ಈ ಒಂದು ಸೆಟ್ಟಿಂಗ್ ಮಾಡಿ ನೋಡಿ, ನಿಮ್ಮ ವಾಟ್ಸಾಪ್‌ ತುಂಬಾನೇ ಸೇಫ್ ಇರುತ್ತೆ!?

|

ವಾಟ್ಸಾಪ್‌ ಬಳಕೆ ಮಾಡುವ ಪ್ರತಿಯೊಬ್ಬರು ಅವರ ಖಾತೆಯ ಖಾಸಗಿತನ ಹಾಗೂ ಸುರಕ್ಷತೆಯ ಬಗ್ಗೆ ಒತ್ತು ನೀಡುತ್ತಾರೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ ಸಂಸ್ಥೆಯು ಸಹ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಹಲವು ಉಪಯುಕ್ತ ಆಯ್ಕೆಗಳನ್ನು ಪರಿಚಯಿಸಿದೆ. ಬಳಕೆದಾರರ ಚಾಟ್‌ ಅನ್ನು ಸುರಕ್ಷಿತವಾಗಿಡಲು ಮತ್ತು ಚಾಟ್‌ನ ಖಾಸಗಿತನ ಕಾಪಾಡಲು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಆಯ್ಕೆ ನೀಡಿದ್ದು, ಜೊತೆಗೆ ಟು ಸ್ಟೇಪ್‌ ವೇರಿಫಿಕೇಶನ್ (two-step verification) ಆಯ್ಕೆ ಒದಗಿಸಿದೆ.

ಸೇಫ್ಟಿ ಫೀಚರ್ಸ್‌

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಬಳಕೆದಾರರ ಖಾಸಗಿ ಚಾಟ್‌/ ಮೆಸೆಜ್‌ಗಳಿಗೆ ಸುರಕ್ಷತೆ ನೀಡುವುದಕ್ಕಾಗಿ ಸೇಫ್ಟಿ ಫೀಚರ್ಸ್‌ಗಳನ್ನು ಹೊಂದಿದ್ದು, ಆ ಪೈಕಿ ಟು ಸ್ಟೇಪ್‌ ವೇರಿಫಿಕೇಶನ್ ಸಹ ಒಂದಾಗಿದೆ. ಈ ಫೀಚರ್/ ಆಯ್ಕೆಯನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು, ಹಾಗೆಯೇ ಈ ಆಯ್ಕೆಯ ಪಿನ್ ನಂಬರ್ ಸಹ ಬದಲಾಯಿಸಲು ಅವಕಾಶ ಇದೆ ಅಥವಾ ಟು ಸ್ಟೇಪ್‌ ವೇರಿಫಿಕೇಶನ್‌ಗೆ ಸಂಬಂಧಿಸಿದ ಇ-ಮೇಲ್ ವಿಳಾಸವನ್ನು ಅಪ್‌ಡೇಟ್‌ ಸಹ ಮಾಡಬಹುದು.

ಟು ಸ್ಟೇಪ್‌ ವೇರಿಫಿಕೇಶನ್

ವಾಟ್ಸಾಪ್‌ ಖಾತೆಗೆ ಬಳಕೆದಾರರು ಫಿಂಗರ್‌ಪ್ರಿಂಟ್ ಲಾಕ್ ಅಥವಾ ಪ್ಯಾಟರ್ನ್ ಲಾಕ್‌ ಸೆಟ್‌ ಮಾಡಬಹುದಾಗಿದೆ. ಇನ್ನು ಈ ಟು ಸ್ಟೇಪ್‌ ವೇರಿಫಿಕೇಶನ್ ಆಯ್ಕೆಯು ಬಳಕೆದಾರರ ಚಾಟ್‌ಗೆ ಹೆಚ್ಚುವರಿ ಕವಚ್‌ದಂತೆ ಕಾರ್ಯನಿರ್ವಹಿಸಲಿವೆ. ಹಾಗಾದರೇ ವಾಟ್ಸಾಪ್‌ನಲ್ಲಿ ಲಭ್ಯ ಇರುವ ಟಾಪ್ ಚಾಟ್‌ ಸುರಕ್ಷಾ ಆಯ್ಕೆಗಳು ಯಾವುವು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಟು ಸ್ಟೇಪ್‌ ವೇರಿಫಿಕೇಶನ್ ಆಕ್ಟಿವ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಟು ಸ್ಟೇಪ್‌ ವೇರಿಫಿಕೇಶನ್ ಆಕ್ಟಿವ್ ಮಾಡಲು ಹೀಗೆ ಮಾಡಿ:

* ವಾಟ್ಸಾಪ್‌ ಆಪ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.
* ನಂತರ ಅಕೌಂಟ್‌ > ಟು ಸ್ಟೇಪ್‌ ವೇರಿಫಿಕೇಶನ್ > (Enable) ಸಕ್ರಿಯಗೊಳಿಸಿ ಟ್ಯಾಪ್ ಮಾಡಿ.
* ಬಳಿಕ ನಿಮ್ಮ ಆಯ್ಕೆಯ ಆರು-ಅಂಕಿಯ ಪಿನ್ ಅನ್ನು ನಮೂದಿಸಿ ಮತ್ತು ಅದನ್ನು ದೃಢೀಕರಿಸಿ.

