ಇನ್ಮುಂದೆ ಪೇಟಿಎಮ್‌ನಲ್ಲಿಯೇ ಟ್ರೈನ್ ಟಿಕೆಟ್‌ ಬುಕ್‌ ಮಾಡಬಹುದು; IRCTC ಯಿಂದ ಹೊಸ ಸೌಕರ್ಯ

|

ಭಾರತೀಯ ಪ್ರಯಾಣಿಕರಿಗೆ ಭಾರತೀಯ ರೈಲು ವಿಶೇಷವಾದ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಇತ್ತೀಚಿಗೆ ರೈಲು ಪ್ರಯಾಣಿಕರ ಸಂಖ್ಯೆ ಸಹ ಗಣನೀಯವಾಗಿ ಏರಿಕೆಯಾಗಿದ್ದು, ಅದರಂತೆ ರೈಲುಗಳ ಸಂಖ್ಯೆ ಸಹ ಹೆಚ್ಚಾಗಿವೆ. ಇದರ ಭಾಗವಾಗಿಯೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಆನ್‌ಲೈನ್‌ ಬುಕ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದ್ದು, ಈ ಮೂಲಕ ಜನರು ಸುಲಭವಾಗಿ ತಮ್ಮ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಸೇವೆ ನೀಡಲು ಮುಂದಾಗಿರುವ ರೈಲು ಇಲಾಖೆ ಹೊಸ ಸೇವೆಯನ್ನು ನೀಡಲು ಮುಂದಾಗಿದೆ.

ಇನ್ಮುಂದೆ ಪೇಟಿಎಮ್‌ನಲ್ಲಿಯೇ ಟ್ರೈನ್ ಟಿಕೆಟ್‌ ಬುಕ್‌ ಮಾಡಬಹುದು!

ಹೌದು, ಸದ್ಯಕ್ಕೆ IRCTC ಹಾಗೂ ಕನ್ಫರ್ಮ್ ಟಿಕೆಟ್‌ ಏರಿದಂತೆ ಇನ್ನಿತರೆ ಆಪ್‌ಗಳ ಮೂಲಕ ಟಿಕೆಟ್‌ ಬುಕ್‌ ಮಾಡಿಕೊಳ್ಳುವ ಅವಕಾಶ ಇತ್ತು. ಇದೀಗ ಹೆಚ್ಚುವರಿಯಾಗಿ ಪೇಟಿಎಮ್ ಮೂಲಕವೂ ಟಿಕೆಟ್‌ ಬುಕ್‌ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಹಾಗಿದ್ರೆ, ಪೇಟಿಎಮ್‌ ಮೂಲಕ ಹೇಗೆ ಟಿಕೆಟ್‌ ಬುಕ್‌ ಮಾಡುವುದು?,ಇದರಲ್ಲಿ ಪಿಎನ್‌ಆರ್‌ ಸ್ಥಿತಿ ಪರಿಶೀಲಿಸಬಹುದೇ? ಜೊತೆಗೆ ಇನ್ನೂ ಹೆಚ್ಚಿನ ಸೇವೆ ಏನಾದರೂ ಇದೆಯಾ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

IRCTC ಟಿಕೆಟ್‌ ಬುಕ್ಕಿಂಗ್‌ ಇನ್ನಷ್ಟು ಸುಲಭ
ಪೇಟಿಎಮ್‌ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದೊಂದಿಗೆ (IRCTC) ಪಾಲುದಾರಿಕೆಯನ್ನು ಪ್ರಕಟಿಸಿದ್ದು, ಇದರ ಭಾಗವಾಗಿ ಟಿಕೆಟ್ ಬುಕಿಂಗ್, ರೈಲು ಟ್ರ್ಯಾಕಿಂಗ್ ಮತ್ತು ಪ್ರಯಾಣಿಕರ ಹೆಸರು ದಾಖಲೆ (PNR) ಸ್ಥಿತಿ ಪರಿಶೀಲನೆಯಂತಹ ಇನ್ನಿತರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ರೈಲು ಸಂಬಂಧಿ ಪಾವತಿ ಪ್ರಕ್ರಿಯೆಗಳನ್ನು ಪೇಟಿಎಮ್‌ ಮೂಲಕವೇ ಸುಲಭವಾಗಿ ನಡೆಸಬಹುದಾಗಿದೆ.

IRCTC ಅಧಿಕೃತವಾಗಿ ಪಾಲುದಾರರಾಗಿರುವುದರಿಂದ, ಪೇಟಿಎಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ರೈಲ್ವೆ ಫೀಚರ್ಸ್‌ಗಳನ್ನು ನೀಡುತ್ತಿದೆ. ಇದರೊಂದಿಗೆ ಭಾರತೀಯ ಫಿನ್‌ಟೆಕ್ ಕಂಪೆನಿಯಾದ ಪೇಟಿಎಮ್‌ ಕಂಪೆನಿಯು 'ತಡೆರಹಿತ' ಮತ್ತು 'ಸೂಪರ್‌ಫಾಸ್ಟ್' ರೈಲು ಟಿಕೆಟ್ ಬುಕಿಂಗ್ ಅನುಭವವನ್ನು ನೀಡಲು ಎಲ್ಲಾ ತಯಾರಿ ನಡೆಸಿದೆ.

