ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!

|

ಚೀನಾ ಮೂಲದ ವಿಡಿಯೊ ಮೇಕಿಂಗ್ ಆಪ್‌ ಟಿಕ್‌ಟಾಕ್‌ ಬಳಕೆದಾರರಲ್ಲಿ ಅತ್ಯಂತ ಕ್ರೇಜ್ ಹುಟ್ಟುಹಾಕಿದ್ದು, ಬಾನ್‌ ಆಗಿ ಮತ್ತೆ ಅತೀ ಹೆಚ್ಚು ಡೌನಲೋಡ್‌ ಕಂಡಿದೆ. ಸದ್ಯ ಭಾರಿ ಜನಪ್ರಿಯತೆಯಲ್ಲಿರುವ ಟಿಕ್‌ಟಾಕ್‌ ಇದೀಗ ಮಹತ್ತರ ಹೆಜ್ಜೆಯನ್ನಿಡಲು ಮುಂದಾಗಿದ್ದು, ಇದರಿಂದ ಚೀನಾ ಮೂಲದ ಶಿಯೋಮಿ, ವಿವೋ ಮತ್ತು ಒಪ್ಪೊ ಸೇರಿದಂತೆ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳು ಶಾಕ್‌ ಆಗಲಿದೆ.

ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!

ಹೌದು, ಬೈಟ್‌ಡ್ಯಾನ್ಸ್‌ ಸಂಸ್ಥೆಯ ಟಿಕ್‌ಟಾಕ್‌ ವಿಡಿಯೊ ಆಪ್‌ ಜನಪ್ರಿಯತೆಗೊಂಡಿರುವ ಬೆನ್ನಲ್ಲೇ ಕಂಪನಿಯ ಸ್ವಂತ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಮಾಡಲು ಮುಂದಾಗಿದೆ. ಸ್ವಂತ ಸ್ಮಾರ್ಟ್‌ಫೋನ್‌ ತಯಾರಿಸಿ ಕಂಪನಿಯ ಆಪ್‌ಗಳನ್ನು ಪ್ರೀ ಇನ್‌ಸ್ಟಾಲ್‌ ಸೇರಿಸಬಹುದಾಗಿದೆ. ಸದ್ಯ ಚೀನಾ ಮೂಲದ ಬಹುತೇಕ ಕಂಪನಿಗಳು ತಮ್ಮ ಆಪ್‌ಗಳನ್ನು ಮೊದಲೆ ಇನ್‌ಸ್ಟಾಲ್‌ ಮಾಡಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಬೈಟ್‌ಡ್ಯಾನ್ಸ್‌ ಫೌಂಡರ್‌ ಜಾಂಗ್ ಯಿಮಿಂಗ್ ತಿಳಿಸಿದ್ದಾರೆ.

ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!

ಬೈಟ್‌ಡ್ಯಾನ್ಸ್‌ ಕಂಪನಿ ಕೇವಲ ಟಿಕ್‌ಟಾಕ್‌ ವಿಡಿಯೊ ಮೇಕಿಂಗ್ ಆಪ್‌ ಒಳಗೊಂಡಿರುವ ಜೊತೆಗೆ ಇನ್‌ಸ್ಟಂಟ್ ಮೆಸೆಜ್‌ ಆಪ್‌ ಮತ್ತು ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ ಸಹ ಹೊಂದಿದೆ. ತನ್ನ ಎಲ್ಲ ಜನಪ್ರಿಯ ಆಪ್‌ಗಳನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ. ಹಾಗಾದರೇ ಬೈಟ್‌ಡ್ಯಾನ್ಸ್‌ ಸಂಸ್ಥೆಯ ಸ್ಮಾರ್ಟ್‌ಫೋನ್‌ ತಯಾರಿಕೆ ಮತ್ತು ಟಿಕ್‌ಟಾಕ್‌ ಆಪ್‌ನ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

ಓದಿರಿ : AMDಯಿಂದ 3ನೇ ತಲೆಮಾರಿನ ಹೊಸ ಪ್ರೊಸೆಸರ್‌ ಅನಾವರಣ!.ವಿಶೇಷತೆ ಏನು?ಓದಿರಿ : AMDಯಿಂದ 3ನೇ ತಲೆಮಾರಿನ ಹೊಸ ಪ್ರೊಸೆಸರ್‌ ಅನಾವರಣ!.ವಿಶೇಷತೆ ಏನು?

