Dark Mode: ಡಾರ್ಕ್‌ಮೋಡ್‌ ಫೀಚರ್ಸ್‌ ಒಳಗೊಂಡಿರುವ ಟಾಪ್‌ 5 ಆಪ್ಸ್‌!

|

ಇತ್ತೀಚಿನ ದಿನಗಳಲ್ಲಿ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ ಬಳಕೆದಾರರು ಆಪ್‌ಗಳಲ್ಲಿ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನು ಬಳಸುವುದಕ್ಕೆ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆಯಷ್ಟೇ ವಾಟ್ಸಾಪ್‌ ಕೂಡ ತನ್ನ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನ ಪರಿಚಯಿಸಿತ್ತು. ಡಾರ್ಕ್‌ಮೋಡ್‌ ಫೀಚರ್ಸ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಲಿದ್ದು, ಕಣ್ಣಿನ ಮೇಲೆ ಬೀಳುವ ಬೆಳಕಿನ ಪ್ರಖರತೆಯನ್ನ ಕಡಿಮೆಗೊಳಿಸುತ್ತದೆ. ಹಾಗಂತ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನ ವಾಟ್ಸಾಪ್‌ಗೂ ಮೊದಲೇ ಇತರೆ ಸೋಶಿಯಲ್‌ ಮೀಡಿಯಾ ಆಪ್‌ಗಳು ಪರಿಚಯಿಸಿವೆ.

ಹೌದು

ಹೌದು, ಡಾರ್ಕ್‌ಮೋಡ್‌ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ಅಮೋಲೆಡ್ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ನಿರ್ದಿಷ್ಟ ಪ್ರಮಾಣದ ಬ್ಯಾಟರಿ ಅವಧಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಈಗಾಗ್ಲೆ ಗೂಗಲ್‌ನ ಆಂಡ್ರಾಯ್ಡ್ 10 ಓಎಸ್ ಸಹ ಸಿಸ್ಟಮ್-ವೈಡ್ ಡಾರ್ಕ್ ಥೀಮ್ ಅನ್ನು ಬೆಂಬಲಿಸುತ್ತದೆ. ಕಳೆದ ವರ್ಷ, ಆಪಲ್ ಕಂಪೆನಿ ಕೂಡ ಡಾರ್ಕ್ ಮೋಡ್ ಬೆಂಬಲದ ಐಒಎಸ್ 13 ಅನ್ನು ಬಿಡುಗಡೆ ಮಾಡಿತ್ತು. ಸದ್ಯ ನೀವು ಪ್ರತಿದಿನ ಬಳಸುತ್ತಿರುವ ಹೆಚ್ಚಿನ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ಸ್ ಅನ್ನ ಬಳಸಲು ಬಯಸಿದರೆ, ಅದರಲ್ಲೂ ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್ ಮೆಸೆಂಜರ್, ವಾಟ್ಸಾಪ್ ನಲ್ಲಿ ಹೇಗೆ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನ ಸಕ್ರಿಯಗೊಳಿಸುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್‌ ಆಪ್ಲಿಕೇಶನ್‌ನಲ್ಲಿ ಇನ್ನು ಕೂಡ ಡಾರ್ಕ್‌ಮೋಡ್‌ ಫೀಚಸ್‌ ಅನ್ನ ಪರಿಚಯಿಸಲಾಗಿಲ್ಲ. ಆದರೆ ಬಳಕೆದಾರರು ಸಿಸ್ಟಮ್-ವೈಡ್ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ ಅದು ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ಆಗ ಇನ್‌ಸ್ಟಾಗ್ರಾಮ್ ನ ಡಾರ್ಕ್ ಮೋಡ್ ಇಡೀ ಅಪ್ಲಿಕೇಶನ್ UI ಅನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ನೀವು ಹೀಗೆ ಮಾಡಲು ನೀವು ನಿಮ್ಮ ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ, ಅಲ್ಲಿ ಡಿಸ್‌ಪ್ಲೇ ಅನ್ನು ಸೆಲೆಕ್ಟ್‌ ಮಾಡಿದರೆ ಅಲ್ಲಿ ಡಾರ್ಕ್ ಮೋಡ್ ಇರುತ್ತದೆ ಅದರ ಮೇಲೆ ಕ್ಲಿಕ್‌ ಮಾಡುವ ಮೂಲಕ ಡಾರ್ಕ್‌ ಮೋರ್ಡ್ ಅನ್ನ ಸಕ್ರಿಯಗೊಳಿಸಬಹುದಾಗಿದೆ. ಸಕ್ರಿಯಗೊಳಿಸಿದ ನಂತರ, ನೀವು ಇನ್‌ಸ್ಟಾಗ್ರಾಮ್‌ ಅನ್ನು ತೆರೆಯಬೇಕು, ಮತ್ತು ಅದು ಸ್ವಯಂಚಾಲಿತವಾಗಿ ಡಾರ್ಕ್ ಮೋಡ್‌ಗೆ ಸಿಂಕ್ ಆಗುತ್ತದೆ.

