ಈ ತಿಂಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ದೈತ್ಯ ಸ್ಮಾರ್ಟ್‌ಫೋನ್‌ಗಳು!

|

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಹೊಸ ಫೀಚರ್ಸ್‌ಗಳನ್ನು ಹೊಂದಿರುವ ನೂತನ ಫೋನ್‌ಗಳು ಬಿಡುಗಡೆ ಆಗುತ್ತವೆ. ಅದರಲ್ಲಿಯೂ ಪ್ರತಿ ವರ್ಷ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮವು ಸ್ಮಾರ್ಟ್‌ಫೋನ್‌ಗಳ ಅನಾವರಣಕ್ಕೆ ದೊಡ್ಡ ವೇದಿಕೆ ಆಗಿದೆ. ಆದರೆ ಈ ಬಾರಿಯ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕೊರೊನಾ ವೈರಸ್ ಭೀತಿಯಿಂದಾಗಿ ನಡೆಯಲಿಲ್ಲ. ಆದರೂ ಈ ತಿಂಗಳು ಕೆಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.

ಜನಪ್ರಿಯ ಮೊಬೈಲ್‌ ಕಂಪನಿ

ಹೌದು, ಜನಪ್ರಿಯ ಮೊಬೈಲ್‌ ಕಂಪನಿಗಳು ಈ (ಮಾರ್ಚ್) ತಿಂಗಳಿನಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡುವುದಾಗಿ ಹೇಳಿವೆ. ಈ ತಿಂಗಳು ಮುಖ್ಯವಾಗಿ ರಿಯಲ್‌ ಮಿ, ಶಿಯೋಮಿ, ಸ್ಯಾಮ್‌ಸಂಗ್, ನೋಕಿಯಾ, ಒಪ್ಪೊ, ವಿವೋ, ಹುವಾವೆ, ನುಬಿಯಾ ಕಂಪನಿಗಳು ಸಹ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿರುವುದು ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗಾದರೆ ಈ ತಿಂಗಳು ಅನಾವರಣಗೊಳ್ಳಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9

ಶಿಯೋಮಿ ಸಂಸ್ಥೆಯು ಬಹುನಿರೀಕ್ಷಿತ 'ರೆಡ್ಮಿ ನೋಟ್ 9' ಸ್ಮಾರ್ಟ್‌ಫೋನ್ ಸರಣಿ ಇದೇ ಮಾರ್ಚ್ 12ರಂದು ಬಿಡುಗಡೆ ಆಗಲಿದೆ. ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ಈ ಫೋನ್ ಲಾಂಚ್ ಕಾರ್ಯಕ್ರಮವನ್ನು ಸಂಸ್ಥೆಯು ರದ್ದು ಮಾಡಿದ್ದು, ಆನ್‌ಲೈನ್ ಮೂಲಕವೇ ಬಿಡುಗಡೆ ನಡೆಸಲಿದೆ ಎಂದು ಹೇಳಿದೆ. ಇನ್ನು ಈ ಫೋನ್ ಸರಣಿಯು ರೆಡ್ಮಿ ನೋಟ್ 9 ಮತ್ತು ರೆಡ್ಮಿ ನೋಟ್ 9 ಪ್ರೊ ವೇರಿಯಂಟ್‌ ಹೊಂದಿರಲಿದೆ. ಈ ಫೋನ್ ಫೀಚರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಲೀಕ್ ಇಲ್ಲ. ಆದರೆ ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿ ಫೀಚರ್ಸ್‌ಗಳಲ್ಲಿ ವಿಶೇಷತೆ ಇರಲಿದೆ ಎಂದು ಊಹಿಸಲಾಗಿದೆ.

ರಿಯಲ್‌ ಮಿ 6 ಮತ್ತು 6 ಪ್ರೊ

ರಿಯಲ್‌ ಮಿ 6 ಮತ್ತು 6 ಪ್ರೊ

ಚೀನಾ ಮೂಲದ ರಿಯಲ್‌ ಮಿ ಸ್ಮಾರ್ಟ್‌ಫೋನ್ ಸಂಸ್ಥೆಯ ರಿಯಲ್‌ ಮಿ 6 ಮತ್ತು ರಿಯಲ್ ಮಿ 6 ಪ್ರೊ ಸ್ಮಾರ್ಟ್‌ಫೋನ್ ಸಹ ಇದೇ ಮಾರ್ಚ್ 5ರಂದು (ಇಂದು) ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಇರಲಿದೆ. ಡಿಸ್‌ಪ್ಲೇಯು ರಿಫ್ರೇಶ್ ರೇಟ್ 90Hz ಆಗಿರಲಿದ್ದು, ಪಂಚ್ ಹೋಲ್ ಡಿಸ್‌ಪ್ಲೇ ಮಾದರಿ ಇರಲಿದೆ. ಡ್ಯುಯಲ್ ಸೆಲ್ಫಿ ಹೊಂದಿರುವ ಸಾಧ್ಯತೆಗಳಿವೆ.