ಸ್ಮಾರ್ಟ್‌ಫೋನ್‌ ತಯಾರಿಕೆ

ಸ್ಮಾರ್ಟ್‌ಫೋನ್‌ ತಯಾರಿಕೆ

ಬೈಟ್‌ಡ್ಯಾನ್ಸ್‌ ಸಂಸ್ಥೆಯ ಸದ್ಯ ಜನಪ್ರಿಯತೆಯಲ್ಲಿದ್ದು, ಟಿಕ್‌ಟಾಕ್‌ನೊಂದಿಗೆ ಹಲವು ಆಪ್‌ಗಳನ್ನು ಹೊಂದಿದೆ. ತನ್ನ ಎಲ್ಲ ಆಪ್‌ಗಳು ಬಳಕೆಗೆ ಲಭ್ಯವಾಗಬೇಕಿದ್ದು, ಹೀಗಾಗಿ ಸ್ವಂತ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಮುಂದಾಗಿದೆ. ಸ್ವಂತ ಸ್ಮಾರ್ಟ್‌ಫೋನ್‌ನಲ್ಲಿ ತನ್ನ ಎಲ್ಲ ಆಪ್‌ಗಳನ್ನು ಪ್ರಿಇನ್‌ಸ್ಟಾಲ್‌ ಮಾಡಿ ಗ್ರಾಹಕರಿಗೆ ತಲುಪುವ ಉದ್ದೇಶವಿದೆ ಎನ್ನಲಾಗಿದೆ.

ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು! ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!

ಚೀನಾ ಕಂಪನಿಗಳಿಗೆ ಶಾಕ್‌

ಚೀನಾ ಕಂಪನಿಗಳಿಗೆ ಶಾಕ್‌

ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌ ಸಂಸ್ಥೆ ಇದೀಗ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುವ ಸುದ್ದಿ ಚೀನಾ ಮೂಲದ ಶಿಯೋಮಿ, ವಿವೋ ಮತ್ತು ಒಪ್ಪೊ ಕಂಪನಿಗಳಿಗೆ ದೊಡ್ಡ ಶಾಕ್‌ ನೀಡಿದೆ. ಬೈಟ್‌ಡ್ಯಾನ್ಸ್‌ ಸ್ಮಾರ್ಟ್‌ಫೋನ್‌ ಟಿಕ್‌ಟಾಕ್‌ ಆಪ್‌ ಪ್ರಿ-ಇನ್‌ಸ್ಟಾಲ್‌ ಆಗಲಿರಲಿದ್ದು, ಹೀಗಾಗಿ ಹೆಚ್ಚಿನ ಗ್ರಾಹಕರು ಬೈಟ್‌ಡ್ಯಾನ್ಸ್‌ ಫೋನ್‌ ಖರೀದಿಸಬಹುದು ಎನ್ನುವ ಭಯ ಚೀನಾ ಕಂಪನಿಗಳಿಗೆ ಶುರುವಾಗಲಿದೆ.

ತಯಾರಿಕೆಯ ಸೂಚನೆ

ತಯಾರಿಕೆಯ ಸೂಚನೆ

ಬೈಟ್‌ಡ್ಯಾನ್ಸ್‌ ಸಂಸ್ಥೆಯು ಜನೆವರಿ ತಿಂಗಳಲ್ಲಿ 'ಸ್ಮಾರ್ಟಿಸನ್‌' ಎಂಬ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಿಂದ ಉದ್ಯೋಗಿಗಳನ್ನು ಸೇರಿಸಿಕೊಂಡಿದ್ದು, ಸ್ಮಾರ್ಟ್‌ಫೋನ್‌ ಪರಿಚಯಿಸುವುದು ಪಕ್ಕಾ ಎನ್ನುವಂತಾಗಿದೆ. ಟಿಕ್‌ಟಾಕ್‌ ಆಪ್‌ನ ಸಂಸ್ಥೆಯಿಂದ ಶೀಘ್ರದಲ್ಲೇ ಸ್ಮಾರ್ಟ್‌ಫೋನ್‌ ನಿರೀಕ್ಷಿಸಬಹುದು ಎನ್ನುವ ಸೂಚನೆಗಳು ಹೆಚ್ಚಾಗಿವೆ.

ಜನಪ್ರಿಯತೆ ಕುಗ್ಗಿಲ್ಲ

ಜನಪ್ರಿಯತೆ ಕುಗ್ಗಿಲ್ಲ

ಇತ್ತೀಚಿಗೆ ಟಿಕ್‌ಟಾಕ್‌ ಆಪ್‌ ಅನ್ನು ಬ್ಯಾನ್‌ ಗೊಂಡು ಮತ್ತೆ ಬ್ಯಾನ್‌ನಿಂದ ವಿಮುಕ್ತಿ ಪಡೆದು ಬಂದಿದ್ದರೂ ಇವತ್ತಿಗೂ ಟಿಕ್‌ಟಾಕ್‌ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ. ಸೆನ್ಸಾರ್‌ ಟವರ್‌ ಸರ್ವೇ ವರದಿ ಪ್ರಕಾರ ವಿಶ್ವದಲ್ಲಿ ಅತೀ ಹೆಚ್ಚು ಡೌನಲೋಡ್‌ ಆದ ಆಪ್‌ಗಳ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
TikTok maker's next move may bring bad news for Xiaomi, Oppo, Vivo and others.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X