ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಐದು ಅತ್ಯುತ್ತಮ ಗೇಮಿಂಗ್‌ ಕಂಪೆನಿಗಳು!

|

ಇಂದಿನ ದಿನಗಳಲ್ಲಿ ಆನ್‌ಲೈನ್‌ ಗೇಮಿಂಗ್‌ ಹವ್ಯಾಸ ಎಲ್ಲರನ್ನೂ ಸೆಳೆಯುತ್ತಿದೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿರುವುದು ವರದಿಯಾಗಿದೆ. ಇದೇ ಕಾರಣಕ್ಕೆ ಗೇಮಿಂಗ್‌ ಕಂಪೆನಿಗಳು ಕೂಡ ಹೊಸ ಮಾದರಿಯ ಗೇಮ್‌ಗಳನ್ನು ಪರಿಚಯಿಸುವ ಮೂಲಕ ಯುವಜನತೆಯನ್ನು ಸೆಳೆಯುತ್ತಿವೆ. ಇನ್ನು ಈ ಗೇಮ್‌ಗಳು ಆನ್‌ಲೈನ್‌ ಆಧಾರಿತವಾಗಿದ್ದು, ಹೊಸ ಟೆಕ್ನಾಲಜಿಯನ್ನು ಒಳಗೊಂಡಿವೆ.

ಆನ್‌ಲೈನ್‌

ಹೌದು, ಆನ್‌ಲೈನ್‌ ಗೇಮಿಂಗ್ ಹವ್ಯಾಸ ಎಲ್ಲ ವಯೋಮಾನದವರನ್ನು ಆಕರ್ಷಿಸಿದೆ. ಆದರಿಂದ ಗೇಮಿಂಗ್‌ ಕಂಪೆನಿಗಳು ಕೂಡ ನೂತನ ತಂತ್ರಜ್ಞಾನವನ್ನು ಒಳಗೊಂಡ ಗೇಮ್‌ಗಳನ್ನು ಪರಿಚಯಿಸುತ್ತಿವೆ. ಇದೇ ಕಾರಣಕ್ಕೆ ಗೇಮಿಂಗ್‌ ಬ್ಯುಸಿನೆಸ್‌ ಕೂಡ ಸಾಕಷ್ಟು ವಿಸ್ತಾರವಾಗಿದೆ. ಸದ್ಯ ಗೇಮಿಂಗ್ ಬ್ಯುಸಿನೆಸ್‌ ವಿಶ್ವದಾದ್ಯಂತ ಎರಡು ಶತಕೋಟಿ ಜನರನ್ನು ಸೆಳೆದಿದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ ಕೂಡ ಅನೇಕ ಗೇಮಿಂಗ್‌ ಕಂಪೆನಿಗಳು ಆನ್‌ಲೈನ್‌ ಗೇಮಿಂಗ್‌ ಪ್ರಿಯರಿಗಾಗಿ ಅನೇಕ ಗೇಮ್‌ಗಳನ್ನು ಪರಿಚಯಿಸಿವೆ. ಹಾಗಾದ್ರೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಅತ್ಯುತ್ತಮ ಗೇಮಿಂಗ್‌ ಕಂಪೆನಿಗಳ ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡ್ರೀಮ್‌ 11

ಡ್ರೀಮ್‌ 11

ಡ್ರೀಮ್‌ 11 ಭಾರತದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಗೇಮಿಂಗ್‌ ಕಂಪೆನಿಯಾಗಿದೆ. ಇದು ಭಾರತೀಯ ಫ್ಯಾಂಟಸಿ ಸ್ಪೋರ್ಟ್ಸ್‌ ಪೋರ್ಟಲ್ ಆಗಿ ಜನಪ್ರಿಯತೆ ಗಳಿಸಿದೆ. ತನ್ನ ಬಳಕೆದಾರರಿಗೆ ಫ್ಯಾಂಟಸಿ ಕ್ರಿಕೆಟ್, ಹಾಕಿ, ಫುಟ್‌ಬಾಲ್, ಕಬಡ್ಡಿ ಮತ್ತು ಬಾಸ್ಕೆಟ್‌ಬಾಲ್ ಗೇಮ್‌ ಅನ್ನು ಆಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಡ್ರೀಮ್11 ಏಪ್ರಿಲ್ 2019 ರಲ್ಲಿ ಯುನಿಕಾರ್ನ್ ಆದ ಮೊದಲ ಭಾರತೀಯ ಗೇಮಿಂಗ್ ಕಂಪನಿಯಾಗಿದೆ. 2012 ರಲ್ಲಿ ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಬಾಸ್ಕೆಟ್‌ಬಾಲ್ ಮತ್ತು ಹಾಕಿ ಗೇಮ್‌ ಪ್ರಾರಂಭಿಸಿದ ಭಾರತದ ಮೊದಲ ಮೊಬೈಲ್ ಆಧಾರಿತ ಸ್ಟಾರ್ಟ್‌ಅಪ್‌ಗಳಲ್ಲಿ ಡ್ರೀಮ್ 11 ಒಂದಾಗಿದೆ. ಇನ್ನು ಡ್ರೀಮ್‌ 11 ಅಪ್ಲಿಕೇಶನ್‌ನಲ್ಲಿ ನಿಮ್ಮ ಕ್ರೀಡಾಜ್ಞಾನವನ್ನು ಬಳಸಿಕೊಂಡು ಐವತ್ತು ಕೋಟಿಯ ತನಕ ಹಣಗೆಲ್ಲುವ ಅವಕಾಶ ಕೂಡ ಇದೆ.

ನಜಾರಾ ಟೆಕ್ನಾಲಜೀಸ್

ನಜಾರಾ ಟೆಕ್ನಾಲಜೀಸ್

ಭಾರತದಲ್ಲಿ ಅತ್ಯುತ್ತಮ ಗೇಮಿಂಗ್‌ ಕಂಪೆನಿಗಳಲ್ಲಿ ನಜಾರಾ ಟೆಕ್ನಾಲಜೀಸ್ ಕೂಡ ಸೇರಿದೆ. ಇದು ಚಂದಾದಾರಿಕೆ, ಫ್ರೀಮಿಯಮ್, ಇ-ಸ್ಪೋರ್ಟ್ಸ್ ಮತ್ತು ಕೌಶಲ್ಯ ಆಧಾರಿತ ಗೇಮಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ಹೊಂದಿದೆ. ಈ ಕಂಪೆನಿ 64 ದೇಶಗಳಲ್ಲಿ ಸಕ್ರಿಯವಾಗಿದ್ದು, NODWIN ಗೇಮಿಂಗ್, ಸ್ಪೋರ್ಟ್ಸ್‌ಕಿಡಾ ಒಳಗೊಂಡಂತೆ ಹಲವಾರು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಪ್ರಸ್ತುತ ಈ ಕಂಪೆನಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇನ್ನು ನಜಾರಾ ಟೆಕ್ನಾಲಜೀಸ್ ಲಿಮಿಟೆಡ್ ಭಾರತ, ದುಬೈ, ಆಫ್ರಿಕಾ ಮತ್ತು ಸಿಂಗಾಪುರದಲ್ಲಿ ಕಚೇರಿಗಳನ್ನು ಹೊಂದಿರುವ ಪ್ರಸಿದ್ಧ ಮೊಬೈಲ್ ಗೇಮ್ ಡೆವಲಪರ್ ಆಗಿದೆ. ನಜಾರಾ ಭಾರತದ ಅತಿದೊಡ್ಡ ಮೊಬೈಲ್ ಎಂಟರ್‌ಟೈನ್‌ಮೆಂಟ್‌ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದ್ದು,100 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಪೇಟಿಎಂ ಫಸ್ಟ್‌ ಗೇಮ್ಸ್‌

