'ಗೋಲ್ಡನ್ ಗ್ಲೋಬ್ ಟೈಗರ್' ಆಗಿ ಬದಲಾದ 'ಜಿಯೋ'!!

|

ಭಾರತೀಯರಿಗೆ ಡಿಜಿಟಲ್ ಜೀವನದ ಅನನ್ಯ ಮತ್ತು ಅರ್ಥಪೂರ್ಣ ಲಾಭಗಳನ್ನು ತಲುಪಿಸುವಲ್ಲಿ ಜಿಯೋ ಮತ್ತು ಅದರ ಪ್ರವರ್ತಕಗಳು ಮಾಡುತ್ತಿರುವ ಸೇವೆಯನ್ನು ಗುರುತಿಸಿ ಜಿಯೋಗೆ 'ಗೋಲ್ಡನ್ ಗ್ಲೋಬ್ ಟೈಗರ್ಸ್' ಪ್ರಶಸ್ತಿಗಳು ಒಲಿದುಬಂದಿವೆ. ಭಾರತೀಯ ಡಿಜಿಟಲ್ ಸೇವೆಗಳಲ್ಲಿ ರೂಪಾಂತರದ ಬದಲಾವಣೆಗೆ ಕಾರಣವಾದ ಹಾಗೂ ದೇಶವನ್ನು ಡಿಜಿಟಲ್ ಅರ್ಥ ವ್ಯವಸ್ಥೆಗೆ ಜಾಗತಿಕ ನಾಯಕತ್ವವನ್ನು ವಹಿಸಿಕೊಟ್ಟ ಜಿಯೋವಿನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಹೌದು, ಈ ವರ್ಷದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಯಲ್ಲಿ ಮೂರು ಅಗ್ರ ಪ್ರಶಸ್ತಿಗಳನ್ನು ಜಿಯೋ ಸಂಸ್ಥೆ ಪಡೆದುಕೊಂಡಿದ್ದು, ಪ್ರಮುಖ ಜಾಗತಿಕ ಬ್ರಾಂಡ್‌ಗಳು ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ನಡುವೆಯೂ 'ಮಾರುಕಟ್ಟೆ ನಾಯಕತ್ವ ಪ್ರಶಸ್ತಿ', ಅತ್ಯುತ್ತಮ ಕ್ಯಾಂಪೇನ್ ಆಗಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಮತ್ತು ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಆಗಿ ಜಿಯೋಫೋನ್‌ಗಳು ಈ ವರ್ಷದ ಪ್ರಶಸ್ತಿಗೆ ಅರ್ಹವಾಗಿವೆ ಎಂದು 'ಗೋಲ್ಡನ್ ಗ್ಲೋಬ್ ಟೈಗರ್ಸ್' ಅಂತರಾಷ್ಟ್ರೀಯ ಸಂಸ್ಥೆ ಗುರುತಿಸಿದೆ.

'ಗೋಲ್ಡನ್ ಗ್ಲೋಬ್ ಟೈಗರ್' ಆಗಿ ಬದಲಾದ 'ಜಿಯೋ'!!

ಮಲೇಶಿಯಾದ ಕೌಲಾಲಂಪುರ್ ನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಗಳು 2019 ಅನ್ನು ವಿಜೇತರಿಗೆ ನೀಡಲಾಗಿದ್ದು, ಈ ಮೂಲಕ ಭಾರತದ ಮಾರುಕಟ್ಟೆ ಮಾತ್ರವಲ್ಲದೇ ಜಿಯೋವಿನ ಜನಪ್ರಿಯತೆ ಈಗ ವಿಶ್ವ ಮಟ್ಟಕ್ಕೇರಿದೆ. ಹಾಗಾದರೆ, ವ್ಯಕ್ತಿಗಳು ಮತ್ತು ಸಂಘಟನೆಗಳ ನಡುವೆ "ಟೈಗರ್ಸ್" ಅನ್ನು ಗುರುತಿಸುವ ಗುರಿ ಹೊಂದಿರುವ ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು ಜಿಯೋಗೆ ಒಲಿದಿದ್ದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಜಿಯೋಗೆ ‘ಮಾರುಕಟ್ಟೆ ನಾಯಕತ್ವ ಪ್ರಶಸ್ತಿ’

ಜಿಯೋಗೆ ‘ಮಾರುಕಟ್ಟೆ ನಾಯಕತ್ವ ಪ್ರಶಸ್ತಿ’

ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆಗಿ ಬದಲಾಗಿರುವ ಜಿಯೋ ಸುಮಾರು 300 ದಶಲಕ್ಷ ಭಾರತೀಯರನ್ನು ಸಂಪರ್ಕಿಸುತ್ತಿದೆ. ಈ ಹಿನ್ನಲೆಯಲ್ಲಿ ‘ಮಾರುಕಟ್ಟೆ ನಾಯಕತ್ವ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ. ರಿಲಯನ್ಸ್ ಜಿಯೋ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದ್ದು, 4G LTE ತಂತ್ರಜ್ಞಾನದೊಂದಿಗೆ ಜಾಗತಿಕ ದರ್ಜೆಯ ಆಲ್ ಐಪಿ ಡೇಟಾ ನೆಟ್ವರ್ಕ್ ನೀಡುತ್ತಿರುವುದರಿಂದ ಜಿಯೋಗೆ ‘ಮಾರುಕಟ್ಟೆ ನಾಯಕತ್ವ ಪ್ರಶಸ್ತಿ' ಒಲಿದುಬಂದಿದೆ.

ಅತ್ಯುತ್ತಮ ಕ್ಯಾಂಪೇನ್ ಕ್ರಿಕೆಟ್ ಪ್ಲೇ ಅಲಾಂಗ್!

