ಈ ತಿಂಗಳು ಲಾಂಚ್ ಆಗಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!

|

ವಿಶ್ವವ್ಯಾಪಿ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗಿದ್ದು, ಕೋವಿಡ್‌-19 ಸೋಂಕು ಹರಡದಂತೆ ತಡೆಯಲು ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ವ್ಯವಸ್ಥೆಯ ಮೋರೆ ಹೋಗಿವೆ. ಈ ನಿಟ್ಟಿನಲ್ಲಿ ಕಳೆದ ತಿಂಗಳು ಹಲವು ಟೆಕ್ ಕಾರ್ಯಕ್ರಮಗಳು ರದ್ದಾಗಿವೆ. ಈ ವೇಳೆಯಲ್ಲಿ ಕೆಲವು ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದ್ದರೇ, ಇನ್ನೂ ಕೆಲವು ಸಂಸ್ಥೆಗಳು ಫೋನ್ ಲಾಂಚ್ ಅನ್ನು ಮುಂದೂಡಿಕೆ ಮಾಡಿವೆ. ಆದರೆ ಈ ತಿಂಗಳು ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿವೆ.

ಕೊರೊನಾ ವೈರಸ್‌

ಹೌದು, ಕೊರೊನಾ ವೈರಸ್‌ ಪರಿಣಾಮದಿಂದಾಗಿ ಮಾರ್ಚ್ ತಿಂಗಳು ಮೊಬೈಲ್ ಮಾರುಕಟ್ಟೆ ಥಂಡಾ ಹೊಡೆದಿದೆ. ಆದ್ರೆ ಈ ತಿಂಗಳಿನಲ್ಲಿ ಕೆಲವು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುವ ನಿರೀಕ್ಷೆಗಳಿವೆ. ಆ ಪೈಕಿ ಒನ್‌ಪ್ಲಸ್‌, ಒಪ್ಪೊ ರೆನೊ, ಹಾನರ್‌, ರಿಯಲ್‌ ಮಿ ಮತ್ತು ಆಪಲ್‌ ಸಂಸ್ಥೆಗಳ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಆಗುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಹಾಗಾದರೇ ಈ ತಿಂಗಳು ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 8

ಒನ್‌ಪ್ಲಸ್‌ 8

ಜನಪ್ರಿಯ ಒನ್‌ಪ್ಲಸ್‌ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿಯು ಇದೇ ಏ.14 ರಂದು ಬಿಡುಗಡೆ ಆಗುವದು ಬಹುತೇಕ ಖಚಿತ ಎನ್ನಲಾಗಿದೆ. ಈ ಒನ್‌ಪ್ಲಸ್‌ 8 ಸರಣಿಯು ಒಟ್ಟು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಒನ್‌ಪ್ಲಸ್‌ 8, ಒನ್‌ಪ್ಲಸ್‌ 8 ಪ್ರೊ ಜೊತೆಗೆ ಇನ್ನೊಂದು ಸ್ಮಾರ್ಟ್‌ಫೋನ್ ಸಹ ಲಾಂಚ್ ಆಗಲಿದೆ ಎಂದು ಹೇಳಲಾಗಿದೆ.

ಒಪ್ಪೊ ರೆನೋ ಏಸ್‌ 2

ಒಪ್ಪೊ ರೆನೋ ಏಸ್‌ 2

ಚೀನಾ ಮೂಲದ ಜನಪ್ರಿಯ ಒಪ್ಪೊ ಸಂಸ್ಥೆಯು ಇದೀಗ ಮತ್ತೆ ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಬಹುನಿರೀಕ್ಷಿತ ಒಪ್ಪೊ ರೆನೋ ಏಸ್‌ 2 ಈ ತಿಂಗಳ ಅಂತ್ಯದೊಳಗೆ ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ಹೊಂದಿದ್ದು, 8GB ಮತ್ತು 12GB RAM ಆಯ್ಕೆಗಳನ್ನು ಹೊಂದಿರಲಿದೆ. ಹಾಗೆಯೇ ಈ ಫೋನ್ ಬ್ಲ್ಯಾಕ್, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಯನ್ನು ಪಡೆದಿರಲಿದೆ.

ಐಫೋನ್ SE 2020

ಐಫೋನ್ SE 2020

ಆಪಲ್ ಸಂಸ್ಥೆಯು ಬಜೆಟ್ ಪ್ರೈಸ್‌ನಲ್ಲಿ ಐಫೋನ್‌ SE 2020 ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವುದಾಗಿ ಹೇಳಿದೆ. ಈ ಬಜೆಟ್ ಐಫೋನ್ ಸಹ ಇದೇ ತಿಂಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಈ ಐಫೋನ್ A13 ಬಯೋನಿಕ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. 4.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 256 GB ಆಂತರಿಕ ಸ್ಟೋರೇಜ್ ಯ್ಕೆಯನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ರಿಯಲ್‌ ಮಿ Narzo 10 ಮತ್ತು 10A

ರಿಯಲ್‌ ಮಿ Narzo 10 ಮತ್ತು 10A

ಜನಪ್ರಿಯ ರಿಯಲ್‌ ಮಿ ಸಂಸ್ಥೆಯು ಹೊಸದಾಗಿ ರಿಯಲ್‌ ಮಿ Narzo 10 ಮತ್ತು 10A ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಈ ತಿಂಗಳ ಮಾರ್ಚ್ 26ರಂದು ಲಾಂಚ್ ಮಾಡಲು ಸಜ್ಜಾಗಿದೆ. ಈ ಫೋನ್ ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, ಪ್ರೊಸೆಸರ್ ಸಹ ಹೆಚ್ಚು ವೇಗದಲ್ಲಿರಲಿದೆ. ಹಾಗೆಯೇ ಕ್ಯಾಮೆರಾ ವಿಶೇಷತೆಯನ್ನು ಇದು ಒಳಗೊಂಡಿರಲಿದೆ.

ಹಾನರ್‌ ಫೋನ್‌ಗಳು

ಹಾನರ್‌ ಫೋನ್‌ಗಳು

ಹಾನರ್‌ ಸಂಸ್ಥೆಯು ಸಹ ಈ ತಿಂಗಳು ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಹಾನರ್‌ ಪ್ಲೇ 4 ಮತ್ತು 4T ಪ್ರೊ, ಹಾನರ್ ನೋವಾ 7 ಸರಣಿ, ಹಾನರ್‌ 30 ಮತ್ತು ಹಾನರ್ 30 ಪ್ರೊ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

Best Mobiles in India

English summary
Several upcoming smartphones are going to be officially unveiled in April 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X