ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊ ಎಡಿಟ್‌ ಮಾಡಲು ಈ ಅಪ್ಲಿಕೇಶನ್‌ಗಳು ಸೂಕ್ತ!

|

ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸೆರೆಹಿಡಿದ ವೀಡಿಯೋಗಳನ್ನ ವಾಟ್ಸಾಪ್‌ ಸ್ಟೇಟಸ್‌, ಇಲ್ಲವೇ ನಿಮ್ಮ ಸ್ವಂತ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್‌ ಮಾಡಲು ಬಯಸುವುದು ಸಾಮಾನ್ಯ. ನೀವು ಸೆರೆ ಹಿಡಿದ ವಿಡಿಯೋವನ್ನು ಹಾಗೆಯೇ ಶೇರ್‌ ಮಾಡುವುದಕ್ಕಿಂತ ರೆಕಾರ್ಡ್‌ ಮಾಡಿದ ವಿಡಿಯೋಗಳನ್ನು ಎಡಿಟಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಇನ್ನಷ್ಟು ಆಕರ್ಷಕ ಟಚ್‌ ಕೊಡಬಹುದು. ಇದಕ್ಕಾಗಿಯೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವರು ವಿಡಿಯೋ ಎಡಿಟಿಂಗ್‌ ಅಪ್ಲಿಕೇಶನ್‌ಗಳು ಲಭ್ಯವಿದೆ.

ಸ್ಮಾರ್ಟ್‌ಫೋನ್‌

ಹೌದು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿದ ವೀಡಿಯೋಗಳಿಗೆ ಉತ್ತಮ ರೂಪ ನೀಡಲು ವಿಡಿಯೋ ಅಪ್ಲಿಕೇಶನ್‌ಗಳು ಸಹಾಯಕವಾಗಿದೆ. ಅದರಲ್ಲೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ವೀಡಿಯೊಗಳನ್ನು ಎಡಿಟ್‌ ಮಾಡಲು ಸಾಕಷ್ಟು ಅಪ್ಲಿಕೇಶನ್‌ಗಳಿವೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ವಿಡಿಯೋ ಎಡಿಟ್‌ ಮಾಡಲು ಬಳಸಬಹುದಾದ ಜನಪ್ರಿಯ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೈನ್‌ಮಾಸ್ಟರ್ ಮೊಬೈಲ್ ವೀಡಿಯೊ ಎಡಿಟರ್‌

ಕೈನ್‌ಮಾಸ್ಟರ್ ಮೊಬೈಲ್ ವೀಡಿಯೊ ಎಡಿಟರ್‌

ಆಂಡ್ರಾಯ್ಡ್, ಕ್ರೋಮ್ ಓಎಸ್, ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಲಭ್ಯವಿರುವ ಅತ್ಯಂತ ಜನಪ್ರಿಯ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ಗಳಲ್ಲಿ ಕೈನ್‌ಮಾಸ್ಟರ್ ಒಂದು. ವೀಡಿಯೊಗಳನ್ನು ನೀವು ಯುಟ್ಯೂಬ್‌ ಇಲ್ಲವೇ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲು ಬಯಸುವುದರೆ ಇದರಲ್ಲಿ ಅತ್ಯುತ್ತಮ ಫೀಚರ್ಸ್‌ ಮೂಲಕ ವೀಡಿಯೊಗಳನ್ನು ಸುಲಭವಾಗಿ ಎಡಿಟ್‌ ಮಾಡಬಹುದಾಗಿದೆ. ಆದರೆ ‘ಕೈನ್‌ಮಾಸ್ಟರ್ ವಾಟರ್‌ಮಾರ್ಕ್' ಇಲ್ಲದೆ ಎಲ್ಲಾ ಫೀಚರ್ಸ್‌ಗಳನ್ನು ಪಡೆಯಲು ಮತ್ತು ವೀಡಿಯೊಗಳನ್ನು ಎಕ್ಸ್‌ಫೋರ್ಟ್‌ ಮಾಡಲು ನೀವು ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪವರ್‌ಡೈರೆಕ್ಟರ್ - ವೀಡಿಯೊ ಎಡಿಟರ್‌, ವೀಡಿಯೊ ಕ್ರಿಯೆಟರ್‌

ಪವರ್‌ಡೈರೆಕ್ಟರ್ - ವೀಡಿಯೊ ಎಡಿಟರ್‌, ವೀಡಿಯೊ ಕ್ರಿಯೆಟರ್‌

ಪವರ್‌ಡೈರೆಕ್ಟರ್ ಪ್ರಸಿದ್ಧ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ ಆಗಿದ್ದು, ಇದು 4 ಕೆ ವೀಡಿಯೊಗಳನ್ನು ಎಡಿಟ್‌ ಮಾಡಲು ಮತ್ತು ಅವುಗಳನ್ನು ರಫ್ತು ಮಾಡಲು ನಿಮಗೆ ಅನುಮತಿಸುತ್ತದೆ. ಕ್ರೋಮಾ ಕೀ ಆಯ್ಕೆಯೊಂದಿಗೆ ನೀವು ಹಲವಾರು ವೀಡಿಯೊ ಎಡಿಟ್‌ ಫೀಚರ್ಸ್‌ಗಳನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಇನ್‌ಶಾಟ್‌ ವೀಡಿಯೊ ಎಡಿಟರ್‌ ಆಂಡ್‌ ಮೇಕರ್‌

