ಹೊಸ 'ಆಂಡ್ರಾಯ್ಡ್ 10 ಓಎಸ್‌' ಲಭ್ಯವಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಅನಿಸಿಕೊಳ್ಳಲು ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕ್ಯಾಮೆರಾ, ಪ್ರೊಸೆಸರ್‌, ಬ್ಯಾಟರಿ, ಡಿಸೈನ್, ಡಿಸ್‌ಪ್ಲೇ, RAM ಫೀಚರ್ಸ್‌ಗಳು ಹೆಚ್ಚು ಪ್ರಮುಖ್ಯತೆ ವಹಿಸುತ್ತವೆ. ಹಾಗೆಯೇ ಪ್ರೊಸೆಸರ್‌ಗೆ ಪೂರಕವಾಗಿ ಅಪರೇಟಿಂಗ್ ಸಿಸ್ಟಮ್ ಸಹ ಅತ್ಯಂತ ಅಗತ್ಯ ಸ್ಥಾನ ವಹಿಸುತ್ತದೆ. ಬಲವಾದ ಪ್ರೊಸೆಸರ್‌ಗೆ ಜೊತೆಯಾಗಿ ಅಪ್‌ಡೇಟ್‌ ಓಎಸ್‌ ಇದ್ದರೇ ಸ್ಮಾರ್ಟ್‌ಫೋನ್ ಕಾರ್ಯವೈಖರಿ ತುಂಬಾ ಸಲಿಸು.

ಅಪರೇಟಿಂಗ್ ಸಿಸ್ಟಮ್

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಅಪರೇಟಿಂಗ್ ಸಿಸ್ಟಮ್ ಸಹ ಮುಖ್ಯವಾಗಿದ್ದು, ಆಂಡ್ರಾಯ್ಡ್‌ ಓಎಸ್‌ ಈಗಾಗಲೇ ಹಲವು ನೂತನ ಆವೃತ್ತಿಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್‌ ಓರಿಯೊ ನಂತರ ಇತ್ತೀಚಿಗೆ ಹೆಚ್ಚು ಬಳಕೆಯಲ್ಲಿದ್ದಿದ್ದು ಆಂಡ್ರಾಯ್ಡ್‌ 9 ಪೈ ಓಎಸ್‌. ಇದರ ಜೊತೆಗೆ ಸದ್ಯ ನೂತನ ಆಂಡ್ರಾಯ್ಡ್‌ ಅಪ್‌ಡೇಟ್‌ ಆವೃತ್ತಿಯಂದರೇ ಅದು ಆಂಡ್ರಾಯ್ಡ್‌ 10 ಓಎಸ್‌ ಆಗಿದೆ. ಹಾಗಾದರೇ ಆಂಡ್ರಾಯ್ಡ್‌ 10 ಆವೃತ್ತಿಯನ್ನು ಪಡೆದಿರುವ ಇತ್ತೀಚಿಗಿನ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಒನ್‌ಪ್ಲಸ್‌ 7T

ಒನ್‌ಪ್ಲಸ್‌ 7T

2,400 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಇತ್ತೀಚಿಗಷ್ಟೆ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಪಡೆದುಕೊಂಡಿದೆ. 48ಎಂಪಿ + 12ಎಂಪಿ + 16ಎಂಪಿ, 3,500mAh ಬ್ಯಾಟರಿ, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯಾಗಿವೆ.

ನೋಕಿಯಾ 8.1

ನೋಕಿಯಾ 8.1

ಆಂಡ್ರಾಯ್ಡ್ 10 ಓಎಸ್‌ ಪಡೆದ ನೋಕಿಯಾದ ಫಸ್ಟ್ ಸ್ಮಾರ್ಟ್‌ಫೋನ್ ಇದಾಗಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3,500mAh ಬ್ಯಾಟರಿ ಲೈಫ್‌ 4GB RAM ಮತ್ತು 64GB ಸ್ಟೋರೇಜ್ ಆಯ್ಕೆ ಪಡೆದಿದೆ. ಜತೆಗೆ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ಗೂಗಲ್ ಪಿಕ್ಸಲ್ 3‍XL ಮತ್ತು ಪಿಕ್ಸಲ್ 3

