ಟ್ರಾಯ್‌ನಿಂದ ಮಹತ್ವದ ಹೆಜ್ಜೆ; ತೊಂದರೆ ನೀಡುವ ಕರೆ, ಮೆಸೆಜ್‌ಗಳ‌ ಕಡಿವಾಣಕ್ಕೆ ಸಜ್ಜು

|

ಟೆಲಿಕಾಂ ನಿಯಂತ್ರಕ ಟ್ರಾಯ್‌ (TRAI ) ನಿರಂತರವಾಗಿ ಗ್ರಾಹಕರ ರಕ್ಷಣೆ ಬಗ್ಗೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಈಗ ತೊಂದರೆ ನೀಡುವ ನಕಲಿ ಕರೆಗಳು, ಸಂದೇಶಗಳನ್ನು ಪತ್ತೆಹಚ್ಚಲು ಟ್ರಾಯ್‌ ಮುಂದಾಗಿದೆ. ಈ ಮೂಲಕ ಗ್ರಾಹಕರು ಹಣಕಾಸಿನ ವಂಚನೆಯಿಂದ ಪಾರಾಗಬಹುದಾಗಿದೆ. ಅಲ್ಲದೆ, ಈ ಕರೆ ಹಾಗೂ ಮೆಸೆಜ್‌ಗಳನ್ನು ಪತ್ತೆ ಮಾಡಲು ವಿವಿಧ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಆರ್ಥಿಕ ವಂಚನೆ

ಹೌದು, ಆರ್ಥಿಕ ವಂಚನೆಗಳನ್ನು ತಡೆಯಲು ಟೆಲಿಕಾಂ ನಿಯಂತ್ರಕ ಟ್ರಾಯ್‌ ಇತರ ನಿಯಂತ್ರಕರೊಂದಿಗೆ ಜಂಟಿ ಕ್ರಿಯಾ ಯೋಜನೆಯೊಂದಿಗೆ ಕರೆಗಳು ಮತ್ತು ಸಂದೇಶಗಳನ್ನು ಪತ್ತೆ ಮಾಡಲು ವಿವಿಧ ತಂತ್ರಜ್ಞಾನಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದೆ. ಅದರಂತೆ, ಅಪೇಕ್ಷಿಸದ ವಾಣಿಜ್ಯ ಸಂವಹನ (ಯುಸಿಸಿ) ಹಾಗೂ ತೊಂದರೆ ಉಂಟುಮಾಡುವ ಸಂವಹನವು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಜೊತೆಗೆ ಅವರ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ದೂರು ದಾಖಲು

ದೂರು ದಾಖಲು

ಈ ರೀತಿಯ ಸಂದೇಶ ಹಾಗೂ ಮೆಸೆಜ್‌ಗಳ ಮೂಲಕ ಜನರಿಗೆ ತೊಂದರೆ ನೀಡುತ್ತಿರುವ ನೋಂದಾಯಿಸದ ಟೆಲಿಮಾರ್ಕೆಟರ್‌ಗಳ (UTMs) ವಿರುದ್ಧ ದೂರುಗಳು ದಾಖಲಾಗಿವೆ ಎನ್ನಲಾಗಿದೆ. ಈ ಟೆಲಿಮಾರ್ಕೆಟರ್‌ಗಳು ವಿವಿಧ ರೀತಿಯ ಯುಸಿಸಿ ಮೆಸೆಜ್‌ಗಳನ್ನು ಹೆಚ್ಚು ಹೆಚ್ಚಾಗಿ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಯುಸಿಸಿ ಕರೆಗಳ ಮೂಲಕವೂ ತೊಂದರೆ ಹೆಚ್ಚಾಗಿದ್ದು, ಇವೆರಡನ್ನೂ ನಿಯಂತ್ರಣಕ್ಕೆ ತರಲು ಟ್ರಾಯ್‌ ಮುಂದಾಗಿದೆ.

ಅಗತ್ಯ  ಕ್ರಮ ತೆಗೆದುಕೊಂಡ ಟ್ರಾಯ್

ಅಗತ್ಯ ಕ್ರಮ ತೆಗೆದುಕೊಂಡ ಟ್ರಾಯ್

ಟ್ರಾಯ್‌ ವಿವಿಧ ಪಾಲುದಾರರೊಂದಿಗೆ ಈ ಅಪೇಕ್ಷಿಸದ ವಾಣಿಜ್ಯ ಸಂವಹನವನ್ನು ಪರಿಶೀಲಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಸಮಯದಲ್ಲಿ ಯುಸಿಸಿ ಪತ್ತೆ ವ್ಯವಸ್ಥೆಯ ಅನುಷ್ಠಾನದ ವಿಷಯ, ಡಿಜಿಟಲ್ ಸಮ್ಮತಿ ಸ್ವಾಧೀನ, ಹೆಡರ್‌ಗಳು ಮತ್ತು ಮೆಸೆಜ್‌ ಟೆಂಪ್ಲೆಟ್‌, ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್‌ ಲರ್ನಿಂಗ್‌ ವಿಷಯಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಟ್ರಾಯ್‌ ಹೇಳಿದೆ.

