ಗೂಗಲ್ ಅಸಿಸ್ಟಂಟ್ ಫೀಚರ್ ಈ ಕೆಲಸಗಳನ್ನು ಮಾಡುತ್ತಾ?

|

ಟೆಕ್ ದೊಡ್ಡಣ್ಣ ಗೂಗಲ್ ಹಲವು ಮಹತ್ವದ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಬಳಕೆದಾರರ ಕೆಲಸಗಳನ್ನು ಸರಳಗೊಳಿಸಿದೆ. ಅವುಗಳಲ್ಲಿ ಗೂಗಲ್ ಅಸಿಸ್ಟಂಟ್ ಸೌಲಭ್ಯ ಬಳಕೆದಾರರಿಗೆ ಅಧಿಕ ಅನುಕೂಲ ಒದಗಿಸಿದ್ದು, ಟೈಪ್ ಮಾಡದೇ ರ್ಧವನಿಯ ಮೂಲಕ ಸರ್ಚ್‌ ಕೆಲಸಗಳನ್ನು ಮಾಡಿಕೊಡುತ್ತದೆ. ಈಗಾಗಲೇ ಅನೇಕ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಅಸಿಸ್ಟಂಟ್‌ ಸೌಲಭ್ಯಗಳನ್ನು ಬಳಸುತ್ತಿದ್ದಾರೆ. ಆದರೆ ಗೂಗಲ್ ಅಸಿಸ್ಟಂಟ್ ಸಪೋರ್ಟ್‌ ಮಾಡುವ ಕೆಲವು ಕಾರ್ಯಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.

ಗೂಗಲ್ ಅಸಿಸ್ಟಂಟ್

ಹೌದು, ಗೂಗಲ್ ಅಸಿಸ್ಟಂಟ್ ಫೀಚರ್ಸ್‌ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಾಕಷ್ಟು ಅನುಕೂಲ ಒದಗಿಸಿದೆ. ಬಳಕೆದಾರರು ಯಾವುದೇ ಮಾಹಿತಿ ಸರ್ಚ್ ಮಾಡಲು, ಕರೆ ಮಾಡಲು, ಸಾಂಗ್ಸ್‌ ಪ್ಲೇ ಮಾಡಲು ಗೂಗಲ್ ಅಸಿಸ್ಟಂಟ್ ಬಳಸುತ್ತಾರೆ. ಆದರೆ ಇಂಥ ಕಾರ್ಯಗಳನ್ನು ಹೊರತುಪಡಿಸಿ ಗೂಗಲ್ ಅಸಿಸ್ಟಂಟ್ ಇನ್ನು ಕುತೂಹಲಕರ ಕಾರ್ಯಗಳನ್ನು ಸಹ ನಿಭಾಯಿಸುತ್ತದೆ. ಆ ಕಾರ್ಯಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಟ್ರಾನ್ಸಲೇಟ್ - ಭಾಷಾಂತರ ಕಾರ್ಯ

ಟ್ರಾನ್ಸಲೇಟ್ - ಭಾಷಾಂತರ ಕಾರ್ಯ

ಬಳಕೆದಾರರು ಗೂಗಲ್ ಅಸಿಸ್ಟಂಟ್ ನಿಂದ ಸುಲಭವಾಗಿ ಭಾಷಾಂತರ ಕಾರ್ಯವನ್ನು ಮಾಡಬಹುದಾಗಿದೆ. ಗೂಗಲ್ ಅಸಿಸ್ಟಂಟ್ ಮೂಲಕ ಬಳಕೆದಾರರು ತಮ್ಮ ಭಾಷೆಯಲ್ಲಿ ವ್ಯಾಕ್ಯವನ್ನು ಹೇಳಿ ಆ ವ್ಯಾಕವನ್ನು ಅವರು ಬೇಕಾದ ಭಾಷಾಗೆ ಭಾಷಾಂತರ ಮಾಡಿಕೊಳ್ಳಬಹುದಾಗಿದೆ. ಕೇವಲ ವಾಯಿಸ್‌ ಮೂಲಕವೇ ಭಾಷಾಂತರ ಕಾರ್ಯ ಮಾಡಬಹುದು.

