟಾಲಿಯನ್‌ ಇಂಜಿನಿಯರಿಂಗ್ ಕಂಪೆನಿಯಾಗಿದ್ದು, 40ft ಎತ್ತರದಲ್ಲಿ ನಿಂತು ನಮಗೆ ಬೇಕಾದ ವಿನ್ಯಾಸದಲ್ಲಿ ಇದು ಮನೆ ರಚನೆ ಮಾಡಿಕೊಡುತ್ತದೆ. ಪ್ರಪಂಚದ ವಿಕೋಪ ಪ್ರದೇಶಗಳಿಗೆ ಭವಿಷ್ಯದ ದೃಷ್ಟಿಯಿಂದ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚಿಲ್ಲದೆ. ಮನೆ ನಿರ್ಮಿಸಿ ಕೊಡುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಮುಂದಿನ 15 ವರ್ಷಗಳಲ್ಲಿ ದಿನನಿತ್ಯ ನೂರು ಸಾವಿರ ಮನೆಗಳನ್ನು ಪ್ರಪಂಚದಾದ್ಯಂತ ನಿರ್ಮಿಸಬೇಕಾಗಿದೆ ಎನ್ನಲಾಗಿದೆ.

ಓದಿರಿ:ಬಿಎಸ್‌ಎನ್‌ಎಲ್: ಯಾವುದೇ ಹೆಚ್ಚಿನ ದರವಿಲ್ಲದೆ ವೇಗದ ಇಂಟರ್ನೆಟ್

ರ್ಡಿನಿಯಾದ ದಕ್ಷಿಣ ವಲಯದಲ್ಲಿರುವ ಐಗ್ಲೆಸ್‌ನ ನಗರ ದೊಡ್ಡ ಡೆಲ್ಟಾದಲ್ಲಿ ಇತಿಹಾಸ ಪ್ರಸಿದ್ದ ವಿನ್ಯಾಸದಲ್ಲಿ ಮುನಿಸಿಪಾಲಿಟಿ ನಿರ್ಮಿಸಲು ಆಸಕ್ತಿ ತೋರಿಸಿದೆ. ಇದು ಬಿಗ್‌ ಡೆಲ್ಟಾ 3D ಪ್ರಿಂಟರ್‌ ಮೂಲಕ ನಿರ್ಮಿಸುತ್ತಿರುವ ಮೊದಲ ಮನೆಯಾಗಿದೆ ಹಾಗೂ ಸ್ಥಳವು ಸಹ ಅನುಕೂಲಕರವಾಗಿದೆ ಎಂದು WASP ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾರ್ಮಿಕರಿಲ್ಲದೆ ಮನೆ ಕಟ್ಟಿ

ಕಾರ್ಮಿಕರಿಲ್ಲದೆ ಮನೆ ಕಟ್ಟಿ

ಇಷ್ಟು ದಿನ ಪುಸ್ತಕಗಳನ್ನು ಮುದ್ರಿಸಲು ಪ್ರಿಂಟರ್‌ ಬಳಸಿಕೊಳ್ಳುತ್ತಿದ್ದೆವು. ಈಗ ಕಾಲ ಬದಲಾಗಿದೆ. ಹೌದು WASP ಈಗ ಮನೆ ಪ್ರಿಂಟ್‌ ಮಾಡುವ ಡೆಲ್ಟಾ 3D ಪ್ರಿಂಟರ್‌ ತಯಾರಿಸಿದೆ. ಇದು ಸ್ಥಳೀಯ ಸರಕುಗಳನ್ನು ಬಳಸಿಕೊಂಡು ಯಾವುದೇ ಕೂಲಿ ಕಾರ್ಮಿಕರ ಅವಶ್ಯಕತೆ ಇಲ್ಲದೆ ನಿಮಗೆ ಮನೆ ಕಟ್ಟಿಕೊಡುತ್ತದೆ

ನಿಮಗೆ ಬೇಕಾದ ಅಳತೆಯಲ್ಲಿ ಮನೆಗಳು

ನಿಮಗೆ ಬೇಕಾದ ಅಳತೆಯಲ್ಲಿ ಮನೆಗಳು

ಇದು ಎಲ್ಲಾ ಅಳತೆಯಲ್ಲೂ 3D ಪ್ರಿಂಟರ್‌ಗಳನ್ನು ತಯಾರಿಸಿದ್ದು, ನಮಗೆ ಬೇಕಾದ ಅಳತೆಯಲ್ಲಿ ಮನೆ ಕಟ್ಟ ಬಹುದಾಗಿದೆ.

