Subscribe to Gizbot

ಕೊನೆಗೂ ಗೆಲ್ಲಲಿಲ್ಲ ಏರ್‌ಟೆಲ್ , ಐಡಿಯಾ!..ಜಿಯೋ ಉಚಿತ ಆಫರ್ ಮುಂದುವರೆಯುತ್ತದೆ!!!

Written By:

ಉಚಿತ ಕೊಡುಗೆಗೆ ತಡೆಯಾಜ್ಞೆ ನೀಡಬೇಕೆಂದು ಏರ್‌ಟೆಲ್ ಹಾಗೂ ಐಡಿಯಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ದೂರ ಸಂಪರ್ಕ ವಿವಾದ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದ್ದು, ಜಿಯೋ ಉಚಿತ ಸೇವೆಯು ಕಾನುನಾತ್ಮಕವಾಗಿಯೇ ಇವೆ ಎಂದು ಹೇಳಿವೆ. ಇನ್ನು ಮತ್ತೆ ಜಿಯೋ ಸೆವೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಟ್ರಾಯ್‌ಗೆ ತಿಳಿಸಿದೆ.!!

ಡಿಸೆಂಬರ್ 4, 2016 ರ ಹ್ಯಾಪಿ ನ್ಯೂ ಆಫರ್ ಮತ್ತು ಅದಕ್ಕೂ ಮೊದಲಿನ ವೆಲಕಂ ಆಫರ್‌ಗಳೆರಡೂ ಬೇರೆ ಬೇರೆಯಾಗಿದ್ದು ಅವು ಯಾವುದೇ ರೀತಿಯಲ್ಲೂ ದೂರಸಂಪರ್ಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿಲ್ಲ ಎಂದು ದೂರ ಸಂಪರ್ಕ ವಿವಾದ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.

ಕೊನೆಗೂ ಗೆಲ್ಲಲಿಲ್ಲ ಏರ್‌ಟೆಲ್ , ಐಡಿಯಾ!..ಜಿಯೋ ಉಚಿತ ಆಫರ್ ಮುಂದುವರೆಯುತ್ತದೆ!!

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ರಿಲಯನ್ಸ್‌ ಜಿಯೋ ದೂರಸಂಪರ್ಕ ನಿಯಮಾವಳಿ ಉಲ್ಲಂಘಿಸುತ್ತಿದೆ. ಇದಕ್ಕೆ ಟ್ರಾಯ್ ಕೂಡ ಸಹಾಯ ನೀಡುತ್ತಿದ್ದು, ಜಿಯೋವಿನ ಉಚಿತ ಸೇವೆಯನ್ನು ನಿಲ್ಲಿಸಬೇಕು ಮತ್ತು ಟ್ರಾಯ್‌ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಏರ್‌ಟೆಲ್ , ವೊಡಾಫೊನ್ ಹಾಗೂ ಐಡಿಯಾ ಕಂಪೆನಿಗಳು ದೂರು ಸಲ್ಲಿಸಿದ್ದವು.

ಕೊನೆಗೂ ಗೆಲ್ಲಲಿಲ್ಲ ಏರ್‌ಟೆಲ್ , ಐಡಿಯಾ!..ಜಿಯೋ ಉಚಿತ ಆಫರ್ ಮುಂದುವರೆಯುತ್ತದೆ!!

ಈಗಾಗಲೇ ಜಿಯೋ ಉಚಿತ ಆಫರ್ ಮುಗಿಯುವ ವೇಳೆ ಹತ್ತಿರಕ್ಕೆ ಬಂದಿದೆ. ಇದೇ ಮಾರ್ಚ್ 31 ಕ್ಕೆ ಜಿಯೋ ಉಚಿತ ಆಫರ್ ಮುಗಿಯಲಿದ್ದು, ನಂತರ ಪ್ರೈಮ್ ಆಫರ್ ಶುರುವಾಗಲಿದೆ.ಇನ್ನು ಇಂದು ಹೊರಬಿದ್ದಿರುವ ತೀರ್ಪಿನ ಪ್ರಕಾರ ಜಿಯೋ ಇನ್ನು 15 ದಿವಸಗಳು ಯಾವುದೇ ತೊಂದರೆ ಇಲ್ಲದೆ ಉಚಿತ ಸೇವೆಯನ್ನು ನೀಡಬಹದು. ಆದ್ದರಿಂದ ಜಿಯೋ ವಿರುದ್ದ ಏರ್‌ಟೆಲ್ ಹಾಗೂ ಐಡಿಯಾ ಕೊನೆಗೂ ಗೆಲ್ಲಲಾಗಲಿಲ್ಲ ಎನ್ನಬಹುದು.

English summary
The telecom tribunal on Thursday asked the sector regulator to re-examine issues pertaining to Reliance Jio's free promotional offers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot