Just In
- 21 min ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- 47 min ago
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- 1 hr ago
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- 2 hrs ago
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
Don't Miss
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Movies
3ನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರಿನ ಸಂಗೀತ ನಿರ್ದೇಶಕ ರಿಕ್ಕಿ ಕೇಜ್
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2023 ರಲ್ಲಿ ಮೊಬೈಲ್‌ನಲ್ಲಿ ಆಡಬಹುದಾದ ಟಾಪ್ 5 ಗೇಮ್‌ಗಳಿವು!
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಗೇಮಿಂಗ್‌ಗಾಗಿಯೇ ವಿಶೇಷ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಹಲವಾರು ಕಂಪೆನಿಗಳು ತಯಾರು ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅಂತೆಯೇ ಗೇಮಿಂಗ್ ವಲಯದಿಂದಲೂ ಸಹ ಟೆಕ್ ಮಾರುಕಟ್ಟೆಗೆ ಭಾರೀ ಅದಾಯ ಕೂಡ ಬರುತ್ತಿರುವುದು ವಿಶೇಷ. ಈಗಾಗಲೇ ಹಲವಾರು ರೀತಿಯ ಗೇಮಿಂಗ್ ಆಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗೇಮರ್‌ಗಳಿಗೆ ಅನುಕೂಲಕರವಾಗಿವೆ. ಇದೀಗ ಹೊಸ ವರ್ಷಕ್ಕೆ ಮೊಬೈಲ್‌ನಲ್ಲಿ ಗೇಮ್ ಆಡುವ ಉದ್ದೇಶದಿಂದ ಹೊಸ ಗೇಮ್‌ಗಳನ್ನು ಅನಾವರಣ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ.

ಹೌದು, ಕೊರೊನಾ ತರುವಾಯ ಈ ಗೇಮಿಂಗ್ ವಲಯದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿವೆ. ಅದರಲ್ಲೂ ಗೇಮಿಂಗ್‌ಗಾಗಿಯೇ ಡಿವೈಸ್‌ಗಳಿಗೆ ಉಪಕರಣಗಳು ಸಹ ಲಭ್ಯ ಇವೆ. ಇದರ ನಡುವೆ ವ್ಯಾಲರಂಟ್ ಮೊಬೈಲ್, ಕಾಲ್ ಆಫ್ ಡ್ಯೂಟಿ: ವಾರ್‌ಝೋನ್ ಮೊಬೈಲ್, ಅಸ್ಸಾಸಿನ್ಸ್ ಕ್ರೀಡ್ ಜೇಡ್, ರೇನ್ಬೋ ಸಿಕ್ಸ್ ಸೀಜ್ ಮೊಬೈಲ್ ಹಾಗೂ ಬ್ಯಾಟಲ್‌ಫೀಲ್ಡ್ ಮೊಬೈಲ್ ಗೇಮ್‌ಗಳನ್ನು ನೀವು ಮುಂದಿನ ವರ್ಷದಿಂದ ಮೊಬೈಲ್‌ನಲ್ಲಿಯೇ ಆಡಬಹುದಾಗಿದೆ. ಹಾಗಿದ್ರೆ ಅವುಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ವ್ಯಾಲರಂಟ್ ಮೊಬೈಲ್
ವ್ಯಾಲರಂಟ್ ಗೇಮ್ ಸದ್ಯಕ್ಕೆ ಪಿಸಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಹಾಗೆಯೇ ಉನ್ನತ ಎಫ್‌ಪಿಎಸ್ ಆಟಗಳಲ್ಲಿ ಒಂದನ್ನಾಗಿ ಮಾಡುವ ಉದ್ದೇಶದಿಂದ ರಾಯಿಟ್ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿಯೇ ಆಂಡ್ರಾಯ್ಡ್ ಮತ್ತು ಐಒಎಸ್‌ನ ಫೋನ್‌ಗಳಿಗೆ ಇದನ್ನು ಶೀಘ್ರದಲ್ಲಿಯೇ ಪರಿಚಯಿಸಲಾಗುತ್ತಿದೆ. ಆದರೆ ಈ ಗೇಮ್ ಬಿಡುಗಡೆಯ ದಿನಾಂಕ ನಿಖರವಾಗಿ ತಿಳಿದಿಲ್ಲ.

