Subscribe to Gizbot

ಫೇಸ್‌ಬುಕ್ ಬಳಕೆದಾರರೇ ಇಲ್ಲೊಮ್ಮೆ ನೋಟ ಹರಿಸಿ

Written By:

ಅಂತರ್ಜಾಲ ಯುಗದಲ್ಲೇ ಫೇಸ್‌ಬುಕ್ ಅಚ್ಚರಿಯ ಕಮಾಲುಗಳನ್ನು ಮಾಡುತ್ತಿದೆ. ದಿನದಿಂದ ದಿನಕ್ಕೆ ಪ್ರಗತಿಯನ್ನು ಪಡೆಯುತ್ತಿರುವ ಈ ದಿಗ್ಗಜ ಸೋಲಿಲ್ಲದ ಸರದಾರ ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡೇ ಜಾಲತಾಣದಲ್ಲಿ ತನ್ನ ಕಮಾಲು ಬೀರುತ್ತಿದೆ. [ಜಗತ್ತನ್ನೇ ಮಾರ್ಪಡಿಸಬಹುದಾದ ಫೇಸ್‌ಬುಕ್ 10 ನಿರ್ಧಾರಗಳೇನು?]

ಅಂತರ್ಜಾಲ ಕ್ಷೇತ್ರದಲ್ಲಾದ ಕ್ರಾಂತಿಯಲ್ಲಿ ಇಡೀ ಪ್ರಪಂಚವೇ ತಮಗೆ ಗೊತ್ತಿಲ್ಲದೆ ಒಂದು ಬದಲಾವಣೆಗೆ ಒಳಪಟ್ಟ ಜನರು ಇದೇ ಇಂಟರ್‌ನೆಟ್ ಮೂಲಕ ಪರಸ್ಪರ ಸಂಪರ್ಕಿತರಾಗಿದ್ದಾರೆ. ಫೇಸ್‌ಬುಕ್ ಎಂಬ ಸಾಮಾಜಿಕ ತಾಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದು ಗಾಢ ಪರಿಣಾಮವನ್ನು ಬೀರುತ್ತಿದ್ದು ಇದರ ಜನಪ್ರಿಯತೆಗೆ ಕಾರಣವಾಗಿದೆ ಎಂದೇ ಹೇಳಬಹುದು. [ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?]

ಬನ್ನಿ ಇಂದಿನ ಲೇಖನದಲ್ಲಿ ನಿಮಗೆ ತಿಳಿಯದ ಫೇಸ್‌ಬುಕ್ ಕುರಿತಾದ ವಿಸ್ಮಯಕಾರಿ ಅಂಶಗಳನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಹತ್ವದ ಹೂಡಿಕೆ

ಫೇಸ್‌ಬುಕ್ ಆದಿ

ಆರಂಭದಲ್ಲಿ ಫೇಸ್‌ಬುಕ್ ಆರಂಭಗೊಂಡ ಮೊದಲ ಬೇಸಿಗೆಯಲ್ಲಿ ಜುಕರ್‌ಬರ್ಗ್ ಕುಟುಂಬವು ಈ ಯೋಜನೆಯನ್ನು ಜೀವಂತವಾಗಿರಿಸಲು 85,000 ಡಾಲರ್‌ಗಳನ್ನು ವಿನಿಯೋಗಿಸಿತು. ಈ ಮಹತ್ವದ ಹೂಡಿಕೆಯು ಈ ಹೊಸ ಬಗೆಯ ಉದ್ಯಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿತು. ಆದರೆ ಇಂದು ಫೇಸ್‌ಬುಕ್ ಸುಮಾರು 20 ಬಿಲಿಯನ್ ಯುಎಸ್ ಡಾಲರ್‌ಗಳ ಮೊತ್ತದ ಉದ್ಯಮವಾಗಿದೆ.

20 ನಿಮಿಷದಾಟ

20 ನಿಮಿಷದಲ್ಲಿ ಏನಾಗುತ್ತದೆ ಗೊತ್ತೇ?

ಪ್ರತಿದಿನದ 20 ನಿಮಿಷದಲ್ಲಿ ಏನಾಗುತ್ತದೆ..? ನಂಬಲಸಾಧ್ಯವಾದರು ಸತ್ಯ, 2 ಮಿಲಿಯನ್ ಜನರು ಫ್ರೆಂಡ್ ರಿಕ್ವೆಸ್ಟೆ (Request) ಕಳುಹಿಸುತ್ತಾರೆ, 3 ಮಿಲಿಯನ್ ಜನರು ಸಂದೇಶವನ್ನು ರವಾನಿಸುತ್ತಾರೆ ಮತ್ತು 1 ಮಿಲಿಯನ್ ಜನರು ಲಿಂಕ್‌ಗಳ ಮಾಡಿಕೊಳ್ಳುತ್ತಾರೆ.

