ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್ ಜಾಸ್ತಿ ಮಾಡ್ತೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ

|

ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಂಜಿಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್, ದಿನಕ್ಕೊಂದು ಹೊಸ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದೆ. ಈಗಾಗಲೇ ಹಲವಾರು ವಿಶೇಷ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡುವ ಮೂಲಕ ತನ್ನ ಕುಟುಂಬದ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ನೀಡುವ ಆಯ್ಕೆಯೂ ವಾಟ್ಸ್‌ಆಪ್ ಬಳಕೆದಾರನ್ನು ಮತ್ತಷ್ಟು ಸಂತೋಷ ಪಡಿಸಲಿದೆ ಎನ್ನಬಹುದಾಗಿದೆ.

ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್ ಜಾಸ್ತಿ ಮಾಡ್ತೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ

ಈಗಾಗಲೇ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಮಾಡುವ ಆಯ್ಕೆಯನ್ನು ನೀಡಿದೆ. ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಸೇವೆಯೂ ಆರಂಭವಾದ ನಂತರದಲ್ಲಿ ವಿಡಿಯೋ ಕಾಲಿಂಗ್‌ಗೆಂದೆ ಕಾರ್ಯನಿರ್ವಹಿಸುತ್ತಿದ್ದ ಅನೇಕ ಆಪ್‌ ಗಳು ಸ್ಪರ್ಧೆಯನ್ನು ಎದುರಿಸಲಾಗಿದೆ ಸೋತು ಹೋಗಿವೆ. ದೇಶದಲ್ಲಿ ಹೆಚ್ಚಿನ ಬಳಕೆದಾರರು ವಿಡಿಯೋ ಕಾಲಿಂಗ್ ಮಾಡುವ ಸಲುವಾಗಿ ವಾಟ್ಸ್‌ಆಪ್ ಅನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಓದಿರಿ: ಇನ್ನು ಆಧಾರ್ ಕಾರ್ಡ್ ಮಾಡಿಸುವುದು ಬಲು ದುಬಾರಿ..! ಶೇ.18 GST ವಿಧಿಸಿದ ಕೇಂದ್ರ..!

ಗ್ರೂಪ್ ವಿಡಿಯೋ ಕಾಲಿಂಗ್

ಗ್ರೂಪ್ ವಿಡಿಯೋ ಕಾಲಿಂಗ್

ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಈಗಾಗಲೇ ಖ್ಯಾತಿಯನ್ನು ಗಳಿಸಿಕೊಂಡಿದ್ದು, ಇದನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಮತ್ತು ಬಳಕೆದಾರರಿಗೆ ಇನ್ನುಷ್ಟು ಹೆಚ್ಚಿನ ಆಯ್ಕೆಯನ್ನು ನೀಡುವ ಸಲುವಾಗಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಒಟ್ಟಿಗೆ ಮೂರು ಮಂದಿ

ಒಟ್ಟಿಗೆ ಮೂರು ಮಂದಿ

ಈಗಾಗಲೇ ಮೊಬೈಲ್ ನಲ್ಲಿ ಕಾನ್ಫರೆನ್ಸ್ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲಿಂಗ್‌ನಲ್ಲಿ ಒಟ್ಟು ಮೂರು ಮಂದಿ ಕಾಣಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಒಟ್ಟಾಗಿ ಕರೆ ಮಾಡಿದವರು ಸೇರಿ ನಾಲ್ಕು ಮಂದಿ ಇಲ್ಲಿ ಸೇರಿಕೊಳ್ಳಬಹುದಾಗಿದೆ.

ಎಲ್ಲಾರಿಗೂ ಲಭ್ಯ

ಎಲ್ಲಾರಿಗೂ ಲಭ್ಯ

ವಾಟ್ಸ್‌ಆಪ್ ನೀಡುತ್ತಿರುವ ಈ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ವಿಂಡೋಸ್, ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದೆ. ಈಗಾಗಲೇ ಈ ಹೊಸ ಸೇವೆಯ ಪರೀಕ್ಷೆಯನ್ನು ವಾಟ್ಸ್‌ಆಪ್ ನಡೆಸುತ್ತಿದೆ ಎನ್ನಲಾಗಿದೆ.

How to save WhatsApp Status other than taking screenshots!! Kannada
ಮಾರುಕಟ್ಟೆಯಲ್ಲಿ ಸ್ಪರ್ಧೆ:

ಮಾರುಕಟ್ಟೆಯಲ್ಲಿ ಸ್ಪರ್ಧೆ:

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿ ವಿಡಿಯೋ ಕಾಲಿಂಗ್‌ ಸೇವೆಯನ್ನು ನೀಡುತ್ತಿರುವ ಆಪ್‌ಗಳೊಂದಿಗೆ ಸ್ಪರ್ಧೆಯನ್ನು ನಡೆಸಲು ವಾಟ್ಸ್‌ಆಪ್ ಈ ಕ್ರಮಕ್ಕೆ ಮುಂದಾಗಿದೆ. ಹೈಕ್ ಮೆಸೆಂಜರ್ ಮತ್ತು ಸ್ಕೈಪ್‌ಗಳನ್ನು ಮೀರಿಸಲು ವಾಟ್ಸ್‌ಆಪ್ ಈ ಹೊಸ ಸೇವೆಯನ್ನು ನೀಲಿದೆ ಎನ್ನಲಾಗಿದೆ.

