ಸಮುದ್ರದ ನೀರನ್ನು ಶುದ್ಧ ಕುಡಿಯುವ ನೀರಾಗಿಸುವ ಟೆಕ್‌

By Suneel
|

ಸಮುದ್ರ, ಸಮುದ್ರದ ಅಲೆಗಳನ್ನು ನೋಡಲು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಸಮುದ್ರ ಕೇವಲ ಉಪ್ಪು ತಯಾರಿಸಲು ಅಥವಾ ನೀರಿನಲ್ಲಿ ಅಲೆಗಳೊಂದಿಗೆ ಆಟವಾಡಿ ಕುಣಿದಾಡಲು ಮಾತ್ರ ಎಂಬುದು ಹಲವರ ಯೋಚನೆಗೆ ಬಹುಬೇಗ ಬರುತ್ತದೆ. ಆದರೆ ಟೆಕ್ನಾಲಜಿ ಇಂದು ಪ್ರಪಂಚದ ಪ್ರತಿಯೊಂದು ವಸ್ತುಗಳನ್ನು ಉಪಯೋಗಕ್ಕೆ ಬರುವಂತೆ ಮಾಡುತ್ತದೆ.

ಓದಿರಿ: ಮಂಗಳನಲ್ಲಿಗೆ ನಮ್ಮನ್ನು ಕರೆದೊಯ್ಯುವ ಬೃಹತ್ ರಾಕೆಟ್

ಹೌದು, ಬಹುಸಂಖ್ಯಾತರಿಗೆ ಸಮುದ್ರದ ಅಲೆಗಳಿಂದ ಕರೆಂಟ್‌ ತಯಾರಿಸುವ ಬಗ್ಗೆ ತಿಳಿದಿದೆ. ಆದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಹೊಸ ಟೆಕ್ನಾಲಜಿಯು ಸಮುದ್ರದ ಅಲೆಗಳಿಂದ ಇಲೆಕ್ಟ್ರಿಸಿಟಿ ಮತ್ತು ಶುದ್ಧ ಕುಡಿಯುವ ನೀರನ್ನು ಉತ್ಪತ್ತಿ ಮಾಡುತ್ತದೆ. ಈ ಯೋಜನೆಯು ಕಾರ್ನೆಗೀ ವೇವ್‌ ಎನರ್ಜಿಯ ಉಪಾಯವಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಚಿಂತನೆ ಇದಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ನಿಮಗಾಗಿ ಈ ಲೇಖನದಲ್ಲಿ.

ಕಾರ್ನೆಗೀ ವೇವ್‌ ಎನರ್ಜಿ

ಕಾರ್ನೆಗೀ ವೇವ್‌ ಎನರ್ಜಿ

ಈ ಆಸ್ಟ್ರೇಲಿಯಾದ ಪರ್ತ್‌ ವೇವ್‌ ಎನರ್ಜಿ ಪ್ರಾಜೆಕ್ಟ್‌ ಅನ್ನು ಆಸ್ಟ್ರೇಲಿಯಾದ ಗಾರ್ಡೆನ್‌ ಐಲ್ಯಾಂಡ್‌ನಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಸಮುದ್ರದ ಅಲೆಗಳು

ಸಮುದ್ರದ ಅಲೆಗಳು

ಸಮುದ್ರದ ಅಲೆಗಳಿಂದ ಇಲೆಕ್ಟ್ರಿಸಿಟಿ ಮತ್ತು ಕುಡಿಯುವ ಶುದ್ಧ ನೀರನ್ನು ಉತ್ಪಾದಿಸಲಾಗುತ್ತದೆ.

CETO 6

CETO 6

CETO 6 ವಾಣಿಜ್ಯ ಮಟ್ಟದಲ್ಲಿ 20 ಮೀಟರ್‌ ಡಯಾಮೀಟರ್‌ನಲ್ಲಿ ಸಮುದ್ರತಳಕ್ಕೆ ಈ ಕಾರ್ನೆಗೀ ವೇವ್‌ ಎನರ್ಜಿ ಸಿಸ್ಟಮ್‌ ಅನ್ನು ಅಳವಡಿಸಲಾಗಿರುತ್ತದೆ.

