ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ನೀವಿನ್ನೂ ಬಳಕೆ ಮಾಡಿಲ್ಲವೇ?

|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಇನ್‌ಸ್ಟಂಟ್‌ ಮೆಸೇಜಿಂಗ್‌ ಆಪ್‌ ಆಗಿ ಗುರುತಿಸಿಕೊಂಡಿದೆ. ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿತ್ತಾ ಮುನ್ನಡೆದಿದೆ. ಅದೇ ರೀತಿ ವಾಟ್ಸಾಪ್‌ ಸಂಸ್ಥೆಯು ಪ್ರಸಕ್ತ ವರ್ಷ ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದ್ದು, ಆ ಫೀಚರ್ಸ್‌ಗಳನ್ನು ಈಗಾಗಲೇ ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಆ ಫೀಚರ್ಸ್‌ ನೀವು ಬಳಕೆ ಮಾಡಿದ್ದಿರಾ?

ಮೆಸೆಜಿಂಗ್

ಹೌದು, ಜನಪ್ರಿಯ ಮೆಸೆಜಿಂಗ್ ಆಪ್‌ ಆಗಿರುವ ವಾಟ್ಸಾಪ್‌ 2022 ರಲ್ಲಿಯೂ ಕೂಡ ಹಲವು ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಬಳಕೆದಾರರಿಗೆ ಮತ್ತಷ್ಟು ಉಪಯುಕ್ತ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ವಾಟ್ಸಾಪ್‌ ಕೆಲವು ಬಹು ಉಪಯುಕ್ತ ಫೀಚರ್ಸ್ ಪರಿಚಯಿಸಿದೆ. ವಾಟ್ಸಾಪ್‌ ಸೇರಿರುವ ನೂತನ ಫೀಚರ್ಸ್‌ಗಳು ಆಕರ್ಷಕ ಎನಿಸಿದ್ದು, ಆ ಫೀಚರ್ಸ್‌ಗಳನ್ನು ನೀವಿನ್ನೂ ಬಳಕೆ ಮಾಡಿಲ್ಲವೇ?...ಹಾಗಾದರೆ ವಾಟ್ಸಾಪ್‌ನಲ್ಲಿ ಈ ವರ್ಷ ಸೇರ್ಪಡೆ ಆಗಿರುವ ಕೆಲವು ಪ್ರಮುಖ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ

ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ

ಬಳಕೆದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಫೀಚರ್‌ ಇದಾಗಿದ್ದು, ಬಹು ಉಪಯುಕ್ತ ಎನಿಸಿದೆ. ಅದುವೇ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ ಆಗಿದೆ. ಇದರ ಹೆಸರೇ ಸೂಚಿಸುವಂತೆ ಬಳಕೆದಾರರು ತಮ್ಮ ಆನ್‌ಲೈನ್‌ ಸ್ಟೇಟಸ್‌ ಅನ್ನು ಇತರಿಗೆ ಕಾಣಿಸದಂತೆ ಮರೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಅನೇಕರು ಆನ್‌ಲೈನ್ ಗ್ರೀನ್‌ ಸ್ಟೇಟಸ್‌ ಕಾಣಿಸಿದರೂ, ನಮಗೆ ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಲೆಕ್ಕಾಚಾರ ಮಾಡುತ್ತಾರೆ. ಈ ಆಯ್ಕೆಯಿಂದ ಬಳಕೆದಾರರು ಸ್ಟೇಟಸ್‌ ಹೈಡ್‌ ಮಾಡಬಹುದು.

ಮೆಸೆಜ್‌ ರಿಯಾಕ್ಷನ್‌

ಮೆಸೆಜ್‌ ರಿಯಾಕ್ಷನ್‌

ವಾಟ್ಸಾಪ್‌ ಮೆಸೇಜಿಂಗ್‌ ಆಪ್‌ ಈ ವರ್ಷ ಮೆಸೆಜ್‌ ರಿಯಾಕ್ಷನ್‌ ಆಯ್ಕೆ ಪರಿಚಯಿಸಿದೆ. ಈ ಆಯ್ಕೆಯಲ್ಲಿ ಮೆಸೆಜ್‌ ರಿಯಾಕ್ಷನ್‌ಗೆ ಎಮೋಜಿಗಳನ್ನು ಬಳಕೆ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಮೂಲಕ ನೀವು ಯಾವುದೇ ಟೆಕ್ಸ್ಟ್‌ ಮಾಡದೆ ಎಮೋಜಿ ಮೂಲಕವೇ ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಪ್ರತಿಕ್ರಿಯೆ ನೀಡಬಹುದು. ಇದು ಒಂದು ಮೋಜಿನ ಮಾರ್ಗವಾಗಿದ್ದು, ಇದ್ರಲ್ಲಿ ಎಲ್ಲ ಪ್ರಮುಖ ಎಮೋಜಿಗಳು ಬಳಕೆದಾರರಿಗೆ ಲಭ್ಯ ಇವೆ.