ಒಂದು ಬಿಲಿಯನ್ ಬಳಕೆದಾರರು:

ಒಂದು ಬಿಲಿಯನ್ ಬಳಕೆದಾರರು:

ಈ ಹಿಂದೆ ವಾಟ್ಸ್‌ಆಪ್ ಅನ್ನು 2014ರಲ್ಲಿ ಫೇಸ್‌ಬುಕ್ ಖರೀದಿ ಮಾಡಿದ ಸಂದರ್ಭದಲ್ಲಿ 450 ಮಿಲಿಯನ್ ಮಂದಿ ಬಳಕೆದಾರರನ್ನು ಹೊಂದಿತ್ತು. ಆದರೆ ಇಂದು ತಿಂಗಳಿಗೆ ವಾಟ್ಸ್‌ಆಪ್ ಬಳಕೆ ಮಾಡುವವರ ಸಂಖ್ಯೆಯೂ 1.3 ಬಿಲಿಯನ್ ಸಂಖ್ಯೆಯನ್ನು ತಲುಪಿದ್ದು, ಅಲ್ಲದೇ 1 ಮಿಲಿಯನ್ ಮಂದಿ ಆಕ್ಟೀವ್ ಬಳಕೆದಾರರಿದ್ದಾರೆ.

ಬಿಸ್ನೆಸ್ ಆಪ್‌ಗೆ ಬೇಡಿಕೆ:

ಬಿಸ್ನೆಸ್ ಆಪ್‌ಗೆ ಬೇಡಿಕೆ:

ಇದಲ್ಲದೇ ಮೊನ್ನೆ ಮಾರುಕಟ್ಟೆಗೆ ಬಿಡುಗಡೆಯಾದಂತಹ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯೂ ನಿರ್ಮಾಣವಾಗಿದ್ದು, ಈಗಾಗಲೇ ದೆತ್ಯ ಕಂಪನಿಗಳು ಈ ಆಪ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಇದು ಸಹ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ.

ವಾಟ್ಸ್‌ಆಪ್‌ ಶೀಘ್ರವೇ ಬದಲಾಗಲಿದೆ:

ವಾಟ್ಸ್‌ಆಪ್‌ ಶೀಘ್ರವೇ ಬದಲಾಗಲಿದೆ:

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಈಗಾಗಲೇ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಭಾರತದ ಹಲವು ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಶೀಘ್ರವೇ ವಾಟ್ಸ್‌ಆಪ್ ಪೇಮೆಂಟ್ ಶುರುವಾಗಲಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ. ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ ಆಪ್‌ ಅನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಈ ಹೊಸ ಆಯ್ಕೆಯಿಂದ ಬಳಕೆದಾರರ ಸಂಖ್ಯೆಯಲ್ಲಿ ಇನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೊಸ ಸೇವೆಯೊಂದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರಲಿದೆ

ಹೊಸ ಸೇವೆಯೊಂದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರಲಿದೆ

ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳೊಂದಿಗೆ ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ICICI ಬ್ಯಾಂಕ್‌, HDFC ಬ್ಯಾಂಕ್‌ ಮತ್ತು ಆಕ್ಸಿಸ್‌ ಬ್ಯಾಂಕುಗಳೊಂದಿಗೆ ಈಗಾಗಲೇ ಕೈ ಜೋಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅನುಮತಿ ಪಡೆದಿದೆ:

ಅನುಮತಿ ಪಡೆದಿದೆ:

ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ 2017ರಲ್ಲೇ ಕೇಂದ್ರ ಸರಕಾರದಿಂದ ಪೇಮೆಂಟ್‌ ಸೇವೆಯನ್ನು ಆರಂಭಿಸಲು ಅನುಮತಿ ಪಡೆದುಕೊಂಡಿದೆ ಎನ್ನಲಾಗಿದೆ. ಸದ್ಯ ಅಂತಿಮ ತಯಾರಿಯೂ ನಡೆಯುತ್ತಿದ್ದು, ಶೀಘ್ರವೇ ಅನುಷ್ಠಾನವಾಗಲಿದೆ ಎನ್ನಲಾಗಿದೆ.

UPI ಆಧಾರಿತ:

UPI ಆಧಾರಿತ:

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೇಮೆಂಟ್‌ಗಳು ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(UPI) ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಸಹ UPI ನಿಂದಲೇ ಕಾರ್ಯನಿರ್ವಹಿಸಲಿದೆ.

