ಸ್ಯಾಮ್‌ಸಂಗ್‌ನ ಈ ಮಿಡ್‌ ರೇಂಜ್‌ ಶ್ರೇಣಿಯ ಫೋನ್ ಲಾಂಚ್‌ ಆಗುವುದಿಲ್ಲ; ಯಾಕೆ ಗೊತ್ತಾ!?

|

ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿಯು ಬಜೆಟ್ ಬೆಲೆಯ ಜೊತೆಗೆ ಹಲವಾರು ಮಿಡ್‌ ರೇಂಜ್‌ನ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಹೆಚ್ಚು ಜನಪ್ರಿಯಗೊಂಡಿದೆ. ಅದರಲ್ಲೂ ಪ್ರತಿ ವರ್ಷವೂ ಮಿಡ್‌ ರೇಂಜ್‌ನ ಫೋನ್‌ಗಳನ್ನು ನವೀಕರಿಸುತ್ತ ಬರುತ್ತದೆ. ಇದರಲ್ಲಿ ಪ್ರಮುಖವಾಗಿ A ಸರಣಿಯ ಸ್ಯಾಮ್‌ಸಂಗ್‌ನ A33 5G ಸ್ಮಾರ್ಟ್‌ಫೋನ್‌ ಹಾಗೂ A53 5G ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಾಗಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ತನ್ನ ಸ್ಯಾಮ್‌ಸಂಗ್‌ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ನೀಡಲಿದೆ. ಅಂದರೆ 2023 ರಲ್ಲಿ ತನ್ನ ಮಿಡ್ ರೇಂಜ್‌ ಶ್ರೇಣಿಯ ವಿಭಾಗದಿಂದ ಒಂದು ಸ್ಮಾರ್ಟ್‌ಫೊನ್‌ ಅನಾವರಣವನ್ನು ರದ್ದುಗೊಳಿಸಲು ಮುಂದಾಗಿದೆ. ಹಾಗಿದ್ರೆ ಯಾವ ಫೋನ್‌ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ?, ಇದಕ್ಕೆ ನಿಖರ ಕಾರಣ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಯಾವುದು ಆ ಫೋನ್‌?

ಯಾವುದು ಆ ಫೋನ್‌?

ಗ್ಯಾಲಕ್ಸಿ ಕ್ಲಬ್‌ ಈ ಸಂಬಂಧ ವರದಿಯೊಂದನ್ನು ನೀಡಿದ್ದು, ಗ್ಯಾಲಕ್ಸಿ A74 ಸ್ಮಾರ್ಟ್‌ಫೋನ್ ಅನ್ನು 2023 ರಲ್ಲಿ ಲಾಂಚ್ ಮಾಡುವುದಿಲ್ಲ ಎಂದು ತಿಳಿಸಿದೆ. ಆದರೆ ಈ ಸಂಬಂಧ ಕಂಪೆನಿಯು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14, ಗ್ಯಾಲಕ್ಸಿ A54, ಗ್ಯಾಲಕ್ಸಿ A24 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮೊದಲೇ ಮಾಹಿತಿಗಳು ಲೀಕ್‌ ಆಗಿ ನಂತರ ಲಾಂಚ್‌ ಆಗಿವೆ ಹಾಗೂ ಆಗುತ್ತವೆ. ಆದರೆ, ಮುಂದಿನ ವರ್ಷ ಲಾಂಚ್‌ ಆಗಬೇಕಿದ್ದ ಈ ಫೋನ್‌ ವಿಷಯಕ್ಕೆ ಬಂದಾಗ ಈ ರೀತಿಯ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದು ಲಾಂಚ್‌ ಆಗದಿರುವುದಕ್ಕೆ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಗ್ಯಾಲಕ್ಸಿ A74 ಫೋನ್‌ ಅನ್ನು ಯಾಕೆ ಅನಾವರಣ ಮಾಡುವುದಿಲ್ಲ?

ಗ್ಯಾಲಕ್ಸಿ A74 ಫೋನ್‌ ಅನ್ನು ಯಾಕೆ ಅನಾವರಣ ಮಾಡುವುದಿಲ್ಲ?

