ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಅವಧಿಯನ್ನು ಹೆಚ್ಚಿಸುವುದಕ್ಕೆ ಹೀಗೆ ಮಾಡಿ!

|

ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾದ ಪ್ರೊಸೆಸರ್‌ಗಳನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳನ್ನು ನಾವಿಂದು ಕಾಣಬಹುದು. ಆದರೂ ಸ್ಮಾರ್ಟ್‌ಫೋನ್‌ ಬ್ಯಾಟರಿ ವಿಚಾರದಲ್ಲಿ ಇನ್ನೂ ಕೂಡ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ಬಿಗ್‌ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳು ಬಂದರು ಬ್ಯಾಟರಿ ಅವಧಿಯಲ್ಲಿ ಹೆಚ್ಚಿನ ಸಮಸ್ಯೆಯನ್ನು ಗ್ರಾಹಕರು ಅನುಭವಿಸುತ್ತಲೇ ಇದ್ದಾರೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯದ ವಿಚಾರದಲ್ಲಿ ಎಷ್ಟೇ ಬದಲಾದರೂ ಬಳಕೆದಾರರಿಗೆ ತೃಪ್ತಿ ಇಲ್ಲ. ಏಕೆಂದರೆ ಹೆಚ್ಚಿನ ಬ್ರೈಟ್‌ನೆಸ್‌ ಸ್ಕ್ರೀನ್‌, ತೆಳ್ಳನೆಯ ಫೋನ್ ವಿನ್ಯಾಸ ಎಂದರೆ ಹೆಚ್ಚಿನ ಸಾಧನಗಳಲ್ಲಿನ ಲಿಥಿಯಂ-ಐಯಾನ್ ಬ್ಯಾಟರಿಗಳು ಸಾಕಷ್ಟು ದೊಡ್ಡದಾಗಿರುವುದಿಲ್ಲ. ಇದೆಲ್ಲ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಬಳಕೆದಾರರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ನಿವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಅವಧಿಯನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ಅನುಸರಿಸಬಹುದಾಗಿದೆ. ಹಾಗಾದ್ರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಅವಧಿ ಹೆಚ್ಚಸುವ ಕ್ರಮಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಬ್ರೈಟ್‌ನೆಸ್‌ ಕಂಟ್ರೋಲ್‌ ಮಾಡಿ

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಬ್ರೈಟ್‌ನೆಸ್‌ ಕಂಟ್ರೋಲ್‌ ಮಾಡಿ

ಆಂಡ್ರಾಯ್ಡ್ ಫೋನ್‌ಗಳಲ್ಲಿ ಬ್ಯಾಟರಿ ಡ್ರೈನ್ ಬಂದಾಗ ಹೆಚ್ಚಿನ ಸಾಮರ್ಥ್ಯದ ಸ್ಕ್ರೀನ್‌ ಬ್ರೈಟ್‌ನೆಸ್‌ ವಿಚಾರದಲ್ಲಿ ಖಾಲಿಯಾಗುತ್ತದೆ. ಆದರಿಂದ ಆಟೋಮ್ಯಾಟಿಕ್‌ ಆಗಿ ಬ್ರೈಟ್‌ನೆಸ್‌ ಅನ್ನು ಸೆಟ್‌ ಮಾಡಬಹುದು. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುವುದು ತಪ್ಪಲಿದೆ. ಆಟೋ ಬ್ರೈಟ್‌ನೆಸ್‌ ಮೋಡ್ ಬಳಕೆಯಿಂದ ಬ್ಯಾಟರಿ ಅವಧಿ ಹೆಚ್ಚಿಸಬಹುದಾಗಿದೆ.

ಬ್ಯಾಟರಿ ಆಪ್ಟಿಮೈಸೇಶನ್ ಅನ್ನು ಆನ್ ಮಾಡಿ

ಬ್ಯಾಟರಿ ಆಪ್ಟಿಮೈಸೇಶನ್ ಅನ್ನು ಆನ್ ಮಾಡಿ

ಆಂಡ್ರಾಯ್ಡ್ ಮಾರ್ಷ್ಮ್ಯಾಲೋ (6.0) ರಿಂದ ಗೂಗಲ್ ಆಪರೇಟಿಂಗ್ ಸಿಸ್ಟಂನಲ್ಲಿ ಬ್ಯಾಟರಿ ಅವಧಿಯನ್ನು ಉತ್ತಮವಾಗಿ ನಿಯಂತ್ರಿಸುವ ಮಾರ್ಗಗಳನ್ನು ಸೇರಿಸಿದೆ. ಬ್ಯಾಟರಿ-ತೀವ್ರವಾದ ಕಾರ್ಯಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಮಾಡುವುದರಿಂದ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವುದನ್ನು ಇದು ಒಳಗೊಂಡಿರುತ್ತದೆ. ಇದನ್ನು ಕಳೆದ ಎರಡು ವರ್ಷಗಳಲ್ಲಿ ಇತ್ತೀಚಿನ ನವೀಕರಣಗಳೊಂದಿಗೆ ಸುಧಾರಿಸಲಾಗಿದೆ. ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ನೀವು ಬಯಸಿದರೆ, ಅಡಾಪ್ಟಿವ್ ಬ್ಯಾಟರಿ ಅಥವಾ ಬ್ಯಾಟರಿ ಆಪ್ಟಿಮೈಸೇಶನ್ ಆನ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಸೆಟ್ಟಿಂಗ್‌ಗಳನ್ನು ನೀವು ಪರಿಶೀಲಿಸಬಹುದು.

