ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ!

|

ಥಾಮ್ಸನ್‌ ಕಂಪನಿಯು ಈಗಾಗಲೇ ಸ್ಮಾರ್ಟ್‌ಟಿವಿಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದು, ಗ್ರಾಹಕ ಸ್ನೇಹಿ ಬೆಲೆಯಲ್ಲಿ ಹಲವು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್‌ ಆಧಾರಿತ ಕಂಪನಿಯ ಸ್ಮಾರ್ಟ್‌ಟಿವಿಗಳು ಇ ಕಾಮರ್ಸ್‌ ಜಾಲತಾಣಗಳಲ್ಲಿ ಅತ್ಯುತ್ತಮ ರೇಟಿಂಗ್ ಸಹ ಪಡೆದುಕೊಂಡಿವೆ. ಇದೀಗ ಕಂಪನಿಯು ಮತ್ತೆ ನೂತನ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿ ಸದ್ದು ಮಾಡಿದೆ.

ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ!

ಹೌದು, ಥಾಮ್ಸನ್ ಕಂಪನಿಯು ಆಂಡ್ರಾಯ್ಡ್‌ ಮಾದರಿಯ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಘೋಷಿಸಿದ್ದು, ಈ ಸ್ಮಾರ್ಟ್‌ಟಿವಿ ಸರಣಿಯು ನಾಲ್ಕು ವೇರಿಯಂಟ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 65ಇಂಚು, 55ಇಂಚು, 49ಇಂಚು ಮತ್ತು 43ಇಂಚಿನ ಸಾಮರ್ಥ್ಯದಲ್ಲಿವೆ. ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ 8.1 ಓರಿಯೊ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ರಿಮೋಟ್ ನೀಡಲಾಗಿದೆ.

ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ!

ಈ ಸ್ಮಾರ್ಟ್‌ಟಿವಿಯು ಆಫೀಶಿಯನ್ ಆಂಡ್ರಾಯ್ಡ್‌ ಟಿವಿ ಆಗಿದ್ದು, ಗೂಗಲ್‌ನಿಂದ ಮಾನ್ಯತೆ ಪಡೆದಿದೆ. ಇನ್‌ಬಿಲ್ಟ್‌ ಕ್ರೋಮ್‌ ಕಾಸ್ಟ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಇದರೊಂದಿಗೆ ಗೂಗಲ್‌ ಅಸಿಸ್ಟಂಟ್ ವಾಯಿಸ್‌ ಕಮಾಂಡ್ ಸೌಲಭ್ಯವು ಸಹ ಬೆಂಬಲಿಸಲಿದೆ ಎನ್ನಲಾಗಿದೆ. ಹಾಗಾದರೇ ಥಾಮ್ಸನ್ ಕಂಪನಿಯ ಹೊಸ ಸ್ಮಾರ್ಟ್‌ಟಿವಿ ಸರಣಿಯು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌! ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಆಂಡ್ರಾಯ್ಡ್‌ ಟಿವಿ

ಆಂಡ್ರಾಯ್ಡ್‌ ಟಿವಿ

ಥಾಮ್ಸನ್ ಸಂಸ್ಥೆಯ ಹೊಸ ಸ್ಮಾರ್ಟ್‌ಟಿವಿ ಸರಣಿಯು ಆಂಡ್ರಾಯ್ಡ್ ಆಧಾರಿತ ಆಗಿದ್ದು, ಇದರಲ್ಲಿ ಗೂಗಲ್‌ ಕ್ರೋಮ್ ಸೇರಿದಂತೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಇನ್‌ಬಿಲ್ಟ್‌ ಆಗಿ ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್ ರಿಮೋಟ್ ಸಹ ಈ ಸ್ಮಾರ್ಟ್‌ಟಿವಿಗಳು ಒಳಗೊಂಡಿರಲಿದ್ದು, ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ.

ನಾಲ್ಕು ವೇರಿಯಂಟ್ಸ್‌

ನಾಲ್ಕು ವೇರಿಯಂಟ್ಸ್‌

ಥಾಮ್ಸನ್ ಕಂಪನಿಯು ಆಂಡ್ರಾಯ್ಡ್‌ ಮಾದರಿಯ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಲಾಂಚ್ ಮಾಡಿದ್ದು, ಈ ಸರಣಿಯು ಒಟ್ಟು ನಾಲ್ಕು ವೇರಿಯಂಟ್‌ಗಳ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 65ಇಂಚು, 55ಇಂಚು, 49ಇಂಚು ಮತ್ತು 43ಇಂಚಿನ ಡಿಸ್‌ಪ್ಲೇ ರಚನೆಯನ್ನು ಪಡೆದುಕೊಂಡಿವೆ.

ಓದಿರಿ : ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ! ಓದಿರಿ : ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಈ ಸ್ಮಾರ್ಟ್‌ಟಿವಿಗಳ ಡಿಸ್‌ಪ್ಲೇಗಳು 4K 10 HDR ಮಾದರಿಯಲ್ಲಿವೆ. ಇವು ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್ ಬೆಂಬಲವನ್ನು ಪಡೆದಿದ್ದು, ವಾಯಿಸ್‌ ಮೂಲಕ ನಿಯಂತ್ರಿಸುವ ಆಯ್ಕೆಗಳು ಲಭ್ಯವಾಗಲಿವೆ. ಹಾಗೆಯೇ ಡಾಲ್ಬಿ ಸೌಂಡ್‌ ಅನ್ನು ಹೊಂದಿದೆ. ಡಿಟಿಎಸ್‌ ಟ್ರೂಸರೌಂಡೆಡ್ ಸೌಂಡ್‌ ಸೌಲಭ್ಯವನ್ನು ಒದಗಿಸಲಾಗಿದ್ದು, ಆಂಡ್ರಾಯ್ಡ್ ರಿಮೋಟ್ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

65 ಇಂಚಿನ ವೇರಿಯಂಟ್ ಸ್ಮಾರ್ಟ್‌ಟಿವಿ ಬೆಲೆಯು 59,999ರೂ.ಗಳು, 55 ಇಂಚಿನ ವೇರಿಯಂಟ್ ಸ್ಮಾರ್ಟ್‌ಟಿವಿ ಬೆಲೆಯು 38,999ರೂ.ಗಳು, 49 ಇಂಚಿನ ವೇರಿಯಂಟ್ ಸ್ಮಾರ್ಟ್‌ಟಿವಿ ಬೆಲೆಯು 34,999ರೂ.ಗಳು ಮತ್ತು 43 ಇಂಚಿನ ವೇರಿಯಂಟ್ ಸ್ಮಾರ್ಟ್‌ಟಿವಿ ಬೆಲೆಯು 29,999ರೂ.ಗಳು ಆಗಿದೆ. ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದ್ದು, ಇದೇ ಜೂನ 14ರಿಂದ (ನಾಳೆ) ಖರೀದಿಗೆ ಲಭ್ಯವಾಗಲಿವೆ.

ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

Best Mobiles in India

English summary
Thomson has launched its Android TVs, which will be available in India from June 14. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X