ಬದುಕಿಗೆ ಮುಳುವಾದ ಟ್ರಾಜಿಡಿ ಸೆಲ್ಫೀಗಳು

By Suneel
|

ಭಾರತ ಇಂದು 200 ಮಿಲಿಯನ್‌ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೊಂದಿದೆ. ಇನ್ನು ಸ್ವಲ್ಪ ದಿನಗಳಲ್ಲೇ 200 ಮಿಲಿಯನ್‌ಗಿಂತ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೊಂದಲಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರೆಲ್ಲರು ಹೊಸ ರೀತಿಯ ಗೇಮ್‌ಗಳು, ಸಾಮಾಜಿಕ ಜಾಲತಾಣಗಳು, ನೆಟ್‌ವರ್ಕ್‌ಗಳಿಗೆ ಹೆಚ್ಚು ಅಡಾಪ್ಟ್‌ ಆಗಿದ್ದಾರೆ. ಆದರೆ ಇವುಗಳೆನೆಲ್ಲಾ ಮೀರಿಸುವ ಒಂದು ಚಟುವಟಿಕೆ ಅಂದ್ರೆ ಸೆಲ್ಫೀ ಗೀಳಿಗೆ ದಾಸರಾಗಿರುವುದು.

ಸ್ಮಾರ್ಟ್‌ಫೋನ್‌ ಕೊಳ್ಳುವ ಸ್ಮಾರ್ಟ್‌ ಸೆಲ್ಫೀ ತೆಗೆಯಬಹುದಾ ಎಂಬ ಫೀಚರ್‌ ಚೆಕ್‌ ಮಾಡುತ್ತಾರೆ. ಇಂದು ಸೆಲ್ಪೀ ತೆಗೆದುಕೊಳ್ಳುವ ಗೀಳು ಸ್ಮಾರ್ಟ್‌ಫೋನ್‌ ಇರುವ ಎಲ್ಲರಿಗೂ ಇದೆ. ಏನಪ್ಪಾ ಸೆಲ್ಫೀ ಬಗ್ಗೆ ಇಷ್ಟೊಂದು ಹೇಳ್ತಿದ್ದಾರೆ ಎಂಬ ಚಿಂತನೆ ನಿಮಗೆ ಬರದೇ ಇರದು. ಸೆಲ್ಫೀ ಬಗ್ಗೆ ಇಂದು ಎಲ್ಲರೂ ಎಚ್ಚರಬಹಿಸಲೇ ಬೇಕಾದ ಒಂದು ಬಹು ಮುಖ್ಯವಾದ ಮಾಹಿತಿಯನ್ನು ಗಿಜ್‌ಬಾಟ್‌ ನಿಮಗಾಗಿ ಇಂದಿನ ಲೇಖನದಲ್ಲಿ ತಂದಿದೆ.

ಓದಿರಿ: ಬೆಂಗಳೂರಿನ ಹುಡುಗನಿಂದ 3D ಸೆಲ್ಫೀ ಆವಿಷ್ಕಾರ

ಸೆಲ್ಫೀ ಫೋಟೊಗಳನ್ನು ಇಂದು ಹೆಚ್ಚಿನದಾಗಿ ಯೂತ್ಸ್‌ ಬಳಕೆ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಫೋಟೊ ಕ್ರೇಜಿನಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೇ ಆತಂಕಕಾರಿ ಸೆಲ್ಫೀಗಳನ್ನು ತೆಗೆದುಕೊಳ್ಳುತ್ತರಾರೆ. ಇಂದು ಅಂತಹ ಸೆಲ್ಫೀಗೀಳಿರುವವರು ಇಂದಿನ ಲೇಖನ ಓದಿಯಾದರೂ ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ಹಾಗೂ ಇತರರಿಗೂ ಎಚ್ಚೆರ ನೀಡಲೇ ಬೇಕಾಗಿದೆ. ಕಾರಣ ಸೆಲ್ಫೀ ಇಂದು ಟ್ರಾಜಿಕ್‌ ಸೆಲ್ಫೀಯಾಗಿ ಹಲವರ ಬದುಕನ್ನು ನಾಶಗೊಳಿಸಿದೆ. ಆ ಮಾಹಿತಿಗಳು ನಿಮಗಾಗಿ ಈ ಲೇಖನದಲ್ಲಿ.

