ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ!

|

ಆಪಲ್‌ ಸಂಸ್ಥೆಯು ಇತ್ತೀಚಿಗಷ್ಟೆ ತನ್ನ ಅಪ್‌ಡೇಟ್‌ ಐಓಎಸ್‌ 13(IOS13) ಓಎಸ್‌ ಅನ್ನು ಪರಿಚಯಿಸಿದ್ದು, ಈಗ ಪ್ರಾಯೋಗಿಕವಾಗಿ ಪಬ್ಲಿಕ್ ಬೇಟಾ ವರ್ಷನ್ ಬಿಡುಗಡೆ ಮಾಡಿದೆ. ಆದ್ರೆ ಐಓಎಸ್‌ 13ನ ಫೈನಲ್‌ ವರ್ಷನ್ ಇದೇ ಸೆಪ್ಟಂಬರ್ ತಿಂಗಳಿನಲ್ಲಿ ಐಫೋನ್‌ ಸೇರಲಿವೆ. ಹೊಸ ಫೀಚರ್ಸ್ ನಿರೀಕ್ಷೆಯಲ್ಲಿರುವ ಐಫೋನ್‌ ಬಳಕೆದಾರರಿಗೆ ಐಓಎಸ್‌ 13ನಲ್ಲಿ ಯಾವೆಲ್ಲಾ ಫೀಚರ್ಸ್‌ ಸೇರಲಿವೆ ಅಂತಾ ಗೊತ್ತಾದ್ರೆ ನಿರೀಕ್ಷೆ ಡಬಲ್‌ ಆಗಲಿದೆ.

ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ!

ಹೌದು, ಆಪಲ್ ತನ್ನ ಬಹುನಿರೀಕ್ಷಿತ ಐಓಎಸ್‌ 13 ವರ್ಷನ್ ಸೆಪ್ಟಂಬರ್‌ನಲ್ಲಿ ರೋಲ್‌ಚೌಟ್ ಆಗುವ ಸಾಧ್ಯತೆಗಳಿದ್ದು, ಫೈನಲ್‌ ವರ್ಷನ್‌ನಲ್ಲಿ ನೂತನ ಫೀಚರ್ಸ್‌ಗಳು ಐಫೋನ್‌ನಲ್ಲಿ ಕಾಣಿಸಿಕೊಳ್ಳಲಿವೆ. ಡಾರ್ಕ್‌ ಮೋಡ್‌, ಟೈಪಿಂಗ್, ಫೋಟೋ ಗ್ಯಾಲರಿ, ಸೇರಿದಂತೆ ಸೆಟ್ಟಿಂಗ್‌ನಲ್ಲಿಯೂ ಸಾಕಷ್ಟು ಹೊಸ ಆಯ್ಕೆಗಳು ಸೇರಲಿವೆ. ಹಾಗಾದರೇ ಐಫೋನ್ ಐಓಎಸ್‌ 13 ಓಎಸ್‌ನಲ್ಲಿ ಯಾವೆಲ್ಲಾ ಹೊಸ ಫೀಚರ್ಸ್‌ಗಳಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!

ಒಂದೇ ಬಾರಿ ಲೊಕೇಶನ್

ಒಂದೇ ಬಾರಿ ಲೊಕೇಶನ್

ಹಲವಾರು ಆಪ್‌ಗಳು ಲೊಕೇಶನ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಅದಕ್ಕಾಗಿ ಆಪ್‌ಗಳು ಪ್ರತಿ ಭಾರಿ ಲೊಕೇಶನ್ ಆನ್‌ ಮಾಡಲು ಬೇಡುತ್ತದೆ. ಆದರೆ ಈ ಹೊಸ ಫೀಚರ್ ನಿಂದ ಕೇವಲ ಒಂದು ಭಾರಿ ಲೊಕೇಶನ್ ಆನ್‌ ಮಾಡಿದರೇ ಸಾಕು. ಪದೇ ಪದೇ ಲೊಕೇಶನ್ ಆಯ್ಕೆ ಕುರಿತು ಯಾವುದೇ ಆಯ್ಕೆ ಮಾಡುವ ಅಗತ್ಯ ಇರುವುದಿಲ್ಲ ಎನ್ನಲಾಗಿದೆ.

