ಇದೀಗ ನಿಮ್ಮ ಮೊಬೈಲ್ ರಿಂಗಣಿಸುವುದಕ್ಕೂ ಬಂತು ಹೊಸ ರೂಲ್ಸ್!..ಯಾರಿಗೆ ಲಾಭ?

|

ದೇಶದ ಟೆಲಿಕಾಂನಲ್ಲಿ ಮೊಬೈಲ್ ರಿಂಗಣಿಸುವುದು ಕೂಡ ದೊಡ್ಡ ಸಮಸ್ಯೆಯಾಗಿ ಕಂಡುಬಂದ ನಂತರ ಇದೀಗ ಅದಕ್ಕೊಂದು ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಜಿಯೋ ಏರ್‌ಟೆಲ್ ಸೇರಿದಂತೆ ಇತರೆ ಟೆಲಿಕಾಂಗಳ ನಡೆಯುತ್ತಿರುವ ಮೊಬೈಲ್ ರಿಂಗಣಿಸುವ ಸಮಸ್ಸೆಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್‌) ಮುಕ್ತಿ ಹಾಡಿದ್ದು, ಇನ್ನು ಮುಂದೆ ಯಾವುದೇ ಮೊಬೈಲ್ ಕರೆಗಳನ್ನು ರಿಸೀವ್ ಮಾಡದೇ ಇದ್ದರೆ ಕೇವಲ 30 ಸೆಕೆಂಡ್‌ಗಳಷ್ಟೇ ರಿಂಗಣಿಸಲಿದೆ ಎಂಬ ಆದೇಶವನ್ನು ಹೊರತಂದಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ

ಹೌದು, ಕಳೆದ ಶುಕ್ರವಾರದಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್‌) ಹೊಸ ಆದೇಶವೊಂದನ್ನು ಹೊರಡಿಸಿದೆ. ಅದರ ಪ್ರಕಾರ, ಗ್ರಾಹಕ ಮೊಬೈಲ್‌ ಕರೆಗಳ ರಿಂಗಿಂಗ್ ಅವಧಿಯನ್ನು 30 ಸೆಕೆಂಡ್ ಹಾಗೂ ಲ್ಯಾಂಡ್ ಲೈನ್ ಫೋನ್ ಗಳ ರಿಂಗಿಂಗ್ ಅವಧಿಯನ್ನು 60 ಸೆಕೆಂಡ್ಗೆ ನಿಗದಿ ಮಾಡಿದೆ. ಅಂದರೆ, ಇನ್ಮುಂದೆ ಯಾವುದೇ ಟೆಲಿಕಾಂ ಸೇವಾ ಕಂಪೆನಿಯು ತನಗೆ ಇಷ್ಟಬಂದತೆ ಮೊಬೈಲ್ ರಿಂಗಿಂಗ್ ಕಾಲಾವಧಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕೃತವಾಗಿ ನಿಮಯ ತಂದಿದೆ.

ಮೊಬೈಲ್‌ ಕರೆ

ಗ್ರಾಹಕ ಮೊಬೈಲ್‌ ಕರೆಗಳ ರಿಂಗಿಂಗ್ ಅವಧಿಯನ್ನು 30 ಸೆಕೆಂಡ್ ಹಾಗೂ ಲ್ಯಾಂಡ್ ಲೈನ್ ಫೋನ್ ಗಳ ರಿಂಗಿಂಗ್ ಅವಧಿಯನ್ನು 60 ಸೆಕೆಂಡ್ಗೆ ನಿಗದಿ ಮಾಡಿರುವ ಈ ಹೊಸ ನಿಯಮಾವಳಿ ಇನ್ನು ಹದಿನೈದು ದಿನಗಳ ಬಳಿಕ ಜಾರಿಯಾಗಲಿದೆ. ಒಳಬರುವ ಕರೆಗಳ (ಇನ್ ಕಮಿಂಗ್ ಕಾಲ್) ರಿಂಗಿಂಗ್ ಸಮಯವನ್ನು ಸೀಮಿತಗೊಳಿಸುವ ನಿಯಮ ಜಾರಿಯಿಂದ ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗ್ರಾಹಕ ಸೇವೆಗಳ ಗುಣಮಟ್ಟ ಸುಧಾರಿಸಲಿದೆ ಎಂದು ಟ್ರಾಯ್ ಹೇಳಿಕೆಯಲ್ಲಿ ತಿಳಿಸಿದೆ. ಇದು ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಿದೆ.