ಇನ್ಮುಂದೆ ಪೇಟಿಎಮ್‌ನಲ್ಲಿಯೇ ಟ್ರೈನ್ ಟಿಕೆಟ್‌ ಬುಕ್‌ ಮಾಡಬಹುದು!

ಸ್ಟೇಟಸ್‌ ಪರಿಶೀಲಿಸಬಹುದು
ಇದರೊಂದಿಗೆ ಪೇಟಿಎಮ್‌ ಆಪ್‌ ಮೂಲಕ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಹಾಗೆಯೇ ಹತ್ತಿರದ ನಿಲ್ದಾಣಗಳು, ರೈಲ್ವೇ ವೇಳಾಪಟ್ಟಿಗಳನ್ನು ವೀಕ್ಷಿಸಬಹುದು ಹಾಗೂ ಪಿಎನ್‌ಆರ್‌ ಅನ್ನು ಪರಿಶೀಲಿಸಬಹುದಾಗಿದೆ.

ಪರ್ಯಾಯ ಮಾರ್ಗ ಸೂಚಿಸುತ್ತದೆ
ಪೇಟಿಎಮ್‌ ಆಪ್‌ ಮೂಲಕ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಲು ಮುಂದಾಗುವ ವೇಳೆ ದೃಢೀಕರಿಸಿದ ಟಿಕೆಟ್ ಅನ್ನು ಪಡೆಯುವ ಸಾಧ್ಯತೆಯನ್ನು ಲೆಕ್ಕಹಾಕುತ್ತದೆ ಜೊತೆಗೆ ಶೇಕಡಾವಾರು ಲಭ್ಯತೆಯನ್ನು ಡಿಸ್‌ಪ್ಲೇ ಮಾಡುತ್ತದೆ. ಇದಲ್ಲದೆ, ಯಾವುದೇ ನಿರ್ದಿಷ್ಟ ಮಾರ್ಗವು ಲಭ್ಯವಿಲ್ಲದಿದ್ದಾಗ ಪರ್ಯಾಯ ಮಾರ್ಗಗಳನ್ನು ತೋರಿಸುವ ಮೂಲಕ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತದೆ.

ಇನ್ಮುಂದೆ ಪೇಟಿಎಮ್‌ನಲ್ಲಿಯೇ ಟ್ರೈನ್ ಟಿಕೆಟ್‌ ಬುಕ್‌ ಮಾಡಬಹುದು!

ಚಾಲನೆಯಲ್ಲಿರುವ ರೈಲಿನ ಸ್ಟೇಟಸ್‌ ಚೆಕ್‌ ಮಾಡಬಹುದು
ಇದಿಷ್ಟೇ ಅಲ್ಲದೆ, ಬಳಕೆದಾರರು ಚಾಲನೆಯಲ್ಲಿರುವ ಯಾವುದೇ ರೈಲಿನ ಸ್ಟೇಟಸ್‌ ಅನ್ನು ಸಹ ಪರಿಶೀಲಿಸಬಹುದು. ಇದು ನೈಜ ಸಮಯದ ವಿಳಂಬ, ಮುಂದಿನ ನಿಲ್ದಾಣಕ್ಕೆ ಅಂದಾಜು ಆಗಮನದ ಸಮಯ, ಗಮ್ಯಸ್ಥಾನಕ್ಕೆ ಅಂದಾಜು ಆಗಮನದ ಸಮಯ ಮತ್ತು ಗಮ್ಯಸ್ಥಾನದ ಪ್ಲಾಟ್‌ಫಾರ್ಮ್ ಸಂಖ್ಯೆಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಪ್ಲಾಟ್‌ಫಾರ್ಮ್ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಆಯ್ಕೆಯೂ ಇದರಲ್ಲಿ ಇರುವುದರಿಂದ ಪ್ರಯಾಣಿಕರು ಸುಲಭವಾಗಿ ಯಾವುದೇ ಸಮಸ್ಯೆ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

ಪಾವತಿಗೆ ಹಲವು ಆಯ್ಕೆ
ಪೇಟಿಎಮ್‌ ನ ಟಿಕೆಟ್ ಬುಕಿಂಗ್ ಸೌಲಭ್ಯವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೇಟಿಎಮ್‌ ವ್ಯಾಲೆಟ್, ಯುಪಿಐ, ಪೇಟಿಎಮ್‌ ಪೋಸ್ಟ್‌ಪೇಯ್ಡ್ ಮತ್ತು ನೆಟ್‌ಬ್ಯಾಂಕಿಂಗ್ ಸೇರಿದಂತೆ ವ್ಯಾಪಕ ಶ್ರೇಣಿಯ ಪಾವತಿ ಆಯ್ಕೆಗಳನ್ನು ನೀಡುವುದರಿಂದ ಬಳಕೆದಾರರು ಯಾವುದೇ ರೀತಿಯಲ್ಲಾದರೂ ಹಣ ಪಾವತಿ ಮಾಡಬಹುದಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನೀವೇನಾದರೂ ಬುಕ್‌ ಮಾಡಿದ್ದ ಟಿಕೆಟ್‌ ಅನ್ನು ರದ್ದು ಮಾಡಿದ್ದೀರ ಎಂದಾದರೆ ತ್ವರಿತ ಮರುಪಾವತಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
IRCTC has provided a more simple way to book train tickets, henceforth it is allowed to book tickets through Paytm. details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X