ನಿಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ಟಾಪ್ 5 ಟೆಕ್ನಾಲಜಿ

|

ಟೆಕ್ನಾಲಜಿ ಎಂಬುದು ದಿನದಿನವೂ ಹೆಚ್ಚು ಬಳಕೆಗೆ ಬರುವ ಅದರಲ್ಲೂ ಹೊಸತನ್ನು ಪರಿಚಯಿಸುವ ವಿಷಯವಾಗಿದೆ. ಅದರಂತೆ ಯಾವುದೇ ಹೊಸ ತಂತ್ರಜ್ಙಾನ ಟೆಕ್ ವಲಯಕ್ಕೆ ಪರಿಚಯಗೊಂಡ ಮೇಲೆ ಅದು ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಉಪಯೋಗಕ್ಕೆ ಬರುತ್ತದೆ. ಉದಾಹರಣೆಗೆ ಕೆಲವು ಸ್ಮಾರ್ಟ್‌‌ ಗ್ಯಾಜೆಟ್‌ಗಳು ಅದರಲ್ಲೂ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್‌, ಲ್ಯಾಪ್‌ಟಾಪ್‌, ಇಂಟರ್ನೆಟ್‌, ಬ್ಲೂಟೂತ್‌ ಸೇರಿದಂತೆ ಈ ರೀತಿಯ ಎಲ್ಲಾ ವ್ಯವಸ್ಥೆಯಿಂದ ನಾವು ಸೌಕರ್ಯ ಪಡೆದುಕೊಳ್ಳುತ್ತಿದ್ದೇವೆ. ಅದಕ್ಕೂ ಮಿಗಿಲಾಗಿ ನಿಮ್ಮ ಜೀವನ ಶೈಲಿಯನ್ನು ಇನ್ನಷ್ಟು ಸ್ಟೈಲಿಶ್‌ ಮಾಡುವ ಗ್ಯಾಜೆಟ್‌ಗಳ ಬಗ್ಗೆ ನಿಮಗೇನಾದರೂ ಅರಿವಿದೆಯಾ.?

ಆಧುನಿಕ ತಂತ್ರಜ್ಞಾನ

ಹೌದು, ಆಧುನಿಕ ತಂತ್ರಜ್ಞಾನದ ಬೆಳವಣಿಗೆ ನಮ್ಮ ಜೀವನವನ್ನು ಸುಲಭಗೊಳಿಸುತ್ತಾ ಬರುತ್ತಿವೆ. ಅದರಂತೆ ನಮ್ಮ ಜೀವನ` ಮಟ್ಟವು ಸಹ ಸುಧಾರಿಸುತ್ತಾ ಬರುತ್ತಿರುವುದು ಸಾಮಾನ್ಯ ವಿಷಯ. ಹಾಗೆಯೇ ಕೆಲವು ಕಂಪೆನಿಗಳು ಸಾಕಷ್ಟು ರೀತಿಯ ಗ್ಯಾಜೆಟ್‌ಗಳು ಹಾಗೂ ಸೇವೆಗಳನ್ನು ನೀಡುತ್ತಾ ಬರುತ್ತಿದ್ದು, ಅದರಲ್ಲಿ ಕೆಲವು ಟೆಕ್ನಾಲಜಿ ಸಂಬಂಧಿತ ವಿಷಯಗಳು ಹಲವರ ಜೀವನವನ್ನೇ ಬದಲಾಯಿಸಬಲ್ಲ ಹಾಗೂ ಅವರಿಗೆ ಹೊಸ ಲೋಕವನ್ನೇ ಪರಿಚಯಿಸುವ ಶಕ್ತಿ ಪಡಿದಿವೆ. ಹಾಗಿದ್ದರೆ ಆ ಟೆಕ್ನಾಲಜಿ ಯಾವುವು?, ಏನೆಲ್ಲಾ ಫೀಚರ್ಸ್‌ ಪಡೆದಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ವೈ-ಫೈ

