ಶ್ಯೋಮಿ ಸ್ಮಾರ್ಟ್‌ಫೋನ್ ಹೊಂದಿದವರೇ ಅದೃಷ್ಟವಂತರು

By Shwetha
|

ಶ್ಯೋಮಿ ಇತ್ತೀಚೆಗೆ ತಾನೇ MIUI 7 ನ ಗ್ಲೋಬಲ್ ಡೆವಲಪರ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ರೆಡ್ಮೀ 2, ರೆಡ್ಮೀ 1ಎಸ್, ಎಮ್ಐ 3, ಎಮ್ಐ 4, ಎಮ್ಐ 4ಐ, ರೆಡ್ಮೀ ನೋಟ್ 3ಜಿ ಮತ್ತು ರೆಡ್ಮೀ ನೋಟ್ 4ಜಿಗೆ ಸ್ಮಾರ್ಟ್‌ಫೋನ್‌ಗಳಿಗೆ ಬೀಟಾ ಆವೃತ್ತಿ ಲಭ್ಯವಾಗಲಿದೆ. ತನ್ನ ಕಾರ್ಯಕ್ಷಮತೆ ಮತ್ತು ಬ್ಯಾಟರಿಯಲ್ಲೂ ಕೆಲವೊಂದು ಸುಧಾರಣೆಗಳನ್ನು ಕಂಪೆನಿ ಪ್ರಸ್ತುತಪಡಿಸಿದ್ದು ಕೆಲವೊಂದು ಅತ್ಯಾಕರ್ಷಕ ಫೀಚರ್‌ಗಳನ್ನು ಇದು ಅನಾವರಣಗೊಳಿಸಲಿದೆ.

ಓದಿರಿ: ಉಪ್ಪಿ 2 ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ: ಗೇಮ್

ಇಂದಿನ ಲೇಖನದಲ್ಲಿ ಆ ಅತ್ಯಾಕರ್ಷಕ ಫೀಚರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ತೋರಿಸಲಿದ್ದೇವೆ.

ನಾಲ್ಕು ಸಿಸ್ಟಮ್ ವಿನ್ಯಾಸಗಳು

ನಾಲ್ಕು ಸಿಸ್ಟಮ್ ವಿನ್ಯಾಸಗಳು

ರೋಸ್, ಪಿಂಕ್ ಬ್ಲಶ್, ಓಶಿಯನ್ ಬ್ರೀಜ್, ಹೈಲೈಫ್ ಹೆಸರಿನ ನಾಲ್ಕು ಯೂಸರ್ ಇಂಟರ್ಫೇಸ್‌ಗಳನ್ನು ಸಾದರಪಡಿಸಿದೆ.

ವೇಗವಾದ ಪ್ರತ್ಯುತ್ತರ ಸಮಯ

ವೇಗವಾದ ಪ್ರತ್ಯುತ್ತರ ಸಮಯ

ಡೇಟಾ ಲೋಡ್ ಮಾಡುವುದು ಮತ್ತು ಅಪ್ಲಿಕೇಶನ್ ಅನಿಮೇಶನ್ ಅನ್ನು ನಿರ್ವಹಿಸುವುದರ ಮೂಲಕ ಸಿಸ್ಟಮ್ ಪ್ರತ್ಯುತ್ತರವನ್ನು ಇದು ಅಪ್ಟಿಮೈಸ್ ಮಾಡುತ್ತದೆ.

ಉತ್ತಮ ಬ್ಯಾಟರಿ ಕಾರ್ಯಕ್ಷಮತೆ

ಉತ್ತಮ ಬ್ಯಾಟರಿ ಕಾರ್ಯಕ್ಷಮತೆ

ದೈನಂದಿನ ಬಳಕೆಗಾಗಿ 10 ಶೇಕಡಾ ಹೆಚ್ಚಿರುವ ಬ್ಯಾಟರಿ ಬಾಳ್ವಿಕೆಯನ್ನು ತರುತ್ತಿದೆ. ಇನ್ನು ಅಪ್ಲಿಕೇಶನ್‌ಗಳು ಇಂಟರ್ನೆಟ್ ಬಳಕೆಯ ಸಂದರ್ಭದಲ್ಲಿ ಬರೇ 48 ಶೇಕಡಾದಷ್ಟು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ.

ಶೋ ಟೈಮ್

ಶೋ ಟೈಮ್

ತಮ್ಮ ಫೋನ್‌ಗಳಲ್ಲಿ ಸಣ್ಣ ವೀಡಿಯೊ ಲೂಪ್ ಅನ್ನು ಬಳಕೆದಾರರು ದಾಖಲಿಸಬಹುದಾಗಿದ್ದು ರಿಂಗ್‌ಟೋನ್‌ನ ಬದಲಿಗೆ ಸಂಪರ್ಕ ಕರೆಗಳಿಗೆ ವೀಡಿಯೊವನ್ನು ನಿಮಗೆ ಲಗತ್ತಿಸಬಹುದಾಗಿದೆ.