ಕಾಲ್ ಆಫ್ ಡ್ಯೂಟಿ: ವಾರ್‌ಝೋನ್ ಮೊಬೈಲ್
ಕಾಲ್ ಆಫ್ ಡ್ಯೂಟಿಯು ವಾರ್‌ಝೋನ್ ಅನ್ನು ಸಹ ಹೊಸ ವರ್ಷದಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಡಬಹುದಾಗಿದೆ. ಈ ಗೇಮ್‌ನಲ್ಲಿ ವಿಶೇಷ ಪ್ರಪಂಚ ಹಾಗೂ ಶಸ್ತ್ರಾಸ್ತ್ರಗಳು ಆಕರ್ಷಕವಾಗಿವೆ. ಒಂದು ಪಂದ್ಯದಲ್ಲಿ 120 ಆಟಗಾರರನ್ನು ಹೊಂದಿರುವ ಬ್ಯಾಟಲ್ ರಾಯಲ್ ಗೇಮ್ ಆಗಿದ್ದು, ಡಾಮಿನೇಷನ್, ಟೀಮ್ ಡೆತ್‌ಮ್ಯಾಚ್ ಮತ್ತು ಇತರ ರೀತಿಯ ಮೋಡ್‌ಗಳನ್ನು ಹೊಂದಿದೆ. ಈ ಗೇಮ್ ಮುಂಗಡ ನೋಂದಣಿಗೆ ಮುಕ್ತವಾಗಿದ್ದು, ಮುಂದಿನ ವರ್ಷದ ಆರಂಭದಿಂದ ನೀವು ಆಡಬಹುದು. ಹೆಚ್ಚುವರಿಯಾಗಿ, ಗೇಮರುಗಳಿಗಾಗಿ ಆನ್‌ಲೈನ್‌ನಲ್ಲಿ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಹೊಸ ಸಾಮಾಜಿಕ ಫೀಚರ್ಸ್‌ವೊಂದನ್ನು ನಿರೀಕ್ಷಿಸಬಹುದು.

ಅಸ್ಸಾಸಿನ್ಸ್ ಕ್ರೀಡ್ ಜೇಡ್
ಯೂಬಿಸಾಫ್ಟ್ ನ ಅಸ್ಸಾಸಿನ್ಸ್ ಕ್ರೀಡ್ ಜೇಡ್ ಗೇಮ್ ಸಾಂಪ್ರದಾಯಿಕ ಯುದ್ಧಗಳನ್ನು ಆಡಬಹುದಾದ ಆಯ್ಕೆ ಪಡೆದುಕೊಂಡಿರಲಿದೆ ಎನ್ನಲಾಗಿದೆಯಾದರೂ ಇದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇನ್ನು ಈ ಗೇಮ್ ಜೇಡ್ ಎಂಬ ಸಂಕೇತನಾಮವನ್ನು ಹೊಂದಿದ್ದು, ಈ ಆಟವನ್ನು 215 BC ಯಲ್ಲಿ ನಡೆಯುವ ಘಟನೆಗೆ ಹೊಂದಿಸಲಾಗಿದೆ, ಚೀನಾದ ಕ್ವಿನ್ ರಾಜವಂಶದ ಅವಧಿಯಲ್ಲಿ ಚೀನಾದ ಮಹಾ ಗೋಡೆಯಂತಹ ಸಾಂಪ್ರದಾಯಿಕ ಸ್ಥಳಗಳನ್ನು ಇದರಲ್ಲಿ ನೋಡಬಹುದು. ಆಟಗಾರರು ಸಂಪೂರ್ಣವಾಗಿ ಕಸ್ಟಮೈಸ್ ಮಾಡಬಹುದಾದ ನಾಯಕನನ್ನು ಕಂಟ್ರೋಲ್ ಮಾಡಬಹುದಾಗಿದೆ.

ರೇನ್ಬೋ ಸಿಕ್ಸ್ ಸೀಜ್ ಮೊಬೈಲ್
ರೇನ್ಬೋ ಸಿಕ್ಸ್ ಸೀಜ್ ಮೊಬೈಲ್ ಗೇಮ್ ಅನ್ನು ಯೂಬಿಸಾಫ್ಟ್ ರೂಪಿಸಿದ್ದು, ಪಿಸಿ ಹಾಗೂ ಕನ್ಸೋಲ್ ಆವೃತ್ತಿಯ ಅನುಭವವನ್ನೇ ಮೊಬೈಲ್‌ನಲ್ಲಿಯೂ ನೀಡಲಿದೆ. ಅದರಂತೆ ಪೂರ್ವ ನೋಂದಣಿ ಆರಂಭವಾಗಿದ್ದು, 2023 ಆರಂಭದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.

ಬ್ಯಾಟಲ್‌ಫೀಲ್ಡ್ ಮೊಬೈಲ್
ಬ್ಯಾಟಲ್‌ಫೀಲ್ಡ್ ಮೊಬೈಲ್ ಗೇಮ್ ರಶ್, ಡೆತ್‌ಮ್ಯಾಚ್ ಹಾಗೂ ಇತರ ಮೋಡ್‌ಗಳ ಆಯ್ಕೆ ಹೊಂದಿದ್ದು, ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ ಎನ್ನಲಾಗಿದೆ. 2023 ರಲ್ಲಿ ಲಾಂಚ್ ಆಗಲಿದ್ದು, ಮುಂಗಡ ನೋಂದಣಿ ಸಹ ಆರಂಭವಾಗಿದೆ. ಇದರೊಂದಿಗೆ ಅಂಡರ್‌ವರ್ಡ್ ಗ್ಯಾಂಗ್ ವಾರ್ಸ್, ಡ್ರ್ಯಾಗನ್ ಸೀಜ್ ಕಿಂಗ್ಡಮ್ ಕಾಂಕ್ಯೂಸ್ಟ್ಸ ಸೇರಿದಂತೆ ಇನ್ನಿತರೆ ಗೇಮ್‌ಗಳು ಸಹ ಭಾರತೀಯ ಗೇಮರ್‌ಗಳಿಗೆ ಇಷ್ಟವಾಗದೆ ಇರದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470