ವೈ-ಫೈ

ವೈ-ಫೈ ಎಂಬುದು ಇಂದಿಗೆ ಒಂದು ಸಾಮಾನ್ಯ ವಿಷಯವಾಗಿದೆ. ಆದರೆ, ಈ ವಾಯರ್‌ಲೆಸ್‌ ಸಂಪರ್ಕದ ಪ್ರಾರಂಭವು ನಮ್ಮ ಜೀವನದಲ್ಲಿ ಹಾಗೂ ಉದ್ಯಮಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಈ ಹಿಂದೆ ವಾಯರ್‌ಲೆಸ್‌ ಕಲ್ಪನೆಯೇ ಗೊತ್ತಿರಲಿಲ್ಲ. ಆದರೆ, ಇಂದು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಅನ್ನು ಬಳಸಲು ವಾಯರ್‌ ಬೇಕಿಲ್ಲ, ಇಂಟರ್ನೆಟ್ ಅನ್ನು ಸರ್ಫಿಂಗ್ ಮಾಡಲು ನೆಟ್ವರ್ಕ್ ಕೇಬಲ್‌ ಅವಶ್ಯಕತೆ ಇಲ್ಲ. ಇದು ನಿಸರ್ಗಕ್ಕೂ ಒಳ್ಳೆಯ ಕೊಡುಗೆಯಾಗಿದ್ದು, ಬಳಕೆದಾರರಿಗೂ ಅಗತ್ಯವಾದ ಸೇವೆಯಾಗಿ ಮಾರ್ಪಟ್ಟಿದೆ.

ವಿಪಿಎನ್‌

ವಿಪಿಎನ್‌

ವಿಪಿಎನ್‌ ಎಂಬುದು ಇಂದು ನಮ್ಮ ತಂತ್ರಜ್ಙಾನ ವಲಯಕ್ಕೆ ಒಂದು ಬಹುದೊಡ್ಡ ಕೊಡುಗೆಯೂ ಹೌದು. ನಾವು ಇಂಟರ್ನೆಟ್ ಅನ್ನು ಯಾಕೆ?, ಹೇಗೆ ಬಳಸುತ್ತೇವೆ ಎಂಬ ವಿಷಯವನ್ನೇ ವಿಪಿಎನ್‌ ಗಮನಾರ್ಹವಾಗಿ ಬದಲಾಯಿಸಿದೆ. ಅದರಲ್ಲೂ ಡೇಟಾ ಉಲ್ಲಂಘನೆಯ ಘಟನೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಈ ಸೇವೆ ಅಗತ್ಯತೆ ಹೆಚ್ಚಿದೆ. ಇದಿಷ್ಟೇ ಅಲ್ಲದೆ, ವಿಪಿಎನ್‌ಗಳು ರಿಮೋಟ್ ವರ್ಕಿಂಗ್ ಸೆಟಪ್‌ಗಳನ್ನು ಸುರಕ್ಷಿತಗೊಳಿಸಲು ಸಹಾಯ ಮಾಡಲಿದ್ದು, ನಿಮ್ಮ ಡೇಟಾವನ್ನು ಹ್ಯಾಕರ್‌ಗಳಿಂದ ರಕ್ಷಿಸಲು ಯಾವಾಗಲು ಮುಂದಾಗಿರುತ್ತದೆ.

ಫೇಸಿಯಾಲ್ ರೆಕಗ್ನಿಷನ್

ಫೇಸಿಯಾಲ್ ರೆಕಗ್ನಿಷನ್

ಫೇಸಿಯಾಲ್ ರೆಕಗ್ನಿಷನ್ ಎಂಬ ಫೀಚರ್ಸ್‌ ಈಗಂತೂ ಅನುಕ್ಷಣವೂ ಬಳಕೆಯಾಗುತ್ತಿದೆ. ಇದು ನಿಮಗೆ ಸಾಮಾನ್ಯವಾಗಿ ತಿಳಿದ ವಿಷಯವೂ ಹೌದು. ಇದೊಂದು ಗುರುತಿನ ಪರಿಶೀಲನೆಗಾಗಿ ಬಳಸಲಾಗುವ ಒಂದು ರೀತಿಯ ಬಯೋಮೆಟ್ರಿಕ್ ದೃಢೀಕರಣ ಫೀಚರ್ಸ್ ಆಗಿದ್ದು, ಇದರಿಂದಾಗಿ ನಿಮ್ಮ ಡಿವೈಸ್‌ಗಳನ್ನು ಅನ್‌ಲಾಕ್‌ ಮಾಡಬಹುದು, ಪೊಲೀಸರು ಅಪರಾಧಿಗಳನ್ನು ಪತ್ತೆ ಮಾಡಬಹುದು ಹಾಗೆಯೇ ನೀವು ಸರ್ಕಾರದ ಸೇವೆಯನ್ನು ಈ ಮೂಲಕ ಪಡೆದುಕೊಳ್ಳಬಹುದು. ಇದೆಲ್ಲಕ್ಕಿಂತೂ ಮಿಗಿಲಾಗಿ ಈ ಫೀಚರ್ಸ್‌ ಮೂಲಕ ಕಾಣೆಯಾದವರನ್ನು ಪತ್ತೆ ಮಾಡಬಹುದು.

