ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದ ಅಮೆಜಾನ್‌

|

ಇತ್ತೀಚಿನ ದಿನಗಳಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಪ್ರಮುಖ ಕಂಪೆನಿಗಳು ವಿವಿಧ ಫೀಚರ್ಸ್‌ ಇರುವ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿವೆ. ಈಗ ಅಮೆಜಾನ್‌ ಕಿಕ್‌ಸ್ಟಾರ್ಟರ್‌ ಡೀಲ್‌ ಆರಂಭ ಆಗಿದ್ದು, ಇದರಲ್ಲಿ ನೀವು ವಿವಿಧ ಫೀಚರ್ಸ್‌ ಇರುವ ವಿವಿಧ ಬ್ರಾಂಡ್‌ನ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಭಾರೀ ರಿಯಾಯಿತಿಯಲ್ಲಿ ಕೊಂಡುಕೊಳ್ಳಬಹುದಾಗಿದೆ.

ಇಂಡಿಯನ್

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ. ಈ ಮಾರಾಟದಲ್ಲಿ ಹೆಚ್‌ಪಿ, ಆಶುಸ್, ಲೆನೋವೋ ಮತ್ತು ಇನ್ನಿತರ ಹೆಚ್ಚಿನ ಲ್ಯಾಪ್‌ಟಾಪ್‌ಗಳಲ್ಲಿ ಅಮೆಜಾನ್‌ ಉತ್ತಮ ರಿಯಾಯಿತಿಯನ್ನ ನೀಡುತ್ತಿದೆ. 80,000 ರೂ.ಗಳಿಗಿಂತ ಕಡಿಮೆ ಬೆಲೆಯ ಉತ್ತಮ ಗೇಮಿಂಗ್ ಲ್ಯಾಪ್‌ಟಾಪ್‌ಗಾಗಿ ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಸಹಕಾರಿಯಾಗಲಿದೆ.

ಲೆನೋವೋ ಐಡಿಯಾ ಪ್ಯಾಡ್‌ L340

ಲೆನೋವೋ ಐಡಿಯಾ ಪ್ಯಾಡ್‌ L340

ಈ ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 250 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಈ ಲ್ಯಾಪ್‌ಟಾಪ್‌ ಬೆಂಬಲಿಸುತ್ತದೆ. 8GB RAM ಇದರಲ್ಲಿದ್ದು, 16GB ವರೆಗೆ ಅಪ್‌ಗ್ರೇಡ್ ಮಾಡಬಹುದಾದ ಆಯ್ಕೆಯನ್ನು ಸಹ ಪಡೆದಿದೆ. 1TB HDD ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಮತ್ತು 3GB GTX 1050 ಮೀಸಲಾದ ಗ್ರಾಫಿಕ್ಸ್ ಯೂನಿಟ್‌ನೊಂದಿಗೆ 9ನೇ ಜನ್ ಇಂಟೆಲ್ i5 ಪ್ರೊಸೆಸರ್‌ನಿಂದ ಇದು ಕಾರ್ಯನಿರ್ವಹಿಸುತ್ತದೆ. ಐಡಿಯಾ ಪ್ಯಾಡ್‌ L340 ಕೂಲಿಂಗ್‌ಗಾಗಿ ಅಂತರ್ನಿರ್ಮಿತ ಡ್ಯುಯಲ್ ಆಕ್ಷನ್ ಫ್ಯಾನ್‌ಗಳನ್ನು ಒಳಗೊಂಡಿದೆ. 45Wh ಬ್ಯಾಟರಿ ಘಟಕವನ್ನು ಪ್ಯಾಕ್ ಮಾಡಲಿದ್ದು, ಇದು ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಇದರ ಮೂಲ ಬೆಲೆ 68,990 ರೂ. ಇದ್ದು, ರಿಯಾಯಿತಿಯಲ್ಲಿ 60,500 ರೂ. ಗಳಿಗೆ ಇದನ್ನು ಕೊಂಡುಕೊಳ್ಳಬಹುದಾಗಿದೆ.

ಏಸರ್ ಆಸ್ಪೈರ್ 5

ಏಸರ್ ಆಸ್ಪೈರ್ 5

ಈ ಗೇಮಿಂಗ್‌ ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್‌ಪ್ಲೇ ಹೊಂದಿದೆ. ಇದು 16GB RAM ಇದೆ ಹಾಗೆ 32GB ವರೆಗೆ ಇದನ್ನ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. 512GB ಸ್ಟೋರೇಜ್‌ ಸಾಮರ್ಥ್ಯದ ಜೊತೆಗೆ 4GB RTX 2050 ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಜೋಡಿಸಲಾದ 12 ನೇ ಜನ್ ಇಂಟೆಲ್ i5 ಚಿಪ್‌ಸೆಟ್‌ನಿಂದ ಇದು ಕಾರ್ಯನಿರ್ವಹಿಸುತ್ತದೆ. ಇನ್ನುಳಿದಂತೆ Wi-Fi 6E ಮತ್ತು ಥಂಡರ್‌ಬೋಲ್ಟ್‌ 4 ಪೋರ್ಟ್ ಅನ್ನು ಈ ಲ್ಯಾಪ್‌ಟಾಪ್‌ ಬೆಂಬಲಿಸುತ್ತದೆ. ಇದು 1.8 ಕಿಲೋಗ್ರಾಂಗಳಷ್ಟು ಭಾರ ಇದ್ದು, ಇದರ ಮೂಲ ಬೆಲೆ 84,999 ರೂ., 63,990 ರೂ.ಗಳಿಗೆ ರಿಯಾಯಿತಿ ದರದಲ್ಲಿ ಸಿಗಲಿದೆ.

