ಏನು ಫೇಸ್‌ಬುಕ್ ಅನ್ನು ಮುಚ್ಚಲಾಗುತ್ತಿದೆಯಂತೆ ಇದು ನಿಜವೇ?

By Shwetha
|

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಫೇಸ್‌ಬುಕ್ ಬಳಕೆದಾರ ಸ್ನೇಹಿಯಾಗಲು ಎಲ್ಲಾ ತರಹದ ತಯಾರಿಗಳನ್ನು ಮಾಡುತ್ತಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಈ ಬಲಿಷ್ಟ ತಾಣವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತೂ ಇದೆ. [ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು]

ಇನ್ನು ಯಾರಿಗೂ ಅರಿಯದ ಫೇಸ್‌ಬುಕ್ ಕುರಿತ ಕೆಲವೊಂದು ನಿಗೂಢ ಸತ್ಯಗಳನ್ನು ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದೇವೆ. ಈ ಸತ್ಯಗಳು ನಿಜಕ್ಕೂ ನಿಮ್ಮನ್ನು ನಿಬ್ಬೆರಗಾಗಿಸುವಂತಿದ್ದು ಅದು ಏನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಪರಿಶೀಲಿಸಿ [11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?]

ಫೇಸ್‌ಬುಕ್ ಕಟ್ಟುಕಥೆಗಳು

ಫೇಸ್‌ಬುಕ್ ಸೈಟ್ ಅನ್ನು ಮುಚ್ಚಲಾಗುವುದು ಎಂಬ ಊಹಪೋಹಗಳು ಹರಿದಾಡುತ್ತಲೇ ಇದೆ. ಸರ್ವರ್‌ಗಳು ಓವರ್ ಲೋಡ್ ಆಗುತ್ತಿರುವುದು ಮತ್ತು ಮಾರ್ಕ್ ಜುಕರ್‌ಬರ್ಗ್‌ಗೆ ಫೇಸ್‌ಬುಕ್ ಮೇಲಿನ ಪ್ರೀತಿ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂಬ ವದಂತಿ ಕೇಳಿ ಬರುತ್ತಿದೆ.

ಫೇಸ್‌ಬುಕ್ ಕಟ್ಟುಕಥೆಗಳು

ಯಾರಾದರೊಬ್ಬರ ವಾಲ್‌ನಲ್ಲಿ ನೀವು ಕಮೆಂಟ್ ಪೋಸ್ಟ್ ಮಾಡುತ್ತೀರಿ ಎಂದಾದಲ್ಲಿ ಅವರ ಸ್ನೇಹಿತರುಗಳಿಗೆ ನಿಮ್ಮ ಖಾಸಗಿ ಸ್ಟೇಟಸ್ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ವೀಕ್ಷಿಸಬಹುದು.

ಫೇಸ್‌ಬುಕ್ ಕಟ್ಟುಕಥೆಗಳು

ನಿಮ್ಮ ಸ್ನೇಹಿತರ ಟೈಮ್ ಲೈನ್ ವೀಕ್ಷಣೆಯನ್ನು ಮಾಡುವುದು ಅವರಿಗೆ ತಿಳಿದಿರುವುದಿಲ್ಲ. ಇನ್ನು ನಿಮ್ಮ ಟೈಮ್‌ಲೈನ್‌ನ ವೀಕ್ಷಣೆಯನ್ನು ಅವರು ಮಾಡಿದ್ದಾರೆ ಎಂದಾದಲ್ಲಿ ಇದು ನಿಮಗೆ ತಿಳಿಯುವುದಿಲ್ಲ.

ಫೇಸ್‌ಬುಕ್ ಕಟ್ಟುಕಥೆಗಳು

ಸೈಟ್ ಬಳಸಿ ಹಣ ವರ್ಗಾವಣೆ ಸಾಧ್ಯವಿಲ್ಲ. ಆದರೆ ಮಾಹಿತಿ ವರ್ಗಾವಣೆಗೆ ಇದು ಸೂಕ್ತವಾಗಿದೆ. ಸೈಟ್‌ನೊಂದಿಗೆ ಉತ್ತಮ ಬಾಂಧವ್ಯವನ್ನು ನಿಮಗೆ ಏರ್ಪಡಿಸಿಕೊಳ್ಳಬಹುದಾಗಿದೆ.

ಫೇಸ್‌ಬುಕ್ ಕಟ್ಟುಕಥೆಗಳು

ಫೇಸ್‌ಬುಕ್ ಬಳಸುವುದು ಎಂದರೆ ಸಮಯ ಕಳೆಯುವುದು ಎಂಬ ಮಾತೂ ಇದೆ. ಆದರೆ ನೀವು ಇದನ್ನು ಬಳಸುವುದರ ಮೇಲೆ ಅವಲಂಬಿತವಾಗಿದೆ. ನಿಮಗೆ ಒಳ್ಳೆಯ ಜನರ ಸಂಪರ್ಕವನ್ನು ಕೂಡ ಫೇಸ್‌ಬುಕ್ ಕಲ್ಪಿಸುತ್ತದೆ.