ಮಲೇಶಿಯಾ ಏರ್‌ಲೈನ್ಸ್ ವಿಮಾನ MH17

ಮಲೇಶಿಯಾ ಏರ್‌ಲೈನ್ಸ್ ವಿಮಾನ MH17

ಕಳೆದ ವರ್ಷ ಮಲೇಶಿಯಾ ಏರ್‌ಲೈನ್ಸ್ ವಿಮಾನ MH17 ಕ್ರ್ಯಾಶ್‌ ಆದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆ ವಿಮಾನದಲ್ಲಿದ್ದ ಗ್ಯಾರಿ ಸ್ಲಾಕ್ ಮತ್ತು ಆತನ ತಾಯಿ ಜೊತೆಗೆ ವಿಮಾನ ಕ್ರ್ಯಾಶ್ ಆಗುವ ಮುನ್ನ ತೆಗೆದ ಸೆಲ್ಫೀ ಫೋಟೊ ಇದು.

 ಶಾರ್ಕ್‌ ನಿಂದ ಹತ್ಯೆಗೊಳಗಾದವನು.

ಶಾರ್ಕ್‌ ನಿಂದ ಹತ್ಯೆಗೊಳಗಾದವನು.

ಈ ಪೋಟೊವನ್ನು ನೋಡಿ ಹಲವರು ಫೋಟೊಶಾಪ್‌ ಎಡಿಟಿಂಗ್‌ ಎನ್ನಬಹುದು ಆದರೆ ನಿಜವಾಗಿಯೂ ಫೋಟೊದಲ್ಲರುವ 34 ವಯಸ್ಸಿನ ವ್ಯಕ್ತಿ ನೀರಿನಲ್ಲಿ ಸೆಲ್ಫೀ ತೆಗೆಯುವಾಗ ಶಾರ್ಕ್‌ನಿಂದ ಕೊಲ್ಲಲ್ಪಟ್ಟನು. ಈತ ಒರಿಜಾನ್‌ಪ್ರದೇಶದ ಇನ್ಸುರೆನ್ಸ್ ಸೇಲ್ಸ್‌ಮ್ಯಾನ್‌ ಆಗಿದ್ದನಂತೆ.

ಅನ್ನಾ - ಅರಸ್

ಅನ್ನಾ - ಅರಸ್

ಈಕೆ ರೋಮಾನಿಯನ್‌ ಟಿನೇಜ್‌ ಹುಡುಗಿ. ಸೆಲ್ಫೀ ತೆಗೆದುಕೊಳ್ಳುವ ವೇಳೆ ರೈಲಿನ ಇಲೆಕ್ಟ್ರಿಕಲ್‌ ಕೇಬಲ್‌ ಒಂದನ್ನು ಟಚ್‌ಮಾಡಿ ಸಾವಿಗೆ ಶರಣಾದಳು. ಬದುಕಿಸಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.

ಕೊಲೆಟ್ಟೆ ಮೊರೆನೊ

ಕೊಲೆಟ್ಟೆ ಮೊರೆನೊ

ಈಕೆ ತನ್ನ ಮದುವೆಯ ಹಿಂದಿನ ದಿನ ಕಾರು ಚಲಿಸುತ್ತಿರುವಾಗ ಬೇರೆ ಕಾರೊಂದನ್ನು ಹಿಂದಿಕ್ಕಲು ಹೋಗುವ ವೇಳೆಯಲ್ಲಿ ಸೆಲ್ಫೀಗಾಗಿ ಪೋಜ್‌ ಕೊಡಲು ಹೋಗಿ ಅಪಘಾತದಿಂದ ಸಾವಿಗೆ ಶರಣಾದಳು.

