ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

|

ಗ್ರಾಮೀಣ ಭಾಗದಲ್ಲಿಯೂ ಡಿಜಿಟಲ್‌ ವ್ಯವಹಾರವನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದೀಗ ಭಾರತದ ಟೆಲಿಕಾಂ ನಿಯಂತ್ರಣದ ಪ್ರಾಧಿಕಾರ ಗ್ರಾಮೀಣ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಪ್ರತಿ ತಿಂಗಳು ನಿರ್ಧಿಷ್ಟ ಬಳಕೆಯ ಉಚಿತ ಇಂಟರ್‌ನೆಟ್‌ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಕೆದಾರರಿಗಿರುವ ದೊಡ್ಡ ಅಂತರವನ್ನು ಕಡಿಮೆ ಮಾಡಬೇಕಿದೆ. ಜೊತೆಗೆ ಕ್ಯಾಶ್‌ಲೆಸ್‌ ಆರ್ಥಿಕತೆಯ ಉತ್ತೇಜನಕ್ಕೆ ಗ್ರಾಮೀಣ ಭಾಗಗಳಿಗೆ ನಿರ್ಧಿಷ್ಟ ಉಚಿತ ಇಂಟರ್‌ನೆಟ್‌ ನೀಡಬೇಕಿದ್ದು, ಪ್ರತಿ ತಿಂಗಳು ಕನಿಷ್ಟ 100 MB ಡೇಟಾವನ್ನು ಉಚಿತವಾಗಿ ನೀಡಿ ಎಂದು ಟ್ರಾಯ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್‌ ಪ್ಲೇಸ್ ಅಷ್ಟೆ!!

ಇನ್ನು ಯುಎಸ್‌ಒಎಫ್ ( Universal Service Obligatory Fund) ಮೂಲಕ ಉಚಿತವಾಗಿ ನೀಡುವ ಇಂಟರ್‌ನೆಟ್‌ ವೆಚ್ಚವನ್ನು ಭರಿಸಲು ಟ್ರಾಯ್ ನಿರ್ದೇಶನ ನೀಡಿದೆ. ಟೆಲಿಕಮ್ಯುನಿಕೇಶನ್ ಡಿಪಾರ್ಟಮೆಂಟ್ ಯುಎಸ್‌ಒಎಫ್ ಮೂಲಕ ಟೆಲಿಕಾಂ ಕಂಪೆನಿಗಳಿಗೆ ತೆರಿಗೆ ವಿಧಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಇಂಟರ್‌ನೆಟ್‌ ವೆಚ್ಚವನ್ನು ಭರಿಸಬೇಕು ಎಂದಿದೆ.

ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

ಫೇಸ್‌ಬುಕ್ ಬೇಸಿಕ್ ಇಂಟರ್‌ನೆಟ್‌ ಸೌಲಭ್ಯ ನೀಡುವುದಾಗಿ ತಿಳಿಸಿದಾಗ ಇದನ್ನು ನಿರ್ಭಂದಿಸಿದ್ದ ಟ್ರಾಯ್, 2016 ಫೆಬ್ರವರಿ 8 ರಂದು ಇವುಗಳ ನಿಯಂತ್ರಣಕ್ಕಾಗಿ ನಿಯಮವನ್ನು ರೂಪಿಸಿತ್ತು. ಇದರಿಂದ ಏರ್‌ಟೆಲ್‌ನ ಮಹತ್ವಾಕಾಂಕ್ಷೆ ಯೋಜನೆ "ಏರ್‌ಟೆಲ್ ಝೀರೊ" ಮತ್ತು ಫೇಸ್‌ಬುಕ್ ಮತ್ತು ರಿಲಾಯನ್ಸ್ ಕಮ್ಯುನಿಕೇಶನ್‌ ಟೆಲಿಕಾಂಗಳ ಸಹಯೋಗದ ಬೆಸಿಕ್ ಇಂಟರ್‌ನೆಟ್ ನೀಡುವ ಆಸೆ ಕೈಗೂಡಿರಲಿಲ್ಲ.

ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

ಹಾಗಾಗಿ, ಸರ್ಕಾರದಿಂದಲೇ ಗ್ರಾಮೀಣ ಜನರಿಗೆ ಪ್ರತಿ ತಿಂಗಳು 100MB ಉಚಿತ ಡೇಟಾ ನೀಡುವ ಮೂಲಕ ಗ್ರಾಮೀಣ ಭಾಗದ ಜನರು ಅಂತರ್ಜಾಲ ಪ್ರಪಂಚಕ್ಕೆ ಕಾಲಿಡುವಂತೆ ಮಾಡಬೇಕಿದೆ. ಹೀಗೆ ಜನತೆಯನ್ನು ಡಿಜಿಟಲ್‌ ಪ್ರಪಂಚದ ಕಡೆಗೆ ಸೆಳೆಯಬೇಕಿದೆ ಟ್ರಾಯ್ ಅಭಿಪ್ರಾಯಪಟ್ಟಿದೆ. ಇನ್ನು ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹ ಒಪ್ಪಿಗೆ ನೀಡಿದ್ದು, ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಯಾಗಲಿದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Earlier this month, Trai Chairman R.S. Sharma had highlighted that a “lot of work” was needed to increase broadband connectivity in the country.To Know More visit to Kannada.Gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X