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ಸಾಮಾನ್ಯವಾಗಿ ಸಣ್ಣ ಮತ್ತು ದೊಡ್ಡ ಕಂಪೆನಿಗಳು ವರ್ಚುವಲ್ ರಿಯಾಲಿಟಿನಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡಿವೆ. ಈಗ ವರ್ಚುವಲ್ ರಿಯಾಲಿಟಿ ಉದ್ಯಮವು $18 ಶತಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿದೆ. ಈ ತಂತ್ರಜ್ಞಾನವನ್ನು ಹೆಚ್ಚಾಗಿ ವಿಡಿಯೋ ಗೇಮ್‌ ಉದ್ಯಮದಲ್ಲಿ ಬಳಕೆ ಮಾಡಲಾಗುತ್ತದೆ. ಆದಾಗ್ಯೂ ಈ ತಂತ್ರಜ್ಞಾನವು ಇತರ ಕ್ಷೇತ್ರಗಳಲ್ಲಿಯೂ ಸಹ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ. ಉದಾಹರಣೆಗೆ ಹೇಳುವುದಾರೆ ಶಸ್ತ್ರಚಿಕಿತ್ಸಕರು ಮತ್ತು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಆರೋಗ್ಯ ಕ್ಷೇತ್ರದಲ್ಲಿ ಈ ವರ್ಚುವಲ್ ರಿಯಾಲಿಟಿ ತಂತ್ರಜ್ಙಾನ ವನ್ನು ಬಳಕೆ ಮಾಡುತ್ತಾರೆ.

ವಾಯ್ಸ್ ಅಸಿಸ್ಟೆಂಟ್‌

ವಾಯ್ಸ್ ಅಸಿಸ್ಟೆಂಟ್‌

ಈಗಂತೂ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಈ ಫೀಚರ್ಸ್‌ ಇದ್ದೇ ಇರುತ್ತದೆ. ಇದರಿಂದ ಬಳಕೆದಾರರು ಏನೇ ಮಾಹಿತಿ ಬೇಕೆಂದರೂ ಅಥವಾ ಇಂಟರ್ನೆಟ್‌ ಆಧಾರಿತ ಸಲಹೆಗಾಗಿ ಹಾಗೂ ಮನೆಯಲ್ಲಿನ ಸ್ಮಾರ್ಟ್ ಡಿವೈಸ್‌ಗಳನ್ನು ನಿಯಂತ್ರಣ ಮಾಡಲು ಇದನ್ನು ಬಳಕೆ ಮಾಡುತ್ತಾರೆ. ಗೂಗಲ್‌ನ ವಾಯ್ಸ್‌ ಅಸಿಸ್ಟೆಂಟ್‌, ಅಲೆಕ್ಸಾ ಹಾಗೂ ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಇಂದು ಹೆಚ್ಚು ಬಳಕೆಯಲ್ಲಿರುವ ತಂತ್ರಜ್ಞಾನವಾಗಿದೆ. ಹಾಗೆಯೇ 2019 ರ ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ ವಿವಿಧ ಸಾಧನಗಳಲ್ಲಿ 3.25 ಶತಕೋಟಿಗೂ ಹೆಚ್ಚು ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ ಬಳಕೆಯಾಗುತ್ತಿದೆಯಂತೆ. ಹಾಗೆಯೇ 2023 ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
Top 5 Technologies That Make Your Everyday Life Easier

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X