ಗ್ಯಾಲಕ್ಸಿ A54 ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿ ಈ ಮುಂದಿನ ವರ್ಷ ಗುರುತಿಸಿಕೊಳ್ಳಲಿದೆ ಎನ್ನಲಾಗಿದೆ. ಕಂಪೆನಿಯು ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ಈ ಮೂಲಕ ಸರಳಗೊಳಿಸಲು ಯೋಜಿಸುತ್ತಿದೆಯಂತೆ. ಹಾಗೆಯೇ ಗ್ರಾಹಕರಿಗೆ ಮತ್ತು ದಕ್ಷಿಣ ಕೊರಿಯಾದ ಸಂಸ್ಥೆಯ ಸಾಫ್ಟ್‌ವೇರ್ ಅಭಿವೃದ್ಧಿ ತಂಡಗಳಿಗೆ ಈ ನಿರ್ಧಾರ ಸಹಾಯಕವಾಗಬಹುದು ಎಂದು ತೋರಿದೆ. ಅದರಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A74 ಮತ್ತು ಗ್ಯಾಲಕ್ಸಿ ಎಸ್ 22 FE ನಿಂದ ಉಳಿದಿರುವ ಅಂತರವನ್ನು ವೆನಿಲ್ಲಾ ಗ್ಯಾಲಕ್ಸಿ ಎಸ್ 22 ನೊಂದಿಗೆ ತುಂಬಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 ಫೀಚರ್ಸ್‌

ಲೀಕ್‌ ಆದ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 ಫುಲ್‌ HD+ ರೆಸಲ್ಯೂಶನ್ ಇರುವ 6.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದುಕೊಂಡಿರಲಿದೆ. ಹಾಗೆಯೇ ಈ ಫೋನ್ ಎಕ್ಸಿನೋಸ್ 1380 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 1380 ಚಿಪ್ ನಾಲ್ಕು ಕೋರ್‌ಗಳನ್ನು ಹೊಂದಿದೆ. ಇದರೊಂದಿಗೆ ಮಾಲಿ G68 ಗ್ರಾಫಿಕ್ಸ್ ಘಟಕ ಇದಕ್ಕೆ ಶಕ್ತಿ ತುಂಬಲಿದೆ ಎನ್ನಲಾಗಿದೆ.

ಕ್ಯಾಮೆರಾ

ಇದರ ಕ್ಯಾಮೆರಾ ವಿಷಯಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಬಹುದು ಎಂದು ಹೇಳಲಾಗುತ್ತಿದ್ದು, ಅದರಲ್ಲಿ ಪ್ರಮುಖ ಕ್ಯಾಮೆರಾ 50MP ಹಾಗೂ 12MP ಸೆಕೆಂಡರಿ ಕ್ಯಾಮೆರಾ ಆಯ್ಕೆ ಹೊಂದಿರಲಿದ್ದು, ಸೆಲ್ಫಿಗಾಗಿ 32MP ಕ್ಯಾಮೆರಾ ರಚನೆ ಪಡೆದಿರಬಹುದು ಎಂದು ತಿಳಿದುಬಂದಿದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ ವಿಭಾಗದಲ್ಲಿ ಸ್ಮಾರ್ಟ್‌ಫೋನ್ 5G, ಜಿಪಿಎಸ್‌, ವೈ-ಫೈ 5, ಬ್ಲೂಟೂತ್ 5.3, ಎನ್‌ಎಫ್‌ಸಿ ಆಯ್ಕೆ ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದರೊಂದಿಗೆ ಸ್ಟಿರಿಯೊ ಸ್ಪೀಕರ್ ರಚನೆ ಮತ್ತು IP68 ವಾಟರ್‌ ಮತ್ತು ಡಸ್ಟ್‌ ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿರಬಹುದು ಎಂದು ಹೇಳಲಾಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಫೋನ್‌ 5,100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತೋರುತ್ತದೆ.

Best Mobiles in India

English summary
This series of phones from Samsung will not be launched next year?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X