ಫೇಸ್‌ಬುಕ್ ಮೆಸೆಂಜರ್

ಫೇಸ್‌ಬುಕ್ ಮೆಸೆಂಜರ್

ಫೇಸ್‌ಬುಕ್ ಈಗಾಗಲೇ ಡಾರ್ಕ್ ಮೋಡ್ ಅನ್ನು ತನ್ನ ಮೆಸೆಂಜರ್ ನಲ್ಲಿ ಸೇರಿಸಿದ್ದು, ಪ್ರಸ್ತುತ, ಫೇಸ್ಬುಕ್ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್‌ಗೆ ಡಾರ್ಕ್ ಥೀಮ್ ಅನ್ನು ಸೇರಿಸಲು ಯೋಜಿಸುತ್ತಿದೆ. ಸದ್ಯ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್ ಅನ್ನು ಡಾರ್ಕ್ ಮೋಡ್‌ನಲ್ಲಿ ಬಳಸಲು, ನೀವು ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ನಂತರ ಮೇಸೆಂಜರ್‌ ಆಪ್‌ ವಿಂಡೋದ ಮೇಲಿನ ಎಡ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ, ಅಲ್ಲಿ ಟ್ಯಾಪ್‌ ಮಾಡಿದರೆ ಡಾರ್ಕ್‌ಮೋಡ್‌ ಫೀಚರ್ಸ್ ಆಯ್ಕೆ ಕಾಣುತ್ತದೆ ಅದನ್ನ ಆಯ್ಕೆ ಮಾಡಿದರೆ ಮೇಸೆಂಜರ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು.

ಟ್ವಿಟ್ಟರ್

ಟ್ವಿಟ್ಟರ್

ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ಟ್ವಿಟ್ಟರ್‌ ಕೂಡ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು, ಅಪ್ಲಿಕೇಶನ್‌ನ ಸೆಟ್ಟಿಂಗ್ ಮತ್ತು ಪ್ರೈವಸಿ ವಿಭಾಗಕ್ಕೆ ಹೋಗಿ, ನಂತರ ಡಿಸ್‌ಪ್ಲೇ ಮತ್ತು ಧ್ವನಿ ಟ್ಯಾಬ್ ಟ್ಯಾಪ್ ಮಾಡಬೇಕು ನಂತರ ಅಲ್ಲಿ ಡಾರ್ಕ್ ಮೋಡ್ ಸ್ಲೈಡರ್ ಟ್ಯಾಪ್ ಮಾಡಿದರೆ. ಡಾರ್ಕ್ ಮೋಡ್ ಫೀಚರ್ಸ್‌ ಸಕ್ರಿಯಗೊಳ್ಳುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಬಳಕೆದಾರರಿಗೆ ಅನುಗುಣವಾಗಿ "ಡಿಮ್" ಮತ್ತು "ಲೈಟ್ಸ್ ಔಟ್‌" ಆಯ್ಕೆಗಳನ್ನ ನೀಡಲಿದ್ದು ಇದರಲ್ಲಿ ನಿಮಗೆ ಇಷ್ಟವಾದ ಯಾವುದಾದರು ಒಂದನ್ನ ಆಯ್ಕೆ ಮಾಡಬಹುದಾಗಿದೆ.

