ಟಿಕ್‌ಟಾಕ್‌ ಶೈಲಿಯ ಹೊಸ ಅಪ್ಲಿಕೇಶನ್‌ ಪರಿಚಯಿಸಿದ ಯುಟ್ಯೂಬ್‌!

|

ಚೀನಾ ಮೂಲದ ಜನಪ್ರಿಯ ಅಪ್ಲಿಕೇಶನ್‌ ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್‌ ಆಗಿದ್ದೆ ತಡ ಟಿಕ್‌ಟಾಕ್‌ಗೆ ಪ್ರತಿಯಾಗಿ ಹಲವು ಆಪ್‌ಗಳನ್ನ ಪರಿಚಯಿಸುವ ಪ್ರಯತ್ನವನ್ನ ಹಲವು ಸಂಸ್ಥೆಗಳು ಮಾಡುತ್ತಿವೆ. ಈಗಾಗಲೇ ಟಿಕ್‌ಟಾಕ್‌ಗೆ ಪ್ರತಿರೂಪವಾಗಿ ಚಿಂಗಾರಿ, ಟ್ರೆಲ್, ಇನ್‌ಸ್ಟಾಗ್ರಾಮ್‌ ರೀಲ್ಸ್‌ ಆಪ್‌ಗಳನ್ನ ಪರಿಚಯಿಸಲಾಗಿದೆ. ಇದೀಗ ಯುಟ್ಯೂಬ್‌ ಕೂಡ ಟಿಕ್‌ಟಾಕ್‌ ಮಾದರಿಯ ಶಾರ್ಟ್‌ ವೀಡಿಯೋ ಸ್ಟ್ರೀಮಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಈ ಫೀಚರ್ಸ್‌ 15 ಸೆಕೆಂಡ್ ವೀಡಿಯೊಗಳನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಟಿಕ್‌ಟಾಕ್‌ ಮಾದರಿಯ ಶಾರ್ಟ್‌ ವೀಡಿಯೊ ಫೀಚರ್ಸ್‌ ಯೂಟ್ಯೂಬ್ ಶಾರ್ಟ್ಸ್ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯದಲ್ಲೇ ಇದು ಭಾರತದಲ್ಲಿ ತನ್ನ ಬೀಟಾ ವರ್ಷನ್‌ನಲ್ಲಿ ಲಭ್ಯವಾಗಲಿದೆ. ಅಲ್ಲದೆ ಇದು ಹೊಸ ಕ್ಯಾಮೆರಾ ಮತ್ತು ಕೆಲವು ಎಡಿಟಿಂಗ್ ಪರಿಕರಗಳನ್ನು ಒಳಗೊಂಡಿರಲಿದೆ ಎಂದು ಗೂಗಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಯುಟ್ಯೂಬ್‌ ಶಾರ್ಟ್ಸ್‌ನ ವೀಡಿಯೊಗಳು 15 ಸೆಕೆಂಡುಗಳವರೆಗೆ ಇರುತ್ತವೆ ಮತ್ತು ಅವುಗಳನ್ನು ನ್ಯೂ ಶಾರ್ಟ್‌ ಫೀಕ್ಚರ್‌ ಶೆಲ್ಫ್ ಎಂದು ಕರೆಯಲಾಗುವ ಯೂಟ್ಯೂಬ್ ಮುಖಪುಟದಲ್ಲಿ ನೋಡಬಹುದಾಗಿರುತ್ತೆ.ಇನ್ನುಳಿದಂತೆ ಯುಟ್ಯೂಬ್‌ ಶಾರ್ಟ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಯುಟ್ಯೂಬ್‌