ಮನೆ ವಿನ್ಯಾಸದಲ್ಲಿ ನಮ್ಮದೇ ಆಯ್ಕೆ

ಮನೆ ವಿನ್ಯಾಸದಲ್ಲಿ ನಮ್ಮದೇ ಆಯ್ಕೆ

ಕಳೆದ ವರ್ಷ ಇದು 15ft 3D ಪ್ರೆಂಟರ್ ತಯಾರಿಸಿತ್ತು, ಪ್ರಸ್ತುತ ವರ್ಷದಲ್ಲಿ ಇದು ದೊಡ್ಡ ಪ್ರಿಂಟರ್‌ಗಳನ್ನು ತಯಾರಿಸಿದೆ. ಬಿಗ್ ಡೆಲ್ಟಾ ಪ್ರಿಂಟರ್‌ 6 ಮೀಟರ್ ವ್ಯಾಸದಲ್ಲಿ ಗಟ್ಟಿಮುಟ್ಟಾದ ಲೋಹಗಳನ್ನು ತೆಗೆದುಕೊಂಡು, ಮನೆ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಮಿಕ್ಸರ್ ಮಾಡಿಕೊಂಡು ತಿರುಗುವ ನಳಿಕೆಯಿಂದ ವೈಶಿಷ್ಟ್ಯವಾಗಿ ಮನೆಯನ್ನು ನಿರ್ಮಿಸಬಲ್ಲದಾಗಿದೆ. ಹಾಗೂ ಸಾಧ್ಯವಾದ ಮಣ್ಣು, ಸಿಮೆಂಟ್‌ ಮತ್ತು ರಾಸಾಯನಿಕಗಳನ್ನು ಬಳಸಿ ಮನೆಯನ್ನು ಕಟ್ಟಿಕೊಡಬಲ್ಲದಾಗಿದೆ.

ವಿಕೋಪ ಪ್ರದೇಶಗಳಿಗೆ ಹೆಚ್ಚು ಉಪಯೋಗ

ವಿಕೋಪ ಪ್ರದೇಶಗಳಿಗೆ ಹೆಚ್ಚು ಉಪಯೋಗ

3D ಪ್ರಿಂಟರ್‌ ವಿಕೋಪ ಪ್ರದೇಶಗಳಿಗೆ ಆರೋಗ್ಯದ ನೆರವು ನೀಡುವ ದೃಷ್ಟಿಯಿಂದ ಮನೆ ನಿರ್ಮಿಸುತ್ತದೆ. ಸೊಳ್ಳೆ ಮತ್ತು ಕೀಟಗಳ ಕಾಟದಿಂದಲೂ ಪಾರುಮಾಡುತ್ತದೆ. 3D ಪ್ರಿಂಟರ್‌ ಮನೆಗಳು ಎಲ್ಲರಿಗೂ ಹೆಚ್ಚು ಪ್ರಿಯವಾದವು. ಕಾರಣ ಇವುಗಳು ವಿಕೋಪ ಪ್ರದೇಶಗಳಿಗೆ ಹೆಚ್ಚು ಸಾಮರ್ಥ್ಯ ನೀಡಿ ಅಂತಹ ಪ್ರದೇಶಗಳಿಗೆ ಬೇಗ ಮನೆ ನಿರ್ಮಿಸಲು ಸಾಧ್ಯತೆ ಇವುಗಳಿಗೆ ಮಾತ್ರ ಇದೆ.

ಅಳತೆ ಮತ್ತು ಗಾತ್ರ

ಅಳತೆ ಮತ್ತು ಗಾತ್ರ

ಮನೆಯ ಅಳತೆ, ಗೋಡೆಗಳ ಗಾತ್ರ, ಸರಕುಗಳನ್ನು ನಾವೇ ಆಯ್ಕೆ ಮಾಡಬಹುದಾಗಿದೆ. ನಂತರದಲ್ಲಿ ಇದು ಒಂದು ನಾಜಲ್‌ ಮೂಲಕ ವಿನ್ಯಾಸ ಹೊಂದಿಸಿರುವಂತೆ ಮನೆ ನಿರ್ಮಿಸುತ್ತದೆ.

 ಕಡಿಮೆ ಖರ್ಚು

ಕಡಿಮೆ ಖರ್ಚು

ಮನೆ ಕಟ್ಟಲು ಕೂಲಿ ಕಾರ್ಮಿಕರನ್ನು ಹುಡುಕುವುದು ಎಲ್ಲರಿಗೂ ಸಂಕಟ ವಿಷಯ. ಆದರೆ 3D ಪ್ರಿಂಟರ್‌ ಇದ್ದಲ್ಲಿ ಸರಕುಗಳನ್ನು ಬಿಟ್ಟು ಬೇರೆ ಯಾರ ಸಹಾಯವು ಅಗತ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
World’s Advanced Saving Project (WASP) is ready to take the veils off of the Big Delta, the world’s largest delta 3D printer. It will stand 40ft tall and has been built with the aim of creating almost zero-cost housing by making use of local materials.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot