ಜಿಯೋ 5G ಸೇವೆಯನ್ನು ಬಳಸುವ ಮುನ್ನ ಈ ಅಂಶಗಳನ್ನು ಗಮನಿಸಲೇಬೇಕು?

|

ಜಿಯೋ ಟೆಲಿಕಾಂ ಕಂಪೆನಿ ಭಾರತದಲ್ಲಿ ದಸರಾ ಹಬ್ಬದ ದಿನದಿಂದ 5G ಸೇವೆಯನ್ನು ಪ್ರಾರಂಭಿಸಿದೆ. ಪ್ರಾರಂಭಿಕ ಹಂತದಲ್ಲಿ ಕೆಲವು ಆಯ್ದ ನಗರಗಳಲ್ಲಿ ಮಾತ್ರ 5G ಸೇವೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ 5G ಸೇವೆಯನ್ನು ನೀಡುವ ಪ್ರಮಾಣ ಇನ್ನು ಹೆಚ್ಚಿನ ನಗರ ಪ್ರದೇಶಗಳಿಗೆ ವಿಸ್ತಾರವಾಗಲಿದೆ. ಅಲ್ಲದೆ 2023ರ ವೇಳೆಗೆ ಇಡೀ ದೇಶದ ಮೂಲೆ ಮೂಲೆಗೂ ಕೂಡ 5G ಸೇವೆ ನೀಡುವ ಗುರಿಯನ್ನು ಇಟ್ಟುಕೊಂಡಿರುವುದಾಗಿ ಜಿಯೋ ಘೊಷಣೆ ಮಾಡಿದೆ.

ಜಿಯೋ 5G

ಜಿಯೋ 5G ಸೇವೆ ಲಭ್ಯವಿರುವ ಆಯ್ದ ನಗರಗಳಲ್ಲಿಯೂ ಕೂಡ ಈ ಸೇವೆ ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಬದಲಿಗೆ ಕೆಲವೇ ಕೆಲ ಆಯ್ದ ಗ್ರಾಹಕರು ಮಾತ್ರ 5G ಸೇವೆಗೆ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ, ಜಿಯೋ 5G ದೇಶದ ಪ್ರಮುಖ 4 ನಗರಗಳಲ್ಲಿ ಮಾತ್ರ ಲಭ್ಯವಿದೆ. ಈ ನಗರ ಪ್ರದೇಶದಲ್ಲಿ ನೀವು ವಾಸವಿದ್ದು, 5G ನೆಟ್‌ವರ್ಕ್‌ ಪಡೆಯುವುದಕ್ಕೆ ನಿಮಗೆ ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಕೆಲವು ವಿಚಾರಗಳು ಕಾರಣವಾಗಿರಬಹುದು. ಹಾಗಾದ್ರೆ ಜಿಯೋ 5G ಸೇವೆ ಪಡೆದುಕೊಳ್ಳುವುದಕ್ಕೆ ನೀವು ಕಡ್ಡಾಯವಾಗಿ ಗಮನಿಸಬೇಕಾದ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G ಸೇವೆ ಪಡೆಯಲು 5G ಸ್ಮಾರ್ಟ್‌ಫೋನ್ ಬಳಕೆ ಅಗತ್ಯ

5G ಸೇವೆ ಪಡೆಯಲು 5G ಸ್ಮಾರ್ಟ್‌ಫೋನ್ ಬಳಕೆ ಅಗತ್ಯ

ಜಿಯೋ 5G ಸೇವೆಯನ್ನು ಪಡೆಯಬೇಕಾದರೆ ನೀವು 5G ಫೋನ್‌ ಹೊಂದಿರುವುದು ಅಗತ್ಯವಾಗಿದೆ. ಏಕೆಂದರೆ 5G ಸೇವೆ ಕೇವಲ 5G ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ, 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಜನರು ಮಾತ್ರ 5G ಸೇವೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ. ಅಲ್ಲದೆ ನಿಮ್ಮ 5G ಫೋನ್‌ಗಳು ಜಿಯೋ 5G ಅನ್ನು ಯಶಸ್ವಿಯಾಗಿ ರನ್ ಮಾಡಲು, OEMಗಳು ಮೊದಲು ಫೋನ್‌ಗಾಗಿ OTA ಅಪ್‌ಡೇಟ್‌ ಮಾಡಬೇಕಾಗುತ್ತದೆ.

5Gಗೆ ಸೂಕ್ತವಾದ ಪ್ಲಾನ್‌ ಆರಿಸಿಕೊಳ್ಳಬೇಕು.

5Gಗೆ ಸೂಕ್ತವಾದ ಪ್ಲಾನ್‌ ಆರಿಸಿಕೊಳ್ಳಬೇಕು.