ಇನ್‌ಶಾಟ್‌ ವೀಡಿಯೊ ಎಡಿಟರ್‌ ಆಂಡ್‌ ಮೇಕರ್‌

ಇನ್‌ಶಾಟ್ ಜನಪ್ರಿಯ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ ಆಗಿದ್ದು, ಇದು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗಾಗಿ ತ್ವರಿತ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು ನಿಮಗೆ ಅನುಮತಿಸುತ್ತದೆ. ಈ ಅಪ್ಲಿಕೇಶನ್ ಅನ್ನು ಹೇಗೆ ಬಳಸಬೇಕೆಂಬುದನ್ನು ಕಲಿಯಲು ನೀವು ಹೆಚ್ಚು ಸಮಯ ಕಳೆಯಬೇಕಾಗಿಲ್ಲ.

ಗೋಪ್ರೊ ಕ್ವಿಕ್ ವೀಡಿಯೊ ಎಡಿಟರ್‌ ಆಂಡ್‌ ಮೇಕರ್‌

ಗೋಪ್ರೊ ಕ್ವಿಕ್ ವೀಡಿಯೊ ಎಡಿಟರ್‌ ಆಂಡ್‌ ಮೇಕರ್‌

ನೀವು ವೀಡಿಯೊ ಎಡಿಟಂಗ್‌ಗೆ ಹೊಸಬರಾಗಿದ್ದರೆ ಮತ್ತು ಶಾರ್ಟ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು ಫ್ರೀ ಅಪ್ಲಿಕೇಶನ್ ಅನ್ನು ಹುಡುಕುತ್ತಿದ್ದರೆ, ಗೋಪ್ರೊ ಕ್ವಿಕ್ ಅಪ್ಲಿಕೇಶನ್ ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚಿನ ಫೀಚರ್ಸ್‌ಗಳೊಂದಿಗೆ ಬರುವುದಿಲ್ಲ, ಆದರೆ ಇದು ವೀಡಿಯೊ ಎಡಿಟಿಂಗ್‌ ಮೂಲ ಕಲ್ಪನೆಯನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ವೀಡಿಯೊಗಳನ್ನು ತ್ವರಿತವಾಗಿ ಕ್ರಿಯೆಟ್‌ ಮಾಡಲು ಸಹಾಯ ಮಾಡುತ್ತದೆ.

ಆಕ್ಷನ್ ಡೈರೆಕ್ಟರ್ ವೀಡಿಯೊ ಎಡಿಟರ್‌

ಆಕ್ಷನ್ ಡೈರೆಕ್ಟರ್ ವೀಡಿಯೊ ಎಡಿಟರ್‌

ಆಕ್ಷನ್ ಡೈರೆಕ್ಟರ್ ವಿಡಿಯೋ ಎಡಿಟರ್ ಎನ್ನುವುದು ಬಳಸಲು ಸುಲಭವಾದ ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದು ಆಂಡ್ರಾಯ್ಡ್ ಫೋನ್ ಬಳಕೆದಾರರಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ವಿಮಿಯೋ ಕ್ರಿಯೆಟ್‌ ವಿಡಿಯೋ ಎಡಿಟರ್‌ ಮತ್ತು ಸ್ಮಾರ್ಟ್ ವಿಡಿಯೋ ಮೇಕರ್

ವಿಮಿಯೋ ಕ್ರಿಯೆಟ್‌ ವಿಡಿಯೋ ಎಡಿಟರ್‌ ಮತ್ತು ಸ್ಮಾರ್ಟ್ ವಿಡಿಯೋ ಮೇಕರ್

ನೀವು ಪ್ರಯತ್ನಿಸಬಹುದಾದ ಮತ್ತೊಂದು ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್ ಇದಾಗಿದೆ. ಇದು ವೀಡಿಯೊಗಳನ್ನು ಟ್ರಿಮ್ ಮಾಡಲು, ಪರಿಣಾಮಗಳನ್ನು ಸೇರಿಸಲು, ಪಠ್ಯವನ್ನು ಮತ್ತು ಹೆಚ್ಚು ಸುಲಭವಾಗಿ ಅನುಮತಿಸುತ್ತದೆ.

Most Read Articles
Best Mobiles in India

English summary
smartphones offering good hardware specifications and cameras, you can start creating videos without any other equipment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X