ಹೆಚ್‌ಪಿ ಪೆವಿಲಿಯನ್

ಹೆಚ್‌ಪಿ ಪೆವಿಲಿಯನ್

ಈ ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 250 ನಿಟ್ಸ್‌ಗಳ ಬ್ರೈಟ್‌ನೆಸ್‌ ನ್ನು ಬೆಂಬಲಿಸುತ್ತದೆ. ಈ ಗೇಮಿಂಗ್ ಲ್ಯಾಪ್‌ಟಾಪ್ 8GB RAM, 1TB HDD ಸಂಗ್ರಹಣೆ ಒಳಗೊಂಡಿದೆ. 4GB GTX 1650 GPU ಜೊತೆಗೆ AMD Ryzen 5 ಲ್ಯಾಪ್‌ಟಾಪ್ ಪ್ಲಾಟ್‌ಫಾರ್ಮ್‌ನಿಂದ ಕಾರ್ಯ ನಿರ್ವಹಿಸಲಿದೆ. ಇದರ ತೂಕ 2.25 ಕಿಲೋಗ್ರಾಂ ಹಾಗೂ 52.5Wh ಬ್ಯಾಟರಿ ಘಟಕವನ್ನು ಪ್ಯಾಕ್ ಮಾಡಲಿದ್ದು, ಸರಾಸರಿ 7 ಗಂಟೆಗಳ ಬ್ಯಾಟರಿ ಬ್ಯಾಪ್‌ಅಪ್‌ ನೀಡುತ್ತದೆ. ಇದರ ಮೂಲ ಬೆಲೆ 78,900 ರೂ. ಗಳಾಗಿದ್ದು, ರಿಯಾಯಿತಿ ದರದಲ್ಲಿ 65,000 ರೂ.ಗಳಿಗೆ ಲಭ್ಯ.

ಎಂಎಸ್‌ಐ ಗೇಮಿಂಗ್ GF63

ಎಂಎಸ್‌ಐ ಗೇಮಿಂಗ್ GF63

ಈ ಎಂಎಸ್‌ಐ ಗೇಮಿಂಗ್ ಲ್ಯಾಪ್‌ಟಾಪ್ 15.6 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಗೇಮಿಂಗ್ ಲ್ಯಾಪ್‌ಟಾಪ್‌ GF63 8GB RAM ಹೊಂದಿದ್ದು, ಇದನ್ನು 64GB ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. 512GB SSD ಸ್ಟೋರೇಜ್‌ ಮತ್ತು 4GB GTX1650 Max Q ಗ್ರಾಫಿಕ್ಸ್ ಘಟಕದೊಂದಿಗೆ 11 ನೇ-ಜನ್ ಇಂಟೆಲ್ i7 ಚಿಪ್‌ಸೆಟ್‌ನಿಂದ ಇದು ಕಾರ್ಯನಿರ್ವಹಿಸುತ್ತದೆ. ಇದರ ಮೂಲ ಬೆಲೆ 89,990 ರೂ. ಗಳಾಗಿದ್ದು, ರಿಯಾಯಿತಿಯಲ್ಲಿ 68,990 ರೂ.ಗಳಿಗೆ ಲಭ್ಯ ಆಗಲಿದೆ.

ಹೆಚ್‌ಪಿ ಓಮೆನ್‌

ಹೆಚ್‌ಪಿ ಓಮೆನ್‌

ಹೆಚ್‌ಪಿ ಓಮೆನ್‌ ಗೇಮಿಂಗ್‌ ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. 60Hz ರಿಫ್ರೆಶ್ ದರ ಜೊತೆಗೆ 250 ನಿಟ್ಸ್ ಆಯ್ಕೆ ಪಡೆದಿದೆ. ಈ ಲ್ಯಾಪ್‌ಟಾಪ್ AMD Ryzen 5 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM, 512GB SSD ಜೊತೆಗೆ 4GB GTX 1650Ti ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಬರುತ್ತದೆ. ಇದು ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. 2.36 ಕಿಲೋಗ್ರಾಂಗಳಷ್ಟು ತೂಕ ಇದ್ದು, ಇದರ ಮೂಲ ಬೆಲೆ 78,999 ರೂ. ಗಳಾಗಿದೆ. ರಿಯಾಯಿತಿಯಲ್ಲಿ 69,050 ರೂ.ಗಳಿಗೆ ಮಾರಾಟವಾಗಲಿದೆ.

Best Mobiles in India

English summary
Huge Discount on Laptops on Amazon. Here's a look at the top five laptops

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X