ಜಸ್ಟ್‌ 500ರೂ. ಒಳಗೆ ಈ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಉತ್ತಮ ಆಯ್ಕೆ!

|

ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಆಧುನಿಕ ಜೀವನದ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ಪ್ರತಿಯೊಂದು ಮನೆಯೂ ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದು ಅದು ಬಳಕೆದಾರರ ಇಂಟರ್ನೆಟ್ ಅಗತ್ಯಗಳನ್ನು ಪೂರೈಸುತ್ತದೆ. ಅಧಿಕ ವೇಗದ ಸಂಪರ್ಕ, ಕಡಿಮೆ ಲೇಟೆನ್ಸಿ ನೆಟ್‌ವರ್ಕ್ ಮತ್ತು ಇತರ ಪ್ರಯೋಜನಗಳು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಅಗತ್ಯ ಅಂಶಗಳಲ್ಲಿ ಒಂದನ್ನಾಗಿ ಮಾಡುತ್ತದೆ. ಪ್ರತಿಷ್ಠಿತ ಬ್ರಾಡ್‌ಬ್ಯಾಂಡ್ ಸೇವಾ ಕಂಪನಿಗಳು ಬಳಕೆದಾರರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸುವ ಸಾಕಷ್ಟು ಯೋಜನೆಗಳನ್ನು ನೀಡುತ್ತಾರೆ.

ಬಯಸುತ್ತೀರಾ

ಹೌದು, ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಲಭ್ಯ ಇವೆ. ಅವುಗಳಲ್ಲಿ ಬಜೆಟ್ ದರದ ತಿಂಗಳ ಯೋಜನೆ ಅಥವಾ ಪ್ರೀಮಿಯಂ ಹೈ-ಎಂಡ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಯಸುತ್ತೀರಾ, ಸೇವೆಯು ಬಳಕೆದಾರರಿಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. ನೀವು 500 ರೂ.ಗಿಂತ ಕಡಿಮೆ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಹುಡುಕುತ್ತಿದ್ದರೆ, ನೀವು ಈ ಜನಪ್ರಿಯ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಗಮನಿಸಿರಿ.

ಜಿಯೋ ಫೈಬರ್ 399ರೂ. ಯೋಜನೆ

ಜಿಯೋ ಫೈಬರ್ 399ರೂ. ಯೋಜನೆ

ಜಿಯೋದ ಬ್ರಾಡ್‌ಬ್ಯಾಂಡ್ ಆರ್ಮ್, ಜಿಯೋ ಫೈಬರ್ ರಾಷ್ಟ್ರದಾದ್ಯಂತ ವಿಶೇಷ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಒದಗಿಸಲು ಹೆಸರುವಾಸಿಯಾಗಿದೆ. ಜಿಯೋಫೈಬರ್ ಹೊಸ ಚಂದಾದಾರರನ್ನು ಅದರ ಅದ್ಭುತ ಕೊಡುಗೆಗಳಿಂದಾಗಿ ತ್ವರಿತಗತಿಯಲ್ಲಿ ಸೇರಿಸುತ್ತಿದೆ. ಬಳಕೆದಾರರು ಸಾಧಾರಣ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಯಸಿದರೆ, ಅವರಿಗೆ 399ರೂ. ಯೋಜನೆ ಉತ್ತಮ ಎನಿಸಿಲಿದೆ. ಈ ಯೋಜನೆಯಲ್ಲಿ, ಜಿಯೋ ಬಳಕೆದಾರರು 30Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ಇದರೊಂದಿಗೆ ಅವರು ಅನಿಯಮಿತ ಡೇಟಾ ಮತ್ತು ವಾಯಿಸ್‌ ಕರೆ ಸೇವೆಗಳನ್ನು ಸಹ ಪಡೆಯಬಹುದಾಗಿದೆ. ಬ್ರಾಡ್‌ಬ್ಯಾಂಡ್ ಯೋಜನೆಯ ವ್ಯಾಲಿಡಿಟಿಯು 30 ದಿನಗಳು ಆಗಿದ್ದು, ವಾಣಿಜ್ಯ ಬಳಕೆಯ ನೀತಿಯನ್ನು ಅನ್ವಯಿಸಲಾಗುತ್ತದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 499ರೂ. ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 499ರೂ. ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ನ ಅಗ್ಗದ ಈ ತಿಂಗಳ ಯೋಜನೆಯ ಬೆಲೆ 499 ರೂ. ಯೋಜನೆಯಡಿಯಲ್ಲಿ ಬಳಕೆದಾರರು 40Mbps ವರೆಗೆ ಇಂಟರ್ನೆಟ್ ವೇಗವನ್ನು ಆನಂದಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಅವರು ಅನಿಯಮಿತ ಸ್ಥಳೀಯ ಮತ್ತು ಐಎಸ್‌ಡಿ ಕರೆ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಸೇರಿಸಲಾಗಿರುವ ಕೆಲವು ಪ್ರೀಮಿಯಂ ಚಂದಾದಾರಿಕೆಗಳು ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿ. ಅಗ್ಗದ ಮಾಸಿಕ ಯೋಜನೆಯೊಂದಿಗೆ ಹೆಚ್ಚಿನದನ್ನು ಸಹ ಪಡೆಯುತ್ತಾರೆ.

Excitel ಫೈಬರ್ ಫಸ್ಟ್ 499ರೂ, ಯೋಜನೆ

Excitel ಫೈಬರ್ ಫಸ್ಟ್ 499ರೂ, ಯೋಜನೆ

ಎಕ್ಸಿಟೆಲ್ ಫೈಬರ್ ಫಸ್ಟ್ ಆಕರ್ಷಕ ಯೋಜನೆಗಳನ್ನು ಹೊಂದಿದೆ. ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಯಸಿದರೆ, ಮಾಸಿಕ 499 ರೂ. ಎಕ್ಸಿಟೆಲ್ ಫೈಬರ್ ಫಸ್ಟ್ 499 ರೂ ಯೋಜನೆಯಡಿ, ಬಳಕೆದಾರರು 300Mbps ವರೆಗೆ ಇಂಟರ್ನೆಟ್ ವೇಗವನ್ನು ಪಡೆಯಬಹುದು. ಇದರೊಂದಿಗೆ, ಫೈಬರ್ ರೂಟರ್ ಮತ್ತು ವೈ-ಫೈ ಪಡೆಯುತ್ತಾರೆ. 399ರೂ ಮತ್ತು 449 ರೂ.ಗಳ ಬೆಲೆಯ ಇತರ ಎರಡು ಯೋಜನೆಗಳಿವೆ. ಯೋಜನೆಗಳ ಅಡಿಯಲ್ಲಿ, ಬಳಕೆದಾರರು ಕ್ರಮವಾಗಿ 100Mbps ಮತ್ತು 200Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ.

Best Mobiles in India

English summary
Top Broadband Plans You Can Choose Under Rs 500 in July 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X