ಫೇಸ್‌ಬುಕ್‌ ಜನಪ್ರಿಯತೆ ಹಿಂದಿಕ್ಕುವಲ್ಲಿ ಸೋತ 'ಟಿಕ್‌ಟಾಕ್'‌!

|

ಸದ್ಯ ಭಾರೀ ಟ್ರೆಂಡ್‌ ಹುಟ್ಟುಹಾಕಿರುವ ಚೀನಾ ಮೂಲದ ಜನಪ್ರಿಯ ಶಾರ್ಟ್‌ ವಿಡಿಯೊ ಶೇರಿಂಗ್ ಆಪ್‌ 'ಟಿಕ್‌ಟಾಕ್', ಹೆಚ್ಚು ಡೌನ್‌ಲೋಡ್‌ ಆಗುತ್ತಿರುವ ಆಪ್‌ಗಳಲ್ಲಿ ಒಂದಾಗಿದೆ. ಬಹುಶಃ ಟಿಕ್‌ಟಾಕ್‌ ಆಪ್‌ ನಂಬರ್ ಒನ್ ಎಂದು ನಿಮಗನಿಸಿರಬಹುದು ಆದರೆ, ಸೋಶಿಯಲ್ ಮೀಡಿಯಾ ಕಿಂಗ್ ಫೇಸ್‌ಬುಕ್‌ ಅನ್ನು ಹಿಂದಿಕ್ಕುವಲ್ಲಿ ಟಿಕ್‌ಟಾಕ್ ಸೋತಿದೆ. ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್‌ ಮೊದಲ ಸ್ಥಾನದಲ್ಲಿದೆ.

ಫೇಸ್‌ಬುಕ್‌ ಜನಪ್ರಿಯತೆ ಹಿಂದಿಕ್ಕುವಲ್ಲಿ ಸೋತ 'ಟಿಕ್‌ಟಾಕ್'‌!

ಹೌದು, ಜುಲೈ-2019 ತಿಂಗಳಿನಲ್ಲಿ ಒಟ್ಟಾರೇ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಸಾಮಾಜಿಕ ಜಾಲತಾಣ ಆಪ್‌ಗಳ ಪೈಕಿ ಫೇಸ್‌ಬುಕ್ ನಂಬರ್ ಒನ್‌ ಸ್ಥಾನದಲ್ಲಿದ್ದು, ಎರಡನೇ ಸ್ಥಾನವನ್ನು ಟಿಕ್‌ಟಾಕ್ ಪಡೆದುಕೊಂಡಿದೆ. ಹಾಗೆಯೇ ಇನ್‌ಸ್ಟಾಗ್ರಾಂ ತೃತೀಯ ಸ್ಥಾನದಲ್ಲಿದೆ ಎಂದು ಸೆನ್ಸಾರ್ ಟವರ್ ಸಂಸ್ಥೆಯು ವರದಿ ಪ್ರಕಟಿಸಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಮಾದರಿಯ ಎರಡು ಆಪ್‌ ಸ್ಟೋರ್‌ಗಳಲ್ಲಿ ಡೌನ್‌ಲೋಡ್‌ ಆಧಾರದ ಮೇಲೆ ಈ ಲಿಸ್ಟ್‌ ನಿರ್ಧರಿಸಲಾಗಿದೆ.

ಫೇಸ್‌ಬುಕ್‌ ಜನಪ್ರಿಯತೆ ಹಿಂದಿಕ್ಕುವಲ್ಲಿ ಸೋತ 'ಟಿಕ್‌ಟಾಕ್'‌!

