ಚಾಲೆಂಜ್! ಫೇಸ್‌ಬುಕ್‌ನ ಈ ರಹಸ್ಯ ಅಂಶಗಳು ನಿಮಗೆಷ್ಟು ಗೊತ್ತು?

By Shwetha
|

ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣ ಇಂದು ಕ್ಷಿಪ್ರ ಗತಿಯಲ್ಲಿ ತನ್ನ ಕಮಾಲನ್ನು ಉಂಟುಮಾಡುತ್ತಿದೆ. ಫೋಟೋ ಹಂಚಿಕೆ, ಪೋಸ್ಟ್‌ಗಳ ಬರೆಯವಿಕೆ ಹೀಗೆ ಒಂದಿಲ್ಲೊಂದು ವಿಧದಲ್ಲಿ ಫೇಸ್‌ಬುಕ್ ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದರೆ ಒಮ್ಮೊಮ್ಮೆ ಫೇಸ್‌ಬುಕ್ ತಾಣವು ಹಲವಾರು ಕಿರಿಕಿರಿಗಳನ್ನು ಉಂಟುಮಾಡುತ್ತದೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ.

ಓದಿರಿ: ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಅನ್‌ಫ್ರೆಂಡ್ ಮಾಡುವುದು, ನಿಮ್ಮ ಮೆಚ್ಚಿನ ಜನರಿಂದ ಬಹುತೇಕ ವಿಷಯಗಳನ್ನು ಅರಿಯುವುದು, ವಿಶೇಷ ಅಧಿಸೂಚನೆಗಳನ್ನು ಪಡೆದುಕೊಳ್ಳುವುದು ಮೊದಲಾದ ಕಾರ್ಯಗಳನ್ನು ಹೇಗೆ ನಡೆಸುವುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು. ಬನ್ನಿ ಕೆಳಗಿನ ಸ್ಲೈಡರ್ ಪರಿಶೀಲಿಸಿಕೊಳ್ಳಿ.

ಅನ್‌ಫ್ರೆಂಡ್ ಮಾಡದೆಯೇ ವಿಷಯಗಳನ್ನು ತಡೆಯುವುದು

ಅನ್‌ಫ್ರೆಂಡ್ ಮಾಡದೆಯೇ ವಿಷಯಗಳನ್ನು ತಡೆಯುವುದು

ನಿಮ್ಮ ಫೇಸ್‌ಬುಕ್ ಪುಟದಲ್ಲಿ ಫಾಲೋವಿಂಗ್ ಬಟನ್ ಅನ್ನು ಅನುಸರಿಸಿ. ಇಲ್ಲಿ ನಿಮಗೆ ಅನ್‌ಫಾಲೊ ಆಪ್ಶನ್ ದೊರೆಯುತ್ತದೆ. ಅವರಿಂಬ ಬರುವ ವಿಷಯಗಳನ್ನು ತಡೆಯಲು ಅನ್‌ಫಾಲೊ ಆಪ್ಶನ್ ಅನ್ನು ತಟ್ಟಿರಿ.

ನಿಮ್ಮ ಮೆಚ್ಚಿನವರಿಂದ ಹೆಚ್ಚಿನ ವಿಷಯಗಳು

ನಿಮ್ಮ ಮೆಚ್ಚಿನವರಿಂದ ಹೆಚ್ಚಿನ ವಿಷಯಗಳು

ಸ್ನೇಹಿತರು ಪಟ್ಟಿಯಲ್ಲಿ ಅಕ್ವೈಂಟೆನ್ಸಸ್ ಅನ್ನು ಕ್ಲಿಕ್ ಮಾಡಿ. ನಿಮ್ಮ ನಿಕಟ ಸ್ನೇಹಿತರಿಂದ ಮಾಹಿತಿಗಳು ನಿಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಸಿಗುತ್ತವೆ.

ಹುಟ್ಟಹಬ್ಬ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಲು

ಹುಟ್ಟಹಬ್ಬ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಲು

ಜನರ ಹುಟ್ಟುಹಬ್ಬವನ್ನು ಟ್ರ್ಯಾಕ್ ಮಾಡಲು ಫೇಸ್‌ಬುಕ್ ಉತ್ತಮ ವಿಧಾನವಾಗಿದೆ. ಆದರೆ ಕೆಲವರಿಗೆ ಈ ಅಧಿಸೂಚನೆಗಳು ಇಷ್ಟವಾಗುವುದಿಲ್ಲ ಅದರಲ್ಲೂ ಮೊಬೈಲ್‌ಗಳಲ್ಲಿ 90% ದಷ್ಟು ಮೊಬೈಲ್ ಸೂಚನೆಗಳಾಗಿರುತ್ತವೆ. ಹೀಗಿರುವಾಗ ಇದನ್ನು ನಿಲ್ಲಿಸಲು ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್>ಮೊಬೈಲ್ ಇಲ್ಲಿಗೆ ಹೋಗಿ.