ಚೀನಾದಲ್ಲಿ ಫೇಸ್‌ಬುಕ್‌ಗೆ ನಿಷೇಧ

ಚೀನಾ

ಚೀನಾದಲ್ಲಿ ಫೇಸ್‌ಬುಕ್‌ಗೆ ನಿಷೇಧವನ್ನು ಹೇರಿದ್ದರೂ ಬರೋಬ್ಬರಿ 95 ಮಿಲಿಯನ್ ಬಳಕೆದಾರರನ್ನು ಇದು ಹೊಂದಿದೆ.

ಬಹುಮಾನ

ಡಾಲರ್ ಬಹುಮಾನ

ಫೇಸ್‌ಬುಕ್ ಬಳಕೆದಾರರ ಸೌಖ್ಯಕ್ಕಾಗಿ ತನ್ನ ಗೌಪ್ಯತಾ ಭದ್ರತೆಯನ್ನು ಬಲಪಡಿಸಿದೆ. ಇನ್ನೂ ಈ ಭದ್ರತೆಯನ್ನು ದಾಟಿ ಹ್ಯಾಕ್ ಮಾಡುವವರ ಬಗ್ಗೆ ಸುಳಿವು ನೀಡಿದವರಿಗೆ ಸಂಸ್ಥೆ 500 ಡಾಲರ್ ಬಹುಮಾನವನ್ನು ನೀಡುತ್ತದೆ.

ಭಾಷೆಗಳು

ವಿವಿಧ ಭಾಷೆಗಳು

ಫೇಸ್‌ಬುಕ್ ಸರಿಸುಮಾರು 70 ಭಾಷೆಗಳಲ್ಲಿ ಲಭ್ಯವಿದೆ ಎನ್ನಲಾಗಿದೆ.

ಏರಿಕೆ

ಬಳಕೆದಾರರಲ್ಲಿ ಏರಿಕೆ

ವರ್ಷದಿಂದ ವರ್ಷಕ್ಕೆ ಫೇಸ್‌ಬುಕ್ ಬಳಸುವವರಲ್ಲಿ ನೀವು ಏರಿಕೆಯನ್ನು ಗಮನಿಸಬಹುದಾಗಿದೆ.

ಗಳಿಕೆ

ಫೇಸ್‌ಬುಕ್ ಗಳಿಕೆ

ಪ್ರತೀ ಸೆಕೆಂಡಿಗೆ ಫೇಸ್‌ಬುಕ್ ಗಳಿಸುವ ಗಳಿಕೆ $9,671 (ರೂ.6,00,859.23).

ಖಾತೆ

ಫೇಸ್‌ಬುಕ್ ಖಾತೆ

ಪ್ರತೀ ದಿನ ವಿಶ್ವದಲ್ಲಿ ಓರ್ವ ವ್ಯಕ್ತಿ ಫೇಸ್‌ಬುಕ್‌ನಲ್ಲಿ ತನ್ನನ್ನು ದಾಖಲಿಸಿಕೊಳ್ಳುತ್ತಿದ್ದಾನೆ. ಹಾಗಿದ್ದರೆ ತಡಮಾಡದೇ ಫೇಸ್‌ಬುಕ್ ಖಾತೆ ತೆರೆಯುವಂತವರಾಗಿ.

ನ್ಯಾಯ ಒದಗಿಸುವಲ್ಲಿ

ಸೂಕ್ತ ನ್ಯಾಯ ಒದಗಿಸುವಲ್ಲಿ

ಹೆಚ್ಚಿನ ಕೊಲೆ, ಅತ್ಯಾಚಾರ ಮೊದಲಾದ ಪ್ರಸಂಗಗಳಲ್ಲಿ ಫೇಸ್‌ಬುಕ್ ಸಾಕ್ಷಿಯನ್ನು ಪ್ರಬಲವಾಗಿ ತೆಗೆದುಕೊಂಡಿದ್ದು, ಇದನ್ನು ಅನುಸರಿಸಿ ತೀರ್ಪನ್ನು ನೀಡಲಾಗಿದೆ ಎಂಬ ಸುದ್ದಿ ಕೂಡ ಇದೆ.

ವಿಚ್ಛೇದನದಂತಹ ಪ್ರಕರಣಗಳು

ಕಳವಳಕಾರಿ ಅಂಶಗಳು

ಸಾಮಾಜಿಕ ಜಾಲತಾಣದ ಮೂಲಕ ಸಂಬಂಧಗಳು ಹಳಸುತ್ತಿರುವ ಸುದ್ದಿ ಕೂಡ ದೊರಕುತ್ತಿದ್ದು ಇದರ ಬಳಕೆ ಹೆಚ್ಚುತ್ತಿರುವಂತೆಯೇ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article presenting Top mind blowing facts about Facebook which is helpful to understand the social site. In a simple manner it presents Facebook positive and negative facts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more