Airtel vs Jio vs Vi: 56 ದಿನಗಳ ವ್ಯಾಲಿಡಿಟಿ ಬಯಸೋರಿಗೆ ಈ ಪ್ಲಾನ್‌ಗಳು ಸೂಕ್ತ!

|

ಏರ್‌ಟೆಲ್‌, ಜಿಯೋ ವೋಡಾಫೋನ್ ಐಡಿಯಾ ಟೆಲಿಕಾಂಗಳು ತಮ್ಮ ಗ್ರಾಹಕರಿಗಾಗಿ ಹಲವು ಆಯ್ಕೆಯ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಪ್ಲಾನ್‌ಗಳು ಕೂಡ ಸೇರಿವೆ. ಹೆಚ್ಚಿನ ಜನರು ಪ್ರತಿ ತಿಂಗಳು ರೀಚಾರ್ಜ್‌ ಮಾಡಲು ಬಯಸದೆ ದೀರ್ಘಾವಧಿ ಪ್ಲಾನ್‌ಗಳನ್ನು ಆಯ್ಕೆ ಮಾಡಿದರೆ ಇನ್ನು ಕೆಲವರು 56 ದಿನಗಳ ಮಾನ್ಯೆತ ಹೊದಿರುವ ಪ್ಲಾನ್‌ಗಳನ್ನು ರೀಚಾರ್ಜ್‌ ಮಾಡಿಸಲು ಬಯಸುತ್ತಾರೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಪರಿಚಯಿಸಿರುವ 56 ದಿನಗಳ ಮಾನ್ಯತೆಯ ಪ್ರಿಪೇಯ್ಡ್‌ ಪ್ಲಾನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಈ ಪ್ಲಾನ್‌ಗಳು ದೀರ್ಘಾವಧಿಯ ಯೋಜನೆಗಳನ್ನು ಬಯಸದ ಹಾಗೂ ಪ್ರತಿ ತಿಂಗಳು ರೀಚಾರ್ಜ್‌ ಮಾಡುವುದಕ್ಕೂ ಬಯಸದ ಬಳಕೆದಾರರಿಗೆ ಸೂಕ್ತವಾಗಿವೆ. ಅಲ್ಲದೆ ಈ ಪ್ಲಾನ್‌ಗಳಲ್ಲಿ ಹಲವು ಪ್ಲಾನ್‌ಗಳು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಸಹ ನೀಡುತ್ತವೆ. ಜೊತೆಗೆ 3GB ದೈನಂದಿನ ಡೇಟಾ ಪ್ರಯೋಜನವನ್ನು ಸಹ ನೀಡಲಿವೆ. ಹಾಗಾದ್ರೆ 56 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್‌ಗಳು ಏನೆಲ್ಲಾ ಪ್ರಯೋಜನ ನೀಡಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ ಟೆಲಿಕಾಂ 56 ದಿನಗಳ ವ್ಯಾಲಿಡಿಟಿ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ 56 ದಿನಗಳ ವ್ಯಾಲಿಡಿಟಿ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ 56 ದಿನಗಳ ವ್ಯಾಲಿಡಿಟಿ ಪ್ಲಾನ್‌ 399ರೂ.ಗಳಿಂದ ಪ್ರಾರಂಭವಾಗಲಿದೆ. ಇದರಲ್ಲಿ 399ರೂ. ಪ್ಲಾನ್‌ ಅನಿಯಮಿತ ಕರೆಗಳು ಮತ್ತು ದೈನಂದಿನ 1.5GB ಡೇಟಾ ಪ್ರಯೋಜನ ನೀಡಲಿದೆ. ಜೊತೆಗೆ ದಿನಕ್ಕೆ 100 SMS ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಏರ್‌ಟೆಲ್‌ ಟೆಲಿಕಾಂನ 449ರೂ, ಪ್ಲಾನ್‌ ಕೂಡ 56 ದಿನಗಳ ಮಾನ್ಯತೆ ಹೊಂದಿದೆ. ಇದು ದೈನಂದಿನ 2GB ಡೇಟಾ, ಟ್ರೂಲಿ ಅನ್‌ಲಿಮಿಟೆಡ್‌ ಕಾಲ್‌ ಮತ್ತು ದಿನಕ್ಕೆ 100 SMS ಪ್ರಯೋಜನ ನೀಡಲಿದೆ. ಹಾಗೆಯೇ ಏರ್‌ಟೆಲ್ 558ರೂ, ಪ್ರಿಪೇಯ್ಡ್ ಪ್ಲಾನ್‌ ಕೂಡ 56 ದಿನಗಳ ಮಾನ್ಯತೆ ನೀಡಲಿದೆ. ಈ ಪ್ಲಾನ್‌ ದೈನಂದಿ 3GB ಡೇಟಾ, ಡೈಲಿ 100 SMS ಮತ್ತು ಅನಿಯಮಿತ ಕರೆ ಪ್ರಯೋಜನ ನೀಡಲಿದೆ. ಈ ಪ್ಲಾನ್‌ಗಳು ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ಸಹ ನೀಡಲಿವೆ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ

