ಇನ್ಮುಂದೆ ಕಾಲ್ ಮಾಡಲು ಕರೆನ್ಸಿ ಬೇಕಿಲ್ಲ!..ಇಂಟರ್‌ನೆಟ್‌ ಟೆಲಿಫೋನಿಗೆ ಟ್ರಾಯ್ ಸಜ್ಜು!!

'ಇಂಟರ್‌ನೆಟ್‌ ಟೆಲಿಫೋನಿ ಕುರಿತ ನಿಯಂತ್ರಣಾ ವ್ಯವಸ್ಥೆಯ' ಶಿಫಾರಸುಗಳನ್ನು ಟ್ರಾಯ್‌ ದೂರ ಸಂಪರ್ಕ ಸಚಿವಾಲಯಕ್ಕೆ ಸಲ್ಲಿಸಿದ್ದು, ಶೀಘ್ರವೇ ನೂತನ ನಿಯಮ ಜಾರಿಗೆ ಬರಲಿದೆ.!!

|

ಇನ್ಮುಂದೆ ಯಾವುದೇ ದರಗಳನ್ನು ಪಾವತಿಸದೇ ಕರೆ ಮಾಡಬಹುದಾದ ಸೌಲಭ್ಯವನ್ನು ತರಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶೀಘ್ರವೇ ಅನುಮತಿ ನೀಡಲಿದೆ ಎನ್ನಲಾಗಿದೆ.! ಹೌದು, ಸಾರ್ವಜನಿಕ ಸ್ಥಳದಲ್ಲಿರುವ ವೈಫೈ ಬಳಸಿಕೊಂಡು ಯಾವುದೇ ಮೊಬೈಲ್‌ ಅಥವಾ ಸ್ಥಿರ ದೂರವಾಣಿಗೆ ಕರೆ ಮಾಡುವ ಅವಕಾಶ ಲಭ್ಯವಾಗಲಿದೆ.!!

'ಇಂಟರ್‌ನೆಟ್‌ ಟೆಲಿಫೋನಿ ಕುರಿತ ನಿಯಂತ್ರಣಾ ವ್ಯವಸ್ಥೆಯ' ಶಿಫಾರಸುಗಳನ್ನು ಟ್ರಾಯ್‌ ದೂರ ಸಂಪರ್ಕ ಸಚಿವಾಲಯಕ್ಕೆ ಸಲ್ಲಿಸಿದ್ದು, ಶೀಘ್ರವೇ ನೂತನ ನಿಯಮ ಜಾರಿಗೆ ಬರಲಿದೆ.! ಇದಕ್ಕೆ ಟೆಲಿಕಾಂ ಕಂಪೆನಿಗಳು ವಿರೋಧ ವ್ಯಕ್ತಪಡಿಸಿದ್ದು, ಹಾಗಾದರೆ ಏನಿದು ಇಂಟರ್‌ನೆಟ್‌ ಟೆಲಿಫೋನಿ ಯೋಜನೆ ಎಂಬೆಲ್ಲಾ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇಂಟರ್‌ನೆಟ್‌ ಟೆಲಿಫೋನಿ?

ಇಂಟರ್‌ನೆಟ್‌ ಟೆಲಿಫೋನಿ?

ಮೊಬೈಲ್‌ ಸಿಗ್ನಲ್‌ಗಳು ದುರ್ಬಲವಾಗಿರುವ ಒಳಾಂಗಣಗಳಲ್ಲಿ ಸಾರ್ವಜನಿಕ ಇಂಟರ್‌ನೆಟ್‌ ಸಿಗ್ನಲ್‌ಗಳು ಲಭ್ಯವಿರಬಹುದು. ಅಂತಹ ಸಿಗ್ನಲ್ ಬಳಸಿಕೊಂಡೂ ಕರೆ ಮಾಡಬಹುದು. ಹಾಗಾಗಿ, ನಿರ್ದಿಷ್ಟ ಮೊಬೈಲ್‌ ನೆಟ್‌ವರ್ಕ್‌ ಬದಲು ಲಭ್ಯವಿರುವ ಯಾವುದೇ ವೈ-ಫೈ ನೆಟ್‌ವರ್ಕ್ ಬಳಸಿಕೊಂಡು ಕರೆ ಮಾಡಲು ಟ್ರಾಯ್‌ನ ಈ ನೀತಿಯಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.!!

 ವೈ-ಫೈ ಮೂಲಕ ಕರೆಗಳನ್ನು ಮಾಡುವುದು ಹೇಗೆ?

ವೈ-ಫೈ ಮೂಲಕ ಕರೆಗಳನ್ನು ಮಾಡುವುದು ಹೇಗೆ?