ನಿಮ್ಮ ಸ್ಕ್ರೀನ್‌ ಕಾಲಾವಧಿ ಕಡಿಮೆ ಮಾಡಿ

ನಿಮ್ಮ ಸ್ಕ್ರೀನ್‌ ಕಾಲಾವಧಿ ಕಡಿಮೆ ಮಾಡಿ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಒಂದು ಅಥವಾ ಎರಡು ನಿಮಿಷದ ನಂತರ ಪರದೆಯನ್ನು ಆಫ್ ಮಾಡಲು ಹೊಂದಿಸಲಾಗಿದೆ. ಇದು ಅಲ್ಪಾವಧಿಯಂತೆ ತೋರುತ್ತದೆಯಾದರೂ, ನಿಮ್ಮ ಪರದೆಯ ಕಾಲಾವಧಿಯನ್ನು 30 ಸೆಕೆಂಡ್‌ಗಳಿಗೆ ಇಳಿಸುವುದರಿಂದ ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ಬ್ಯಾಟರಿ ಅವಧಿಯನ್ನು ಉಳಿಸಲು ಹೆಚ್ಚಿನ ಬ್ಯಾಟರಿ ಬಳಕೆಯ ಅಪ್ಲಿಕೇಶನ್‌ಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗದಂತೆ ನೀವು ನಿರ್ಬಂಧಿಸಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಬಳಕೆಯಾಗದ ಖಾತೆಗಳನ್ನು ಡಿಲೀಟ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಬಳಕೆಯಾಗದ ಖಾತೆಗಳನ್ನು ಡಿಲೀಟ್‌ ಮಾಡಿ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಅನೇಕ ಖಾತೆಗಳಿಗೆ ಸೈನ್ ಇನ್ ಆಗಿದ್ದರೆ, ಪ್ರತಿ ಖಾತೆಯು ಸಂಪರ್ಕಗಳು, ಇಮೇಲ್, ಫೋಟೋಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅಂತರ್ಜಾಲದಿಂದ ಡೇಟಾವನ್ನು ಸಿಂಕ್ ಮಾಡುವುದರಿಂದ ನೀವು ಬೇಗನೆ ಸಾಕಷ್ಟು ಬ್ಯಾಟರಿ ಅವಧಿಯನ್ನು ಕಳೆದುಕೊಳ್ಳಬಹುದು. ಅನಗತ್ಯ ಖಾತೆಗಳನ್ನು ತೆಗೆದುಹಾಕುವುದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಸುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಖಾತೆಗಳನ್ನು ತೆಗೆದುಹಾಕಲು ನೀವು ಬಯಸದಿದ್ದರೆ, ಪರ್ಯಾಯವಾಗಿ ಆಟೋ-ಸಿಂಕ್ ಅನ್ನು ನಿಷ್ಕ್ರಿಯಗೊಳಿಸುವುದನ್ನು ನೀವು ಪರಿಗಣಿಸಬಹುದು.

‘ಬ್ಯಾಟರಿ ಸೇವರ್' ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿ

‘ಬ್ಯಾಟರಿ ಸೇವರ್' ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿ

ಪ್ಲೇ ಸ್ಟೋರ್‌ನ ಅನೇಕ ಡೆವಲಪರ್‌ಗಳು ಬ್ಯಾಟರಿ ಅವಧಿ ಹೆಚ್ಚಿಸುವ ಭರವಸೆ ನೀಡುವ ನಕಲಿ ಅಪ್ಲಿಕೇಶನ್‌ಗಳನ್ನು ನೀಡುತ್ತಾರೆ. ಇವುಗಳು ಯಾವುದೇ ಬ್ಯಾಟರಿ ಅವಧಿಯನ್ನು ಉಳಿಸುವುದಿಲ್ಲ. ಈ ಹಲವು ಅಪ್ಲಿಕೇಶನ್‌ಗಳು ಮೂಲಭೂತವಾಗಿ "ಟಾಸ್ಕ್-ಕಿಲ್ಲರ್" ಅಪ್ಲಿಕೇಶನ್‌ಗಳು ಅಥವಾ "RAM ಕ್ಲೀನರ್" ಅಪ್ಲಿಕೇಶನ್‌ಗಳಾಗಿವೆ. ಅವರು ನಿಮ್ಮ ಎಲ್ಲಾ ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್‌ಗಳನ್ನು ಹ್ಯಾಕ್‌ ಮಾಡಲಿವೆ. ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದಾಗಿದೆ.

Most Read Articles
Best Mobiles in India

English summary
If you are experiencing poor battery life on your Android smartphone but aren't ready to upgrade yet, check out these 5 tips in our brief and handy how-to guide.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X