ಮನೆಯಿಂದಲೇ ಕೆಲಸ ಮಾಡುವವರಿಗೆ ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ ಸೂಕ್ತ!

|

ದೇಶದಲ್ಲಿ ಮತ್ತೆ ಕೊರೊನಾ ಸದ್ದು ಮಾಡಲು ಮುಂದಾಗಿದೆ. ಈಗಾಗಲೇ ಕೆಲವು ಸರ್ಕಾರಗಳು ಕೆಲವು ಮಾರ್ಗಸೂಚಿಯನ್ನೂ ನೀಡಿವೆ. ಇದರ ನಡುವೆ ಹಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ನಿರ್ಮಾಣ ಆಗಬಹುದು. ಹಾಗೆಯೇ ಈಗಾಗಲೇ ಮನೆಯಿಂದ ಕೆಲಸ ಮಾಡುವ ಅದೆಷ್ಟೋ ಉದ್ಯೋಗಿಗಳಿಗೆ ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ ಖಂಡಿತಾ ಸದುಪಯೋಗವಾಗಲಿವೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌, ಜಿಯೋ, ವಿಗೆ ಪೈಪೋಟಿ ನೀಡುತ್ತಿರುವ ಬಿಎಸ್‌ಎನ್‌ಎಲ್‌ ಕಡಿಮೆ ದರದ ಪ್ಕ್ಯಾನ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಭಾಗವಾಗಿ ಈಗಾಗಲೇ ಹಲವಾರು ಅನುಕೂಲಕರ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ್ದು, ಇದರಲ್ಲಿ ವರ್ಕ್‌ ಫ್ರಮ್‌ಹೋಮ್‌ ಪ್ಲ್ಯಾನ್‌ ವಿಶೇಷವಾಗಿವೆ. ಈ ಪ್ಲ್ಯಾನ್‌ ಮೂಲಕ ಬಳಕೆದಾರರು ಕಡಿಮೆ ದರದಲ್ಲಿ ಹೆಚ್ಚಿನ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವ ರೀಚಾರ್ಜ್‌ ಪ್ಲ್ಯಾನ್‌ ಏನೆಲ್ಲಾ ಸೌಲಭ್ಯ ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

WFH ಡೇಟಾ ಪ್ಲ್ಯಾನ್‌

WFH ಡೇಟಾ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ನೀಡುತ್ತಿರುವ ಈ ಪ್ಲ್ಯಾನ್‌ ಅನ್ನು ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾದ ಜಿಯೋ, ಏರ್‌ಟೆಲ್‌ ಹಾಗೂ ವಿ ಕಂಪೆನಿಗಳು ಸಹ ಈವರೆಗೆ ನೀಡಲು ಸಾಧ್ಯವಾಗಿಲ್ಲ. ಅದರಲ್ಲೂ ವರ್ಕ್‌ ಫ್ರಮ್‌ ಹೋಮ್‌ ಪ್ಲ್ಯಾನ್‌ಗಳ ಬೆಲೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಬಿಎಸ್‌ಎನ್‌ಎಲ್‌ ಮಾತ್ರ ಅಗ್ಗದ ಬೆಲೆಗೆ ಡೇಟಾ ಯೋಜನೆ ನೀಡಲಿದೆ. ಅಂದರೆ ಕಂಪೆನಿಯು 151 ರೂ. ಮತ್ತು 251 ರೂ. ಗಳ ಎರಡು ಯೋಜನೆಯನ್ನು ಹೊಂದಿದ್ದು, ಮನೆಯಿಂದಲೇ ಕೆಲಸ ಮಾಡುವವರಿಗೆ ಅತ್ಯಾನುಕೂಲ ಆಗಲಿದೆ.

ಬಿಎಸ್‌ಎನ್‌ಎಲ್‌ನ 151 ರೂ. ಗಳ ಯೋಜನೆ

ಬಿಎಸ್‌ಎನ್‌ಎಲ್‌ನ 151 ರೂ. ಗಳ ಯೋಜನೆ

ಬಿಎಸ್‌ಎನ್‌ಎಲ್‌ನ 151 ರೂ. ಯೋಜನೆ ಮೂಲಕ ಗ್ರಾಹಕರು ಒಟ್ಟು 40GB ಡೇಟಾ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಜಿಂಗ್‌ ಚಂದಾದಾರಿಕೆ ಸಹ ಲಭ್ಯವಿದ್ದು, ಇದರ ಮಾನ್ಯತೆ 28 ದಿನಗಳ ವರೆಗೆ ಇರಲಿದೆ.