ಗೂಗಲ್ ಪಿಕ್ಸಲ್ 3‍XL ಮತ್ತು ಪಿಕ್ಸಲ್ 3

ಗೂಗಲ್ ಸಂಸ್ಥೆಯ ಜನಪ್ರಿಯ ಪಿಕ್ಸಲ್ 3‍XL ಮತ್ತು ಪಿಕ್ಸಲ್ 3 ಸ್ಮಾರ್ಟ್‌ಫೋನ್‌ಗಳು ಸಹ ಆಂಡ್ರಾಯ್ಡ್ 10 ಓಎಸ್‌ ಅಪ್‌ಡೇಟ್‌ ಪಡೆದುಕೊಂಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಡ್ಯುಯಲ್ ಫ್ರಂಟ್‌ ಕ್ಯಾಮೆರಾ ಪ್ರಮುಖ ಆಕರ್ಷಣೆ ಆಗಿದ್ದು, ಹಿಂಬದಿಯ ಕ್ಯಾಮೆರಾ ಸಹ ಅತ್ಯುತ್ತಮ ರೆಸಲ್ಯೂಶನನ್ನು ಹೊಂದಿದೆ.

ಒನ್‌ಪ್ಲಸ್‌ 6

ಒನ್‌ಪ್ಲಸ್‌ 6

ಜನಪ್ರಿಯ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಗೂಗಲ್ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್‌ ಆವೃತ್ತಿಗೆ ವರ್ಗಾವಣೆ ಪಡೆದಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಪಡೆದಿರುದ್ದು, ಹಿಂಬದಿಯಲ್ಲಿ 16ಎಂಪಿ+20ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಪಡೆದಿದೆ. ಜತೆಗೆ 6GB RAM ಮತ್ತು 64GB ಸ್ಟೋರೇಜ್ ಆಯ್ಕೆ ಹೊಂದಿದೆ.

ಒನ್‌ಪ್ಲಸ್‌ 7T ಪ್ರೊ

ಒನ್‌ಪ್ಲಸ್‌ 7T ಪ್ರೊ

ಒನ್‌ಪ್ಲಸ್‌ 7T ಪ್ರೊ ಸ್ಮಾರ್ಟ್‌ಫೋನ್ ಇತ್ತೀಚಿಗಷ್ಟೆ ಆಂಡ್ರಾಯ್ಡ್‌ 10 ಆಕ್ಸಿಜನ್ ಓಎಸ್‌ ಅಪ್‌ಡೇಟ್ ಪಡೆದುಕೊಂಡಿದೆ. 48ಎಂಪಿ + 8ಎಂಪಿ + 16ಎಂಪಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಜೊತೆಗೆ 4,085mAh ಬ್ಯಾಟರಿ ಹಾಗೂ ಸ್ನ್ಯಾಪ್‌ಡ್ರಾಗನ್ 855 ಪ್ಲಸ್‌ ಪ್ರೊಸೆಸರ್‌ ಈ ಸ್ಮಾರ್ಟ್‌ಫೋನಿನ ಕಾರ್ಯವೈಖರಿಗೆ ಬಲ ನೀಡಿವೆ.

ಶಿಯೋಮಿ ರೆಡ್ಮಿ ಕೆ20 ಪ್ರೊ

ಶಿಯೋಮಿ ರೆಡ್ಮಿ ಕೆ20 ಪ್ರೊ

ಶಿಯೋಮಿಯ ಹೊಸ ಫ್ಲ್ಯಾಗ್‌ಶಿಪ್‌ ಮಾದರಿಯ ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ ಸಹ ಬೇಸ್ ಆಂಡ್ರಾಯ್ಡ್‌ 10 ಓಎಸ್‌ ಆವೃತ್ತಿಯನ್ನು ಹೊಂದಿದ್ದು, ಕೆಲವು ಹೊಸ ಫೀಚರ್ಸ್‌ಗಳು ಸೇರಿಕೊಂಡಿವೆ. ಈ ಸ್ಮಾರ್ಟ್‌ಫೋನ್‌ 48ಎಂ + 8ಎಂಪಿ + 13ಎಂಪಿ ಕ್ಯಾಮೆರಾ ಹೊಂದಿದ್ದು, ಜತೆಗೆ 4,000mAh ಬ್ಯಾಟರಿ ಪವರ್ ಅನ್ನು ಹೊಂದಿದೆ.

Most Read Articles
Best Mobiles in India

English summary
Top smartphones in India that are currently running on the latest OS - Android 10. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X