 ಪ್ರಕೃತಿಯು ಅಪಾಯಗಳು

ಪ್ರಕೃತಿಯು ಅಪಾಯಗಳು

ಪ್ರಕೃತಿಯ ಅಪಾಯಕಾರಿ ಸನ್ನಿವೇಶಗಳು ಜನರನ್ನು ಯಾವಾಗಲು ಹೆಚ್ಚು ಆಕರ್ಷಿಸುತ್ತವೆ. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ಪ್ರಕೃತಿಯ ಅಪಾಯಕಾರಿ ಅಂಶವನ್ನು ವೀಕ್ಷಿಸಲು ಹೋಗಿ ಜೀವವನ್ನೇ ಕಳೆದುಕೊಂಡ. ಆ ಸಮಯದ ಸೆಲ್ಫೀ ಇದು.

ಕಾಟ್ಯಾ

ಕಾಟ್ಯಾ

ಈಕೆ ಸ್ನಾನಕ್ಕೆ ಹೋದ ವೇಳೆಯಲ್ಲಿ ಅಲ್ಲಿಯೇ ಫೋನ್‌ ಚಾರ್ಜ್ ಹಾಕಿದ್ದಳಂತೆ. ಮಿಸ್ಸಾಗಿ ಫೋನ್‌ ಚಾರ್ಜ್‌ ಹಾಕಿದ್ದ ವೇಳೆ ನೀರಿನಲ್ಲಿ ಬಿದ್ದು ವೋಲ್ಟೇಜ್‌ ಹೆಚ್ಚಾಗಿ ಕರೆಂಟ್‌ ಶಾಕ್‌ ನಿಂದ ತೀರಿಕೊಂಡಿರುವ ಬಗ್ಗೆ ಪತ್ರಕರ್ತರು ವರದಿ ಮಾಡಿದ್ದಾರೆ.

ರೈಲ್ಟೆ ಬ್ರಿಡ್ಜ್‌ ಸೆಲ್ಫೀ

ರೈಲ್ಟೆ ಬ್ರಿಡ್ಜ್‌ ಸೆಲ್ಫೀ

ಸೇಂಟ್‌ ಪೀಟರ್ಸ್‌ಬರ್ಗ್‌ನ ಕ್ಸೇನಿಯಾ ರೈಲ್ಟೇ ಬ್ರಡ್ಜ್‌ ಎತ್ರರಕ್ಕೆ ಆಕರ್ಷಿತಳಾಗಿ ಅಲ್ಲಿಂದ ಸೆಲ್ಫೀ ತೆಗೆಯಲು ಮುಂದಾದಳು. ದುರಾದೃಷ್ಟವಶಾತ್ ಈಕೆ 30 ಮೀಟರ್‌ ಎತ್ತದಿಂದ ಬಿದ್ದಳು, ಬೀಳುವಾಗ ಬಚಾವಾಗಲು ಇಲೆಕ್ಟ್ರಿಕ್‌ ವೈರ್ ಹಿಡಿದು ಸಾವಿಗೆ ಶರಣಾದಳು.

ಅಗಸ್ಸಿ

ಅಗಸ್ಸಿ

ಅಗಸ್ಸಿ ಎಂಬ ಹುಡುಗಿ ತನ್ನ ಸ್ನೇಹಿತೆಯ ಬರರ್ತ್‌ಡೇ ಪಾರ್ಟಿ ಮುಗುಸಿ ವಿಂಡ್‌ಮಿಲ್‌ ಬ್ಯಾಕ್‌ಡ್ರಾಪ್‌ ನಲ್ಲಿ ಗ್ರೂಪ್ ಸೆಲ್ಫೀ ತೆಗೆಯುವವೇಳೆ ಸಮುದ್ರದ ಅಲೆಗಳಿಗೆ ಸಿಕ್ಕಿ ಮುಳಿಗಿ ಹೋದಳು.

