ಐಫೋನ್ 7ಗೆ ಇಯರ್ ಫೋನ್ ಜಾಕ್ ಇಟ್ಟ ಈತ: ಹೇಗೆ..? ವಿಡಿಯೋ ನೋಡಿ
ಐಫೋನ್ 6 ರೂಪಿಸಿಕೊಂಡು ಅದನ್ನು ವಿಡಿಯೋ ಮಾಡಿ ಹರಿ ಬಿಟ್ಟದ್ದ ಯುವಕ ಮತ್ತೊಂದು ಹೊಸ ವಿಡಿಯೋದೊಂದಿಗೆ ಕಾಣಿಸಿಕೊಂಡಿದ್ದಾನೆ. ಅದುವೇ ಹೊಸ ಐಫೋನ್ ಫೋನ್‌ನೊಂದಿಗೆ ಹೊಸ ಅವತಾರದಲ್ಲಿ.
ಇದೇ ಕೆಲವು ದಿನಗಳ ಹಿಂದೆ ಕೆಲವೇ ಸಾವಿರಗಳಲ್ಲಿ ಬಿಡಿಭಾಗಗಳನ್ನು ಖರೀದಿಸಿ ತನ್ನದೇ ಐಫೋನ್ 6 ರೂಪಿಸಿಕೊಂಡು ಅದನ್ನು ವಿಡಿಯೋ ಮಾಡಿ ಹರಿ ಬಿಟ್ಟದ್ದ ಯುವಕ ಮತ್ತೊಂದು ಹೊಸ ವಿಡಿಯೋದೊಂದಿಗೆ ಕಾಣಿಸಿಕೊಂಡಿದ್ದಾನೆ. ಅದೇ ಐಫೋನ್ ಫೋನ್‌ನೊಂದಿಗೆ ಹೊಸ ಅವತಾರದಲ್ಲಿ.

ಆಪಲ್ ಲಾಂಚ್ ಮಾಡಿದ ಐಫೋನ್ 7 ನಲ್ಲಿ 3.5mm ಇಯರ್ ಫೋನ್ ಜಾಕ್ ಅನ್ನು ನೀಡಿರಲಿಲ್ಲ. ಇದರ ಬದಲಾಗಿ ವೈರ್‌ಲೈಸ್ ಇಯರ್ ಫೋನ್ ನೀಡಿತ್ತು. ಆದರೆ ಸ್ಕಾಟಿ ಅಲಿನ್ ಎನ್ನುವಾತ ಐಫೋನ್ 7 ನಲ್ಲಿ 3.5mm ಇಯರ್ ಫೋನ್ ಜಾಕ್ ಸೇರಿಸಿದ್ದಾನೆ. ಅಲ್ಲದೇ ಅದನ್ನು ಹೇಗೆ ಮಾಡಿದ ಮತ್ತು ಪಟ್ಟ ಕಷ್ಟಗಳನ್ನು ವಿಡಿಯೋ ಮಾಡಿ ಪಬ್ಲಿಷ್ ಮಾಡಿದ್ದಾನೆ.

ಚೀನಾದಲ್ಲಿ ಹುಡುಕಿದ:
ಚೀನಾದಲ್ಲಿ ಬಿಡುಬಿಟ್ಟಿರುವ ಅಲ್ಲಿರುವ ಮೊಬೈಲ್ ಮಾರುಕಟ್ಟೆಯಲ್ಲಿ ದೊರೆಯುವ ಬಿಡಿಭಾಗಗಳನ್ನು ಬಳಸಿಕೊಂಡು ಆತ ಐಫೋನ್ 7 ನಲ್ಲಿ 3.5mm ಇಯರ್ ಫೋನ್ ಜಾಕ್ ಅಳವಡಿಸಿದ್ದಾನೆ.
ವಿಡಿಯೋ ನೋಡಿ:
ಒಟ್ಟು 33 ನಿಮಿಷದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಆಪಲ್ ಕಂಪನಿಗೆ ಸೆಡ್ಡು ಹೊಡೆದು ತನ್ನದೇ ಹೊಸ ಆಯ್ಕೆಗಳನ್ನು ಫೋನಿನಲ್ಲಿ ಆಡ್ ಮಾಡಿಕೊಂಡಿದ್ದಾನೆ. ಎಲ್ಲರಿಂದಲೂಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಯಾರು ಬೇಕಾದರು ಮಾಡಿಕೊಳ್ಳಿ:
ತಾನು ಮಾಡಿದ ರೀತಿಯಲ್ಲಿ ಯಾರು ಬೇಕಾದರೂ ಮಾಡಿಕೊಳ್ಳಿ ಎನ್ನುವ ಕಾರಣಕ್ಕೆ ಎಲ್ಲಾ ಮಾಹಿತಿಗಳನ್ನು ತನ್ನ ವೆಬ್‌ಸೈಟಿನಲ್ಲಿ ಹಾಕಿದ್ದಾನೆ. ಅಲ್ಲದೇ ನಿಮಗೆ ಏನಾದರು ಐಡಿಯಾಗಳು ಇದ್ದರೇ ನೀಡಿ ಎಂದು ಮನವಿ ಮಾಡಿದ್ದಾನೆ.


Click it and Unblock the Notifications