ಫೇಸ್‌ಬುಕ್ ಕಟ್ಟುಕಥೆಗಳು

25 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಫೇಸ್‌ಬುಕ್‌ನಲ್ಲಿ ವ್ಯಸ್ಥರಾಗಿರುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಅವರು ಅಷ್ಟೊಂದು ಹೆಚ್ಚಾಗಿ ಫೇಸ್‌ಬುಕ್‌ನಲ್ಲಿ ಸಂಪರ್ಕಗೊಂಡಿರುವುದಿಲ್ಲ ಎಂಬ ಮಾತೂ ಇದೆ. ಇವರು ಸೈಟ್ ಅನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ.

ಫೇಸ್‌ಬುಕ್ ಕಟ್ಟುಕಥೆಗಳು

ನೀವು ಒಂದು ಪೋಸ್ಟ್ ಅನ್ನು ಬರೆದಿದ್ದೀರಿ ಎಂದಾದಲ್ಲಿ ನಿಮ್ಮೆಲ್ಲಾ ಸ್ನೇಹಿತರಿಗೆ ಅದನ್ನು ಕಾಣಬಹುದಾಗಿದೆ. ಆದ್ದರಿಂದ ಪೋಸ್ಟ್ ಮಾಡುವಾಗ ಹೆಚ್ಚು ಜಾಗರೂಕಾಗಿರಿ.

ಫೇಸ್‌ಬುಕ್ ಕಟ್ಟುಕಥೆಗಳು

ಇನ್ನು ಅಭಿವೃದ್ಧಿಯ ವಿಷಯದಲ್ಲಿ ಫೇಸ್‌ಬುಕ್ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದು ಬಳಕೆದಾರರಿಗಾಗಿ ಅದು ಇನ್ನಷ್ಟು ಅನ್ವೇಷಣೆಗಳನ್ನು ಮಾಡಬೇಕಾಗಿದೆ. ಬಳಕೆದಾರರು ಇಲ್ಲ ಎಂದಾದಲ್ಲಿ ಫೇಸ್‌ಬುಕ್ ಆದಾಯವನ್ನು ಕಳೆದುಕೊಳ್ಳಬಹುದು.

ಫೇಸ್‌ಬುಕ್ ಕಟ್ಟುಕಥೆಗಳು

ನೀವು ಸಾರ್ವಜನಿಕ ಪ್ರಕಟಣೆಯನ್ನು ಫೇಸ್‌ಬುಕ್‌ನಲ್ಲಿ ಮಾಡುತ್ತೀರಿ ಎಂದಾದಲ್ಲಿ ಅದು 10,000 ಜನರನ್ನು ತಲುಪುವುದು ಆವಶ್ಯಕವಾಗಿದೆ. ಆಗ ಮಾತ್ರವೇ ನಿಮ್ಮ ಪ್ರಕಟಣೆಗೆ ಬೆಲೆ ದೊರಕುತ್ತದೆ ಮತ್ತು ಮಾನ್ಯತೆ ಸಿಗುತ್ತದೆ.

ಫೇಸ್‌ಬುಕ್ ಕಟ್ಟುಕಥೆಗಳು

ಫೇಸ್‌ಬುಕ್ ಖಾಸಗಿಯಾಗಿದೆ ಎಂಬುದು ನಿಮ್ಮ ಗಮನದಲ್ಲಿರಬೇಕು. ನಿಮ್ಮ ಪ್ರೈವಸಿ ಸೆಟ್ಟಿಂಗ್ ಅನ್ನು ನೀವು ಬದಲಾಯಿಸುವುದು ಎಂದಾದಲ್ಲಿ, ನಿಮ್ಮ ಫೇಸ್‌ಬುಕ್ ಪೋಸ್ಟ್ ಪಬ್ಲಿಕ್ ಆಗುತ್ತದೆ. ಆದ್ದರಿಂದ ಹೊಸದಾಗಿ ಫೇಸ್‌ಬುಕ್ ಬಳಸುವವರು ಎಚ್ಚರಿಕೆಯಿಂದ ಸೆಟ್ಟಿಂಗ್‌ನಲ್ಲಿ ಆಯ್ಕೆಗಳನ್ನು ಮಾಡಬೇಕು.

Most Read Articles
Best Mobiles in India

English summary
The following article looks at 10 myths about Facebook and explains why they exist and what the reality is. As myths about Facebook go, most are built on widespread misconceptions or misunderstandings that many users hold. To bust these myths about Facebook read on...

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more