ಐಯುಸಿ ಅನುಷ್ಠಾನ ಮುಂದೂಡಿಕೆ..! ವೊಡಾಫೋನ್‌, ಏರ್‌ಟೆಲ್‌ಗೆ ರಿಲೀಫ್‌..!

By Gizbot Bureau
|

2020ರ ಜನವರಿಯಿಂದ ಪ್ರಾರಂಭವಾಗಬೇಕಿದ್ದ ಶೂನ್ಯ-ಅಂತರ್‌ಸಂಪರ್ಕ ಬಳಕೆಯ ಶುಲ್ಕದ (ಐಯುಸಿ) ಅನುಷ್ಠಾನವನ್ನು ಭಾರತೀಯ ದೂರಸಂಪರ್ಕ ಪ್ರಾಧಿಕಾರ ಒಂದು ವರ್ಷ ಮುಂದೂಡುವ ಸಾಧ್ಯತೆಯಿದೆ. ಐಯುಸಿಯ ಹೊಸ ನಿರ್ದೇಶನ ಶೀಘ್ರದಲ್ಲಿ ಬರಲಿದೆ ಹೊರಡಿಸಲಾಗುವುದು ಎಂದು ಟ್ರಾಯ್‌ನ ಪ್ರಮುಖ ಅಧಿಕಾರಿ ಹೇಳಿದ್ದಾರೆ.

ಜಿಯೋದಿಂದ ವಿರೋಧ

ಜಿಯೋದಿಂದ ವಿರೋಧ

ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಆದಾಯ ಗಳಿಕೆಗಾಗಿ ಶೂನ್ಯ-ಐಯುಸಿ ಆಡಳಿತದ ಅನುಷ್ಠಾನ ಮುಂದೂಡವುದನ್ನು ಬೆಂಬಲಿಸಿದ್ದರು. ಆದರೆ, ಈ ಕ್ರಮವನ್ನು ರಿಲಾಯನ್ಸ್ ಜಿಯೋ ಮುಂದೂಡುವಿಕೆಯನ್ನು ವಿರೋಧಿಸಿತ್ತು.

ಸೆಪ್ಟಂಬರ್‌ನಲ್ಲಿ ಪ್ರಸ್ತಾಪ

ಸೆಪ್ಟಂಬರ್‌ನಲ್ಲಿ ಪ್ರಸ್ತಾಪ

ಸೆಪ್ಟೆಂಬರ್‌ನಲ್ಲಿ ಟೆಲಿಕಾಂ ನಿಯಂತ್ರಕವು ಶೂನ್ಯ ಅಂತರ್‌ಸಂಪರ್ಕ ಬಳಕೆಯ ಶುಲ್ಕದ (ಐಯುಸಿ) ಅನುಷ್ಠಾನ ಮುಂದೂಡುವ ಕುರಿತು ವಿಚಾರ ಪ್ರಸ್ತಾಪಿಸಿತ್ತು. ಗ್ರಾಹಕರು ಇನ್ನೂ ಸಂಪೂರ್ಣವಾಗಿ ಡೇಟಾ ಕರೆಗಳನ್ನು ಬಳಸುತ್ತಿಲ್ಲ. ಮತ್ತು ಆಪರೇಟರ್‌ಗಳ ನಡುವಿನ ಧ್ವನಿ ದಟ್ಟಣೆಯಲ್ಲಿ ಅಸಮತೋಲನ ಇನ್ನೂ ಇದೆ ಎನ್ನಲಾಗಿದೆ.

ಪರಿಷ್ಕರಿಸುವ ಬಗ್ಗೆ ಚರ್ಚೆ

ಪರಿಷ್ಕರಿಸುವ ಬಗ್ಗೆ ಚರ್ಚೆ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌), ಬಿಎಕೆ (ಬಿಲ್ ಮತ್ತು ಕೀಪ್) ಅಥವಾ ಶೂನ್ಯ-ಮುಕ್ತಾಯ ಶುಲ್ಕ ಆಡಳಿತವನ್ನು ಅನುಷ್ಠಾನಗೊಳಿಸಲು ದಿನಾಂಕ ಪರಿಷ್ಕರಿಸುವ ಅಗತ್ಯತೆಯ ಬಗ್ಗೆ ಅಭಿಪ್ರಾಯಗಳನ್ನು ಕೋರಿತ್ತು. ಪರ್ಯಾಯ ದಿನಾಂಕವನ್ನು ನಿಗದಿಪಡಿಸಲು ಟ್ರಾಯ್‌ ಆಲೋಚಿಸುತ್ತಿದೆ.

ಜಿಯೋಗೆ ಹಿನ್ನಡೆ

ಜಿಯೋಗೆ ಹಿನ್ನಡೆ

ಶೂನ್ಯ-ಅಂತರ್‌ಸಂಪರ್ಕ ಬಳಕೆಯ ಅನುಷ್ಠಾನದ ಮುಂದೂಡಿಕೆಯನ್ನು ಜಿಯೋ ವಿರೋಧ ಮಾಡುತ್ತಿತ್ತು. ಆದರೆ, ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಪರವಾಗಿ ಅನುಷ್ಠಾನವನ್ನು ಟ್ರಾಯ್‌ ಮುಂದೂಡಲು ಮುಂದಾಗಿರುವುದು ಜಿಯೋಗೆ ಹಿನ್ನಡೆಯಾದಂತಾಗಿದೆ.

Best Mobiles in India

English summary
Trai has a good news for vodafone and airtel and bad news for jio

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X