ಮೆಸೆಜ್‌ ಯೂವರ್‌ಸೆಲ್ಫ್

ಮೆಸೆಜ್‌ ಯೂವರ್‌ಸೆಲ್ಫ್

ಈ ಆಯ್ಕೆಯ ವಾಟ್ಸಾಪ್ 'ನಿಮಗೇ ಮೆಸೆಜ್‌ ಕಳುಹಿಸಲು' (Message Yourself) ಆಯ್ಕೆ ಪರಿಚಯಿಸಿದೆ. ಬಳಕೆದಾರರು ಸ್ವಂತ ಅವರ ಮೊಬೈಲ್ ನಂಬರ್‌ಗೆ ಅವರೇ ಮೆಸೆಜ್‌ ಕಳುಹಿಸುವುದು ಸಾಧ್ಯ, ಆದರೆ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಯಾವುದೇ ಮೀಸಲಾದ ಚಾಟ್ ವಿಂಡೋ ಲಭ್ಯವಿರಲಿಲ್ಲ. ಆದರೆ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಸ್ವಂತ ನಂಬರ್‌ನ ವಾಟ್ಸಾಪ್ ಚಾಟ್ ಅನ್ನು ತೆರೆದಾಗ, ಚಾಟ್ ಹೆಡ್‌ಲೈನ್‌ನಲ್ಲಿ ಮೆಸೆಜ್ ಯೂವರ್‌ಸೆಲ್ಫ್ (Message yourself) ಎಂದು ಕಾಣಿಸಲಿದೆ. ಇನ್ನು ವಾಟ್ಸಾಪ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿಯೂ ಮೆಸೆಜ್ ಯೂವರ್‌ಸೆಲ್ಫ್ ಹೆಸರಿನಿಂದ ಕಾಣಿಸಿಕೊಳ್ಳಲಿದೆ.

ಅವತಾರ ಆಯ್ಕೆ

ಅವತಾರ ಆಯ್ಕೆ

ವಾಟ್ಸಾಪ್‌ನಲ್ಲಿ ಇನ್ಮುಂದೆ ನೀವು ಡಿಜಿಟಲ್ ಅವತಾರ್‌ ಫೀಚರ್ಸ್‌ ಬಳಕೆ ಮಾಡಬಹುದಾಗಿದೆ. ವಿವಿಧ ಭಾವನೆಗಳು ಮತ್ತು ಕ್ರಿಯೆಗಳನ್ನು ತೋರಿಸುವ 36 ಕಸ್ಟಮ್ ಸ್ಟಿಕ್ಕರ್‌ಗಳಲ್ಲಿ ಬಳಕೆದಾರರು ಒಂದನ್ನು ಆಯ್ಕೆ ಮಾಡಬಹುದಾಗಿದೆ. ಈ ಡಿಜಿಟಲ್ ಅವತಾರದಲ್ಲಿ ಕೇಶವಿನ್ಯಾಸ, ಮುಖದ ಗುಣಲಕ್ಷಣ ಮತ್ತು ವಸ್ತ್ರಗಳನ್ನು ಕಸ್ಟಮೈಸ್‌ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್‌ ಮೆಸೆಜ್‌ಗಳ ಜೊತೆಗೆ ಫೋಟೋ, ವಿಡಿಯೋ ಹಾಗೂ ಫೈಲ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಅದರಂತೆ ಅವತಾರ್‌ ಅನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಬಳಕೆದಾರರು ಅವತಾರ್‌ ಅನ್ನು ಅವರಿಷ್ಟದ ಹಾಗೆ ರೂಪಿಸಿಕೊಳ್ಳಬಹುದಾಗಿದೆ.

Best Mobiles in India

English summary
Top 5 WhatsApp features launched in 2022: Everything you need to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X