ಚೈಲ್ಡ್ ಮೋಡ್

ಚೈಲ್ಡ್ ಮೋಡ್

ಮಕ್ಕಳು ಯಾವ ಬಗೆಯ ಅಪ್ಲಿಕೇಶನ್‌ಗಳನ್ನು ನೋಡಬಹುದು ಎಂಬುದನ್ನು ನಿರ್ಧರಿಸಿಯೇ ಈ ಫೀಚರ್ ಅನ್ನು ಸಾದರಪಡಿಸಲಾಗಿದೆ. ಇದು ಖಾಸಗಿ ಮಾಹಿತಿಗಳಾದ ಇಮೇಲ್‌ಗಳು ಮತ್ತು ಸಂದೇಶಗಳನ್ನು ಮಕ್ಕಳಿಗೆ ನೋಡಲು ಅನುಮತಿಸುವುದಿಲ್ಲ.

ವಿಶುವಲ್ ಐವಿಆರ್

ವಿಶುವಲ್ ಐವಿಆರ್

ವಿಶುವಲ್ ಐವಿಆರ್ ಸೇರಿದಂತೆ ಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಕೆಲವೊಂದು ವೈಶಿಷ್ಟ್ಯಗಳನ್ನು ಕಂಪೆನಿ ಸೇರಿಸಿದೆ. ಶ್ಯೋಮಿಯ ಹೊಸ ROM ಹತ್ತು ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಿದೆ.

ಎಕ್ಸ್ಎಕ್ಸ್ಎಲ್ ಟೆಕ್ಸ್ಟ್

ಎಕ್ಸ್ಎಕ್ಸ್ಎಲ್ ಟೆಕ್ಸ್ಟ್

ದೊಡ್ಡ ಫಾಂಟ್‌ಗಳನ್ನು ಬಯಸುವ ಬಳಕೆದಾರರಿಗೆ ಐದು ಬೇರೆ ಬೇರೆ ಫಾಂಟ್ ಗಾತ್ರಗಳನ್ನು ಒದಗಿಸುತ್ತಿದೆ.

ಡೇಟಾ ಸೇವರ್

ಡೇಟಾ ಸೇವರ್

ಹೊಸ ಡೇಟಾ ಸೇವರ್ ಅನ್ನು ಒದಗಿಸುವುದಕ್ಕಾಗಿ ಒಪೇರಾ ಮ್ಯಾಕ್ಸ್‌ನೊಂದಿಗೆ ಇದು ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಡೇಟಾ ಬಳಕೆಯಲ್ಲಿ ನೀವು 50 ಶೇಕಡಾವನ್ನು ಉಳಿಸಬಹುದಾಗಿದೆ.

ಡಿಎನ್‌ಡಿ ಫೀಚರ್‌ಗಳು

ಡಿಎನ್‌ಡಿ ಫೀಚರ್‌ಗಳು

MIUI 7 ನಲ್ಲಿ ಡಿಎನ್‌ಡಿ ಫೀಚರ್‌ಗಳು ಕೂಡ ಇವೆ. ಎಮ್ಐ ಬ್ಯಾಂಡ್‌ನೊಂದಿಗೆ ಇದನ್ನು ಪೇರ್ ಮಾಡಿಕೊಂಡು ನಿಮ್ಮ ನಿದ್ದೆಯ ಸಮಯನ್ನು ತಿಳಿದುಕೊಳ್ಳಬಹುದಾಗಿದೆ.

ಎಸ್‌ಎಮ್‌ಎಸ್ ಫಿಲ್ಟರ್

ಎಸ್‌ಎಮ್‌ಎಸ್ ಫಿಲ್ಟರ್

ಇನ್ನು ಎಸ್‌ಎಮ್ಎಸ್ ಫಿಲ್ಟರ್ ಎಂಬ ಆಕರ್ಷಕ ಫೀಚರ್ ಕೂಡ ಇದರಲ್ಲಿದ್ದು, ಸಂಪರ್ಕರಹಿತ ಎಸ್‌ಎಮ್‌ಎಸ್‌ಗಳನ್ನು ಅಧಿಸೂಚನೆಗೆ ಕಳುಹಿಸುತ್ತದೆ.

Best Mobiles in India

English summary
Xiaomi just unveiled the global developer version of the MIUI 7 in India. The beta version will launch on Monday with support for smartphones like Redmi 2, Redmi 1S, Mi 3, Mi 4, Mi 4i, Redmi Note 3G and Redmi Note 4G.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X