ಗೂಗಲ್ ಮ್ಯಾಪ್ ನಂಬಿ ನದಿಗೆ 'ಟ್ರಕ್' ಇಳಿಸಿದ ಭೂಪ!

|

ಗೂಗಲ್ ಮ್ಯಾಪ್ ಇದ್ದರೆ ಸಾಕು ಯಾವುದೇ ಹೊಸ ಸ್ಥಳಕ್ಕೆ ಹೋದರು ಸುಲಭವಾಗಿ ದಾರಿಗಳನ್ನು ಕಂಡುಕೊಳ್ಳಬಹುದು ಎಂಬ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ, ಗೂಗಲ್ ಮ್ಯಾಪ್ ತಂತ್ರಜ್ಞಾನವನ್ನು ಹೆಚ್ಚು ನಂಬಿಕೊಂಡರೆ ಏನಾಗಲಿದೆ ಎಂಬುದಕ್ಕೆ ಇಂಡೋನೇಷ್ಯಾದಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ. ಕಣ್ಮುಚ್ಚಿ ಗೂಗಲ್ ಮ್ಯಾಪ್ ತಂತ್ರಜ್ಞಾನವನ್ನು ಫಾಲೋ ಮಾಡಿದ ಡ್ರೈವರ್ ಓರ್ವ ಅದೃಷ್ಟವಶಾತ್ ಬದುಕಿದ್ದಾನೆ.

ಹೌದು, ಒಂದು ಕಾಲದಲ್ಲಿ ಯಾವುದೇ ಹೊಸ ಸ್ಥಳಕ್ಕೆ ಹೋಗುವಾಗ ದಾರಿ ಪಕ್ಕದಲ್ಲಿರುವ ಸೈನ್ ಬೋರ್ಡ್‌ಗಳೇ ಚಾಲಕರಿಗೆ ಆಧಾರವಾಗಿದ್ದುವು. ಆದರೆ, ಈಗ ಡ್ರೈವಿಂಗ್ ವ್ಯವಸ್ಥೆ ಬದಲಾಗಿ ಗೂಗಲ್ ಮ್ಯಾಪ್ ತಂತ್ರಜ್ಞಾನ ಚಾಲಕರ ಸಹಾಯಕ್ಕೆ ನಿಂತಿದೆ. ಒಂದು ದಾರಿಯನ್ನು ಹುಡುಕೋದ್ರಿಂದ ಹಿಡಿದು, ಒಂದು ಅಡ್ರೆಸ್ ಹುಡುಕೋವರೆಗೂ ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಆದರೆ, ಅದರ ಸಹಾಯವನ್ನು ಎಚ್ಚರಿಕೆಯಿಂದ ಸ್ವೀಕರಿಸಬೇಕಷ್ಟೇ.

ಗೂಗಲ್ ಮ್ಯಾಪ್ ನಂಬಿ ನದಿಗೆ 'ಟ್ರಕ್' ಇಳಿಸಿದ ಭೂಪ!

ಇದಕ್ಕೆ ಉದಾಹರಣೆ ಎಂದರೆ, ಇಂಡೋನೇಷ್ಯಾದಲ್ಲಿ ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಸಿ ಅದನ್ನೇ ಫಾಲೋ ಮಾಡಿಕೊಂಡು ಹೋದ ಟ್ರಕ್ಕೊಂದು ನದಿಗೆ ಬಿದ್ದ ಘಟನೆ ನಡೆದಿದೆ. ಅಲ್ಲಿನ 'ದಿ ಸ್ಟಾರ್' ಪತ್ರಿಕೆ ವರದಿ ಮಾಡಿರುವಂತೆ, ಇಂಡೋನೇಷ್ಯಾದ ಬಾಲಿ ಬಳಿ ಉಬೆದ್‌ನಲ್ಲಿ ಸಿಂಗಕೆರ್ಟಾ ಊರಿಗೆ ಟ್ರಕ್ ಡ್ರೈವರ್ ಒಬ್ಬ ಗೂಗಲ್ ಮ್ಯಾಪ್ ಆನ್ ಮಾಡಿ ಹೊರಟಿದ್ದಾನೆ. ಆದರೆ, ಗೂಗಲ್ ಮ್ಯಾಪ್‌ನಲ್ಲಿದ್ದ ಒಂದು ಎಡವಟ್ಟು ಆತ ನದಿಗೆ ಬೀಳುವಂತೆ ಮಾಡಿದೆ.

ಗೂಗಲ್ ಮ್ಯಾಪ್‌ನಲ್ಲಿ ಮ್ಯಾಪ್ ನೋಡಿಕೊಂಡು ಟ್ರಕ್ ಚಾಲಾಯಿಸುತ್ತಿದ್ದ ಡ್ರೈವರ್ ಸರಿಯಾದ ಮಾರ್ಗದಲ್ಲೇ ಗಾಡಿಯನ್ನು ಮುನ್ನೆಡೆಸಿದ್ದಾನೆ. ಆದರೆ, ಆತ ಸರ್ಚ್ ಮಾಡಿದ ದಾರಿ ದ್ವಿಚಕ್ರ ವಾಹನಗಳಿಗೆ ಮಾತ್ರ ಇರುವಂಥದ್ದು. ಈ ವಿಷಯವನ್ನು ತಿಳಿಯದ ಚಾಲಕ ಕಣಿವೆಯ ತುದಿಯಲ್ಲಿರುವ ಸೇತುವೆಗೆ ಬಂದಿದ್ದಾನೆ. ದಾರಿ ಕಾಣದೆ ಟ್ರಕ್ ವಾಪಾಸು ತಿರುಗಿಸುವ ಪ್ರಯತ್ನ ಮಾಡುವಾಗ ಆಕಸ್ಮಿಕವಾಗಿ ನದಿಗೆ ಟ್ರಕ್ ಬಿದ್ದಿದೆ.

ಗೂಗಲ್ ಮ್ಯಾಪ್ ನಂಬಿ ನದಿಗೆ 'ಟ್ರಕ್' ಇಳಿಸಿದ ಭೂಪ!

ಟ್ರಕ್ ಓಡಿಸುತ್ತಿದ್ದ ಡ್ರೈವರ್ ಕೂಡ ಟ್ರಕ್ ಜೊತೆಗೆ ನದಿಗೆ ಬಿದ್ದಿದ್ದು, ಅದನ್ನು ಕಂಡ ಸ್ಥಳೀಯರು, ಹರಸಾಹಸಪಟ್ಟು ಆತನ್ನು ಉಳಿಸಿದ್ದಾರೆ ಎಂದು ವರದಿಯಾಗಿದೆ. ತಂತ್ರಜ್ಞಾನವನ್ನು ಬಳಸೋದು ಸರಿ, ಆದರೆ ತಮ್ಮ ಬುದ್ದಿಯನ್ನು ಬಳಸದೇ, ಕಣ್ಮುಚ್ಚಿ ತಂತ್ರಜ್ಞಾನವನ್ನು ಬಳಸಿದರೆ ಏನಾಗುತ್ತೆ ಎಂಬುವುದಕ್ಕೆ ಈ ಕೆಳಗಿನ ಘಟನೆಯೇ ನಿದರ್ಶನ. ಅದರಲ್ಲಿಯೂ ಗೂಗಲ್ ಮ್ಯಾಪ್ ಎಂದರೆ ನೂರಕ್ಕೆ ನೂರು ಪಕ್ಕಾ ಎನ್ನುವವರು ಹುಷಾರು.!

Most Read Articles
Best Mobiles in India

English summary
An Indonesian truck driver fell off a cliff into a river after he followed Google Maps to find his track. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X