ಇಲೆಕ್ಟ್ರಿಸಿಟಿ ಉತ್ಪಾದನೆ

ಇಲೆಕ್ಟ್ರಿಸಿಟಿ ಉತ್ಪಾದನೆ

Buoys ಸಮುದ್ರ ಅಲೆಗಳ ಕರೆಂಟ್‌ಗೆ ಪ್ರತಿಕ್ರಿಯೆ ನೀಡುತ್ತವೆ ಮತ್ತು ನೀರನ್ನು ಹೆಚ್ಚಿನ ಒತ್ತಡದಲ್ಲಿ ಗ್ರೌಂಡ್‌ ಘಟಕಕ್ಕೆ ಪಂಪ್‌ ಮಾಡುತ್ತವೆ. ಈ ಪವರ್ ಅನ್ನು ಟಬ್ರೈನ್ ಮತ್ತು ಜನರೇಟರ್‌ಗಳು ಎನರ್ಜಿಯನ್ನು ಉತ್ಪತ್ತಿಮಾಡುತ್ತವೆ.

ಕುಡಿಯುವ ನೀರು

ಕುಡಿಯುವ ನೀರು

ನೀರಿನ ಒತ್ತಡವು ಘಟಕಗಳಲ್ಲಿ ಉಪ್ಪಿನಂಶ ತೆಗೆದು ಹಾಕಲಾಗಿ ಸಮುದ್ರದ ನೀರು ಕುಡಿಯುವ ಶುದ್ಧ ನೀರಾಗಿ ಪರಿವರ್ತನೆಗೊಳ್ಳತ್ತದೆ.

ಆಸ್ಟ್ರೇಲಿಯಾ ನೌಕಾದಳದಿಂದ ಉಪಯೋಗ

ಆಸ್ಟ್ರೇಲಿಯಾ ನೌಕಾದಳದಿಂದ ಉಪಯೋಗ

ಕಾರ್ನೆಗೀ ವೇವ್‌ ಎನರ್ಜಿಯಿಂದ ಉತ್ಪತ್ತಿಯಾದ ಎಲ್ಲಾ ಎನರ್ಜಿಯನ್ನು ಆಸ್ಟ್ರೇಲಿಯಾ ನೌಕಾದಳ ಉಪಯೋಗಿಸಿಕೊಳ್ಳತ್ತದೆ.

2016 ಕ್ಕೆ ಇತರ ಪ್ರದೇಶಗಳಿಗೂ ಸೇವೆ

2016 ಕ್ಕೆ ಇತರ ಪ್ರದೇಶಗಳಿಗೂ ಸೇವೆ

ಕಂಪನಿಯು ಆಸ್ಟ್ರೇಲಿಯಾದ ದೊಡ್ಡ ಸಿಸ್ಟಮ್‌ ಅನ್ನು ತಯಾರಿಸಲು ಯೋಜನೆ ರೂಪಿಸಿದ್ದು, ಇದರ ಉಪಯೋಗವನ್ನು ಆಸ್ಟ್ರೇಲಿಯಾದ ಸ್ಥಳೀಯ ಪ್ರದೇಶಗಳಿಗೂ ನೀಡಲಿದೆ.

ಬಿರುಗಾಳಿ ಮತ್ತು ಕಲುಷಿತ ವಾತಾವರಣದಿಂದ ಸುರಕ್ಷತೆ

ಬಿರುಗಾಳಿ ಮತ್ತು ಕಲುಷಿತ ವಾತಾವರಣದಿಂದ ಸುರಕ್ಷತೆ

Buoys ಅನ್ನು ಬಿರುಗಾಳಿ ಮತ್ತು ಕಲುಷಿತ ವಾತಾವರಣದಿಂದ ಸುರಕ್ಷತೆಗೊಳಿಸಿ ಸಂಭಾವ್ಯ ಹಾನಿಯನ್ನು ತಪ್ಪಿಸಲು ಸಮುದ್ರತಳದಲ್ಲಿ ಇದಕ್ಕೆ ಅಟಾಚ್‌ಮೆಂಟ್‌ ನೀಡಲಾಗಿದೆ.

Most Read Articles
Best Mobiles in India

English summary
We all know how strong tidal energy is, right? What if we can extract this force from the sea water and used it for the production of clean energy. This is the idea behind the Carnegie Wave Energy. The Perth Wave Energy Project was materialized at Garden Island, Australia.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more