ಟ್ರಾಫಿಕ್ ಮಾಹಿತಿ

ಟ್ರಾಫಿಕ್ ಮಾಹಿತಿ

ಗೂಗಲ್ ಅಸಿಸ್ಟಂಟ್ ಫೀಚರ್‌ನಿಂದ ಬಳಕೆದಾರರು ಸುಲಭವಾಗಿ ಟ್ರಾಫಿಕ್ ಮಾಹಿತಿಯನ್ನು ಪಡೆಯಬಹುದಾಗಿದೆ. ನಿಮ್ಮ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಆ ಸ್ಥಳಕ್ಕೆ ತಲುಪಲು ಸಮಯ ಎಷ್ಟಾಗುತ್ತದೆ ಎಂದು ತಿಳಿಯಬಹುದು. ನೀವು ಟ್ರಾಫಿಕ್ ಮಾಹಿತಿಯನ್ನು ಅಸಿಸ್ಟಂಟ್‌ ಮೂಲಕ ಕೇಳಿದಾಗ ಗೂಗಲ್ ಅಸಿಸ್ಟಂಟ್ ಧ್ವನಿ ಮೂಲಕವೇ ಬಳಕೆದಾರರಿಗೆ ಟ್ರಾಫಿಕ್ ಮಾಹಿತಿ ಒದಗಿಸುತ್ತದೆ.

ನ್ಯೂಸ್ ಓದುತ್ತೆ

ನ್ಯೂಸ್ ಓದುತ್ತೆ

ಗೂಗಲ್ ಅಸಿಸ್ಟಂಟ್ ಸೌಲಭ್ಯವು ನ್ಯೂಸ್‌ ರೀಡ್ ಮಾಡುವ ಅನುಕೂಲ ಒದಗಿಸುತ್ತದೆ. ಬಳಕೆದಾರರು ಗೂಗಲ್ ಅಸಿಸ್ಟಂಟ್ ಮೂಲಕ 'ಪ್ಲೇ ದಿ ನ್ಯೂಸ್' ಅಂತಾ ಹೇಳಿದರೇ ಗೂಗಲ್ ಅಸಿಸ್ಟಂಟ್ ನಿಮ್ಮ ಆದ್ಯತೆಯ ಆಯ್ಕೆಯ ಸೋರ್ಸ್ ಆಧಾರದ ಮೇಲೆ ನ್ಯೂಸ್‌ ರೀಡಿಂಗ್ ಆಗುತ್ತದೆ. ಬಳಕೆದಾರರು pause, ಸ್ಟಾಪ್ ಮತ್ತು ಪ್ಲೇ ಆಯ್ಕೆಗಳನ್ನು ಒದಗಿಸಿದೆ.

ಲೆಕ್ಕ ಮಾಡುತ್ತೆ

ಲೆಕ್ಕ ಮಾಡುತ್ತೆ

ಗೂಗಲ್ ಅಸಿಸ್ಟಂಟ್ ಅಳತೆ ಮತ್ತು ಲೆಕ್ಕದ ಮಾಹಿತಿ ಸೌಲಭ್ಯವನ್ನು ಪಡೆದಿದೆ. ಬಳಕೆದಾರರು ಕರೆನ್ಸಿ, ಉದ್ದ, ಅಗಲ, ಕಿಲೋ, ವಿಸ್ತೀರ್ಣ, ಇಂತ ಯಾವುದೇ ವಿಧದ ಅಳತೆಗಳನ್ನು ಕನ್ವರ್ಟ್ ಮಾಡಬಹುದು. ಲೆಕ್ಕ ಗಳನ್ನು ಮಾಡುವ ಗೂಗಲ್ ಅಸಿಸ್ಟಂಟ್ ಬೇಸಿಕ್ ಕ್ಯಾಲ್ಕುಲೇಟರ್ ತರಹ ಕೆಲಸ ಮಾಡುತ್ತದೆ.

ಶಾಪಿಂಗ್ ಲಿಸ್ಟ್ ಮತ್ತು ರಿಮೈಂಡರ್

ಶಾಪಿಂಗ್ ಲಿಸ್ಟ್ ಮತ್ತು ರಿಮೈಂಡರ್

ಗೂಗಲ್ ಅಸಿಸ್ಟಂಟ್ ಫೀಚರ್ ಮೂಲಕ ಶಾಪಿಂಗ್ ಲಿಸ್ಟ್‌ ಸಿದ್ಧಪಡಿಸಬಹುದಾದ ಆಯ್ಕೆಯನ್ನು ನೀಡಿದೆ. ಯಾವುದೇ ವಸ್ತುವನ್ನು ಲಿಸ್ಟ್‌ಗೆ ಸೇರಿಸಬಹುದು ಹಾಗೂ ಯಾವೆಲ್ಲಾ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಕೇಳಿದರೇ, ಗೂಗಲ್ ಅಸಿಸ್ಟಂಟ್ ಮೂಲಕ ವಾಯಿಸ್ ಮಾಹಿತಿ ಲಭ್ಯವಾಗಲಿದೆ. ಈ ಸೌಲಭ್ಯ ಬಳಸುವಾಗ ಗೂಗಲ್ ಹೋಮ್ ಆಪ್ ಸಕ್ರಿಯವಾಗಿರಲಿ.

Most Read Articles
Best Mobiles in India

English summary
Here are some of the features that you can use daily to make your life simpler.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X