ಟ್ರಾಯ್‌ನ ಈ ಹೊಸ ನೀತಿಯಲ್ಲಿ ಇಂಟರ್‌ನೆಟ್‌ ಕರೆ ಸೌಲಭ್ಯ ಒದಗಿಸಲು ಕಂಪನಿಗಳು ಆಪ್ ಮಾದರಿಯ ಆಯ್ಕೆಯನ್ನು ಒದಗಿಸಬೇಕಾಗುತ್ತದೆ. ಗ್ರಾಹಕರು ಆ ಆಪ್ ಮೂಲಕ ಸಾರ್ವಜನಿಕ ಅಥವಾ ವಯಕ್ತಿಕ ವೈಫೈ ನೆಟ್‌ವರ್ಕ್‌ ಬಳಸಿಕೊಂಡು ಯಾವುದೇ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.!!

ಟೆಲಿಕಾಂ ಕಂಪೆನಿಗಳ ವಿರೋಧ ಏಕೆ?

ಟೆಲಿಕಾಂ ಕಂಪೆನಿಗಳ ವಿರೋಧ ಏಕೆ?

ಧ್ವನಿ ಕರೆಗಳಿಂದ ಟೆಲಿಕಾಂ ಕಂಪೆನಿಗಳಿಗೆ ಸೇರುತ್ತಿರುವ ಆದಾಯ ಟ್ರಾಯ್‌ನ ಈ ಕ್ರಮದಿಂದಾಗಿ ಕಡಿಮೆಯಾಗಬಹುದು ಎಂಬ ಆತಂಕ ಹಳೆಯ ಟೆಲಿಕಾಂ ಕಂಪನಿಗಳಿಗೆ ಕಾಡುತ್ತಿದೆ.!! ಧ್ವನಿ ಕರೆಗಳ ದಟ್ಟಣೆ ತಮ್ಮ ನೆಟ್‌ವರ್ಕ್‌ ಬದಲಿಗೆ ಸಾರ್ವಜನಿಕ ನೆಟ್‌ವರ್ಕ್‌ಗೆ ವರ್ಗಾವಣೆಯಾಗುತ್ತದೆ ಎಂಬುದು ಅವುಗಳ ಆತಂಕವಾಗಿದ್ದು, ಹಾಗಾಗಿಯೇ, ಭಾರತೀಯ ಸೆಲ್ಯುಲಾರ್‌ ಸೇವಾದಾರರ ಸಂಘಟನೆ (ಸಿಓಎಐ) ಇದನ್ನು ವಿರೋಧಿಸಿದೆ.

ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ಹೇಳಿದ್ದೇನು?

ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ಹೇಳಿದ್ದೇನು?

ಇಂಟರ್‌ನೆಟ್‌ ಕರೆಗಳು ಧ್ವನಿ ಕರೆಗಳಿಗೆ ಪರ್ಯಾಯವಾಗಿದ್ದು, ಉಪಯುಕ್ತ ಹಾಗೂ ಅಗ್ಗದ ಸೇವೆಯಾಗಿದೆ. ಮೊಬೈಲ್‌ ನೆಟ್‌ವರ್ಕ್‌ಗಿಂತ ಪ್ರತ್ಯೇಕವಾಗಿ ಇಂಟರ್‌ನೆಟ್‌ ದೂರವಾಣಿ ಸೇವೆಯನ್ನು ಪರಿಗಣಿಸಬಹುದಾಗಿದ್ದು, ಪ್ರಸಕ್ತ ಲೈಸೆನ್ಸಿಂಗ್‌ ವ್ಯವಸ್ಥೆಯಲ್ಲೇ ಇಂಟರ್‌ನೆಟ್‌ ದೂರವಾಣಿ ಸೇವೆಯನ್ನು ಸ್ವತಂತ್ರ ಇಂಟರ್‌ನೆಟ್‌ ಸೇವೆಯಂತೆಯೇ ಒದಗಿಸಬಹುದಾಗಿದೆ ಎಂದು ಟ್ರಾಯ್‌ ಹೇಳಿದೆ.

ಟೆಲಿಕಾಂ ಕಂಪೆನಿಗಳಿಗೆ ಸರ್ಕಾರದಿಂದ ಮತ್ತೊಂದು ಶಾಕ್!..ಗ್ರಾಹಕರಿಗೆ ವರದಾನ!!ಟೆಲಿಕಾಂ ಕಂಪೆನಿಗಳಿಗೆ ಸರ್ಕಾರದಿಂದ ಮತ್ತೊಂದು ಶಾಕ್!..ಗ್ರಾಹಕರಿಗೆ ವರದಾನ!!

Best Mobiles in India

English summary
You may soon be able to make calls to any mobile or landline number using your home, office or public Wi-Fi.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X