ಯೂಟ್ಯೂಬ್‌

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಬಳಸಲು, ಮೊದಲಿಗೆ, ನಿಮ್ಮ ಫೋನ್‌ನಲ್ಲಿ ಯೂಟ್ಯೂಬ್‌ ಅಪ್ಲಿಕೇಶನ್ ತೆರೆಯಿರಿ, ನಂತರ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ. ನಂತರ ನೀವು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ, ಜನರಲ್ ಆಯ್ಕೆಯನ್ನ ಅನ್ನು ಟ್ಯಾಪ್ ಮಾಡಿ. ಇದರಲ್ಲಿ ನೀವು ಆಪಿಯರೆನ್ಸ್‌ ಆಯ್ಕೆಕಾಣುತ್ತದೆ. ಇದನ್ನ ಆಯ್ಕೆ ಮಾಡಿದರೆ ಅದರಲ್ಲಿ ಡಾರ್ಕ್ ಥೀಮ್, ಲೈಟ್, ಮತ್ತು ಡಿವೈಸ್ ಥೀಮ್ ಆಯ್ಕೆ ಇರುತ್ತದೆ. ಇದನ್ನ ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಸಕ್ರಿಯಗೊಳಿಸಬಹುದಾಗಿದೆ

ವಾಟ್ಸಾಪ್

ವಾಟ್ಸಾಪ್

ಇನ್ನು ವಾಟ್ಸಾಪ್‌ ತೀರಾ ಇತ್ತೀಚಿಗಷ್ಟೆ ಆಂಡ್ರಾಯ್ಡ್‌ನ ಬೀಟಾ ವರ್ಷನ್‌ ಬಳಕೆದಾರರಿಗೆ ಡಾರ್ಕ್ ಮೋಡ್ ಫೀಚರ್ಸ್ ಅನ್ನು ಪರಿಚಯಿಸಿದೆ. ನೀವು ಬೀಟಾ ವರ್ಷನ್‌ ಬಳಕೆದಾರರಾಗಿದ್ದರೆ ವಾಟ್ಸಾಪ್‌ನಲ್ಲಿ ಡಾರ್ಕ್‌ಮೋಡ್‌ ಫೀಚರ್ಸ್‌ ಅನ್ನ ಸುಲಭವಾಗಿ ಸಕ್ರಿಯಗೊಳಿಸಬಹುದಾಗಿದೆ. ಮೊದಲಿಗೆ, ನೀವು ವಾಟ್ಸಾಪ್ನ ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ, ಅಲ್ಲಿ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಬೇಕು. ನಂತರ, ಚಾಟ್‌ ವಿಭಾಗವನ್ನು ಟ್ಯಾಪ್ ಮಾಡಿದರೆ ಡಿಸ್‌ಪ್ಲೇ ವಿಭಾಗ ತೆರೆಯುತ್ತದೆ, ಅಲ್ಲಿ ಥೀಮ್ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಅಲ್ಲಿ ಸೆಟ್‌ ಬೈ ಬ್ಯಾಟರಿ ಸೇವರ್, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿದರೆ ಡಾರ್ಕ್‌ಮೋಡ್‌ ಸಕ್ರಿಯವಾಗುತ್ತದೆ.

Best Mobiles in India

English summary
Here's how to enable Dark mode on some popular social media apps, including Instagram, Twitter, Facebook Messenger, WhatsApp and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X