ಜಿಯೋ 399ರೂ. ಪ್ರಿಪೇಯ್ಡ್‌ ಪ್ಲಾನ್‌ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ, ದೈನಂದಿನ 1.5GB ಡೇಟಾ ಮತ್ತು Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಪ್ರಯೋಜನ ನೀಡಲಿದೆ. ಇನ್ನು ಜಿಯೋ 444ರೂ.ಪ್ರಿಪೇಯ್ಡ್‌ ಪ್ಲಾನ್‌ 56 ದಿನಗಳ ಮಾನ್ಯತೆ ಹೊಂದಿದ್ದು, ಅನಿಯಮಿತ ಕರೆ ಮತ್ತು ದೈನಂದಿನ 2GB ಡೇಟಾ ಪ್ರಯೋಜನ ನೀಡಲಿದೆ. ಇದಲ್ಲದೆ ಜಿಯೋ 666ರೂ ಪ್ಲಾನ್‌ ಕೂಡ ಇದೇ ಸಾಲಿಗೆ ಸೇರಲಿದೆ. ಈ ಪ್ಲಾನ್‌ನಲ್ಲಿ ದೈನಂದಿನ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನಗಳನ್ನು ನೀಡಲಿದೆ. ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ಪೂರಕ ಪ್ರವೇಶವನ್ನು ನೀಡುತ್ತದೆ.

ವೋಡಾಫೋನ್‌ ಐಡಿಯಾ

ವೋಡಾಫೋನ್‌ ಐಡಿಯಾ

ವೋಡಾಫೋನ್‌ ಐಡಿಯಾ ಟೆಲಿಕಾಂ 269ಪ್ರಿಪೇಯ್ಡ್ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ದೈನಂದಿನ ಡಬಲ್‌ ಡೇಟಾ ಪ್ರಯೋಜನವನ್ನು ನೀಡಲಿದ್ದು, ಒಟ್ಟು 4GB ಡೇಟಾ ನೀಡಲಿದೆ. ಜೊತೆಗೆ ಅನಿಯಮಿತ ಕರೆ ಪ್ರಯೋಜನವನ್ನು ಸಹ ನೀಡಲಿದೆ. ಅಲ್ಲದೆ ಇದು ಬಳಕೆದಾರರಿಗೆ Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ವಿ ಟೆಲಿಕಾಂನ 399ರೂ ಬೆಲೆಯ ಪ್ರಿಪೇಯ್ಡ್ ಪ್ಲಾನ್ ಕೂಡ 56 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಇದು ಅನಿಯಮಿತ ಕರೆ ಮತ್ತು 100 SMS ಜೊತೆಗೆ 1.5GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯು Vi ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶದೊಂದಿಗೆ ವಾರಾಂತ್ಯದ ರೋಲ್‌ಓವರ್ ಡೇಟಾ ಪ್ರಯೋಜನಗಳನ್ನು ಸಹ ನೀಡುತ್ತದೆ. ಇದಲ್ಲದೆ Vi ನ 449ರೂ ಬೆಲೆಯ ಪ್ರಿಪೇಯ್ಡ್ ಯೋಜನೆ ಕೂಡ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ದೈನಂದಿನ 4GB ಡೇಟಾ ಮತ್ತು ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಪ್ರಯೋಜನ ನೀಡಲಿದೆ.

Best Mobiles in India

English summary
Airtel, Jio and Vi have prepaid plans starting at Rs 399 that have 56-days validity.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X