ಒಟ್ಟಾರೇ ಆಪ್‌ ಡೌನ್‌ಲೋಡ್‌ ಲಿಸ್ಟ್‌ನಲ್ಲಿ ಫೇಸ್‌ಬುಕ್ ಮುಂದಿದೆ. ಇನ್ನು ಕೇವಲ ಐಓಎಸ್‌ನ 'ಆಪ್‌ ಸ್ಟೋರ್‌'ನಲ್ಲಿ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವ ಸಾಮಾಜಿಕ ಜಾಲತಾಣ ಆಪ್‌ಗಳು ಯಾವುವು ಎಂದು ನೋಡುವುದಾದರೇ, ಇಲ್ಲಿ ಟಿಕ್‌ಟಾಕ್‌ ಮುಂಚೂಣಿ ಸ್ಥಾನ ಪಡೆದುಕೊಂಡಿದ್ದು, ಇದರ ನಂತರದ ಸ್ಥಾನವನ್ನು ಇನ್‌ಸ್ಟಾಗ್ರಾಂ ಹೊಂದಿದೆ ಮತ್ತು ಫೇಸ್‌ಬುಕ್ ತೃತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಫೇಸ್‌ಬುಕ್‌ ಜನಪ್ರಿಯತೆ ಹಿಂದಿಕ್ಕುವಲ್ಲಿ ಸೋತ 'ಟಿಕ್‌ಟಾಕ್'‌!

ಟಿಕ್‌ಟಾಕ್‌ ಆಪ್‌ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಅನ್ನು ಹಿಂದೆ ಹಾಕುವಲ್ಲಿ ಸೋತಿದೆ. ಜುಲೈ -2019ರ ತಿಂಗಳಿನಲ್ಲಿ 'ಟಿಕ್‌ಟಾಕ್‌' ಆಪ್‌ ಒಟ್ಟಾರೇ 53.5 ಮಿಲಿಯನ್ ಡೌನ್‌ಲೋಡ್ ಆಗಿದ್ದು, ಫೇಸ್‌ಬುಕ್ 56 ಮಿಲಿಯನ್ ಡೌನ್‌ಲೋಡ್‌ ಕಂಡಿದೆ. ಆದ್ರೆ ಟಿಕ್‌ಟಾಕ್‌ ಆಪ್‌ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವುದು ಭಾರತದಲ್ಲಿಯೇ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿಯಾಗಿದೆ.

<strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!</strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!

ಸಾಮಾಜಿಕ ತಾಣ ಫೇಸ್‌ಬುಕ್ ಒಟ್ಟಾರೇ ಡೌನ್‌ಲೋಡ್‌ನಲ್ಲಿ ಶೇ.23%ರಷ್ಟು ಡೌನ್‌ಲೋಡ್‌ ಭಾರತದಲ್ಲಿಯೇ ಆಗಿದೆ. ಟಿಕ್‌ಟಾಕ್, ಫೇಸ್‌ಬುಕ್‌ ಬಿಟ್ಟರೇ ನಂತರದ ಸ್ಥಾನಗಳಲ್ಲಿ ಸ್ನ್ಯಾಪ್‌ಚಾಟ್‌ ಮತ್ತು ಲೈಕ್ ಆಪ್‌ಗಳು ಗುರುತಿಸಿಕೊಂಡಿವೆ ಎಂದು ಸೆನ್ಸಾರ್ ಟವರ್ ವರದಿಯಲ್ಲಿ ತಿಳಿಸಿದೆ. ಹಾಗೆಯೇ ಕೆಲವು ಆಂಡ್ರಾಯ್ಡ್‌ ಮತ್ತು ಐಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪ್ಸ್‌ಗಳು ಪ್ರೀ-ಇನ್‌ಸ್ಟಾಲ್‌ ಆಗಿರುತ್ತವೆ. ಆದ್ರೆ ಈ ವರದಿಯಲ್ಲಿ ಪ್ರಿ-ಇನ್‌ಸ್ಟಾಲ್‌ ಆಪ್ಸ್‌ ಪರಿಗಣಿಸಿಲ್ಲ.

<strong>ಓದಿರಿ : ಕಡಿಮೆ ಬೆಲೆಗೆ ಲಭ್ಯವಿರುವ 5 ಉತ್ತಮ ವಾಯರ್‌ಲೆಸ್‌ ಇಯರ್‌ಫೋನ್‌ಗಳು!</strong>ಓದಿರಿ : ಕಡಿಮೆ ಬೆಲೆಗೆ ಲಭ್ಯವಿರುವ 5 ಉತ್ತಮ ವಾಯರ್‌ಲೆಸ್‌ ಇಯರ್‌ಫೋನ್‌ಗಳು!

Best Mobiles in India

English summary
according to sensor tower report overall most downloaded social app is facebook. second most downloded app is tiktok. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X