ಅತ್ಯುತ್ತಮ ಕ್ಯಾಂಪೇನ್ ಕ್ರಿಕೆಟ್ ಪ್ಲೇ ಅಲಾಂಗ್!

ದೇಶದಲ್ಲಿ ಹೆಚ್ಚು ಜನಪ್ರಿಯ ಕ್ರೀಡಾಕೂಟವನ್ನು ಆಚರಿಸಲು ಜನರನ್ನು ಒಂದೆಡೆ ಸೇರಿಸಿದ ಕಾರಣಕ್ಕೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಪ್ರಶಸ್ತಿಗೆ ಪಾತ್ರವಾಗಿದೆ. ಹಾಗಾಗಿ, ಆಡ್ವರ್ಟೈಸಿಂಗ್ ಇನ್ ಮೊಬೈಲ್ ಗೇಮಿಂಗ್ ಎನ್ವಿರಾನ್ಮೆಂಟ್ ಪ್ರಶಸ್ತಿಯನ್ನು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಪಡೆದುಕೊಂಡಿದೆ. ಭಾರತೀಯರ ನೆಚ್ಚಿನ ಗೇಮ್ ಕ್ರಿಕೆಟ್ ಆಟದಲ್ಲಿ ನೆಚ್ಚಿನ ತಂಡಗಳು ಮತ್ತು ಆಟಗಾರರೊಂದಿಗೆ ಸಮಯ ಕಳೆಯುವ ಅವಕಾಶವನ್ನು ಇದು ಮಾಡಿಕೊಟ್ಟಿತ್ತು.

ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಪ್ರಶಸ್ತಿ

ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಪ್ರಶಸ್ತಿ

ಡಿಜಿಟಲ್ ಸೇವೆಗಳ ಶಕ್ತಿಯನ್ನು ಪ್ರತಿ ಭಾರತೀಯರಿಗೆ ವರ್ಗಾಯಿಸುವ ಉದ್ದೇಶದಿಂದ ಜಿಯೋ ಪ್ರಾರಂಭಿಸಿದ್ದ ‘ಜಿಯೋಫೋನ್'ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಪ್ರಶಸ್ತಿಗೆ ಪಾತ್ರವಾಗಿದೆ. ಈ ಜಿಯೋ ಫೋನಿನಿಂದ ಭಾರತದಲ್ಲಿದ್ದ ಲಕ್ಷಾಂತರ ಫೀಚರ್ ಫೋನ್ ಬಳಕೆದಾರರು ಜಿಯೋ ಡಿಜಿಟಲ್ ಲೈಫ್ ಗೆ ಪರಿವರ್ತನೆ ಹೊಂದಿ, ಡೇಟಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜಿಯೋಫೋನ್ ಡಿಜಿಟಲ್ ಲೈಫ್ ವ್ಯವಸ್ಥೆಯನ್ನು ನೀಡಿದಕ್ಕೆ ಈ ಪ್ರಶಸ್ತಿಗೆ ಅರ್ಹವಾಗಿದೆ.

ವರ್ಷದ ಗೋಲ್ಡನ್ ಗ್ಲೋಬ್ ಟೈಗರ್!

ವರ್ಷದ ಗೋಲ್ಡನ್ ಗ್ಲೋಬ್ ಟೈಗರ್!

ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು ಮಾರ್ಕೆಟಿಂಗ್, ಬ್ರ್ಯಾಂಡಿಂಗ್ , ಸಾಮಾಜಿಕ ನಾವೀನ್ಯತೆ, ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ಮಲ್ಟಿ ಫಂಕ್ಷನಲ್ ಆಗಿರುವ ವಿಭಾಗಗಳು ಮತ್ತು ಕೈಗಾರಿಕಾ ಕೇಂದ್ರೀಕೃತಕ್ಕೆ ಸಲ್ಲಲಿವೆ. ಈ ವರ್ಷ ಪ್ರಮುಖ ಜಾಗತಿಕ ಬ್ರಾಂಡ್‌ಗಳು ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಭಾರತದ ಡಿಜಿಟಲ್ ಜಗತ್ತಿನಲ್ಲಿ ಹೊಸ ಚಾಪು ಮೂಡಿಸಿದ ಜಿಯೋ ಈ ವರ್ಷದ ಗೋಲ್ಡನ್ ಗ್ಲೋಬ್ ಟೈಗರ್ ಆಗಿ ಮಿಂಚಿದೆ.

ಪ್ರಶಸ್ತಿಗಳು ದೊರೆತಿರುವುದು ಭಾರತೀಯರ ಹೆಮ್ಮೆ

ಪ್ರಶಸ್ತಿಗಳು ದೊರೆತಿರುವುದು ಭಾರತೀಯರ ಹೆಮ್ಮೆ

4G LTE ತಂತ್ರಜ್ಞಾನದೊಂದಿಗೆ ಜಾಗತಿಕ ದರ್ಜೆಯ ಆಲ್ ಐಪಿ ಡೇಟಾ ನೆಟ್ವರ್ಕ್ ನೀಡುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆಗಿದೆ. ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್ವರ್ಕ್ ಮತ್ತು ಭಾರತದ ಅತಿದೊಡ್ಡ ವೈರ್ಲೆಸ್ ಬ್ರಾಡ್ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಕಂಪನಿಯಾಗಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ಜಿಯೋಗೆ ಈ ಎಲ್ಲಾ ಪ್ರಶಸ್ತಿಗಳು ದೊರೆತಿರುವುದು ಭಾರತೀಯರ ಹೆಮ್ಮೆ ಎಂದು ಹೇಳಬಹುದು.

Best Mobiles in India

English summary
Jio the digital services brand has won three top awards at the. Triple honours for Jioat the Golden Globe Tigers Award 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X