ಜಿಯೋ 5G ಸೇವೆ 239 ರೂ.ಗಿಂತ ಹೆಚ್ಚಿನ ರೀಚಾರ್ಜ್‌ ಪ್ಲಾನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಆದರಿಂದ ನೀವುನ 5G ಸೇವೆ ಲಭ್ಯವಿರುವ ನಗರಗಳಲ್ಲಿ 5G ಸೇವೆಗೆ ಪ್ರವೇಶಿಸುವ ಮೊದಲು ನಿಮ್ಮ ರೀಚಾರ್ಜ್‌ ಪ್ಲಾನ್‌ ಅನ್ನು ಬದಲಾಯಿಸಿಕೊಳ್ಳುವುದು ಉತ್ತಮವಾಗಿದೆ. ಸದ್ಯ ಜಿಯೋ 5G ಬೆಂಬಲಿಸುವ ಪ್ಲಾನ್‌ಗಳ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ 5G ಡೇಟಾ ವೇಗವನ್ನು ಪ್ರವೇಶಿಸಲು 239ರೂ.ಗಿಂತ ಹೆಚ್ಚಿನ ಬೆಲೆಯ ಪ್ಲಾನ್‌ ಸೂಕ್ತ ಎಂದು ವರದಿಯಾಗಿದೆ. ಒಂದು ವೇಳೆ 5Gಗೆ ಸೂಕ್ತವಾದ ಪ್ಲಾನ್‌ ನೀವು ಹೊಂದಿಲ್ಲದಿದ್ದರೆ 5G ಸೇವೆಗೆ ನೀವು ಪ್ರವೇಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ನಾಲ್ಕು ನಗರಗಳಲ್ಲಿ ಮಾತ್ರ ಜಿಯೋ 5G ಸೇವೆ ಲಭ್ಯ

ಈ ನಾಲ್ಕು ನಗರಗಳಲ್ಲಿ ಮಾತ್ರ ಜಿಯೋ 5G ಸೇವೆ ಲಭ್ಯ

ಇನ್ನು ಜಿಯೋ 5G ಸೇವೆ ಬಿಡುಗಡೆಯಾಗಿದ್ದರು ಕೂಡ ದೇಶದ ಎಲ್ಲಾ ನಗರಗಳಲ್ಲಿಯೂ ಲಭ್ಯವಿಲ್ಲ. ಪ್ರಸ್ತುತ ದೇಶದ ಮಹಾನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ವಾರಣಾಸಿಯಲ್ಲಿ ಮಾತ್ರ ಜಿಯೋ 5G ಸೇವೆ ಲಭ್ಯವಿದೆ. ಆದ್ದರಿಂದ, ದೇಶದ ಬೇರೆ ನಗರ ಪ್ರದೇಶಗಳಲ್ಲಿ ಜಿಯೋ 5G ಸೇವೆಯನ್ನು ಬಳಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನಗರ ಪ್ರದೇಶಗಳಿಗೆ ಜಿಯೋ 5G ಸೇವೆ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.

ಜಿಯೋ ವೆಲ್‌ಕಮ್‌ ಆಫರ್‌

ಜಿಯೋ ವೆಲ್‌ಕಮ್‌ ಆಫರ್‌

ಪ್ರಸ್ತುತ ಜಿಯೋ 5G ಸೇವೆ ಲಭ್ಯವಿರುವ 4 ನಗರಗಳಲ್ಲಿ ಜಿಯೋ 5G ವೆಲ್‌ಕಮ್‌ ಆಫರ್‌ ಲಭ್ಯವಿದೆ. ಜಿಯೋ 5G ವೆಲ್‌ಕಮ್‌ ಆಫರ್ ಇನ್ವೈಟ್‌ ಪಡೆಯಲು ನೀವು ಮೈ ಜಿಯೋ ಅಪ್ಲಿಕೇಶನ್‌ಗೆ ಪ್ರವೇಶಿಸಿಬೇಕಾಗುತ್ತದೆ. ಇನ್ನು ಈ ಹೊಸ ಜಿಯೋ ವೆಲ್ಕಮ್ ಆಫರ್ ಅಡಿಯಲ್ಲಿ, ಜಿಯೋ 1gbps ವೇಗದಲ್ಲಿ ಅನಿಯಮಿತ 5G ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಜಿಯೋ ಕಂಪನಿಯು ಹೊಸ 5G ಯೋಜನೆಗಳನ್ನು ಪ್ರಾರಂಭಿಸುವವರೆಗೆ 4G ಯೋಜನೆಗಳೊಂದಿಗೆ ಉಚಿತ 5G ಸೇವೆಯನ್ನು ನೀಡುವುದಾಗಿ ಜಿಯೋ ಹೇಳಿಕೊಂಡಿದೆ.

Best Mobiles in India

Read more about:
English summary
Three things you should Know before using Jio 5G service?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X