ಬಿಎಸ್‌ಎನ್‌ಎಲ್‌ನ  251 ರೂ. ಗಳ ಯೋಜನೆ

ಬಿಎಸ್‌ಎನ್‌ಎಲ್‌ನ 251 ರೂ. ಗಳ ಯೋಜನೆ

ಬಿಎಸ್‌ಎನ್‌ಎಲ್‌ನ 251 ರೂ. ಗಳ ಯೋಜನೆಯಲ್ಲಿ ಬಳಕೆದಾರರು 70GB ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ಇದರಲ್ಲೂ ಸಹ ಜಿಂಗ್‌ ಚಂದಾದಾರಿಕೆ ನೀಡಲಾಗಿದ್ದು, ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಹೊಂದಿದೆ.

ಅವಧಿ

ಈ ಎರಡೂ ಯೋಜನೆಗಳು 28 ದಿನಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿಲ್ಲ. ಇದಕ್ಕೆ ಕಾರಣ ಮನೆಯಿಂದ ಕೆಲಸ ಮಾಡುವವರು ಕಡಿಮೆ ಸಮಯದಲ್ಲೇ ಹೆಚ್ಚಿನ ಡೇಟಾವನ್ನು ಬಳಕೆ ಮಾಡುತ್ತಾರೆ. ಹೀಗಾಗಿ ಇದು ಹೆಚ್ಚಿನ ದಿನದ ಮಾನ್ಯತೆಯನ್ನು ಹೊಂದಿಲ್ಲವಂತೆ. ಆದರೆ, ನಿಮಗೆ ಹೆಚ್ಚಿನ ದಿನದ ಮಾನ್ಯತೆ ಹೊಂದಿರುವ ಇತರೆ ಪ್ಲ್ಯಾನ್‌ಗಳು ಸಹ ಲಭ್ಯವಿದ್ದು, 198 ರೂ. ಗಳ ಯೋಜನೆ ಗಮನಿಸಬಹುದು. ಇದರಲ್ಲಿ ದಿನವೂ 2GB ಡೇಟಾ ಲಭ್ಯವಾಗಲಿದ್ದು, 40 ದಿನಗಳ ಮಾನ್ಯತೆಯನ್ನು ಪಡೆದಿರುತ್ತದೆ. ಅದಾಗ್ಯೂ ಇನ್ನೂ ಹೆಚ್ಚಿನ ಪ್ಲ್ಯಾನ್‌ಗಳು ಬೇಕು ಎಂದರೆ ಇಲ್ಲಿವೆ ನೋಡಿ.

485 ರೂ. ಗಳ ಯೋಜನೆ

485 ರೂ. ಗಳ ಯೋಜನೆ

485 ರೂ. ಗಳ ಯೋಜನೆಯಲ್ಲಿ ನೀವು ದಿನವೂ 1.5GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಅನಿಯಮಿತ ಕರೆ ಹಾಗೂ ದಿನವೂ 100 ಎಸ್‌ಎಮ್‌ಎಸ್‌ಗಳ ಉಚಿತ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದ್ದು, ಬರೋಬ್ಬರಿ 90 ದಿನಗಳ ವರೆಗೆ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಎಂದರೆ ಇದು ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಉಚಿತ ಪ್ರವೇಶದ ಪ್ರಯೋಜನ ಹೊಂದಿರುವುದಿಲ್ಲ.

499 ರೂ. ಗಳ ಯೋಜನೆ

499 ರೂ. ಗಳ ಯೋಜನೆ

499 ರೂ. ಗಳ ಯೋಜನೆಯಲ್ಲಿ ದಿನವೂ ನೀವು 2GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ದಿನವೂ 100 ಎಸ್‌ಎಮ್‌ಎಸ್ ಸೇವೆ ಪಡೆಯಬಹುದಾಗಿದ್ದು, ಜಿಂಗ್‌ ಮತ್ತು ಎರೋಸ್‌ ನೌ ಚಂದಾದಾರಿಕೆ ಸೇರಿದಂತೆ ಇತರೆ ಸೌಲಭ್ಯ ಸಹ ಇದರಲ್ಲಿ ಲಭ್ಯವಾಗಲಿದೆ. ಈ ಪ್ಲ್ಯಾನ್‌ 80 ದಿನಗಳ ಮಾನ್ಯತೆ ಹೊಂದಿರುತ್ತದೆ.

Best Mobiles in India

English summary
This plan of BSNL is suitable for those who work from home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X