ಹೆಚ್ಚಿನ ಭದ್ರತೆ:

ಹೆಚ್ಚಿನ ಭದ್ರತೆ:

ಆನ್‌ಲೈನ್‌ ವ್ಯವಹಾರಗಳಲ್ಲಿ ಗ್ರಾಹಕರ ಬ್ಯಾಂಕಿಂಗ್‌ ಮಾಹಿತಿಯ ಸೋರಿಕೆಯಾಗದಂತೆ ತಡೆಯಲು ಎಲ್ಲಾ ರೀತಿಯಲ್ಲಿ ವಾಟ್ಸ್‌ಆಪ್ ಮುಂದಾಗಿದೆ. ಇದಕ್ಕಾಗಿ ಹಲವು ಸುತ್ತಿನ ಸೆಕ್ಯೂರಿಟಿಯನ್ನು ನೀಡಲು ಮುಂದಾಗಿದೆ. ಸೇವೆ ಪ್ರಾರಂಭಕ್ಕೂ ಮುನ್ನವೇ ಈ ಕುರಿತು ಪರೀಕ್ಷೆಯನ್ನು ನಡೆಸುತ್ತಿದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆ:

ಮಾರುಕಟ್ಟೆಯಲ್ಲಿ ಸ್ಪರ್ಧೆ:

ವಾಟ್ಸ್‌ಆಪ್ ಪೇಮೆಂಟ್‌ ಸೇವೇಯನ್ನು ಆರಂಭಿಸಿದ ನಂತರದಲ್ಲಿ ಮಾರುಕಟ್ಟೆಯಲ್ಲಿ ಭಾರಿ ಸ್ಪರ್ಧೆ ಏರ್ಪಡಲಿದೆ. ಪೇಟಿಎಂ, ಗೂಗಲ್‌ನ ತೇಜ್‌, ಪೋನ್ ಪೇ ಆಪ್‌ಗಳು ತಮ್ಮ ಬಳಕೆದಾರರನ್ನು ಕಳೆದುಕೊಳ್ಳಲಿವೆ ಎನ್ನಲಾಗಿದೆ.

ಮಾರ್ಕ್ ಜುಕರ್ ಬರ್ಗ್ ಆಚ್ಚರಿಯ ಮಾಹಿತಿ

ಮಾರ್ಕ್ ಜುಕರ್ ಬರ್ಗ್ ಆಚ್ಚರಿಯ ಮಾಹಿತಿ

ಫೇಸ್‌ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್‌ಆಪ್ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಬಳಕೆದಾರರ ಕುರಿತು ಫೇಸ್‌ಬುಕ್ CEO ಮಾರ್ಕ್ ಜುಕರ್ ಬರ್ಗ್ ಆಚ್ಚರಿಯ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚಿನ ಮಂದಿ ಈ ಮೇಸೆಂಜಿಂಗ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಾಟ್ಸ್‌ಆಪ್ ಬಿಸ್ನೆಸ್ ಆಪ್‌

ವಾಟ್ಸ್‌ಆಪ್ ಬಿಸ್ನೆಸ್ ಆಪ್‌

ಇದಲ್ಲದೇ ಮೊನ್ನೆ ಮಾರುಕಟ್ಟೆಗೆ ಬಿಡುಗಡೆಯಾದಂತಹ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯೂ ನಿರ್ಮಾಣವಾಗಿದ್ದು, ಈಗಾಗಲೇ ದೆತ್ಯ ಕಂಪನಿಗಳು ಈ ಆಪ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಇದು ಸಹ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ.

ಹಣ ಸಂಪಾದನೆಯ ಮಾರ್ಗ

ಹಣ ಸಂಪಾದನೆಯ ಮಾರ್ಗ

ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಕೇವಲ ಚಾಟಿಂಗ್ ಮಾಡುಲು ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ಹಣ ಸಂಪಾದನೆಯ ಮಾರ್ಗವನ್ನು ತೋರಿಸಿಕೊಟ್ಟಿದೆ. ಇದಕ್ಕಾಗಿಯೇ ತನ್ನ ಬಳಕೆದಾರರಿಗೆ ಹೊಸ ಆಪ್ ವೊಂದನ್ನು ಪರಿಚಯ ಮಾಡಿದ್ದು, ಕಳೆದ ವಾರ ಜಾಗತಿಕವಾಗಿ ಈ ಆಪ್ ಲಾಂಚ್ ಆಗಿದ್ದ ವಾಟ್ಸ್‌ಆಪ್ ಬಿಸ್ನೆಸ್ ಆಪ್‌, ಇಂದಿನಿಂದ ಭಾರತದಲ್ಲಿಯೂ ಬಳಕೆಗೆ ಲಭ್ಯವಿದೆ.

Best Mobiles in India

English summary
WhatsApp soon support group video calling. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X