ಆಪಲ್‌ ಖಾತೆ

ಆಪಲ್‌ ಖಾತೆ

ಪ್ರಸ್ತುತ ಹಲವಾರು ಸಾಮಾಜಿಕ ಆಪ್ಸ್‌ಗಳು ಜನಪ್ರಿಯವಾಗಿದ್ದು, ಅವುಗಳಲ್ಲಿ ಖಾತೆ ಹೊಂದಲು ಬಳಕೆದಾರರು ಇ ಮೇಲ್‌ ಐಡಿ ಮೂಲಕ ಲಾಗ್‌ ಇನ್‌ ಆಗಬೇಕಿದೆ. ಬಳಕೆದಾರರು ಆಪಲ್‌ ಐಡಿ ಬಳಸಿಯೇ ಲಾಗ್‌ ಇನ್‌ ಆಗುವ ಅವಕಾಶ ಬಳಕೆದಾರರಿಗೆ ಹೊಸ ಓಎಸ್‌ ವರ್ಷನ್‌ನಲ್ಲಿ ಲಭ್ಯವಾಗಲಿದೆ. ಇದು ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ ಒದಗಿಸಲಿದೆ.

ಓದಿರಿ : ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌! ಓದಿರಿ : ವಾಟ್ಸಪ್‌ ಸ್ಟೇಟಸ್‌ನಲ್ಲಿ ಬದಲಾವಣೆ!..ಕಾಣಿಸಿಕೊಳ್ಳಲಿದೆ ಹೊಸ ಫೀಚರ್‌!

ಕ್ವಿಕ್‌ ಟೈಪಿಂಗ್

ಕ್ವಿಕ್‌ ಟೈಪಿಂಗ್

ಆಪಲ್‌ ಡೀಫಾಲ್ಟ್‌ ಕೀಬೋರ್ಡ್‌ ಸ್ವಿಪ್‌ ಗೆಸ್ಚರ್‌ ಸೌಲಭ್ಯವನ್ನು ಪಡೆದಿದ್ದು, ಇದು ಬಳಕೆದಾರರಿಗೆ ಟೈಪಿಂಗ್‌ಗೆ ಅನುಕೂಲವಾಗಲಿದೆ. ಗೂಗಲ್‌ನ ಜಿಬೋರ್ಡ್ ಮತ್ತು ಇತರೆ ಟೈಪಿಂಗ್ ಬೋರ್ಡ್‌ ಮಾದರಿಯಂತೆ ಇದು ಸಹ ಇರಲಿದೆ. ಬಳಕೆದಾರರು ಒಂದು ಕೀವರ್ಡ್‌ನಿಂದ ಇನ್ನೊಂದು ಕೀವರ್ಡ್‌ಗೆ ಸ್ವಿಪ್‌ ಮಾಡುವ ಮೂಲಕ ಟೈಪಿಂಗ್ ಮಾಡಬಹುದಾಗಿದೆ.

ಡಾರ್ಕ್‌ಮೋಡ್‌

ಡಾರ್ಕ್‌ಮೋಡ್‌

ಬಹುನಿರೀಕ್ಷಿತ ಡಾರ್ಕ್‌ಮೋಡ್‌ ಫೀಚರ್‌ ಆಪಲ್‌ನ ಹೊಸ ಐಓಎಸ್‌ನಲ್ಲಿ ಸೇರಿಕೊಳ್ಳಲಿದೆ. ಇದೊಂದು ಐಚ್ಛಿಕ ಆಯ್ಕೆ ಆಗಿರಲಿದ್ದು, ಬಳಕೆದಾರರು ಬೇಕಾದಾಗ ಡಾರ್ಕ್‌ ಮೋಡ್‌ಬೆ ಬದಲಾಯಿಸಿಕೊಳ್ಳಬಹುದು. ಮೆಸೆಜ್‌, ಫೋಟೋ, ಗ್ಯಾಲರಿ, ಕ್ಯಾಲೆಂಡರ ಆಪ್ಸ್‌ಗಳಿಗೂ ಡಾರ್ಕ್‌ಮೋಡ್‌ ಆಯ್ಕೆ ಬೆಂಬಲ ನೀಡಲಿದೆ.

ಫೋಟೋ ಟ್ಯಾಬ್‌

ಫೋಟೋ ಟ್ಯಾಬ್‌

ಆಪಲ್‌ ಫೋಟೋ ಗ್ಯಾಲರಿ ಹೊಸ ರೀತಿ ವ್ಯವಸ್ಥಿತವಾಗಿ ಕಾಣಿಸಲಿದ್ದು, ದಿನ, ತಿಂಗಳು ಮತ್ತು ವರ್ಷದ ಆಧಾರದ ಮೇಲೆ ಜೋಡಣೆಯಾಗಿರುತ್ತದೆ. ಬಳಕೆದಾರರು ಸರ್ಚ್‌ ಮೂಲಕ ದಿನಾಂಕ ಫೋಟೋಗಳನ್ನು ಹುಡುಕಬಹುದು. ಹಳೆಯ ಫೋಟೋಗಳನ್ನು ಸರಳವಾಗಿ ತೆಗೆಯಬಹುದಾಗಿದೆ.

ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?ಓದಿರಿ : ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

Best Mobiles in India

English summary
The final version is expected to roll out in September. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X