ಪೋರ್ಟೊ ರಿಕನ್ ರಾಪ್ ಗಾಯಕ ರೋಮನ್ ಗೊನ್ಜಾಲೆಜ್

ಪೋರ್ಟೊ ರಿಕನ್ ರಾಪ್ ಗಾಯಕ ರೋಮನ್ ಗೊನ್ಜಾಲೆಜ್

ಪೋರ್ಟೊ ರಿಕನ್ ರಾಪ್ ಗಾಯಕ ರೋಮನ್ ಗೊನ್ಜಾಲೆಜ್ ಎಂಬುವವನು ಮೋಟಾರ್‌ ಬೈಕ್‌ ರೈಡ್‌ ಮಾಡುವ ವೇಳೆ ಸೆಲ್ಫೀ ತೆಗೆಯಲು ಮುಂದಾಗಿ ಸಾವಿಗಿಡಾದನು.

 ಕರ್ಟೆನಿ ಸ್ಯಾನ್‌ಪಾರ್ಡ್‌

ಕರ್ಟೆನಿ ಸ್ಯಾನ್‌ಪಾರ್ಡ್‌

ಕರ್ಟೆನಿ ಸ್ಯಾನ್‌ಪಾರ್ಡ್‌ ಎಂಬಾಕೆ ಕಾರ್ ಡ್ರೈವ್‌ ಮಾಡುವಾಗ ಸೆಲ್ಫೀಗಾಗಿ ಪೋಜ್‌ ಕೊಟ್ಟು ಕಾರ್ ಅಪಘಾತಕ್ಕೆ ಒಳಗಾಗಿ ಸತ್ತಳು. ಅದು ಆಕೆಯ ಕೊನೆಯ ಪ್ರವಾಸವಾಯಿತು.

ವೆಪನ್‌ಗಳು ಯಾವಾಗಲು ಅಪಾಯ

ವೆಪನ್‌ಗಳು ಯಾವಾಗಲು ಅಪಾಯ

ಮೆಕ್ಸಿಕನ್‌ ಯುವಕನೊಬ್ಬ ಗನ್‌ ಹಿಡಿದು ಸೆಲ್ಫೀತೆಗೆಯಲು ಹೋಗಿ ಅದರಿಂದಲೇ ಶೂಟ್‌ ಆಗಿ ಪ್ರಾಣ ಕಳೆದುಕೊಂಡ.

 ಇಸಾಬೆಲ್ಲಾ

ಇಸಾಬೆಲ್ಲಾ

ಟಿನೇಜ್‌ ಹುಡುಗಿಯೊಬ್ಬಳು ಶಾಲಾ ಪ್ರವಾಸಕ್ಕೆಂದು ಟರಂಟೊ ಸಮುದ್ರ ತೀರಕ್ಕೆ ಹೋಗಿದ್ದಳು. ಅಲ್ಲಿನ ಅಪಾಯಕಾರಿ ಬಂಡೆಯೊಂದನ್ನು ಹತ್ತುತ್ತಿರುವಾಗ ಸೆಲ್ಫೀ ತೆಗೆಯಲು ಹೋಗಿ 60 ಅಡಿ ಕೆಳಗೆ ಬಿದ್ದು ಸತ್ತಳು.

 ಜನಪ್ರಿಯತೇ ನಿಮ್ಮ ಮೌಲ್ಯವನ್ನು ಕಟ್ಟಿಕೊಡಲಾರದು.

ಜನಪ್ರಿಯತೇ ನಿಮ್ಮ ಮೌಲ್ಯವನ್ನು ಕಟ್ಟಿಕೊಡಲಾರದು.

ಈ ಲೇಖನ ಸೆಲ್ಫೀ ಗೀಳು ಇರುವವರಿಗೆ ಎಚ್ಚರ ನೀಡಿದೆ ಎಂದು ನಂಬುತ್ತೇವೆ. ಕೇವಲ ಸೆಲ್ಫೀ ಜನಪ್ರಿಯತೇ ನಿಮ್ಮ ಮೌಲ್ಯವನ್ನು ಕಟ್ಟಿಕೊಡಲಾರದು.

Most Read Articles
Best Mobiles in India

English summary
The age of selfies forces people to adapt to new rules of game. Social networks affect the human psyche making all of us do rather strange and sometimes even life-threatening actions in the pursuit of likes and shares.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more