ಕನ್ನಡಿಗರೇ ಸಿದ್ಧಪಡಿಸಿರುವ 'ಚಿಂಗಾರಿ' ಆಪ್‌ ಜನಪ್ರಿಯತೆಗೆ ಬೆದರಿದ 'ಟಿಕ್‌ಟಾಕ್'!

|

ಸುಖಾಸುಮ್ಮನೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾ ಪೆಟ್ಟು ನೀಡಲು ದೇಶದ ಜನ ಸಜ್ಜಾಗಿದ್ದಾರೆ. ಸದ್ಯ ದೇಶದಲ್ಲಿ ಜನರು ಚೀನಾದ ಮೂಲದ ಉತ್ಪನ್ನಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಕೆ ಮಾಡುವುದನ್ನು ಕೈ ಬಿಡುತ್ತಿದ್ದಾರೆ. ಈ ಮೂಲಕ ಬಾಯ್ಕಟ್ ಚೀನಾ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ಸೂಚಿಸುತ್ತಿದ್ದು, ಸ್ವದೇಶಿ ಉತ್ಪನ್ನಗಳ ಬಳಕೆಗೆ ಮುಂದಾಗಿದ್ದಾರೆ. ಈ ನಡುವೆ ಚೀನಾ ಮೂಲದ ಟಿಕ್‌ಟಾಕ್‌ ಆಪ್‌ಗೆ ನೇರ ಪೈಪೋಟಿ ನೀಡಲು ಸಿದ್ಧವಾಗಿದೆ ದೇಶಿ ಚಿಂಗಾರಿ ಆಪ್‌.

ಟಿಕ್‌ಟಾಕ್

ಹೌದು, ಚೀನಾ ಮೂಲದ ಟಿಕ್‌ಟಾಕ್ ಸೇರಿದಂತೆ ಹಲವು ಆಪ್‌ಗಳು ಹೆಚ್ಚು ಜನರನ್ನು ಆಕರ್ಷಿಸಿವೆ. ಆದ್ರೆ ಚೀನಾ ಆಪ್ಸ್‌ ಬಳಕೆ ನಿಲ್ಲಿಸುತ್ತಿರುವ ಜನರು ಸ್ವದೇಶಿ ಮೂಲದ ಆಪ್ಸ್‌ಗಳಿಗೆ ಮಣೆ ಹಾಕುತ್ತಿದ್ದಾರೆ. ಹೀಗಾಗಿ ಕನ್ನಡಿಗರೇ ಅಭಿವೃದ್ದಿಪಡಿಸಿರುವ ಚಿಂಗಾರಿ ಅಪ್ಲಿಕೇಶನ್‌ಗೆ ಇದೀಗ ಭಾರಿ ಬೆಂಬಲ ವ್ಯಕ್ತವಾಗಿದ್ದು, ಕಡಿಮೆ ಅವಧಿಯಲ್ಲಿ ಈ ಆಪ್‌ ಸುಮಾರು 2.5 ಮಿಲಿಯನ್‌ ಡೌನ್‌ಲೋಡ್‌ ಕಂಡು ಹೊಸ ಮೈಲುಗಲ್ಲು ನಿರ್ಮಿಸಿದೆ.

ಚಿಂಗಾರಿ ಆಪ್‌ ಕೀ ಫೀಚರ್ಸ್‌

ಚಿಂಗಾರಿ ಆಪ್‌ ಕೀ ಫೀಚರ್ಸ್‌

ಚಿಂಗಾರಿ ಶಾರ್ಟ್ ವೀಡಿಯೊ ಕ್ರಿಯೆಟಿಂಗ್ ಅಪ್ಲಿಕೇಶನ್ ಆಗಿದೆ. ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವ ಈ ಆಪ್‌ನಲ್ಲಿ ಬಳಕೆದಾರರು ವಿಡಿಯೊ ಕ್ರಿಯೆಟ್ ಮಾಡಿ ಆ ವಿಡಿಯೊವನ್ನು ಅಪ್‌ಲೋಡ್ ಮಾಡಬಹುದಾಗಿದೆ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಸಹ ಮಾಡಬಹುದಾಗಿದೆ. ಆಕರ್ಷಕ ಎಡಿಟಿಂಗ್ ಆಯ್ಕೆಗಳು ಈ ಆಪ್‌ನಲ್ಲಿದ್ದು, ವಿಡಿಯೊವನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಸ್ನೇಹಿತರೊಂದಿಗೆ ಚಾಟಿಂಗ್ ಸಹ ಮಾಡಬಹುದಾಗಿದೆ.