ಪೇಟಿಎಂ ಫಸ್ಟ್‌ ಗೇಮ್ಸ್‌

ಪೇಟಿಎಂ ಫಸ್ಟ್ ಗೇಮ್ಸ್ ಪ್ಸಿದ್ದ ಗೇಮಿಂಗ್‌ ಕಂಪೆನಿಗಳಲ್ಲಿ ಒಂದಾಗಿದೆ. ಇದು ಪೇಟಿಎಮ ಮತ್ತು ಅಲಿ ಬಾಬಾರ AGTech ಹೋಲ್ಡಿಂಗ್ಸ್ ಜಂಟಿ ಉದ್ಯಮವಾಗಿದೆ. ಇದು ಸುಮಾರು 45 ಮಿಲಿಯನ್ ನೋಂದಾಯಿತ ಬಳಕೆದಾರರು ಮತ್ತು ಹಲವು ವೈವಿಧ್ಯಮಯ ಗೇಮ್‌ಗಳನ್ನು ಹೊಂದಿದೆ. ಇನ್ನು ಫೇಟಿಎಂ ಫಸ್ಟ್ ಗೇಮ್ಸ್ ಆನ್‌ಲೈನ್‌ನಲ್ಲಿ ರಮ್ಮಿ, ಪೋಕರ್, ಕಾಲ್ ಬ್ರೇಕ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಆಡಬಹುದಾಗಿದೆ. ಇದು ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ರಮ್ಮಿ ಮತ್ತು ಕ್ರೀಡಾ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ.

ಗೇಮ್ಸ್‌ 2 ವಿನ್‌

ಗೇಮ್ಸ್‌ 2 ವಿನ್‌

ಗೇಮ್ಸ್‌ 2 ವಿನ್‌ ವಿಶ್ವದ ಅತ್ಯಂತ ಜನಪ್ರಿಯ ಮೊಬೈಲ್ ಗೇಮ್ ಕಂಪನಿಗಳಲ್ಲಿ ಒಂದಾಗಿದೆ. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದ್ದು, 2005 ರಲ್ಲಿ ಪ್ರಾರಂಭವಾಗಿದೆ. ಇನ್ನು ಈ ಗೇಮಿಂಗ್‌ ಕಂಪೆನಿ ಸಾಂಪ್ರದಾಯಿಕ ಗೇಮಿಂಗ್ ಪ್ಲಾಟ್‌ಫಾರ್ಮ್ ಜೊತೆಗೆ, ಮಾರ್ಕೆಟಿಂಗ್ ಮತ್ತು ಗೇಮ್‌-ಸಂಬಂಧಿತ ಸಾಮಾಜಿಕ ನೆಟ್‌ವರ್ಕ್‌ಗಳನ್ನು ಸಹ ಒದಗಿಸುತ್ತಿದೆ. ಗೂಗಲ್ ಪ್ಲೇ, ಆಪಲ್ ಆಪ್ ಸ್ಟೋರ್, ಮೈಕ್ರೋಸಾಫ್ಟ್ ಸ್ಟೋರ್ ಮತ್ತು ಅಮೆಜಾನ್ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ತಮ್ಮ ಗೇಮ್‌ಗಳನ್ನು ಹೊಂದಿದೆ.

ಮೂನ್‌ಫ್ರಾಗ್ ಲ್ಯಾಬ್ಸ್

ಮೂನ್‌ಫ್ರಾಗ್ ಲ್ಯಾಬ್ಸ್

ಮೂನ್‌ಫ್ರಾಗ್ ಲ್ಯಾಬ್ಸ್ ಜನಪ್ರಿಯ ಗೇಮಿಂಗ್‌ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿದೆ. ಇದು ಟೀನ್ ಪ್ಯಾಟಿ ಗೋಲ್ಡ್, ಕಾರ್ಡ್-ಆಧಾರಿತ ಆಟವನ್ನು ಒಳಗೊಂಡಿದೆ. ಇದಲ್ಲದೆ ಬಾಹುಬಲಿ ಚಿತ್ರದ ನಂತರ, ಭಾರತದ ಮೊದಲ ಯುದ್ಧ ತಂತ್ರದ ಆಟವನ್ನು ಸಹ ಬಿಡುಗಡೆ ಮಾಡಿ ಪ್ರಸಿದ್ಧಿಯನ್ನು ಪಡೆದಿದೆ.

Best Mobiles in India

Read more about:
English summary
India’s gaming industry has benefited from the country’s digital revolution.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X