ಒಪ್ಪೊ ಫೈಂಡ್ X2 ಮತ್ತು X2 ಪ್ರೊ

ಒಪ್ಪೊ ಫೈಂಡ್ X2 ಮತ್ತು X2 ಪ್ರೊ

ಒಪ್ಪೊ ಸಂಸ್ಥೆಯ ಬಹುನಿರೀಕ್ಷ ಹೂ ಎಂಡ್‌ ಮಾದರಿಯ ಫೈಂಡ್ X2 ಮತ್ತು ಫೈಂಡ್ X2 ಪ್ರೊ ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 6ರಂದು ಅನಾವರಣಗೊಳ್ಳಲಿವೆ. ಡಿಸ್‌ಪ್ಲೇ ರಿಫ್ರೇಶ್‌ ರೇಟ್ 120 Hz, 3K ಪಿಕ್ಸಲ್ ರೆಸಲ್ಯೂಶನ್, 12GB RAM, 48ಎಂಪಿ ಕ್ಯಾಮೆರಾ ಈ ಸ್ಮಾರ್ಟ್‌ಫೋನಿನ ಪ್ರಮುಖ ಫೀಚರ್ಸ್‌ಗಳಾಗಿರಲಿವೆ ಎಂದು ಹೇಳಲಾಗಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 855 ಇರಲಿದೆ ಎನ್ನಲಾಗಿದೆ.

ವಿವೋ ವಿ19

ವಿವೋ ವಿ19

ಚೀನಾ ಮೂಲದ ವಿವೋ ಸಂಸ್ಥೆಯು ಇದೇ ಮಾರ್ಚ್ 10ರಂದು ತನ್ನ ವಿವೋ ವಿ19 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್ ಇರಲಿದ್ದು, ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ನಲ್ಲಿರಲಿದೆ. AMOLED ಮಾದರಿಯ ಡಿಸ್‌ಪ್ಲೇ ಹೊಂದಿರಲಿದ್ದು, ಪಂಚ್ ಹೋಲ್ ಡಿಸ್‌ಪ್ಲೇ ಮಾದರಿ ಹೊಂದಿರಲಿದೆ. ಕ್ಯಾಮೆರಾ ರಚನೆಯು L ಶೈಲಿಯಲ್ಲಿರಲಿದೆ ಎಂದು ಹೇಳಲಾಗಿದೆ.

ಹುವಾವೆ ಪಿ40

ಹುವಾವೆ ಪಿ40

ಜನಪ್ರಿಯ ಹುವಾವೆ ಸಂಸ್ಥೆಯು ಇದೇ ಮಾರ್ಚ್ 26ರಂದು ಹುವಾವೆ ಪಿ40 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಲಿದೆ. ಹುವಾವೆ ಪಿ40 ಸ್ಮಾರ್ಟ್‌ಫೋನ್ ಪೆಂಟಾ ಕ್ಯಾಮೆರಾ ರಚನೆ ಹೊಂದಿರಲಿದ್ದು, 52ಎಂಪಿ ಸೆನ್ಸಾರ್ ಮತ್ತು 40ಎಂಪಿ ಸೆನ್ಸಾರ್ ಕ್ಯಾಮೆರಾ ಇರಲಿದೆ. ಕಿರನ್ 990 ಚಿಪ್‌ಸೆಟ್ ಪ್ರೊಸಸರ್‌ ಒಳಗೊಂಡಿರಲಿದೆ. ವೈಫೈ 6 ಸಾಮರ್ಥ್ಯ ಇರಲಿದ್ದು, ವೇಗದ ಕನೆಕ್ಟಿವಿಟಿ ಇರಲಿದೆ.

Best Mobiles in India

English summary
Best upcoming smartphones which are going to be officially announced in March 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X