ಚಿಂಗಾರಿ ಆಪ್‌

ಇನ್ನು ಚಿಂಗಾರಿ ಆಪ್‌ನಲ್ಲಿ ಬಳಕೆದಾರರು ಹೊಸ ಜನರೊಂದಿಗೆ ಸಂವಹನ ಮಾಡಬಹುದಾಗಿದೆ. ಬಳಕೆದಾರರು ಕಂಟೆಂಟ್ ಅನ್ನು ಸಹ ಶೇರ್ ಮಾಡಬಹುದಾಗಿದೆ. ಬಳಕೆಅದರರು ವಾಟ್ಸಾಪ್ ಸ್ಟೇಟಸ್, ವಿಡಿಯೊ, ಫೋಟೊಗಳು, ಆಡಿಯೊ ಕ್ಲಿಪ್‌ ಮತ್ತು ಸ್ಟಿಕ್ಕರ್‌ಗಳೊಂದಿಗೆ ಹೊಸ ವಿಡಿಯೊಗಳನ್ನು ಕ್ರಿಯೆಟ್ ಮಾಡಲು ಪೂರಕ ಆಯ್ಕೆಗಳಿವೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 4.7 ರೇಟಿಂಗ್ ಪಡೆದಿದೆ.

ಯಾವೆಲ್ಲಾ ಭಾಷೆಗಳಲ್ಲಿ ಲಭ್ಯ

ಯಾವೆಲ್ಲಾ ಭಾಷೆಗಳಲ್ಲಿ ಲಭ್ಯ

ಸ್ವದೇಶಿ ಮೂಲದ ಚಿಂಗಾರಿ ಆಪ್ ಸುಮಾರು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿದೆ. ಈ ಆಪ್‌ ಇಂಗ್ಲಿಷ್ ಸೇರಿದಂತೆ ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳನ್ನು ಬೆಂಬಲಿಸುತ್ತದೆ.

ಡೆವಲಪರ್‌

ಟಿಕ್‌ಟಾಕ್‌ಗೆ ಟಾಂಗ್ ಕೊಡಲು ಸಜ್ಜಾಗಿರುವ ಚಿಂಗಾರಿ ಆಪ್‌ ಅನ್ನು ಬೆಂಗಳೂರು ಮೂಲದ ಡೆವಲಪರ್‌ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅಭಿವೃದ್ಧಿಪಡಿಸಿದ್ದಾರೆ. ಈ ಆಪ್ ಬಹುಬೇಗನೆ ಬಳಕೆದಾರರನ್ನು ಆಕರ್ಷಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಮೊದಲು 5 ಲಕ್ಷಕ್ಕೂ ಹೆಚ್ಚು ಬಾರಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಲಾಗಿದೆ. ಆದರೆ ಕೇವಲ 10 ದಿನಗಳಲ್ಲಿ 550,000 ಡೌನ್‌ಲೋಡ್‌ಗಳಿಂದ 2.5 ಮಿಲಿಯನ್‌ ಮೈಲಿಗಲ್ಲು ತಲುಪಿದೆ.

ದೈನಂದಿನ ಎಂಗೇಜಮ್ಮೆಂಟ್

ಇನ್ನು ಚಿಂಗಾರಿ ಆಪ್‌ನ ಅತ್ಯಂತ ಸಕ್ರಿಯ ಬಳಕೆದಾರರಲ್ಲಿ ಶೇಕಡಾ 20 ರಷ್ಟು ಜನರು ಪ್ರತಿದಿನ 1.5 ಗಂಟೆಗಳ ಕಾಲ ಅಪ್ಲಿಕೇಶನ್‌ನಲ್ಲಿ ಕಳೆಯುತ್ತಿದ್ದಾರೆ ಮತ್ತು ಅದರ ಬಳಕೆದಾರರಿಗೆ ಸರಾಸರಿ ದೈನಂದಿನ ಎಂಗೇಜಮ್ಮೆಂಟ್ ಸಮಯ 7.5 ನಿಮಿಷಗಳು ಎಂದು ಸಹ-ಸಂಸ್ಥಾಪಕ ಮತ್ತು ಉತ್ಪನ್ನ ಮತ್ತು ಬೆಳವಣಿಗೆಯ ಮುಖ್ಯಸ್ಥ ಸುಮಿತ್ ಘೋಷ್ ಹೇಳಿದ್ದಾರೆ.

Best Mobiles in India

English summary
Indian short-video app Chingari garnered 2.5 million downloads on Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X