ಸದ್ಯ ಯುಟ್ಯೂಬ್‌ ಟಿಕ್‌ಟಾಕ್‌ನ ಮಾದರಿಯಲ್ಲಿ ಹೊಸ ಶಾರ್ಟ್ಸ್‌ ವೀಡಿಯೋ ಸ್ಟ್ರೀಮಿಂಗ್‌ ಸೇವೆಯನ್ನ ಭಾರತದಲ್ಲಿ ನೀಡಲು ಮುಂದಾಗಿದೆ. ಇದಕ್ಕಾಗಿ ಟಿಕ್‌ಟಾಕ್‌ ಶೈಲಿಯಲ್ಲಿಯೇ ವೀಡಿಯೋಗಳನ್ನ ಕ್ರಿಯೆಟ್‌ ಮಾಡುವ ಹಾಗೂ ಶೇರ್‌ ಮಾಡುವ ಅವಕಾಶವನ್ನ ಬಳಕೆದಾರರಿಗೆ ನೀಡಲಿದೆ. ಜೊತೆಗೆ ಚಾರ್ಟ್‌ ಬಿಟ್‌ ಮೈ ಫಿಂಗರ್‌, ಗುಡ್‌ ಮಾರ್ನಿಂಗ್‌ ಯಾಲ್‌ ಮತ್ತು ಲಾಕ್‌ಡೌನ್‌ ಟ್ರಿಕ್‌ ಶಾಟ್‌ಗಳಂತಹ ಪ್ರಸಿದ್ಧ ವೈರಲ್‌ ವೀಡಿಯೊಗಳ ಪೋಸ್ಟರ್‌ ಒಂದನ್ನ ಯೂಟ್ಯೂಬ್‌ ಪೋಸ್ಟ್ ಮಾಡಿದ್ದು, ಈ ಮೂಲಕ ಯುಟ್ಯೂಬ್‌ ಶಾರ್ಟ್ಸ್‌ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ ಶಾರ್ಟ್ಸ್‌ನಲ್ಲಿ ವೀಡಿಯೋಗಳನ್ನ ಕ್ರಿಯೆಟ್‌ ಮಾಡಲು ಕ್ರಿಯೆಟ್ ಬಟನ್ ಅನ್ನು ಭಾರತದಲ್ಲಿನ ಆಂಡ್ರಾಯ್ಡ್ ಬಳಕೆದಾರರಿಗಾಗಿ ನ್ಯಾವಿಗೇಷನ್‌ನ ಕೆಳಗಿನ ಪಟ್ಟಿಗೆ ಸರಿಸಲಾಗಿದೆ. ಅಲ್ಲದೆ ಯುಟ್ಯೂಬ್‌ನ ಪೋಸ್ಟ್‌ನಲ್ಲಿ ನೀವು ಕಿರುಚಿತ್ರಗಳನ್ನು ಹೇಗೆ ರಚಿಸಬಹುದು ಎನ್ನುವ ಮಾಹಿತಿಯನ್ನ ನೀಡಲಾಗಿದೆ. ಇನ್ನು ಯುಟ್ಯೂಬ್‌ ಪೋಸ್ಟ್ ಪ್ರಕಾರ, ನಿಮಗೆ ಪ್ರವೇಶವಿದೆಯೇ ಎಂದು ಪರಿಶೀಲಿಸಲು ನೀವು "+" ಐಕಾನ್ ಟ್ಯಾಪ್ ಮಾಡಬಹುದು ನಂತರ ವೀಡಿಯೊ ಆಯ್ಕೆಮಾಡಿ, ಶಾರ್ಟ್‌ ವೀಡಿಯೊವನ್ನು ಕ್ರಿಯೆಟ್‌ ಎಂದು ನೀವು ನೋಡಿದರೆ, ನೀವು ಶಾರ್ಟ್ಸ್ ಕ್ಯಾಮರಾಕ್ಕೆ ಪ್ರವೇಶವನ್ನು ಹೊಂದಿದ್ದೀರಿ ಎಂದು ಅರ್ಥ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ ಶಾರ್ಟ್ಸ್ ಕ್ಯಾಮೆರಾಗೆ ಪ್ರವೇಶವಿಲ್ಲದ ಜನರು ಶೀರ್ಷಿಕೆ ಅಥವಾ ವಿವರಣೆಯಲ್ಲಿ # ಶಾರ್ಟ್ಸ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಇನ್ನೂ 60 ಸೆಕೆಂಡುಗಳಿಗಿಂತ ಕಡಿಮೆಯ ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು. ಸದ್ಯ ಟಿಕ್‌ಟಾಕ್‌ ಹೊಂದಿದ್ದ ಜನಪ್ರಿಯತೆಯನ್ನ ರಿಪ್ಲೇಸ್ ಮಾಡುವ ಪ್ರಯತ್ನವನ್ನ ಈಗಾಗಲೇ ಹಲವು ಆಪ್‌ಗಳು ಮಾಡುತ್ತಿವೆ. ಆದರೆ ಇನ್ನು ಕೂಡ ಯಾವುದೇ ಪರಿಣಾಮಕಾರಿಯಾಗಿ ಪ್ರಭಾವ ಬೀರಿಲ್ಲ. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಕೂಡ ಈ ಹಾದಿಯಲ್ಲಿ ಸೇರಿದೆ. ಇದಕ್ಕೆ ಇದೀಗ ಯುಟ್ಯೂಬ್‌ ಶಾರ್ಟ್ಸ್‌ ಎಂಟ್ರಿ ನೀಡಲಿದ್ದು, ಬಳಕೆದಾರರಿಗೆ ಹೇಗೆ ಪರಿಣಾಮಕಾರಿಯಾಗಿ ತನ್ನ ಪ್ರಭಾವ ಬೀರಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
YouTube Shorts queues up behind Instagram Reels as a TikTok replacement launching in India first.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X