ನೋಂದಣಿ ಕಡ್ಡಾಯ

ನೋಂದಣಿ ಕಡ್ಡಾಯ

ಈ ರೀತಿಯ ಕರೆಗಳು ಮತ್ತು ಸಂದೇಶಗಳನ್ನು ನಿಯಂತ್ರಣ ಮಾಡಲು ಟ್ರಾಯ್‌ ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಗ್ರಾಹಕ ಆದ್ಯತೆಯ ನಿಯಮಾವಳಿಗಳು, 2018 ಅನ್ನು ಬಿಡುಗಡೆ ಮಾಡಿದೆ. ಇದು ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ (ಡಿಎಲ್‌ಟಿ) ಆಧಾರಿತ ಎಕೋ ಸಿಸ್ಟಮ್‌ ಅನ್ನು ನಿರ್ಮಾಣ ಮಾಡಲಿದ್ದು, ಈ ಮೂಲಕ ವಾಣಿಜ್ಯ ಪ್ರವರ್ತಕರು ಮತ್ತು ಟೆಲಿಮಾರ್ಕೆಟರ್‌ಗಳ ನೋಂದಣಿಯನ್ನು ಡಿಎಲ್‌ಟಿ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲು ಮತ್ತು ವಿವಿಧ ರೀತಿಯ ಪ್ರಚಾರ ಸಂದೇಶಗಳನ್ನು ಸ್ವೀಕರಿಸಲು ಗ್ರಾಹಕರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

55 ಲಕ್ಷ ಅನುಮೋದಿತ ಸಂದೇಶ

55 ಲಕ್ಷ ಅನುಮೋದಿತ ಸಂದೇಶ

ಇನ್ನು ಈ ಪ್ಲಾಟ್‌ಫಾರ್ಮ್‌ ಮೂಲಕ ಸುಮಾರು 2.5 ಲಕ್ಷ ಪ್ರಮುಖ ಘಟಕಗಳನ್ನು 6 ಲಕ್ಷಕ್ಕೂ ಹೆಚ್ಚು ಹೆಡರ್‌ಗಳೊಂದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಅಂತೆಯೇ ಸರಿಸುಮಾರು 55 ಲಕ್ಷ ಅನುಮೋದಿತ ಸಂದೇಶ ಟೆಂಪ್ಲೇಟ್‌ಗಳನ್ನು ಡಿಎಲ್‌ಟಿ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ನೋಂದಾಯಿತ ಟೆಲಿಮಾರ್ಕೆಟರ್‌ಗಳು ಹಾಗೂ ಟಿಎಸ್‌ಪಿಗಳ ಮೂಲಕ ಗ್ರಾಹಕರಿಗೆ ರವಾನಿಸಲಾಗುತ್ತಿದೆ.

ನೋಂದಾಯಿಸಿದ ಟೆಲಿಮಾರ್ಕೆಟರ್‌

ಪ್ರಮುಖ ವಿಷಯ ಎಂದರೆ ನೋಂದಾಯಿಸಿದ ಟೆಲಿಮಾರ್ಕೆಟರ್‌ ಗಳ ವಿಷಯದಲ್ಲಿ 60 % ರಷ್ಟು ಗ್ರಾಹಕರ ದೂರು ಗಣನೀಯವಾಗಿ ಕಡಿಮೆಯಾಗಿವೆ. ಹಾಗೆಯೇ ನೋಂದಾಯಿತವಲ್ಲದ ಟೆಲಿಮಾರ್ಕೆಟರ್‌ ಹೆಚ್ಚಿನ ತೊಂದರೆಯನ್ನು ಈ ಕರೆ ಹಾಗೂ ಮೆಸೆಜ್‌ ಮೂಲಕ ಅನುಭವಿಸುತ್ತಿದ್ದು, ದೂರುಗಳು ಸಹ ಜಾಸ್ತಿಯಾಗಿವೆ.

ಜಂಟಿ ಸಮಿತಿ ರಚನೆ

ಜಂಟಿ ಸಮಿತಿ ರಚನೆ

ಈ ವ್ಯವಸ್ಥೆಯನ್ನು ನಿಗ್ರಹಿಸಲು ಜಂಟಿ ಕ್ರಿಯಾ ಯೋಜನೆಯನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್, ಸೆಬಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ (MoCA) ಒಳಗೊಂಡಿರುವ ನಿಯಂತ್ರಕರ ಜಂಟಿ ಸಮಿತಿ (JCOR) ಅನ್ನು ರಚಿಸಲು ಟ್ರಾಯ್‌ ಹಲವು ಉಪಕ್ರಮವನ್ನು ತೆಗೆದುಕೊಂಡಿದೆ. ಟೆಲಿಕಾಂ ಈ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಹಣಕಾಸಿನ ವಂಚನೆಗಳನ್ನು ಶೀಘ್ರಗತಿಯಲ್ಲಿ ಕಡಿಮೆ ಮಾಡಲು ಮುಂದಾಗಿದೆ.

Best Mobiles in India

English summary
TRAI Working on Technology to Detect Pesky Calls, Messages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X