ಫೇಸ್‌ಬುಕ್ ಅಪ್‌ಡೇಟ್

ಫೇಸ್‌ಬುಕ್ ಅಪ್‌ಡೇಟ್

ಫೇಸ್‌ಬುಕ್ ಟೆಕ್ಸ್ಟ್ ಎಂಬ ಫೀಚರ್ ಇದ್ದು ಅದನ್ನು ಬಳಸಿಕೊಂಡು ಎಸ್‌ಎಮ್‌ಎಸ್ ಕಳುಹಿಸಬಹುದಾಗಿದೆ. ನಿಮ್ಮ ಖಾತೆಗೆ ಫೋನ್ ಸಂಖ್ಯೆಯನ್ನು ಸಂಪರ್ಕಪಡಿಸಿ

ಫೇಸ್‌ಬುಕ್ ಇತಿಹಾಸ ಡೌನ್‌ಲೋಡ್ ಮಾಡಿ

ಫೇಸ್‌ಬುಕ್ ಇತಿಹಾಸ ಡೌನ್‌ಲೋಡ್ ಮಾಡಿ

ಸೆಟ್ಟಿಂಗ್ಸ್ ಇಲ್ಲಿ ನಿಮ್ಮ ಫೇಸ್‌ಬುಕ್ ಡೇಟಾದ ನಕಲನ್ನು ಡೌನ್‌ಲೋಡ್ ಮಾಡಿ.

ಲಾಗ್ ಔಟ್

ಲಾಗ್ ಔಟ್

ಸೆಟ್ಟಿಂಗ್ಸ್ > ಸೆಕ್ಯುರಿಟಿ > ನೀವೆಲ್ಲಿಂದ ಲಾಗಿನ್ ಮಾಡಿದ್ದೀರಿ. ಇಲ್ಲಿ ನಿಮಗೆ ಕಳೆದ ಕೆಲವು ತಿಂಗಳುಗಳ ಲಾಗಿನ್ ಮಾಹಿತಿ ದೊರೆಯುತ್ತದೆ.

ವೀಡಿಯೊ ಆಟೊ ಪ್ಲೇ ಆಫ್ ಮಾಡಿ

ವೀಡಿಯೊ ಆಟೊ ಪ್ಲೇ ಆಫ್ ಮಾಡಿ

ನಿಮ್ಮ ಬ್ರೌಸರ್‌ನಲ್ಲಿ ಕೆಳಭಾಗದಲ್ಲಿ ಸೆಟ್ಟಿಂಗ್ಸ್ ಮೆನುವನ್ನು ಕಾಣುತ್ತೀರಿ. ಇಲ್ಲಿ ವೀಡಿಯೊಸ್ ಟ್ಯಾಬ್ ಕ್ಲಿಕ್ ಮಾಡಿ. ಆಟೊ ಪ್ಲೇ ಸ್ವಿಚರ್‌ಗೆ ಇದು ಹೋಮ್ ಆಗಿದೆ.

ಪಿರೇಟ್ ಲಿಂಗೊ

ಪಿರೇಟ್ ಲಿಂಗೊ

ನಿಮಗೆ ಬೇಕಾದ ಭಾಷೆಯನ್ನು ಆರಿಸಲು ಸೆಟ್ಟಿಂಗ್ಸ್ > ಲಾಂಗ್ವೇಜ್ ಇಲ್ಲಿ ಇಂಗ್ಲೀಷ್‌ನಿಂದ ಇತರೆ ಭಾಷೆಗಳಿಗೆ ಬದಲಾಯಿಸಿಕೊಳ್ಳಿ.

ಹ್ಯಾಕರ್‌ಗಳ ಅಪಾಯದಿಂದ ತಪ್ಪಿಸಿಕೊಳ್ಳಲು

ಹ್ಯಾಕರ್‌ಗಳ ಅಪಾಯದಿಂದ ತಪ್ಪಿಸಿಕೊಳ್ಳಲು

ಹೊಸ ಡಿವೈಸ್ ಅಥವಾ ಬ್ರೌಸರ್‌ನಿಂದ ನಿಮ್ಮ ಫೇಸ್‌ಬುಕ್ ಖಾತೆಯನ್ನು ಪ್ರವೇಶಿಸಿದಾಗ ನಿಮಗೆ ಲಾಗಿನ್ ಸೂಚನೆಗಳು ಬರಬಹುದು. ಸೆಟ್ಟಿಂಗ್ಸ್ > ಸೆಕ್ಯುರಿಟಿ ಇಲ್ಲಿಗೆ ಹೋಗಿ ಇಲ್ಲಿ ಇಮೇಲ್ ಅಧಿಸೂಚನೆ ಅಂಶಗಳನ್ನು ಆರಿಸಬಹುದು.

ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ ಫೇಸ್‌ಬುಕ್ ಲಿಂಕ್ ಮಾಡಿ

ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ ಫೇಸ್‌ಬುಕ್ ಲಿಂಕ್ ಮಾಡಿ

ಇತರ ಸಾಮಾಜಿಕ ನೆಟ್‌ವರ್ಕ್‌ಗಳಿಗೆ ಫೇಸ್‌ಬುಕ್ ಅನ್ನು ಲಿಂಕ್ ಮಾಡಿ. ಇವುಗಳು ಸ್ವಯಂಚಾಲಿತವಾಗಿ ವಿಷಯಗಳನ್ನು ಅಪ್‌ಲೋಡ್ ಮಾಡಿ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ.

Best Mobiles in India

English summary
If you think you're a Facebook pro, think again. Sure, Facey-B might have been around for more than a decade already, but there's a good chance you're still not getting the most out of it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X