ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

By Ashwath
|

ಈಗಂತೂ ನಗರಗಳಲ್ಲಿ ವೈಫಿ ಬಳಸುವ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ವೈಫಿ ಹಾಟ್‌ಸ್ಪಾಟ್‌ಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ.ಈ ವೈಫಿಯಿಂದ ನಮಗೆ ಲಾಭವಾದ್ರೂ ಇದರಿಂದಲೇ ಮೋಸ ಹೋಗುವುದು ಸುಲಭ. ಹಾಗಾಗಿ ಈ ಬಾರಿ ಗಿಜ್ಬಾಟ್‌ ಪಬ್ಲಿಕ್‌ ವೈಫಿ ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮದ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ಸುರಕ್ಷಿತವಾಗಿ ಪಬ್ಲಿಕ್‌ ವೈಫಿಯನ್ನು ಬಳಸಿ.

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಮೈಕ್ರೋಸಾಫ್ಟ್‌ ವಿಂಡೋಸ್‌ನಲ್ಲಿ ಫೈಲ್‌ಗಳು ಪ್ರಿಂಟರ್‌ಗಳು,ಫೋಲ್ಡರ್‌ಗನ್ನು ಶೇರ್ ಮಾಡಲು ಅವಕಾಶವಿದೆ. ಹಾಗಾಗಿ ಪಬ್ಲಿಕ್‌ ವೈಫಿ ಬಳಸುವ ಮೊದಲು ಕಂಟ್ರೋಲ್‌ ಪ್ಯಾನೆಲ್‌ಗೆ ಹೋಗಿ ನೆಟ್‌ವರ್ಕ್ ಶೇರಿಂಗ್‌ ಟರ್ನ್ ಆಫ್‌ ಮಾಡಿ. ಟರ್ನ್‌ ಆಫ್‌ ಮಾಡಿದ ನಂತರ ಪಬ್ಲಿಕ್‌ ವೈಫಿ ಬಳಸಿದರೆ ಯಾರು ನಿಮ್ಮ ಕಂಪ್ಯೂಟರ್‌ನ್ನು ಮಾಹಿತಿ ಕದಿಯಲು ಸಾಧ್ಯವಿಲ್ಲ.

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ನಲ್ಲಿ ಕೆಲವರು ವೈಫಿಗೆ ಆಟೋಮ್ಯಾಟಿಕ್‌ ಕನೆಕ್ಷನ್‌ ಆನ್‌ ಮಾಡಿರುತ್ತಾರೆ. ಈ ರೀತಿ ಮಾಡಲು ಹೋಗಲೇಬೇಡಿ. ಯಾವಾಗ್ಲೂ ನಿಮ್ಮ ಅನುಮತಿಯ ಬಳಿಕವೇ ವೈಫಿ ಆನ್‌ ಆಗುವಂತೆ ನಿಮ್ಮ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ನ್ನು ಸೆಟ್‌ ಮಾಡಿಕೊಳ್ಳಿ.

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಕೆಲವೊಮ್ಮೆ ಹ್ಯಾಕರ್‌ಗಳು ಪಬ್ಲಿಕ್‌ ವೈಫಿ ಬಳಸುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಕಲಿ ವೈಫಿ ಸ್ಥಾಪಿಸುರುತ್ತಾರೆ. ಹಾಗಾಗಿ ನೀವು ಬಳಸುವ ವೈಫಿ ಆಫೀಸ್‌/ಸಂಸ್ಥೆಯ ಅಧಿಕೃತ ವೈಫಿ ಎಂದೇ ಮೊದಲು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಆರಂಭದಲ್ಲಿ ಗೊತ್ತಾಗದಿದ್ದರೆ ಸಂಸ್ಥೆಯ ಇತರರನ್ನು ಕೇಳಿ ನಂತರ ವೈಫಿಯನ್ನು ಬಳಸಿ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಬಹಳಷ್ಟು ಮಂದಿ ಸೋಲುವುದು ಈ ವಿಚಾರದಲ್ಲಿ. ಗಿಜ್ಬಾಟ್‌ ಸಾಕಷ್ಟು ಬಾರಿ ಪಾಸ್‌ವರ್ಡ್ ಬಗ್ಗೆ ಸುದ್ದಿ ತಂದಿತ್ತು. ಹಾಗಾಗಿ ನೀವು ಸುರಕ್ಷಿತ ಪಾಸವರ್ಡ್ ಬಳಸಿ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಕಂಪ್ಯೂಟರ್‌ನ್ನು ಪಬ್ಲಿಕ್‌ ವೈಫಿಗೆ ಕನೆಕ್ಟ್‌ ಮಾಡುವ ಮೊದಲು ನೀವು ಫೈರ್‌ವಾಲ್‌ನ್ನು ಆನ್‌ ಮಾಡಿಕೊಂಡಿರಿ.ಕಂಪ್ಯೂಟರ್‌ನಲ್ಲಿ ಮಾಹಿತಿಗಳು ಯಾವುದರ ಮೂಲಕ ರವಾನೆಯಾಗುತ್ತದೆ ಎಂಬುದನ್ನು ಫೈರ್‌ವಾಲ್‌ ಪರಿಶೀಲಿಸುತ್ತದೆ. ಇಂದು ವೇಳೆ ವೈಫಿ ಮೂಲಕ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್‌ನಿಂದ ಮಾಹಿತಿ ಕದಿಯಲು ಪ್ರಯತ್ನಿಸುತ್ತಿದ್ದರೆ ನಿಮಗೆ ತಕ್ಷಣ ಅಲರ್ಟ್ ಬರುತ್ತದೆ. ಹಾಗಾಗಿ ನಿಮ್ಮ ಕಂಟ್ರೋಲ್‌ ಪ್ಯಾನೆಲ್‌ನಲ್ಲಿರುವ ಫೈರ್‌ವಾಲ್‌ ಆನ್‌ ಮಾಡಿ.

ಫೈರ್‌ವಾಲ್‌
ಕಂಪ್ಯೂಟರ್ ಹ್ಯಾಕರ್ಸ್ ದಾಳಿಗೆ ತುತ್ತಾಗದಂತೆ ತಡೆಯಲು 1980ರ ದಶಕದಲ್ಲಿ ಫೈರ್‌ವಾಲ್ ಎಂಬ ಸುರಕ್ಷಾ ತಂತ್ರಾಂಶ ವ್ಯವಸ್ಥೆ ಅಭಿವೃದ್ಧಿಪಡಿಸಲಾಯಿತು. ಕಂಪ್ಯೂಟರ್‌ಗಳಿಗೆ ನೆಟ್‌ವರ್ಕ್ ಮೂಲಕ ಅಪಾಯ ಎದುರಾಗದಂತೆ ಭದ್ರತೆಯನ್ನು ಈ ಫೈರ್‌ವಾಲ್‌ ಒದಗಿಸುತ್ತದೆ.

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

ಯಾವಾಗ್ಲೂ ಆಂಟಿ ವೈರಸ್‌ ಸಾಫ್ಟ್‌ವೇರನ್ನು ಇನ್‌ಸ್ಟಾಲ್‌ ಮಾಡಿಕೊಂಡಿರಿ. ಅಲ್ಲದೇ ಅದನ್ನು ಅಪಡೆಟ್‌ ಮಾಡುತ್ತಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X