ಖಾತೆಯನ್ನು

* ಇ-ಮೇಲ್ ವಿಳಾಸವನ್ನು ಒದಗಿಸಿ ಅಥವಾ ಇ-ಮೇಲ್ ವಿಳಾಸವನ್ನು ಸೇರಿಸಲು ಬಯಸದಿದ್ದರೆ ಸ್ಕಿಪ್ ಅನ್ನು ಸ್ಪರ್ಶಿಸಿ. ಇ-ಮೇಲ್ ವಿಳಾಸವನ್ನು ಸೇರಿಸುವುದು ಸೂಕ್ತ. ಏಕೆಂದರೆ ಇದು ನಿಮಗೆ ಟು ಸ್ಟೇಪ್‌ ವೇರಿಫಿಕೇಶನ್ ರಿಸೆಟ್‌ ಮಾಡಲು ಅನುಮತಿಸುತ್ತದೆ ಮತ್ತು ನಿಮ್ಮ ಖಾತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
* Next ಆಯ್ಕೆ ಟ್ಯಾಪ್ ಮಾಡಿ.
* ಇ-ಮೇಲ್ ವಿಳಾಸವನ್ನು ದೃಢೀಕರಿಸಿ. ಬಳಿಕ Save ಅಥವಾ Done ಆಯ್ಕೆ ಟ್ಯಾಪ್ ಮಾಡಿ.

ಪ್ರೊಫೈಲ್ ಫೋಟೋ ಕಂಟ್ರೋಲ್ ಆಯ್ಕೆ ಬಳಸಿ

ಪ್ರೊಫೈಲ್ ಫೋಟೋ ಕಂಟ್ರೋಲ್ ಆಯ್ಕೆ ಬಳಸಿ

ವಾಟ್ಸಾಪ್‌ ಬಳಕೆದಾರರು ಅವರ ಪ್ರೊಫೈಲ್ ಗೆ ಇಡುವ ಫೋಟೋ ಶಾರ್ಟ್‌ ಆಗಿ ಡಿಪಿ ಎಂದು ಹೇಳಲಾಗುತ್ತದೆ. ಇನ್ನು ಡಿಪಿಯಲ್ಲಿಡುವ ಫೋಟೋ ಯಾರಿಗೆ ಕಾಣಿಸಬೇಕು ಯಾರಿಗೆ ಕಾಣಿಸಬಾರದು ಎಂಬುದನ್ನು ಬಳಕೆದಾರರು ಸೆಟ್‌ ಮಾಡಬಹುದಾಗಿದೆ. ಈ ಆಯ್ಕೆ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ (ಡಿಪಿ) ಫೋಟೊವನ್ನು ಇತರರು ವೀಕ್ಷಿಸದಂತೆ ನಿಯಂತ್ರಿಸಬಹುದಾಗಿದೆ. ಸೆಟ್ಟಿಂಗ್‌ನಲ್ಲಿ Everyone, My Contacts ಮತ್ತು Nobody ಆಯ್ಕೆಗಳು ಇವೆ. ಈ ಫೀಚರ್‌ ಅನ್ನು ಸೆಟ್‌ ಮಾಡಲು ಬಳಕೆದಾರರು ಈ ಹಂತಗಳನ್ನು ಅನುಸರಿಸಿ ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಪ್ರೊಫೈಲ್ ಫೋಟೋ.

ಬ್ಲಾಕ್ ಆಯ್ಕೆ ಬಳಸಿ

ಬ್ಲಾಕ್ ಆಯ್ಕೆ ಬಳಸಿ

ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗಿರುವ ಅನುಕೂಲಕರ ಫೀಚರ್‌ಗಳಲ್ಲಿ ಬ್ಲಾಕ್ ಮಾಡುವ ಆಯ್ಕೆ ಸಹ ಪ್ರಮುಖ ಸುರಕ್ಷತಾ ಫೀಚರ್ ಆಗಿದೆ. ನಿಮಗೆ ಕಿರಿ ಕಿರಿ ಅನಿಸುವ ಕಾಂಟ್ಯಾಕ್ಟ್‌ ನಂಬರ್ ಅಥವಾ ಅಪರಿಚಿತ ನಂಬರ್‌ ಅನ್ನು ಬ್ಲಾಕ್ ಮಾಡುವ ಮೂಲಕ ಅವರಿಂದ ಬರುವ ಟೆಕ್ಸ್ಟ್‌ ಮೆಸೆಜ್ ಮತ್ತು ವಾಯಿಸ್‌ ಮೆಸೆಜ್‌ಗಳನ್ನು ನಿಯಂತ್ರಿಸಿಕೊಳ್ಳಬಹುದು. ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದೆ.

Best Mobiles in India

English summary
This Privacy setting gives More protection to your Whatsapp account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X