ನಿಯಮಾವಳಿ

ಇಲ್ಲಿಯವರೆಗೆ ಭಾರತದೊಳಗೆ ಇಂತಹ ಯಾವುದೇ ನಿಯಮಾವಳಿ ಜಾರಿಯಲ್ಲಿರಲಿಲ್ಲ. ಎಲ್ಲ ಟೆಲಿಕಾಂ ಕಂಪೆನಿಗಳು ಅವರವರ ಇಚ್ಚೆಯತೆ ಮೊಬೈಲ್ ರಿಂಗಿಂಗ್ ಕಾಲಾವಧಿಯನ್ನು ಅಳವಡಿಸಿಕೊಂಡಿದ್ದವು. ಇದು ಇತ್ತೀಚಿಗೆ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಒಳಬರುವ ಕರೆಗಳ ರಿಂಗಿಂಗ್ ಅವಧಿ ಹೆಚ್ಚಾಗಿರಬೇಕು ಎಂದು ಏರ್‌ಟೆಕ್ ಹೇಳಿದರೆ, ಜಿಯೋ ಇದನ್ನು ಇಪ್ಪತ್ತರಿಂದ ಇಪ್ಪತ್ತೈದು ಸೆಕೆಂಡ್‌ಗೆ ಇಸಬೇಕೆಂದು ವಾದಿಸಿದ್ದವು. ಇದಕ್ಕೆ ಅವುಗಳಿಗೆ ಇದ್ದ ಲಾಭವೂ ಕೂಡ ಕಾರಣವಾಗಿತ್ತು.

ಜಿಯೋ, ಏರ್‌ಟೆಲ್

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಜಟಾಪಟಿಯಲ್ಲಿ, ಒಳಬರುವ ಕರೆಗಳ ರಿಂಗಿಂಗ್ ಅವಧಿ ನಲವತ್ತೈದು ಸೆಕೆಂಡ್ ಗಳಿರಬೇಕು ಆಗ ಗ್ರಾಹಕರಿಗೆ ಇತರೆ ನೆಟ್ ವರ್ಕ್ ಕರೆಗಳನ್ನು ಸ್ವೀಕರಿಸಲು ಸುಲಭವಾಗಲಿದೆ ಎಂದು ಏರ್ಟೆಲ್ ವಾದಿಸಿದ್ದರೆ, ಜಿಯೋ ಇದನ್ನು ಇಪ್ಪತ್ತರಿಂದ ಇಪ್ಪತ್ತೈದು ಸೆಕೆಂಡ್‌ಗೆ ಇಳಿಸಬೇಕೆಂದು ಮನವಿ ಮಾಡಿತ್ತು. ಜಿಯೋವಿನಿಂದ ಹೆಚ್ಚು ಕರೆಗಳು ಇತರೆ ಟೆಲಿಕಾಂ ಕಂಪೆನಿಗಳಿಗೆ ಹೋಗಬಾರದು ಎಂಬ ಉದ್ದೇಶವನ್ನು ಜಿಯೋ ಹೊಂದಿತ್ತು. ಇದರಿಂದ ಜಿಯೋಗೆ ಐಸಿಯು ಹಣ ಪಾವತಿ ಹೊರೆ ಕಡಿಮೆಯಾಗುತ್ತಿತ್ತು ಎನ್ನಲಾಗಿದೆ.

Best Mobiles in India

English summary
Till now there was no such limit for calls within India. Reliance Jio has accused old operators, including Bharti Airtel and Vodafone Idea. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X